Monday 6 March 2017

ಓಂ ಮಹಾ ಪ್ರಾಣದೀಪಂ ಶಿವಂ

*ಓಂ ಮಹಾ ಪ್ರಾಣದೀಪಂ ಶಿವಂ*
*ಮಹುಕಾರ ರೂಪಂ*
*ಶಿವಂ ಶಿವಂ*
*ಮಹಾ ಸೂರ್ಯ ಚಂದ್ರಾದಿ*
*ನೇತ್ರಂ ಪವಿತ್ರಂ*

*ಮಹಾಕಾಡ ತಿಮಿರಾಂತಕಂ*
*ಸೌರಗಾತ್ರಂ*
*ಮಹಾ ಕಾಂತಿ ಬೀಜಂ*
*ಮಹಾ ದಿವ್ಯ ತೇಜಂ*
*ಭವಾನೀ ಸಮೇತಂ*
*ಭಜೆ ಮಂಜುನಾಥಂ*

*ಓಂ ಓಂ ಓಂ ನಮಃ*

*ಶಂಕರಾಯಚ*
*ಮಯಸ್ಕರಾಯಚ*
*ನಮಃ ಶಿವಾಯಚ*
*ಶಿವತರಾಯಚ*
*ಭವಹರಾಯಚ*

*ಮಹಾ ಪ್ರಾಣಪಂ*
*ಶಿವಂ ಶಿವಂ*
*ಭಜೆ ಮಂಜುನಾಥಂ*
*ಶಿವಂ ಶಿವಂ*

*ಅದ್ವೈತ ಭಾಸ್ಕರಂ*
*ಅರ್ಧನಾರೀಶ್ವರಂ*
*ಹೃದಶಹೃದಯಂಗಮಂ*
*ಚಥುರುದದಿ ಸಂಗಮಂ*
*ಪಂಚಭೂಥಾತ್ಮಕಂ*
*ಶತ್ ಶತ್ರು ನಾಶಕಂ*
*ಸಪ್ತ ಸ್ವರೇಶ್ವರಂ*
*ಅಷ್ಟ ಸಿದ್ಧೀಶ್ವರಂ*
*ನವರಸ ಮನೋಹರಂ*
*ದಶ ದಿಷಾಸು ವಿಮಲಂ*
*ಏಕಾದಶೂಜ್ವಲಂ*
*ಏಕನಾಥೇಶ್ವರಂ*
*ಪ್ರಸ್ತುತಿವ ಶಂಕರಂ*
*ಪ್ರಣತ ಜನ ಕಿಂಕರಂ*
*ದುರ್ಜನ ಭಯಂಕರಂ*
*ಸಜ್ಜನ ಶುಭಂಕರಂ*

*ಭಾಣಿ ಭವ ಥಾರಕಂ*
*ಪ್ರಕೃತಿ ಹಿತಕಾರಕಂ*

*ಭುವನ ಭವ್ಯಭವನಾಯಕಂ*
*ಭಾಗ್ಯಾತ್ಮಕಂ ರಕ್ಷಕಂ*

*ಈಶಂ*
*ಸುರೇಶಂ*
*ಋಶೇಷಂ*
*ಪರೇಶಂ*
*ನಟೇಶಂ*
*ಗೌರೀಶಂ*
*ಗಣೇಶಂ*
*ಭೂತೇಶಂ*
*ಮಹಾ ಮಧುರ ಪಂಚಾಕ್ಷರಿ*
*ಮಂತ್ರ ಮಾರ್ಚಂ*
*ಮಹಾ ಹರ್ಷ*
*ವರ್ಷಂ ಪ್ರವರ್ಷಂ ಸುಶೀರ್ಷಂ*

*ಓಂ ನಮೋಃ ಹರಾಯಚ*
*ಸ್ಮರ ಹರಾಯಚ*
ಪುರ ಹರಾಯಚ*
*ರುದ್ರಾಯಚ*
*ಭಧ್ರಾಯಚ*
*ಇಂದ್ರಾಯಚ*
*ನಿತ್ಯಾಯಚ*
*ನಿರ್ಮಿತ್ತಾಯಚ*

*ಮಹಾ ಪ್ರಾಣ ದೀಪಂ*
*ಶಿವಂ ಶಿವಂ*
*ಭಜೆ ಮಂಜುನಾಥಂ*
*ಶಿವಂ ಶಿವಂ*

*ಡಂ ಡಂ ಡ ಡಂ ಡಂ ಡ ಡಂ ಡಂ ಡ ಡಂ ಡಂ ಡ*
*ಡಂಕಾದಿನಾಧನವ ತಾಂಡವ ಡಂಬರಂ*
*ತದ್ದಿಮ್ಮಿ ತಕದಿಮ್ಮಿ ದಿದ್ದಿಮ್ಮಿ* *ದಿಮಿದಿಮ್ಮಿ*
*ಸಂಗೀತ ಸಾಹಿತ್ಯ    ಸುಮಕಮಲ ಬಂಭರಂ*

