Monday 19 December 2016

ರವಿ-ಹಂಸ ಕಾಂಬಿನೇಷನ್ ನಲ್ಲಿ ಮೂಡಿಬಂದ ಚಿತ್ರಗಳು

ರವಿ-ಹಂಸ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬಂದ ಚಿತ್ರಗಳು

1987 ಪ್ರೇಮಲೋಕ
1987 ಸಂಗ್ರಾಮ
1988 ರಣಧೀರ
1988 ಅಂಜದಗಂಡು
1989 ಯುಗಪುರುಷ
1989 ಕಿಂದರಿಜೋಗಿ
1989 ಯುದ್ದಕಾಂಡ
1989 ಪೋಲಿಹುಡುಗ
1990ಬಣ್ಣದ ಗೆಜ್ಜೆ
1990 ಅಭಿಮನ್ಯು
1991 ಶಾಂತಿಕ್ರಾಂತಿ
1991 ರಾಮಾಚಾರಿ
1992 ಹಳ್ಳಿಮೇಷ್ಟ್ರು
1992 ಗೋಪಿಕೃಷ್ಣ
1992 ಗುರುಬ್ರಹ್ಮ
1992 ಚಿಕ್ಕೆಜಮಾನ್ರು
1992 ಶ್ರೀರಾಮಚಂದ್ರ
1993 ಮನೇದೇವ್ರು
1993 ಗಡಿಬಿಡಿಗಂಡ
1993 ಅಣ್ಣಯ್ಯ
1994 ಚಿನ್ನ
1994 ಜಾಣ
1994 ರಸಿಕ
1995 ಪುಟ್ನಂಜ
1996 ಸಿಪಾಯಿ
1997 ಕಲಾವಿದ
1997 ಮೊಮ್ಮಗ
1997 ಚೆಲುವ
1998 ಯಾರೇ ನೀನು ಚೆಲುವೆ
1998 ಪ್ರೀತ್ಸೋದ್ ತಪ್ಪಾ?
2002 ಪ್ರೀತಿಮಾಡೋಹುಡುಗರಿಗೆಲ್ಲಾ
2003 ಒಂದಾಗೋಣಬಾ
2012 ನರಸಿಂಹ

ಬೆನ್ನ ಹಿಂದೆ

ಚಿತ್ರ: ಬಾವ ಬಾಮೈದ (2001)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಕೆ. ಎಸ್. ಚಿತ್ರ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ, ಅಮ್ಮ ಅನ್ನೋ ಉಸಿರೆರೆವೆ
ಚಂದಮಾಮ.. ಓ ಚಂದಮಾಮ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ

ಭಾವನ ಹೆಗಲಿಗೆ ಕೂಸಾಗಿ
ಈ ಊರೆಲ್ಲಾ ನಿನ್ನ ಮಾತಾಗಿ
ಆ ಮಾತೆಲ್ಲಾ ನನ್ನ ಹಾಡಾಗಿ
ಅಕ್ಕನ ಮನೆಗೆ ನೀ ಹೆಗಲಾಗಿ
ನನ್ನ ತವರೊಡಲ ಉರಿ ತಂಪಾಗಿ
ಪ್ರತೀ ಸಂಕ್ರಾಂತಿ ಸುಗ್ಗಿ ಸೊಂಪಾಗಿ
ಓ.. ಓ.. ಆ ಮನೆಗೂ.. ಈ ಮನೆಗೂ
ದೀಪದೊಳು ನೀನಿರಲು

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ

ಲಾಲಿಯ ಹಾಡಿದರು ಇಂಪಾಗಿ
ಈ ಕುಡಿಗಾಗಿ ಮುದ್ದು ನುಡಿಗಾಗಿ
ಈ ಮುದ್ದು ಲಾಲಿ ಮುಂದೆ ನಿನಗಾಗಿ
ಕರುಳ ಗೆಳೆತನ ನಮದಾಗಿ
ನಾ ನಿನಗಾಗಿ ನೀ ನನಗಾಗಿ
ಈ ಬಾಳೆಲ್ಲಾ ಜೊತೆ ಜೊತೆಯಾಗಿ
ಓ.. ಓ.. ಓ.. ಬೇವಿರಲೀ ಮೂವಿರಲೀ
ಈ ಬೆಸುಗೆ ಹೀಗೇ ಇರಲಿ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ
ಅಕ್ಕ ಅನ್ನೋ ಹಾಲೆರೆವೆ, ಅಮ್ಮ ಅನ್ನೋ ಉಸಿರೆರೆವೆ
ಚಂದಮಾಮ.. ಓ ಚಂದಮಾಮ

ಬೆನ್ನ ಹಿಂದೆ ನೀನು ಬಂದೆ.. ತಮ್ಮಯ್ಯ.. ತಮ್ಮಯ್ಯ
ಕಣ್ಣ ಮುಂದೆ ಬಾಳಿ ಬೆಳಗೋ.. ಕಂದಯ್ಯ ನನ್ನ ತಮ್ಮಯ್ಯ

Thursday 1 December 2016

ಸಿಂಗಾರೀ ನನ್ನ ಮರೆಯಬೇಡ

ಚಿತ್ರ :ಸಿಂಗಾರಿ ಬಂಗಾರಿ
ಸಂಗೀತ-ಸಾಹಿತ್ಯ :ಹಂಸಲೇಖ
ಹಾಡಿದವರು S P B

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,
ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಈ ಜೊತೆಯ ಬಿಡೆನು ಎಂದೂ

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಕಣ್ಣಗಳು ಎರಡಿವೆ ದೃಷ್ಟಿ ಒಂದು ತಾನೇ,,
ಇಬ್ಬರ ದೇಹಕು ಉಸಿರು ಒಂದು ತಾನೇ,,
ಆಕಾಶ ಬಿದ್ದರೂ ಹಾಡೋಣ ನಾವಿಬ್ಬರೂ
ಆ ಶಿವನೆ ಕರೆದರೂ ಹೋಗೋಣ ನಾವಿಬ್ಬರೂ
ನಮಗೇ ಸಾವು ಬರಬಹುದೋ ಸ್ನೇಹ ಸಾಯದೋ

