Thursday 1 December 2016

ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ

ಚಿತ್ರ: ಚೈತ್ರದ ಪ್ರೇಮಾಂಜಲಿ (1992)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯಕರು: ಎಸ್.ಪಿ.ಬಿ  ಮತ್ತು ಮಂಜುಳ ಗುರುರಾಜ್

ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು, ಮರುಗಿದವು
ಅಂಜಿಕೆಯೇ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು, ಕಾಣಿಸದ ಕಥೆಯುಂಟು, ವ್ಯಥೆಯುಂಟು

ವಿನೋದದ ಆಲಿಂಗನ ವಿಲಾಸದ ಆ ಚುಂಬನ
ನಾ ಮೈಮರೆತೆನು ಕರಿನಾಗದ ಗೆಳೆತನದೊಳಗೆ
ನಾ ಕಣ್ತೆರೆಯುವ ಮೊದಲೇರಿತು ವಿಷ ಮೈಯ್ಯೊಳಗೆ
ಅಪಾಯದ ಬಲಾಬಲ ದುರಾಸೆಯ ಫಲಾಫಲ
ಅದರರಿವಿಲ್ಲದೆ ಬರಿ ಪ್ರೇಮದ ಸವಿಯನು ಸವಿದೆ
ಓ ದೇವರೆ ಈ ಅತೀಆಸೆಗೆ ಮಸಿಯನು ಬಳಿದೆ

ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು, ಮರುಗಿದವು

ವಿವಾಹವೇ ಪ್ರವಾಹವು ವಿಮೋಚನೆ ಇಲ್ಲಿಲ್ಲವೋ
ಈ ಸುಳಿಅಲೆಯಲಿ ಎದುರೀಜಲು ಬಲಕುಸಿದಿದೆಯೋ
ನಾ ಮುಳುಗಿರುವೆಡೆ ನಿಜವೆಲ್ಲವು ಒಳಗಡಗಿದೆಯೋ
ಓ ಸಾವೆ ನೀ ದಯಾಮಯ ಈ ನೋವಿಗೆ ತೋರು ಉದಯ
ಈ ಬದುಕಿನಜೊತೆ ಬಯಸುವವರು ನಯವಂಚಕರೇ
ಆ ಸವಿನುಡಿಯಲಿ ವಿಷ ಉಣಿಸುವ ಕೊಲೆಪಾತಕರೇ

ಅಂಜಿಕೆಯೇ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು, ವ್ಯಥೆಯುಂಟು
ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು, ಮರುಗಿದವು

No comments:

Post a Comment