*ಓಂಕಾರ*
*ಹ್ರೀಂಕಾರ*
*ಶ್ರೀಂಕಾರ*
*ಐಂಕಾರ*
*ಮಂತ್ರ ಬೀಜಾಕ್ಷರಂ*
*ಮಂಜುನಾಥೇಶ್ವರಂ*
*ಋಗ್ ವೇದ ಮಾಧ್ಯಂ*
*ಯಜುರ್ವೇದ ವೇಧ್ಯಂ*
*ಸಾಮ ಪ್ರತೀತಂ*
*ಅಥರ್ವ ಪ್ರಸಾಸಂ*
*ಪುರಾಣೇತಿಹಾಸ ಪ್ರಸಿದ್ಧಂ* *ವಿಶುದ್ಧಂ*
*ಪ್ರಪಂಚೈಕ್ಯ ಸೂತ್ರಂ ವಿಬುದ್ಧಂ*
*ಸುಸಿದ್ಧಂ*
*ನಕಾರಂ*
*ಮಕಾರಂ*
*ಸಿಕಾರಂ*
*ವಕಾರಂ*
*ಯಕಾರಂ*
*ನಿರಾಕಾರ*
*ಸಾಕಾರ ಸಾರಂ*
*ಮಹಾಕಾಲ ಕಾಲಂ*
*ಮಹಾ ನೀಲ ಕಂಠಂ*
*ಮಹಾ ನಂದ ನಂದಂ*
*ಮಹಾತ್ಕಾಟಹಾಸಂ*
*ಜಟಾಜೂಟ ರಂಗೈಕ*
*ಗಂಗಾ ಸುಚಿತ್ರಂ*
*ಜ್ವಲ ಉಗ್ರ ನೇತ್ರಂ*
*ಸುಮಿತ್ರಂ ಸುಗೋತ್ರಂ*
*ಮಹಾಕಾಷಭಾಸಂ*
*ಮಹಾ ಭಾನುಲಿಂಗಂ*
*ಮಹಾ ವರ್ತ್ರು ವರ್ಣಂ*
*ಸುವರ್ಣಂ*
*ಪ್ರವರ್ಣಂ*

*ಸೌರಾಷ್ಟ್ರ ಸುಂದರಂ*
*ಸೌಮನಾಥೇಶ್ವರಂ*
*ಶ್ರೀಶೈಲ ಮಂದಿರಂ*
*ಶ್ರೀ ಮಲ್ಲಿಕಾರ್ಜುನಂ*
*ಉಜ್ಜೈನಿ ಪುರ ಮಹಾ* *ಕಾಳೇಶ್ವರಂ*
*ವೈದ್ಯನಾಥೇಶ್ವರಂ*
*ಮಹಾಭೀಮೇಶ್ವರಂ*
*ಅಮರ ಲಿಂಗೇಶ್ವರಂ*
*ಭಾಮ ಲಿಂಗೇಶ್ವರಂ*
*ಕಾಶಿ ವಿಶ್ವೇಷ್ವರಂ*
*ಪರಂವಿಶ್ವೇಷ್ವರಂ*
*ತ್ರ್ಯಂಭಕಾದೀಶ್ವರಂ*
*ನಾಗಲಿಂಗೇಶ್ವರಂ*
*ಶ್ರೀ ಕೇದಾರಲಿಂಗೇಶ್ವರಂ*
*ಅಗ್ನಿಲಿಂಗಾತ್ಮಕಂ*
*ಜೋತಿ ಲಿಂಗಾತ್ಮಕಂ*
*ವಾಯುಲಿಂಗಾತ್ಮಕಂ*
*ಆತ್ಮ ಲಿಂಗಾತ್ಮಕಂ*
*ಅಖಿಲ ಲಿಂಗಾತ್ಮಕಂ*
*ಅಗ್ನಿ ಸೋಮಾತ್ಮಕಂ*

*ಅನಾದಿಂ ಅಮೇಯಂ*
*ಅಜೇಯಂ ಅಚಿಂತ್ಯಂ*
*ಅಮೋಘಂ ಅಪೂರ್ವಂ*
*ಅನಂತಂ ಅಖಂಡಂ*

*ಅನಾದಿಂ ಅಮೇಯಂ*
*ಅಜೇಯಂ ಅಚಿಂತ್ಯಂ*
*ಅಮೋಘಂ ಅಪೂರ್ವಂ*
*ಅನಂತಂ ಅಖಂಡಂ*

*ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ*
*ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ*
*ಧರ್ಮಸ್ಥಳ ಕ್ಷೇತ್ರ ವರಪರಂಜೋತಿಂ*