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ತಬ್ಬಲಿ ಆದರೂ ನನಗೆ ನೀನೇ ಎಲ್ಲಾ
ಅಂಬಲಿ ಕುಡಿದರು ನನಗೆ ಚಿಂತೆಯಿಲ್ಲ
ಬಾಳೊಂದು ಯುದ್ಧವೋ ಹೋರಾಡೊಕೆ ಸಿದ್ಧವೋ
ಬೇರೆಲ್ಲ ಮಿಥ್ಯವೋ ಬಾ ಈ ಸ್ನೇಹ ಸತ್ಯವೋ
ನನ್ನ ನಿನ್ನ ಗೆಳೆತನದಾ ಹಾಡು ನಿಲ್ಲದೋ

ಸಿಂಗಾರೀ,,,,,,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಆಣೆ ಇಡು ನನ್ನಾಣೆ ಇಡು
ಮರೆತು ಹೋಗೆನೆಂದು
ಈ ಜೊತೆಯ ಬಿಡೆನು ಎಂದೂ

ಸಿಂಗಾರೀ,,,ನನ್ನ ಮರೆಯಬೇಡ,,
ಬಾ ದೂರ ಹೋಗಬೇಡ,,,

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ

ಚಿತ್ರ: ಪುಟ್ನಂಜ (1995)
ಸಾಹಿತ್ಯ- ಸಂಗೀತ: ಹಂಸಲೇಖ
ಗಾಯಕರು: ಮನು
(ಚಿತ್ರದಲ್ಲಿ ಈ  ಗೀತೆಯನ್ನು ಸೇರಿಸಿಲ್ಲ)

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ಎತ್ತಿಗೆ ಕೊಟ್ಟ ಏರು, ಗದ್ದೆಗೆ ಬಿಟ್ಟ ನೀರು, ಊರೇಬಿಟ್ರೆಹೆಂಗೆ ಹೇಳು
ಹೊಸ್ತಿಲುದಾಟಿ ಹೋದಳು
ಬೀಜ ಇಟ್ಟ ಭೂಮಿ, ಹಣ್ಣು ಕೊಟ್ಟ ಸ್ವಾಮಿ, ಹಳಸಿಕೊಟ್ರೆಹೆಂಗೆ ಹೇಳು
ಗೆದ್ದಿಲುಕಟ್ಟಿ ಹೋದಳು

ಓ ಪುಟ್ಟಮಲ್ಲಿ, ನೀ ಕೇಳುಇಲ್ಲಿ
ಕಳೆ ತೆಗೆಯೋ ಭರದಲ್ಲಿ ತೆನೆಕಿತ್ತಳು ಬದುಕಲ್ಲಿ
ನಾನ್ ಪುಟ್ಟನಂಜ  ನಾನ್ ಪುಟ್ಟನಂಜ
ಈ ಪ್ರೀತಿಎಂಬೋ ನಂಜುಂಡನಂಜ

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ಬ್ಯಾಸಾರಮಾಡಿ ಕುಂತ್ರೆ ಗ್ರಹಚಾರ ಬಿಡದು
ನೆಸಾರ ಸುಟ್ಟನೆಂದು ಭೂತಾಯಿ ಅಳದು

ನಾನುಅನ್ನೋ ಹೆಣ್ಣು, ಭೇದಮಾಡೋ ಕಣ್ಣು, ಪ್ರೀತಿ ಮೈಯ್ಯಹುಣ್ಣು ಕೇಳು
ಮನಸು ಮುರಿದುಹೋದಳು
ಹೆಣ್ಣು ಅಂದ್ರೆ ಮಾನ, ಮಾನ ಅಂದ್ರೆ ಮನೆ, ಮನೆಬಿಟ್ರೆ ಹೆಂಗೇ ಹೇಳು
ಮಾನ ತೆಗೆದುಹೋದಳು

ಓ ಪುಟ್ಟಮಲ್ಲಿ, ಬಾ ಕೇಳುಇಲ್ಲಿ
ಮನೆಗುಡಿಸೋ ಭರದಲ್ಲಿ ಮನೆ ಒಡೆದಳು ಮನೆಒಡತಿ
ನಾನ್ ಪುಟ್ಟನಂಜ  ನಾನ್ ಪುಟ್ಟನಂಜ
ಈ ಪ್ರೀತಿಎಂಬೋ ನಂಜುಂಡನಂಜ

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ಅಡಿಕೆಗೆ ಹೋದಮಾನ ಆನೆಗೂ ಸಿಗದು
ಮಡಿಕೆಯ ಒಡೆಯೋ ಕೈಲಿ ಸಂಸಾರ ಇರದು

ಒಂದೇಸಾರಿ ಹುಟ್ಟು, ಒಂದೇಸಾರಿ ಪ್ರೀತಿ, ಒಂದೇಸಾವು ನಂಗೆ ಕೇಳು
ನಿತ್ಯಸಾವು ಕೊಟ್ಟಳು
ಅಂಗಿಕಳಚೋಹಂಗೆ, ಮಾತುತಿರುಚೋಹಂಗೆ, ಮನಸು ಮಗುಚೋರಲ್ಲ ನಾವು
ಮಾತುತಪ್ಪಿ ಹೋದಳು

ಓ ಪುಟ್ಟಮಲ್ಲಿ, ನೀ ಕೇಳುಇಲ್ಲಿ
ಕೊಳೆ ಕಳೆಯುವ ಭರದಲ್ಲಿ ಕಣ ಹರಿದಳು ಬಾಳಲ್ಲಿ
ನಾನ್ ಪುಟ್ಟನಂಜ  ನಾನ್ ಪುಟ್ಟನಂಜ
ಈ ಪ್ರೀತಿಎಂಬೋ ನಂಜುಂಡನಂಜ

