Monday 19 December 2016

ಬೆನ್ನ ಹಿಂದೆ

ಚಿತ್ರ: ಬಾವ ಬಾಮೈದ (2001)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಕೆ. ಎಸ್. ಚಿತ್ರ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ, ಅಮ್ಮ ಅನ್ನೋ ಉಸಿರೆರೆವೆ
ಚಂದಮಾಮ.. ಓ ಚಂದಮಾಮ

ಭಾವನ ಹೆಗಲಿಗೆ ಕೂಸಾಗಿ
ಈ ಊರೆಲ್ಲಾ ನಿನ್ನ ಮಾತಾಗಿ
ಆ ಮಾತೆಲ್ಲಾ ನನ್ನ ಹಾಡಾಗಿ
ಅಕ್ಕನ ಮನೆಗೆ ನೀ ಹೆಗಲಾಗಿ
ನನ್ನ ತವರೊಡಲ ಉರಿ ತಂಪಾಗಿ
ಪ್ರತೀ ಸಂಕ್ರಾಂತಿ ಸುಗ್ಗಿ ಸೊಂಪಾಗಿ
ಓ.. ಓ.. ಆ ಮನೆಗೂ.. ಈ ಮನೆಗೂ
ದೀಪದೊಳು ನೀನಿರಲು

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ

ಲಾಲಿಯ ಹಾಡಿದರು ಇಂಪಾಗಿ
ಈ ಕುಡಿಗಾಗಿ ಮುದ್ದು ನುಡಿಗಾಗಿ
ಈ ಮುದ್ದು ಲಾಲಿ ಮುಂದೆ ನಿನಗಾಗಿ
ಕರುಳ ಗೆಳೆತನ ನಮದಾಗಿ
ನಾ ನಿನಗಾಗಿ ನೀ ನನಗಾಗಿ
ಈ ಬಾಳೆಲ್ಲಾ ಜೊತೆ ಜೊತೆಯಾಗಿ
ಓ.. ಓ.. ಓ.. ಬೇವಿರಲೀ ಮೂವಿರಲೀ
ಈ ಬೆಸುಗೆ ಹೀಗೇ ಇರಲಿ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ, ಅಮ್ಮ ಅನ್ನೋ ಉಸಿರೆರೆವೆ
ಚಂದಮಾಮ.. ಓ ಚಂದಮಾಮ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ

No comments:

Post a Comment