*ಓಂ ನಮಃ*
*ಸೋಮಾಯಚ*
*ಸೌಮ್ಯಾಯಚ*
*ಭವ್ಯಾಯಚ*
*ಭಾಗ್ಯಾಯಚ*
*ಶಾಂತಾಯಚ*
*ಶೌರ್ಯಾಯಚ*
*ಯೋಗಾಯಚ*
*ಭೋಗಾಯಚ*
*ಕಾಲಾಯಚ*

*ಕಾಂತಾಯಚ*

*ರಂಯಾಯಚ*
*ಘಂಯಾಯಚ*
*ಈಶಾಯಚ*
*ಶ್ರೀಶಾಯಚ*
*ಶರ್ವಾಯಚ*

ನಿನ್ನ ಕಣ್ಣು ನನ್ನ ಕಣ್ಣು

ಚಿತ್ರ: ಸಿಂಹದ ಮರಿ (೧೯೯೭/1997)
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹಾಡಿದವರು: ಮನು, ಚಿತ್ರಾ

ನಿನ್ನ ಕಣ್ಣು ನನ್ನ ಕಣ್ಣು
ಮಿನುಗೊ ಪ್ರೇಮದ ಲೋಕ
ನಿನ್ನ ಮಾತು ನನ್ನ ಮಾತು
ಮುತ್ತಿನ ಪ್ರೇಮದ ಪಾಕ
ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಮುತ್ತು ಒಂದು, ನಮ್ಮ ಮುತ್ತು ಒಂದು
ತುಟಿ ಕರೆದಾಗ ಇಬ್ಬರೂ ಕೂಡಬೇಕು
ನಿನ್ನ ಕಣ್ಣು ನನ್ನ ಕಣ್ಣು
ಮಿನುಗೊ ಪ್ರೇಮದ ಲೋಕ
ನಿನ್ನ ಮಾತು ನನ್ನ ಮಾತು
ಮುತ್ತಿನ ಪ್ರೇಮದ ಪಾಕ
ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಮುತ್ತು ಒಂದು, ನಮ್ಮ ಮುತ್ತು ಒಂದು
ತುಟಿ ಕರೆದಾಗ ಇಬ್ಬರೂ ಕೂಡಬೇಕು

ಗಾಳಿ ಗಂಧ ಕೂಡಿ ಕಲೆತಾಗ ಗುಂಗಿನ ಯಾತ್ರೆಯಂತೆ
ನನ್ನ ನಿನ್ನ ಕಣ್ಣು ಕಲೆತಾಗ ಕನಸಿನ ಜಾತ್ರೆಯಂತೆ
ಹಬ್ಬದ ಹಬ್ಬ, ಪ್ರೀತಿಯ ಹಬ್ಬ
ಹಬ್ಬದ ಹಬ್ಬ ಪ್ರೀತಿಯ ಹಬ್ಬ
ಮರೆಸಿದೆ ಹಗಲು ರಾತ್ರಿ

ನಿನ್ನ ಕಣ್ಣು ನನ್ನ ಕಣ್ಣು
ಮಿನುಗೊ ಪ್ರೇಮದ ಲೋಕ
ನಿನ್ನ ಮಾತು ನನ್ನ ಮಾತು
ಮುತ್ತಿನ ಪ್ರೇಮದ ಪಾಕ
ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಮುತ್ತು ಒಂದು, ನಮ್ಮ ಮುತ್ತು ಒಂದು
ತುಟಿ ಕರೆದಾಗ ಇಬ್ಬರೂ ಕೂಡಬೇಕು

ಚೆಲುವೆ ಚೆಲುವೆ ನಿನ್ನ ಚೆಲುವನ್ನು ಪೂಜಿಸೊ ಮಂತ್ರ ನಾನು
ಚೆಲುವ ಚೆಲುವ ನಿನ್ನ ಮಂತ್ರಕ್ಕೆ ಸೋಲುವ ದಾಸಿ ನಾನು
ಸ್ನೇಹದ ಹೊಳೆಗೆ, ಮುತ್ತಿನ ಮಳೆಯ
ಸ್ನೇಹದ ಹೊಳೆಗೆ ಮುತ್ತಿನ ಮಳೆಯ
ಸುರಿಸಿದೆ ಪ್ರೀತಿಯ ಮೋಡ

ನಿನ್ನ ಕಣ್ಣು ನನ್ನ ಕಣ್ಣು
ಮಿನುಗೊ ಪ್ರೇಮದ ಲೋಕ
ನಿನ್ನ ಮಾತು ನನ್ನ ಮಾತು
ಮುತ್ತಿನ ಪ್ರೇಮದ ಪಾಕ
ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಮುತ್ತು ಒಂದು, ನಮ್ಮ ಮುತ್ತು ಒಂದು
ತುಟಿ ಕರೆದಾಗ ಇಬ್ಬರೂ ಕೂಡಬೇಕು

ಮುಂದೆನಾಯ್ತು ಅಂಕಲ್

ಮುಂದೆನಾಯ್ತು ಅಂಕಲ್
ಹಡಗು ಮುಳುಗಿ ಹೋಯ್ತಾ....
ಬದುಕುವ ದಾರಿಯೇ ಇಲ್ಲವೇ....