ಮನೆ ಮಾನಹೊತ್ತು ಯಾಕೆಹೋದೆ ಬೊಂಬೆ
ಬೇರು ಇಲ್ಲಅಂದ್ರೆ ಹೂವಕೊಡದು ಕೊಂಬೆ

ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ

ಚಿತ್ರ: ಚೈತ್ರದ ಪ್ರೇಮಾಂಜಲಿ (1992)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯಕರು: ಎಸ್.ಪಿ.ಬಿ  ಮತ್ತು ಮಂಜುಳ ಗುರುರಾಜ್

ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು, ಮರುಗಿದವು
ಅಂಜಿಕೆಯೇ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು, ಕಾಣಿಸದ ಕಥೆಯುಂಟು, ವ್ಯಥೆಯುಂಟು

ವಿನೋದದ ಆಲಿಂಗನ ವಿಲಾಸದ ಆ ಚುಂಬನ
ನಾ ಮೈಮರೆತೆನು ಕರಿನಾಗದ ಗೆಳೆತನದೊಳಗೆ
ನಾ ಕಣ್ತೆರೆಯುವ ಮೊದಲೇರಿತು ವಿಷ ಮೈಯ್ಯೊಳಗೆ
ಅಪಾಯದ ಬಲಾಬಲ ದುರಾಸೆಯ ಫಲಾಫಲ
ಅದರರಿವಿಲ್ಲದೆ ಬರಿ ಪ್ರೇಮದ ಸವಿಯನು ಸವಿದೆ
ಓ ದೇವರೆ ಈ ಅತೀಆಸೆಗೆ ಮಸಿಯನು ಬಳಿದೆ

ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು, ಮರುಗಿದವು

ವಿವಾಹವೇ ಪ್ರವಾಹವು ವಿಮೋಚನೆ ಇಲ್ಲಿಲ್ಲವೋ
ಈ ಸುಳಿಅಲೆಯಲಿ ಎದುರೀಜಲು ಬಲಕುಸಿದಿದೆಯೋ
ನಾ ಮುಳುಗಿರುವೆಡೆ ನಿಜವೆಲ್ಲವು ಒಳಗಡಗಿದೆಯೋ
ಓ ಸಾವೆ ನೀ ದಯಾಮಯ ಈ ನೋವಿಗೆ ತೋರು ಉದಯ
ಈ ಬದುಕಿನಜೊತೆ ಬಯಸುವವರು ನಯವಂಚಕರೇ
ಆ ಸವಿನುಡಿಯಲಿ ವಿಷ ಉಣಿಸುವ ಕೊಲೆಪಾತಕರೇ

ಅಂಜಿಕೆಯೇ ನನಗೆ ಕೊನೆಗೆ ಉರುಳಾಯಿತೆನಗೆ
ನಂಬಿದರೆ ನಿಜವುಂಟು ಕಾಣಿಸದ ಕಥೆಯುಂಟು, ವ್ಯಥೆಯುಂಟು
ನನ್ನವರೇ ನನಗೆ ಕೊನೆಗೆ ಮುಳ್ಳಾದರೆನಗೆ
ಕನಸುಗಳು ಕರಗಿದವು ಆಸೆಗಳು ಸೊರಗಿದವು, ಮರುಗಿದವು

ದಾರಿಬಿಡು ವಿಧಿಯೇ ವಿಧಿಯೇ ಕರುಣಾಳುವಾಗಿ

ಚಿತ್ರ: ಚೈತ್ರದ ಪ್ರೇಮಾಂಜಲಿ (1992)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯಕರು: ಮಂಜುಳ ಗುರುರಾಜ್

ದಾರಿಬಿಡು ವಿಧಿಯೇ ವಿಧಿಯೇ ಕರುಣಾಳುವಾಗಿ
ಬದುಕಿರಲು ಮನಸಿಲ್ಲ ಬದುಕಿಸಲು ತಿಳಿದಿಲ್ಲ, ಉಸಿರಿಲ್ಲ
ಕರುಣೆಯಿಡು ವಿಧಿಯೇ ವಿಧಿಯೇ ಶುಭರಾಗವಾಗಿ
ತಾಯೊಡಲು ಉಯ್ಲಿಡಲು ಕಂಬನಿಯ ನಡುಗಡಲು, ಪ್ರಳಯದೊಳು

ನವೋದಯ ಈ ತಾಯಿಗೆ ಶುಭೋದಯ ಈ ಬಾಳಿಗೆ
ಈ ಮಕ್ಕಳ ಮನವೊಲಿಸುವ ಕಲೆ ಹೆತ್ತವರಿಗಿದೆ
ಈ ಮಕ್ಕಳ ಕಣ್ಣೊರೆಸಲು ಬೆಲೆ ಅತ್ತವರಿಗಿದೆ
ಅಮಾನುಷ ಸಮಾಜವು ಕಠೋರವು ಸಮೂಹವು
ಈ ಯುಗ ಯುಗದಲಿ ಥರಥರ ವಿಧ ಕಾಯಿದೆಗಳಿವೆ
ನೀ ಮನಸಿಗೆ ಸರಿ ತೋರಿದಕಡೆ ನಡೆದರೆ ಶುಭವೆ

ದಾರಿಬಿಡು ವಿಧಿಯೇ ವಿಧಿಯೇ ಕರುನಾಳುವಾಗಿ
ನೆನಪುಗಳು ಮರೆತಿಲ್ಲ ಕುಳಿತಿರಲು ಬಿಡುತಿಲ್ಲ ಬಿಡುತಿಲ್ಲ

