Thursday 1 December 2016

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ

ಚಿತ್ರ: ಪುಟ್ನಂಜ (1995)
ಸಾಹಿತ್ಯ- ಸಂಗೀತ: ಹಂಸಲೇಖ
ಗಾಯಕರು: ಮನು
(ಚಿತ್ರದಲ್ಲಿ ಈ  ಗೀತೆಯನ್ನು ಸೇರಿಸಿಲ್ಲ)

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ಎತ್ತಿಗೆ ಕೊಟ್ಟ ಏರು, ಗದ್ದೆಗೆ ಬಿಟ್ಟ ನೀರು, ಊರೇಬಿಟ್ರೆಹೆಂಗೆ ಹೇಳು
ಹೊಸ್ತಿಲುದಾಟಿ ಹೋದಳು
ಬೀಜ ಇಟ್ಟ ಭೂಮಿ, ಹಣ್ಣು ಕೊಟ್ಟ ಸ್ವಾಮಿ, ಹಳಸಿಕೊಟ್ರೆಹೆಂಗೆ ಹೇಳು
ಗೆದ್ದಿಲುಕಟ್ಟಿ ಹೋದಳು

ಓ ಪುಟ್ಟಮಲ್ಲಿ, ನೀ ಕೇಳುಇಲ್ಲಿ
ಕಳೆ ತೆಗೆಯೋ ಭರದಲ್ಲಿ ತೆನೆಕಿತ್ತಳು ಬದುಕಲ್ಲಿ
ನಾನ್ ಪುಟ್ಟನಂಜ  ನಾನ್ ಪುಟ್ಟನಂಜ
ಈ ಪ್ರೀತಿಎಂಬೋ ನಂಜುಂಡನಂಜ

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ಬ್ಯಾಸಾರಮಾಡಿ ಕುಂತ್ರೆ ಗ್ರಹಚಾರ ಬಿಡದು
ನೆಸಾರ ಸುಟ್ಟನೆಂದು ಭೂತಾಯಿ ಅಳದು

ನಾನುಅನ್ನೋ ಹೆಣ್ಣು, ಭೇದಮಾಡೋ ಕಣ್ಣು, ಪ್ರೀತಿ ಮೈಯ್ಯಹುಣ್ಣು ಕೇಳು
ಮನಸು ಮುರಿದುಹೋದಳು
ಹೆಣ್ಣು ಅಂದ್ರೆ ಮಾನ, ಮಾನ ಅಂದ್ರೆ ಮನೆ, ಮನೆಬಿಟ್ರೆ ಹೆಂಗೇ ಹೇಳು
ಮಾನ ತೆಗೆದುಹೋದಳು

ಓ ಪುಟ್ಟಮಲ್ಲಿ, ಬಾ ಕೇಳುಇಲ್ಲಿ
ಮನೆಗುಡಿಸೋ ಭರದಲ್ಲಿ ಮನೆ ಒಡೆದಳು ಮನೆಒಡತಿ
ನಾನ್ ಪುಟ್ಟನಂಜ  ನಾನ್ ಪುಟ್ಟನಂಜ
ಈ ಪ್ರೀತಿಎಂಬೋ ನಂಜುಂಡನಂಜ

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ಅಡಿಕೆಗೆ ಹೋದಮಾನ ಆನೆಗೂ ಸಿಗದು
ಮಡಿಕೆಯ ಒಡೆಯೋ ಕೈಲಿ ಸಂಸಾರ ಇರದು

ಒಂದೇಸಾರಿ ಹುಟ್ಟು, ಒಂದೇಸಾರಿ ಪ್ರೀತಿ, ಒಂದೇಸಾವು ನಂಗೆ ಕೇಳು
ನಿತ್ಯಸಾವು ಕೊಟ್ಟಳು
ಅಂಗಿಕಳಚೋಹಂಗೆ, ಮಾತುತಿರುಚೋಹಂಗೆ, ಮನಸು ಮಗುಚೋರಲ್ಲ ನಾವು
ಮಾತುತಪ್ಪಿ ಹೋದಳು

ಓ ಪುಟ್ಟಮಲ್ಲಿ, ನೀ ಕೇಳುಇಲ್ಲಿ
ಕೊಳೆ ಕಳೆಯುವ ಭರದಲ್ಲಿ ಕಣ ಹರಿದಳು ಬಾಳಲ್ಲಿ
ನಾನ್ ಪುಟ್ಟನಂಜ  ನಾನ್ ಪುಟ್ಟನಂಜ
ಈ ಪ್ರೀತಿಎಂಬೋ ನಂಜುಂಡನಂಜ

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

No comments:

Post a Comment