ರಾಧ ಮುರಳಿ ಪ್ರೀತಿ ಅಲ್ಲಿ ಮುಗಿದೆ ಹೋಯ್ತಾ...
ದೇವರೇ ನಿನಗಿದು ನ್ಯಾಯವೇ.....

ಈ ಜನರು ಕೆಟ್ಟೋರು ಕಷ್ಟಗಳ ಕೊಡ್ತಾರೆ
ದೇವರೆ ನೀ ಬರದಿದ್ರೆ ಬೇರೆ ಯಾರೂ ಕಾಯ್ತಾರೆ

       ಏನಾಯ್ತು ಅಂಕಲ್ ಏನಾಯ್ತು

ಮುಕ್ಕಣ್ಣನ ಕಣ್ಣು ತೆರೆಯಿತೋ....

ಓಹೋ,,,,ಓಹೋ,,,,ಓಹೋ,,,,,
ಮುಳುಗುವಾಗ ದೇವರು ಬಂದು
ದೋಣಿಯ ತೇಲಿಸಿದ
ಪ್ರೀತಿಯಿಂದ ಎಲ್ಲರ ತಂದು
ತೀರಕೆ ಸೇರಿಸಿದ
ಪ್ರೀತಿಯಿಂದಲೆ ಲೋಕವು ಎಂದು
ಢಂಗುರ ಸಾರಿಸಿದ
ಈ ಭೂಮಿಲಿ ಪ್ರೀತಿಸಿ ಬದುಕಲು
ಆಗ್ನೆಯ ಹೊರಡಿದಿದ

ರಾಜಾ ರಾಜಾ ರಾಜಾ...ರಾಜಾ

ಚಿತ್ರ: ಪ್ರೀತ್ಸೋದ್ ತಪ್ಪಾ...

ಕ್ರೇಜಿಬಾಯ್..... ಹೇ ಹೇ ಹೇ... ಆಹಾ... ಹೇ ಹೇ ಹೇ..
ರಾಜಾ ರಾಜಾ ರಾಜಾ...ರಾಜಾ
ಹೆಂಗಿರಬೇಕು ಗೊತ್ತಾ  ನನ್ನ ರಾಜಾ.. ರಾಜಾ.. ರಾಜಾ..

ರಾಜಾ ರಾಜಾ ಕನಸಿನ ರಾಜ
ಹೇ ಹೇ ಹೇ ಹೇಹೆಹೆ....
ನಾ ಮೆಚ್ಚೋ ಹುಡುಗ ರಾಜರ ರಾಜಾ
ಹೇಹೆಹೆ ಹೇಹೆಹೆ..
ಜೋಕುಮಾರ ಗ್ರೀಕುವೀರ ಯಾರು ಇಲ್ಲಾ ಇವನ ಮುಂದೆ
ಜಾಕ್ಕಿಚಾನು ಜೇಮ್ಸು ಬಾಂಡು ಇವನ ಮುಂದೆ ಕುರಿ ಮಂದೆ.

ರಾಜಾ ರಾಜಾ ರಾಜಾ ರಾಜಾ
ಹೆಂಗಿರಬೇಕು ಗೊತ್ತಾ  ನನ್ನ ರಾಜಾ ರಾಜಾ. ರಾಜಾ (೧)

ಕಣ್ಣಲ್ಲೇ ಕನಸಲ್ಲೇ ಕೂತವನೆ ನನ್ನ ರಾಜಾ ರಾಜಾ
ಕೈಲಾಸ ವಾಕಿಂಗ್...  ನಾ ನೆಟ್ಟಗ್ ಸ್ಮೈಲಿಂಗು.