ಬಾನಲ್ಲಿ ನಿನ್ನಿಂದ ಸೂರ್ಯೋದಯ

ಚಿತ್ರ: ನೀನು ನಕ್ಕರೆ ಹಾಲು ಸಕ್ಕರೆ (1991)
ಸಾಹಿತ್ಯ- ಸಂಗೀತ: ಹಂಸಲೇಖ
ಗಾಯಕರು: ಕೆ.ಎಸ್.ಚಿತ್ರಾ

ಶರಣು..... ಶರಣೆನುವೆ ಶರಣೆನುವೆ
ಓ ಪ್ರಭುವೇ ಶರಣೆನುವೆ

ಬಾನಲ್ಲಿ ನಿನ್ನಿಂದ ಸೂರ್ಯೋದಯ...
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ
ಬಾನಲ್ಲಿ ನಿನ್ನಿಂದ ಚಂದ್ರೋದಯ
ಆನಂದ ನಿನ್ನಿಂದ ಕರುಣಾಮಯ
ಮೋಡ ಮಳೆಯಾಗಲು, ನೀರು ಭುವಿಸೇರಲು
ಭೂಮಿ ಹಸಿರಾಗಲು, ಲೋಕ ಗೆಲುವಾಗಲು
ಓಂ.. ಓಂ.. ಓಂ.. ಓಂ.. ಓಂ.. ಓಂ
ನೀ ಕಾರಣನು ದೇವ..
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ

ಈ ಲತೆನೀನೆ.. ಈ ಲತೆನೀನೆ ಈ ಸುಮನೀನೆ
ಈ ಸುಮದಂದ ಗಂಧವು ನೀನೆ
ಕಲ್ಲಲ್ಲಿ ಮುಳ್ಳಲ್ಲಿ ಮಣ್ಣಲ್ಲಿಯು
ಗಿರಿಯಲ್ಲಿ ಗುಹೆಯಲ್ಲಿ ಬನದಲ್ಲಿಯು
ಬಾನಾಡಿ ಕೊರಳಲ್ಲಿ ಇಂಪಾಗಿಯು
ತಂಗಾಳಿ ಸುಳಿದಾಗ ತಂಪಾಗಿಯು
ತಂಗಾಳಿ ಸುಳಿದಾಗ ತಂಪಾಗಿಯು
ಹಣ್ಣ ರುಚಿಯಲ್ಲಿಯು ಜೇನಸಿಹಿಯಲ್ಲಿಯು
ಹಾಲಬೆಳಕಲ್ಲಿಯು ರಾತ್ರಿ ಇರುಳಲ್ಲಿಯು
ಓಂ.. ಓಂ.. ಓಂ.. ಓಂ.. ಓಂ.. ಓಂ
ನೀನೆ ಇರುವೆ ದೇವ...
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ

ಈಶ್ವರ ನೀನೆ.. ಈಶ್ವರ ನೀನೆ ಶಾಶ್ವತ ನೀನೆ
ಎಲ್ಲವು ನೀನೆ ಎಲ್ಲೆಡೆ ನೀನೆ
ಸಂತೋಷ ಕೊಡುವಂಥ ನಗೆಯಲ್ಲಿಯು
ಕಂದಂಗೆ ತಾಯ್ಕೊಡುವ ಮುತ್ತಲ್ಲಿಯು
ಹಿತವಾದ ಸಂಗೀತ ಸ್ವರದಲ್ಲಿಯು
ಕವಿಯಾಡೊ ಸವಿಯಾದ ಮಾತಲ್ಲಿಯು
ಕವಿಯಾಡೊ ಸವಿಯಾದ ಮಾತಲ್ಲಿಯು
ಬೆಂಕಿ ಕಿಡಿಯಲ್ಲಿಯು ನೀರ ಹನಿಯಲ್ಲಿಯು
ಕಡಲ ಒಡಲಲ್ಲಿಯು ಸಿಡಿವ ಸಿಡಿಲಲ್ಲಿಯು
ಓಂ.. ಓಂ.. ಓಂ.. ಓಂ.. ಓಂ.. ಓಂ
ನೀನೆ ಇರುವೆ ದೇವ...
ಬಾನಲ್ಲಿ ನಿನ್ನಿಂದ ಸೂರ್ಯೋದಯ
ಬಾಳಲ್ಲಿ ನಿನ್ನಿಂದ ಅರುಣೋದಯ

ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೆ

ಚಿತ್ರ: ಯುಗಪುರುಷ (1989)
ಸಾಹಿತ್ಯ- ಸಂಗೀತ: ಹಂಸಲೇಖ
ಗಾಯಕರು: ಎಸ್.ಪಿ.ಬಿ

ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೆ
ಆಸೆಯ ಮೂಟೆಯನ್ನು ಹೊತ್ತು ಹೊತ್ತು ಹೊತ್ತು ತಂದೆ

ಅಜ್ಜಿಗೆ ಅರಿವೆ ಆಸೆ ಅಪ್ಪನಿಗೆ ಅಮ್ಮನ ಆಸೆ
ಅಮ್ಮನಿಗೆ ಮಕ್ಕಳ ಆಸೆ ಮಕ್ಕಳಿಗೆ ತಾತನ ಆಸೆ
ತಾತನಿಗೆ ಅಜ್ಜಿ ಆಸೆ ಅಜ್ಜಿಗೆ ತಾತನ ಆಸೆ
ಆಸೆಯು ಇಲ್ಲದೆ ಜಗವೇಇಲ್ಲ ಆಸೆಯೇ ದುಃಖದ ಮೂಲ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ

ಸೂಜಿಕಣ್ಣಿನಲ್ಲಿ ದೊಡ್ಡ ಒಂಟೆ ಹೋದರೂನು ಹೋಗಬಹುದು
ಅಯ್ಯಯ್ಯೋ ಜನರಿಗೆ ದುಡ್ಡಿನಾಸೆ ಹೋಗದು
ಚಟ್ಟಹತ್ತಿ ಉರಿಯೋ ಹೆಣ ಮೇಲೆ ಎದ್ದರೂನು ಏಳಬಹುದು
ಅಮ್ಮಮ್ಮೋ ಗಂಡಿಗೆ ಹೆಣ್ಣಿನಾಸೆ ಸಾಯದು
ಭೂಮಿಯೇ ಮುಗ್ದುಬಂದರು ಆಕಾಶ ಬಿದ್ದುಹೋದರು
ಮರುಭೂಮಿ ನೀರೆ ಆದರೂ ಸಾಗರವೆ ಬತ್ತಿಹೋದರು
ಅತ್ತ ಹೋಗದು ಇತ್ತ ಹೋಗದು ಬತ್ತಿ ಹೋಗದು ಸತ್ತು ಹೋಗದ
ಆಸೆಯ ಮೂಟೆಯನ್ನು ಹೊತ್ತು ಹೊತ್ತು ಹೊತ್ತು ತಂದೆ
ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೆ

ಆಸೆ ದುಃಖ.. ದುಃಖ ಆಸೆ..

ಕಾರ್ಪೋರೇಶನ್ ಕೊಳಾಯಿಯಲ್ಲಿ ಹಾಲು ಬಂದು ನಿಂತು ಹೋಗಬಹುದು
ಆಸೆಯ ಹಿಂದಿನ ಕಣ್ಣನೀರು ನಿಲ್ಲದು
ರೇಷನ್ ಕಾರ್ಡಿನಲ್ಲಿ ಒಳ್ಳೆ ಅಕ್ಕಿ ಸಿಕ್ಕರೂನು ಸಿಕ್ಕಬಹುದು
ಆಸೆಯ ಕ್ಯೂವಿಗೆ ಎಂದೂ ಕೊನೆಯೇ ಸಿಕ್ಕದು
ಬರಗಾಲ ನಿಂತುಹೋದರು ಯುದ್ಧಗಳೇ ಇಲ್ಲವಾದರು
ಜನಸಂಖ್ಯೆ ಕಡಿಮೆಯಾದರು ಬೆಲೆಎಲ್ಲಾ ಇಳಿದುಹೋದರು
ಆಸೆ ಎನ್ನುವ ಸರಕುಧಾರಣೆ ಕೆಳಗೆ ಇಳಿಯುವ ಆಸೆ ಕಾನನೆ
ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೆ
ಆಸೆಯ ಮೂಟೆಯನ್ನು ಹೊತ್ತು ಹೊತ್ತು ಹೊತ್ತು ತಂದೆ
ಅಜ್ಜಿಗೆ ಅರಿವೆ ಆಸೆ ಅಪ್ಪನಿಗೆ ಅಮ್ಮನ ಆಸೆ
ಅಮ್ಮನಿಗೆ ಮಕ್ಕಳ ಆಸೆ ಮಕ್ಕಳಿಗೆ ತಾತನ ಆಸೆ
ತಾತನಿಗೆ ಅಜ್ಜಿ ಆಸೆ ಅಜ್ಜಿಗೆ ತಾತನ ಆಸೆ
ಆಸೆಯು ಇಲ್ಲದೆ ಜಗವೇಇಲ್ಲ ಆಸೆಯೇ ದುಃಖದ ಮೂಲ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ

ಏಯ್ ನಿನ್ನಳೆ ಏಯ್

ಚಿತ್ರ: ಹೊಸಜೀವನ (1990)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ

ಏಯ್ ನಿನ್ನಳೆ ಏಯ್ ಏಯ್ ನಿನ್ನಳೆ ಏಯ್
ಯಾರತ್ರ ನಿಂದೆಲ್ಲ ಏಯ್
ಚಾಕು ಚೈನು ನನ್ನ ಎಡಗೈಯಿ ಬಲಗೈಯಿ ಬೇವರ್ಸಿ ಮೈಯ್ಯಿ
ಬ್ಲೇಡು ಬಾಟ್ಲು ನನ್ನ ದೊಡ್ಡ್ತಮ್ಮ ಚಿಕ್ತಮ್ಮ ಸಾರಾಯಿಉಯ್ಯಿ ಇವ್ನಳೆ ಏಯ್
ಸಾಯಕ್ಕು ಸಾಯ್ಸಕ್ಕು ನಾನು ಸೈ
ಏಯ್ ನಿನ್ನಳೆ ಏಯ್ ಏಯ್ ನಿನ್ನಳೆ ಏಯ್
ಏಯ್ ನಿನ್ನಳೆ ಏಯ್ ಏಯ್ ನಿನ್ನಳೆ ಏಯ್

ಊರಿಗೆ ಬೆಂಕಿಬಿದ್ರೇನು ನಂಗೆ ಆ ಬೆಂಕಿಲ್ಲೇ ಬೀಡಿ ಹಚ್ತೀನಿ ಹಿಂಗೆ
ಯಾರಿಗೆ ಹೊಟ್ಟೆವುರ್ದ್ರೇನು ನಂಗೆ ಇಲ್ಲಿ ನನ್ಹೊಟ್ಟೆ ಉರಿಯೋದೆ ಮುಖ್ಯನಂಗೆ
ದೇವರ ಹುಂಡಿ ಒಡೆಯೋನು ಕಳಶನೆ ಕದಿಯೋನು
ನಾಲ್ಕುಮಂದಿಯೊಳಗೆ ಶಾಕಿರ್ದಾರ
ದಿನವಿಡೀ ಲಂಚ ನುಂಗೋನ್ ಗೆ  ಕಳ್ಳಭಟ್ಟಿ ಇಳಿಸೋನ್ ಗೆ
ನಾನೇ ಸುಂಕ ಕೇಳೋ ಪಾಳೇಗಾರ
ಚಾಕು ಚೈನು ನನ್ನ ಎಡಗೈಯಿ ಬಲಗೈಯಿ ಬೇವರ್ಸಿ ಮೈಯ್ಯಿ
ಬ್ಲೇಡು ಬಾಟ್ಲು ನನ್ನ ದೊಡ್ಡ್ತಮ್ಮ ಚಿಕ್ತಮ್ಮ ಸಾರಾಯಿಉಯ್ಯಿ ಇವ್ನಳೆ ಏಯ್
ಸಾಯಕ್ಕು ಸಾಯ್ಸಕ್ಕು ನಾನು ಸೈ
ಏಯ್ ನಿನ್ನಳೆ ಏಯ್..  ಏಯ್ ನಿನ್ನಳೆ ಏಯ್