ಅವನ ಹಿಂದೆ ನೂರು ಹೆಣ್ಣು  ನನ್ಮೇಲೆ ಅವನ ಕಣ್ಣು
ಹೇಹೆಹೆ ಹೇಹೆಹೆ..
ನಕ್ತಾನೆ ನಗಿಸ್ತಾನೆ  ಹಾಡ್ತಾನೆ ನನ್ನ ರಾಜಾ.. ರಾಜಾ
ಆ ನಗು ಕಾಯುತ್ತಾ...
 ಇದೀನಿ ನಾ ನಗುತ
ಆ ಹಾಡು ಕಾಯುತ್ತಾ...
ಇದ್ದೀನಿ ಹಾಡುತ್ತಾ...
ಬಂದಿದಾನಂತೆ ನನ್ನ ರೋಮಿಯೋ..
 ಸುದ್ದಿ ಕೊಟ್ಟಿದೆ ನನ್ನ ಹೃದಯ ಬಡಿಯೋ
ಬಂದ ಕೂಡಲೇ ಪ್ರೀತಿಯಿಂದಲೇ ಕನ್ಯಾಸೆರೆಗೆ ನನ್ನ ಟಾಟಾ ಚೀರಿಯೋ..

ರಾಜಾ ರಾಜಾ ರಾಜಾ ರಾಜಾ
ಹೆಂಗಿರಬೇಕು ಗೊತ್ತಾ  ನನ್ನ ರಾಜಾ ರಾಜಾ. ರಾಜಾ ರಾಜಾ
ರಾಜಾ ರಾಜಾ ಕನಸಿನ ರಾಜಾ
ನಾ ಮೆಚ್ಚೋ ಹುಡುಗ ರಾಜರ ರಾಜಾ (೨)

ನಾನಂತೂ ಅಪರಂಜಿ ನನ್ನಂಗೆ ನನ್ನ ರಾಜಾ ರಾಜಾ
ಕೂಗ್ತಾ ಇದೀನ್ ನಾನು ಕೇಳ್ತಾ ಇದ್ದಾನವನು...
ದೂರ ಇದ್ರೂ ಸೂರ್ಯ ತಾವರೆ ಅರಳದೇನು..
ಹೇಹೆಹೆ ಹೇಹೆಹೆ
ನಾ  ತಿನ್ನೋ ರಸಗುಲ್ಲ ನನ್ನ ನಲ್ಲ ಆ ರಾಜಾ ರಾಜಾ
ರಾಮ ಶಾಮ ಭೀಮ ಸಿಕ್ರೂ ಬೇಕಿಲ್ಲ
ವೀರ ರಣಧೀರ ಸಿಕ್ರೆ ಸಕ್ರೆ ಬೆಲ್ಲ

ಜೋಕುಮಾರ ಗ್ರೀಕುವೀರ ಯಾರು ಇಲ್ಲ ಅವನ ಮುಂದೆ
ಜಾಕ್ಕಿಚಾನು ಜೇಮ್ಸುಬಾಂಡು. ಅವನ ಮುಂದೆ. ಕುರಿ ಮಂದೆ.

ರಾಜಾ ರಾಜಾ ರಾಜಾ. ರಾಜಾ
ಎಲ್ಲಿರುವನೋ ನನ್ನ ಪ್ರೀತಿಯ ರಾಜಾ ರಾಜಾ .... ರಾಜಾ ..... ರಾಜಾ
ರಾಜಾ ರಾಜಾ ಕನಸಿನ ರಾಜಾ
ನಾ ಮೆಚ್ಚೋ ಹುಡುಗಾ... ಆಹಾ.ಹ ರಾಜರ ರಾಜಾ
ಹೇಹೆಹೆ ಹೇಹೆಹೆ

Monday 19 December 2016

ರವಿ-ಹಂಸ ಕಾಂಬಿನೇಷನ್ ನಲ್ಲಿ ಮೂಡಿಬಂದ ಚಿತ್ರಗಳು

ರವಿ-ಹಂಸ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬಂದ ಚಿತ್ರಗಳು

1987 ಪ್ರೇಮಲೋಕ
1987 ಸಂಗ್ರಾಮ
1988 ರಣಧೀರ
1988 ಅಂಜದಗಂಡು
1989 ಯುಗಪುರುಷ
1989 ಕಿಂದರಿಜೋಗಿ
1989 ಯುದ್ದಕಾಂಡ
1989 ಪೋಲಿಹುಡುಗ
1990ಬಣ್ಣದ ಗೆಜ್ಜೆ
1990 ಅಭಿಮನ್ಯು
1991 ಶಾಂತಿಕ್ರಾಂತಿ
1991 ರಾಮಾಚಾರಿ
1992 ಹಳ್ಳಿಮೇಷ್ಟ್ರು
1992 ಗೋಪಿಕೃಷ್ಣ
1992 ಗುರುಬ್ರಹ್ಮ
1992 ಚಿಕ್ಕೆಜಮಾನ್ರು
1992 ಶ್ರೀರಾಮಚಂದ್ರ
1993 ಮನೇದೇವ್ರು
1993 ಗಡಿಬಿಡಿಗಂಡ
1993 ಅಣ್ಣಯ್ಯ
1994 ಚಿನ್ನ
1994 ಜಾಣ
1994 ರಸಿಕ
1995 ಪುಟ್ನಂಜ
1996 ಸಿಪಾಯಿ
1997 ಕಲಾವಿದ
1997 ಮೊಮ್ಮಗ
1997 ಚೆಲುವ
1998 ಯಾರೇ ನೀನು ಚೆಲುವೆ
1998 ಪ್ರೀತ್ಸೋದ್ ತಪ್ಪಾ?
2002 ಪ್ರೀತಿಮಾಡೋಹುಡುಗರಿಗೆಲ್ಲಾ
2003 ಒಂದಾಗೋಣಬಾ
2012 ನರಸಿಂಹ