ಹೆಂಡ್ತಿಗೆ ಮೋಸ ಮಾಡ್ತಾನೆ ಒಬ್ಬ ಸಂಬಳ ಕೊಡದೇನೆ ಏರ್ತಾನೆ ಹೆಂಡದ್ ದಿಬ್ಬ
ಬಡ್ಡಿಗೆ ಬಡವರ್ನ ಕೀಳ್ತನೊಬ್ಬ ಇಂಥ ಕಳ್ರನ್ನ ಸುಲಿಯೋದೆ ನಂಗೆ ಹಬ್ಬ
ಜನಗಳ ತಿದ್ದಕ್ಕಾಗಲ್ಲ ಮೇಲೆತ್ತಕ್ಕಾಗಲ್ಲ ಎಲ್ಲಾ ಕಳ್ರ ಸಂತೆ ಆಗೋಯ್ತಂತೆ
ಉಗಿದರೆ ಲೋಕ ಬಗ್ತೈತೆ ಕೇಳಿದ್ದು ಕೊಡ್ತೈತೆ ತಿಂದುಕುಡ್ದು ಸಾಯ್ತಿನಿ ನಂಗೇನ್ ಚಿಂತೆ
ಚಾಕು ಚೈನು ನನ್ನ ಎಡಗೈಯಿ ಬಲಗೈಯಿ ಬೇವರ್ಸಿ ಮೈಯ್ಯಿ
ಬ್ಲೇಡು ಬಾಟ್ಲು ನನ್ನ ದೊಡ್ಡ್ತಮ್ಮ ಚಿಕ್ತಮ್ಮ ಸಾರಾಯಿಉಯ್ಯಿ ಇವ್ನಳೆ ಏಯ್
ಸಾಯಕ್ಕು ಸಾಯ್ಸಕ್ಕು ನಾನು ಸೈ
ಏಯ್ ಏಯ್ ನಿನ್ನಳೆ ಏಯ್  ಏಯ್ ನಿನ್ನಳೆ ಏಯ್
ಯಾರತ್ರ ನಿಂದೆಲ್ಲ ಏಯ್
ಚಾಕು ಚೈನು ನನ್ನ ಎಡಗೈಯಿ ಬಲಗೈಯಿ ಬೇವರ್ಸಿ ಮೈಯ್ಯಿ
ಬ್ಲೇಡು ಬಾಟ್ಲು ನನ್ನ ದೊಡ್ಡ್ತಮ್ಮ ಚಿಕ್ತಮ್ಮ ಸಾರಾಯಿಉಯ್ಯಿ ಇವ್ನಯ್ಯನ್ ಏಯ್
ಸಾಯಕ್ಕು ಸಾಯ್ಸಕ್ಕು ನಾನು ಸೈ
ಏಯ್ ನಿನ್ನಳೆ ಏಯ್  ಏಯ್ ನಿನ್ನಳೆ ಏಯ್

ಮಂಜು ಮಂಜು ಬೆಳ್ಳಿ ಮಂಜು ಮಂಜಿನ ರೇಷಿಮೆರಾಶಿಯಲಿ

ಚಿತ್ರ: ಹೂವುಹಣ್ಣು (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ರಾಜೇಶ್ ಕೃಷ್ಣನ್ & ಕೆ. ಎಸ್. ಚಿತ್ರ

ಮಂಜು ಮಂಜು ಬೆಳ್ಳಿ ಮಂಜು ಮಂಜಿನ ರೇಷಿಮೆರಾಶಿಯಲಿ
ಪ್ರೇಮಿಸುವ ಹಿಮಕಾಶಿಯಲಿ..
ಮಂಜು ಮಂಜು ಬೆಳ್ಳಿ ಮಂಜು ಮಂಜು ಮಂಜು

ಆ ಸಂಪಿಗೆ ಹೂ ಹೋಲುವ ನಾಜೂಕಿನ ಈ ಮೂಗಿನ ಅಂದದ..
ಮುತ್ತಿನ ಮೂಗುತಿ ಹಿಮಬಿಂದುವೇ
ಮಂಜು ಮಂಜು ಬೆಳ್ಳಿ ಮಂಜು ಮಂಜಿನ ರೇಷಿಮೆರಾಶಿಯಲಿ
ಪ್ರೇಮಿಸುವ ಹಿಮಕಾಶಿಯಲಿ..
ಮಂಜು ಮಂಜು ಬೆಳ್ಳಿ ಮಂಜು ಮಂಜು ಮಂಜು

ಈ ಹಸುರಿನ ಈ ವನಜನ ಮುಂಜಾವಿನ ಈ ಜೋಡಿಗೆ ಸುರಿದರು..
ಮಂಜಿನ ರತುನದ ಹಿಮಮಣಿಗಳ
ಮಂಜು ಮಂಜು ಬೆಳ್ಳಿ ಮಂಜು ಮಂಜಿನ ರೇಷಿಮೆರಾಶಿಯಲಿ
ಪ್ರೇಮಿಸುವ ಹಿಮಕಾಶಿಯಲಿ
ಮಂಜು ಮಂಜು ಬೆಳ್ಳಿ ಮಂಜು ಮಂಜು ಮಂಜು

ಓ ಮೇಘವೇ ನಿಧಾನವಾಗಿ ನೀ ಬಾ

.ಚಿತ್ರ: ರಣರಂಗ (1988)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಹ್ಯಾಟ್ರಿಕ್ ಹೀರೋ & ಅನುರಾಧಾ

I Love You.. I Love You.. I Love You.
ಹೋ..  ಮೇಘವೇ ನಿಧಾನವಾಗಿ ನೀ ಬಾ
ಹೇ..  ಕಾಲವೇ ವಿಳಂಬವಾಗಿ ನೀ ಬಾ
ನನ್ನ ಚಂದ್ರನ ಮುಚ್ಚಿಕೊಳ್ಳದೇ
ನನ್ನ ಇನಿಯನ ಕದ್ದುನೋಡದೇ
ದೂರ ಹೋಗಿ ನಿಲ್ಲೇ ಮೇಘವೇ ಕಾಲವೇ ಮೇಘವೇ ಕಾಲವೇ

I Love You.. I Love You.. I Love You.
ಹೋ.. ರಾಗವೇ ಸರಾಗವಾಗಿ ನೀ ಬಾ
ಹೇ.. ಕಾವ್ಯವೇ ನಿರಾಳವಾಗಿ ನೀ ಬಾ
ನನ್ನ ತಾರೆಯ ಹಾಡಿ ಹೊಗಳಲು
ನನ್ನ ಇನಿಯಳ ಮುದ್ದು ಮಾಡಲು
ಬೇಗ ಬೇಗ ಬಾರೆ ರಾಗವೇ ಕಾವ್ಯವೇ ರಾಗವೇ ಕಾವ್ಯವೇ

ಈ ಕಣ್ಣೆ ನನ್ನ ರಾಗ ಈ ಹೆಣ್ಣೆ ನನ್ನ ಕಾವ್ಯ
ನೀನೊಮ್ಮೆ ನಗುತ ನೋಡು
ಇದ ನಾ ಬರೆವೆ ನೂರಾರು ಹಾಡು
ಮಾತನಾಡೊ ಉಸಿರು ಅಹಾ ತಾಳ ಹಾಕಿದೆ
ತೂಗಿ ಆಡೋ ವಯಸು ಚಪ್ಪಾಳೆ ತಟ್ಟಿದೆ
ಕೇಳೆ ನಾನು ನಿನ್ನಮೇಲೆ ಬರೆದ ಪಲ್ಲವಿ
I Love You.. I Love You.. I Love You.

ತಂಗಾಳಿ ಬಾರೆ ಬೇಗ ಈ ಹಾಡ ಕೇಳು ಈಗ
ಹಾಡಿದನು ಒಂದೇ ಸಾಲು
ನನಗೆ ಭೂಮಿಲ್ಲೇ ನಿಂತಿಲ್ಲ ಕಾಲು
ಹಾಡುವಾಗ ಇವನ ಕಣ್ಣನ್ನು ನೋಡು ಬಾ
ನೋಟದಲ್ಲೆ ಸೆಳೆವ ಈ ಮೋಡಿ ನೋಡು ಬಾ
ಕೇಳೇ ಇವನು ನನ್ನ ಮೇಲೆ ಬರೆದ ಪಲ್ಲವಿ

I Love You.. I Love You.. I Love You.
ಹೋ..  ಮೇಘವೇ ನಿಧಾನವಾಗಿ ನೀ ಬಾ
ಹೋ..  ಕಾಲವೇ ವಿಳಂಬವಾಗಿ ನೀ ಬಾ
ನನ್ನ ತಾರೆಯ ಮುಚ್ಚಿಕೊಳ್ಳದೇ
ನನ್ನ ಚಂದ್ರನ ಕದ್ದುನೋಡದೇ
ದೂರ ಹೋಗಿ ನಿಲ್ಲೇ ಮೇಘವೇ ಕಾಲವೇ ಮೇಘವೇ ಕಾಲವೇ

ರಾಜ ರಾಜ ಶಿವರಾಜ ಕಲ್ಲು ಮುಳ್ಳಲ್ಲಿ ಹುಟ್ಟಿಬಂದ ರೋಜ

ಚಿತ್ರ: ಚಂದ್ರೋದಯ (1999)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಹ್ಯಾಟ್ರಿಕ್ ಹೀರೋ

ರಾಜ ರಾಜ ರಾಜ ರಾಜ ನನ್ನ ಗಲ್ಲಿಗೇ ನಾನೇ ಮಹಾರಾಜ
ರಾಜ ರಾಜ ಶಿವರಾಜ ಕಲ್ಲು ಮುಳ್ಳಲ್ಲಿ ಹುಟ್ಟಿಬಂದ ರೋಜ
ನಾನು ಹಾಡೋದು ಬೆನ್ನುತಟ್ಟೋ ಜನರಿಗೆ
ನಾನು ಬಾಗೋದು ಅನ್ನಕೊಟ್ಟ ದೇವರಿಗೆ
ನಾನು ಹಾಡೋದು ಬೆನ್ನುತಟ್ಟೋ ಜನರಿಗೆ
ನಾನು ಬಾಗೋದು ಅನ್ನಕೊಟ್ಟ ದೇವರಿಗೆ
ರಾಜ ರಾಜ ರಾಜ ರಾಜ ನನ್ನ ಗಲ್ಲಿಗೇ ನಾನೇ ಮಹಾರಾಜ
ರಾಜ ರಾಜ ಶಿವರಾಜ ಕಲ್ಲು ಮುಳ್ಳಲ್ಲಿ ಹುಟ್ಟಿಬಂದ ರೋಜ