ಬೆನ್ನ ಹಿಂದೆ

ಚಿತ್ರ: ಬಾವ ಬಾಮೈದ (2001)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಕೆ. ಎಸ್. ಚಿತ್ರ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ, ಅಮ್ಮ ಅನ್ನೋ ಉಸಿರೆರೆವೆ
ಚಂದಮಾಮ.. ಓ ಚಂದಮಾಮ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ

ಭಾವನ ಹೆಗಲಿಗೆ ಕೂಸಾಗಿ
ಈ ಊರೆಲ್ಲಾ ನಿನ್ನ ಮಾತಾಗಿ
ಆ ಮಾತೆಲ್ಲಾ ನನ್ನ ಹಾಡಾಗಿ
ಅಕ್ಕನ ಮನೆಗೆ ನೀ ಹೆಗಲಾಗಿ
ನನ್ನ ತವರೊಡಲ ಉರಿ ತಂಪಾಗಿ
ಪ್ರತೀ ಸಂಕ್ರಾಂತಿ ಸುಗ್ಗಿ ಸೊಂಪಾಗಿ
ಓ.. ಓ.. ಆ ಮನೆಗೂ.. ಈ ಮನೆಗೂ
ದೀಪದೊಳು ನೀನಿರಲು

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ

ಲಾಲಿಯ ಹಾಡಿದರು ಇಂಪಾಗಿ
ಈ ಕುಡಿಗಾಗಿ ಮುದ್ದು ನುಡಿಗಾಗಿ
ಈ ಮುದ್ದು ಲಾಲಿ ಮುಂದೆ ನಿನಗಾಗಿ
ಕರುಳ ಗೆಳೆತನ ನಮದಾಗಿ
ನಾ ನಿನಗಾಗಿ ನೀ ನನಗಾಗಿ
ಈ ಬಾಳೆಲ್ಲಾ ಜೊತೆ ಜೊತೆಯಾಗಿ
ಓ.. ಓ.. ಓ.. ಬೇವಿರಲೀ ಮೂವಿರಲೀ
ಈ ಬೆಸುಗೆ ಹೀಗೇ ಇರಲಿ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ, ಅಮ್ಮ ಅನ್ನೋ ಉಸಿರೆರೆವೆ
ಚಂದಮಾಮ.. ಓ ಚಂದಮಾಮ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ

Thursday 1 December 2016

ಸಿಂಗಾರೀ ನನ್ನ ಮರೆಯಬೇಡ

ಚಿತ್ರ :ಸಿಂಗಾರಿ ಬಂಗಾರಿ
ಸಂಗೀತ-ಸಾಹಿತ್ಯ :ಹಂಸಲೇಖ
ಹಾಡಿದವರು S P B

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,
ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಈ ಜೊತೆಯ ಬಿಡೆನು ಎಂದೂ

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಕಣ್ಣಗಳು ಎರಡಿವೆ ದೃಷ್ಟಿ ಒಂದು ತಾನೇ,,
ಇಬ್ಬರ ದೇಹಕು ಉಸಿರು ಒಂದು ತಾನೇ,,
ಆಕಾಶ ಬಿದ್ದರೂ ಹಾಡೋಣ ನಾವಿಬ್ಬರೂ
ಆ ಶಿವನೆ ಕರೆದರೂ ಹೋಗೋಣ ನಾವಿಬ್ಬರೂ
ನಮಗೇ ಸಾವು ಬರಬಹುದೋ ಸ್ನೇಹ ಸಾಯದೋ

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ತಬ್ಬಲಿ ಆದರೂ ನನಗೆ ನೀನೇ ಎಲ್ಲಾ
ಅಂಬಲಿ ಕುಡಿದರು ನನಗೆ ಚಿಂತೆಯಿಲ್ಲ
ಬಾಳೊಂದು ಯುದ್ಧವೋ ಹೋರಾಡೊಕೆ ಸಿದ್ಧವೋ
ಬೇರೆಲ್ಲ ಮಿಥ್ಯವೋ ಬಾ ಈ ಸ್ನೇಹ ಸತ್ಯವೋ
ನನ್ನ ನಿನ್ನ ಗೆಳೆತನದಾ ಹಾಡು ನಿಲ್ಲದೋ

ಸಿಂಗಾರೀ,,,,,,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಈ ಜೊತೆಯ ಬಿಡೆನು ಎಂದೂ

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ

ಚಿತ್ರ: ಪುಟ್ನಂಜ (1995)
ಸಾಹಿತ್ಯ- ಸಂಗೀತ: ಹಂಸಲೇಖ
ಗಾಯಕರು: ಮನು
(ಚಿತ್ರದಲ್ಲಿ ಈ  ಗೀತೆಯನ್ನು ಸೇರಿಸಿಲ್ಲ)

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ಎತ್ತಿಗೆ ಕೊಟ್ಟ ಏರು, ಗದ್ದೆಗೆ ಬಿಟ್ಟ ನೀರು, ಊರೇಬಿಟ್ರೆಹೆಂಗೆ ಹೇಳು
ಹೊಸ್ತಿಲುದಾಟಿ ಹೋದಳು
ಬೀಜ ಇಟ್ಟ ಭೂಮಿ, ಹಣ್ಣು ಕೊಟ್ಟ ಸ್ವಾಮಿ, ಹಳಸಿಕೊಟ್ರೆಹೆಂಗೆ ಹೇಳು
ಗೆದ್ದಿಲುಕಟ್ಟಿ ಹೋದಳು

ಓ ಪುಟ್ಟಮಲ್ಲಿ, ನೀ ಕೇಳುಇಲ್ಲಿ
ಕಳೆ ತೆಗೆಯೋ ಭರದಲ್ಲಿ ತೆನೆಕಿತ್ತಳು ಬದುಕಲ್ಲಿ
ನಾನ್ ಪುಟ್ಟನಂಜ  ನಾನ್ ಪುಟ್ಟನಂಜ
ಈ ಪ್ರೀತಿಎಂಬೋ ನಂಜುಂಡನಂಜ

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ಬ್ಯಾಸಾರಮಾಡಿ ಕುಂತ್ರೆ ಗ್ರಹಚಾರ ಬಿಡದು
ನೆಸಾರ ಸುಟ್ಟನೆಂದು ಭೂತಾಯಿ ಅಳದು

ನಾನುಅನ್ನೋ ಹೆಣ್ಣು, ಭೇದಮಾಡೋ ಕಣ್ಣು, ಪ್ರೀತಿ ಮೈಯ್ಯಹುಣ್ಣು ಕೇಳು
ಮನಸು ಮುರಿದುಹೋದಳು
ಹೆಣ್ಣು ಅಂದ್ರೆ ಮಾನ, ಮಾನ ಅಂದ್ರೆ ಮನೆ, ಮನೆಬಿಟ್ರೆ ಹೆಂಗೇ ಹೇಳು
ಮಾನ ತೆಗೆದುಹೋದಳು

ಓ ಪುಟ್ಟಮಲ್ಲಿ, ಬಾ ಕೇಳುಇಲ್ಲಿ
ಮನೆಗುಡಿಸೋ ಭರದಲ್ಲಿ ಮನೆ ಒಡೆದಳು ಮನೆಒಡತಿ
ನಾನ್ ಪುಟ್ಟನಂಜ  ನಾನ್ ಪುಟ್ಟನಂಜ
ಈ ಪ್ರೀತಿಎಂಬೋ ನಂಜುಂಡನಂಜ

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ಅಡಿಕೆಗೆ ಹೋದಮಾನ ಆನೆಗೂ ಸಿಗದು
ಮಡಿಕೆಯ ಒಡೆಯೋ ಕೈಲಿ ಸಂಸಾರ ಇರದು

ಒಂದೇಸಾರಿ ಹುಟ್ಟು, ಒಂದೇಸಾರಿ ಪ್ರೀತಿ, ಒಂದೇಸಾವು ನಂಗೆ ಕೇಳು
ನಿತ್ಯಸಾವು ಕೊಟ್ಟಳು
ಅಂಗಿಕಳಚೋಹಂಗೆ, ಮಾತುತಿರುಚೋಹಂಗೆ, ಮನಸು ಮಗುಚೋರಲ್ಲ ನಾವು
ಮಾತುತಪ್ಪಿ ಹೋದಳು

ಓ ಪುಟ್ಟಮಲ್ಲಿ, ನೀ ಕೇಳುಇಲ್ಲಿ
ಕೊಳೆ ಕಳೆಯುವ ಭರದಲ್ಲಿ ಕಣ ಹರಿದಳು ಬಾಳಲ್ಲಿ
ನಾನ್ ಪುಟ್ಟನಂಜ  ನಾನ್ ಪುಟ್ಟನಂಜ
ಈ ಪ್ರೀತಿಎಂಬೋ ನಂಜುಂಡನಂಜ

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ

ಚಿತ್ರ: ಚೈತ್ರದ ಪ್ರೇಮಾಂಜಲಿ (1992)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯಕರು: ಎಸ್.ಪಿ.ಬಿ  ಮತ್ತು ಮಂಜುಳ ಗುರುರಾಜ್

ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು, ಮರುಗಿದವು
ಅಂಜಿಕೆಯೇ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು, ಕಾಣಿಸದ ಕಥೆಯುಂಟು, ವ್ಯಥೆಯುಂಟು

ವಿನೋದದ ಆಲಿಂಗನ ವಿಲಾಸದ ಆ ಚುಂಬನ
ನಾ ಮೈಮರೆತೆನು ಕರಿನಾಗದ ಗೆಳೆತನದೊಳಗೆ
ನಾ ಕಣ್ತೆರೆಯುವ ಮೊದಲೇರಿತು ವಿಷ ಮೈಯ್ಯೊಳಗೆ
ಅಪಾಯದ ಬಲಾಬಲ ದುರಾಸೆಯ ಫಲಾಫಲ
ಅದರರಿವಿಲ್ಲದೆ ಬರಿ ಪ್ರೇಮದ ಸವಿಯನು ಸವಿದೆ
ಓ ದೇವರೆ ಈ ಅತೀಆಸೆಗೆ ಮಸಿಯನು ಬಳಿದೆ

ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು, ಮರುಗಿದವು

ವಿವಾಹವೇ ಪ್ರವಾಹವು ವಿಮೋಚನೆ ಇಲ್ಲಿಲ್ಲವೋ
ಈ ಸುಳಿಅಲೆಯಲಿ ಎದುರೀಜಲು ಬಲಕುಸಿದಿದೆಯೋ
ನಾ ಮುಳುಗಿರುವೆಡೆ ನಿಜವೆಲ್ಲವು ಒಳಗಡಗಿದೆಯೋ
ಓ ಸಾವೆ ನೀ ದಯಾಮಯ ಈ ನೋವಿಗೆ ತೋರು ಉದಯ
ಈ ಬದುಕಿನಜೊತೆ ಬಯಸುವವರು ನಯವಂಚಕರೇ
ಆ ಸವಿನುಡಿಯಲಿ ವಿಷ ಉಣಿಸುವ ಕೊಲೆಪಾತಕರೇ

ಅಂಜಿಕೆಯೇ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು, ವ್ಯಥೆಯುಂಟು
ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು, ಮರುಗಿದವು

ದಾರಿಬಿಡು ವಿಧಿಯೇ ವಿಧಿಯೇ ಕರುಣಾಳುವಾಗಿ

ಚಿತ್ರ: ಚೈತ್ರದ ಪ್ರೇಮಾಂಜಲಿ (1992)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯಕರು: ಮಂಜುಳ ಗುರುರಾಜ್

ದಾರಿಬಿಡು ವಿಧಿಯೇ ವಿಧಿಯೇ ಕರುಣಾಳುವಾಗಿ
ಬದುಕಿರಲು ಮನಸಿಲ್ಲ ಬದುಕಿಸಲು ತಿಳಿದಿಲ್ಲ, ಉಸಿರಿಲ್ಲ
ಕರುಣೆಯಿಡು ವಿಧಿಯೇ ವಿಧಿಯೇ ಶುಭರಾಗವಾಗಿ
ತಾಯೊಡಲು ಉಯ್ಲಿಡಲು ಕಂಬನಿಯ ನಡುಗಡಲು, ಪ್ರಳಯದೊಳು

ನವೋದಯ ಈ ತಾಯಿಗೆ ಶುಭೋದಯ ಈ ಬಾಳಿಗೆ
ಈ ಮಕ್ಕಳ ಮನವೊಲಿಸುವ ಕಲೆ ಹೆತ್ತವರಿಗಿದೆ
ಈ ಮಕ್ಕಳ ಕಣ್ಣೊರೆಸಲು ಬೆಲೆ ಅತ್ತವರಿಗಿದೆ
ಅಮಾನುಷ ಸಮಾಜವು ಕಠೋರವು ಸಮೂಹವು
ಈ ಯುಗ ಯುಗದಲಿ ಥರಥರ ವಿಧ ಕಾಯಿದೆಗಳಿವೆ
ನೀ ಮನಸಿಗೆ ಸರಿ ತೋರಿದಕಡೆ ನಡೆದರೆ ಶುಭವೆ

ದಾರಿಬಿಡು ವಿಧಿಯೇ ವಿಧಿಯೇ ಕರುನಾಳುವಾಗಿ
ನೆನಪುಗಳು ಮರೆತಿಲ್ಲ ಕುಳಿತಿರಲು ಬಿಡುತಿಲ್ಲ ಬಿಡುತಿಲ್ಲ