ನೋಡಲಾರೆ ಸಹಿಸಲಾರೆ ಇಲ್ಲದವನ ಅಳುವ
ಅವನಿಗಾಗೆ ಹೆದರದೇನೆ ಮಾಡಬಲ್ಲೆ ಕಳುವ..
ನೋಡಲಾರೆ ಸಹಿಸಲಾರೆ ಇಲ್ಲದವನ ಅಳುವ
ಅವನಿಗಾಗೆ ಹೆದರದೇನೆ ಮಾಡಬಲ್ಲೆ ಕಳುವ
ನನ್ನ ವಿಳಾಸ ಬಡವನ ಬೀದಿಯಲ್ಲಿ
ನನ್ನ ಉಲ್ಲಾಸ ನೊಂದವನ ನಡುವಲಿ
ರಾಜ ರಾಜ ರಾಜ ರಾಜ ನನ್ನ ಗಲ್ಲಿಗೇ ನಾನೇ ಮಹಾರಾಜ
ರಾಜ ರಾಜ ಶಿವರಾಜ ಕಲ್ಲು ಮುಳ್ಳಲ್ಲಿ ಹುಟ್ಟಿಬಂದ ರೋಜ

ಇಂಪಿನಿಂಪಿನ ಕಂಪುಕಂಪಿನ ಕನ್ನಡದ ನುಡಿಮುತ್ತು
ಇಂದು ನಾಳೆಗೆ ನನ್ನ ಬಾಳಿಗೆ ಸುಖವ ಕೊಡೊ ಸಂಪತ್ತು..
ಇಂಪಿನಿಂಪಿನ ಕಂಪುಕಂಪಿನ ಕನ್ನಡದ ನುಡಿಮುತ್ತು
ಇಂದು ನಾಳೆಗೆ ನನ್ನ ಬಾಳಿಗೆ ಸುಖವ ಕೊಡೊ ಸಂಪತ್ತು
ಏನಿದೆ ಅಂತಾರೆ ಈ ಮಣ್ಣಿನಲ್ಲಿ
ಎಲ್ಲ ಇದೆ ತನ್ನ್ ನೋಡೋ ಕಣ್ಣಿನಲ್ಲಿ
ರಾಜ ರಾಜ ರಾಜ ರಾಜ ನಮ್ಮ ಗಲ್ಲಿಗೇ ನೀನೇ ಮಹಾರಾಜ
ರಾಜ ರಾಜ ಶಿವರಾಜ ಕಲ್ಲು ಮುಳ್ಳಲ್ಲಿ ಹುಟ್ಟಿಬಂದ ರೋಜ  
ನಾನು ಹಾಡೋದು ಬೆನ್ನುತಟ್ಟೋ ಜನರಿಗೆ
ನಾನು ಬಾಗೋದು ಅನ್ನಕೊಟ್ಟ ದೇವರಿಗೆ
........

ಲೋಕ ಲೋಕ ನೋಡೋದು ಹೀಗೇನೆ

ಚಿತ್ರ: ನವತಾರೆ (1991)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ. ಎಸ್. ಚಿತ್ರ

ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್

ಓ.. ಲ ಲಾ ಲ ಲಾ.. ಲ ಲ ಲ ಲಾ ಲ ಲ ಲಾ ಲ ಲ...
ಲೋಕ ಲೋಕ ನೋಡೋದು ಹೀಗೇನೆ
ಸ್ನೇಹ ಸ್ನೇಹ ಕಾಣೋದು ಹೀಗೇನೆ
ಸ್ನೇಹಕ್ಕೆ ಬೇಕಿಲ್ಲ ಸಂಭಾವನೆ ಸ್ನೇಹಕ್ಕೆ ಸ್ನೇಹಾನೆ ಸಂಪಾದನೆ
ಸ್ನೇಹಕ್ಕೆ ಮೂಲನೆ ಸಂವೇದನೆ ಸ್ನೇಹಕ್ಕೆ ಬೇಕಯ್ಯ ಸದ್ಭಾವನೆ
ಗೆಳಯ ಗೆಳತಿ ನಾವಿಬ್ಬರು
ಲೋಕ ಲೋಕ ನೋಡೋದು ಹೀಗೇನೆ
ಸ್ನೇಹ ಸ್ನೇಹ ಕಾಣೋದು ಹೀಗೇನೆ
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್

ಸ್ನೇಹ ಒಂದು ಉತ್ತೇಜನ ಸ್ನೇಹ ಒಂದು ಸಂಜೀವನ
ಸ್ನೇಹವೆಂಬ ತಂಗಾಳಿಗೆ ಬಾಳಿನಲ್ಲಿ ರೋಮಾಂಚನ
ಹೋ.. ಅಂತರಂಗದಲ್ಲಿ ಸ್ನೇಹರಾಗದಲ್ಲಿ
ಹೆಣ್ಣುಗಂಡಿಗಿಲ್ಲಿ ಬೇಧಭಾವ ಎಲ್ಲಿ
ಸ್ನೇಹಕಾಗಿ ಲೋಕ ಆಯಿತಯ್ಯ ಮೂಕ  ಹೋ..
ಒಹೋ ಒಹೊ ಲ ಲ ಲಾ ಲ ಲ...
ಲೋಕ ಲೋಕ ನೋಡೋದು ಹೀಗೇನೆ
ಸ್ನೇಹ ಸ್ನೇಹ ಕಾಣೋದು ಹೀಗೇನೆ
....


ಹೂವಿನಲ್ಲಿ ಗಂಧ ಇದೆ ಗಾಳಿಯಲ್ಲಿ ವೇಗ ಇದೆ
ಹೂವು ಗಾಳಿ ಬೇರಾದರೂ ಸ್ನೇಹದಿಂದ ಒಂದಾಗಿದೆ
ಈ ಗಾಳಿ ಬೀಸಬೇಕು ಗಂಧ ಹರಡಬೇಕು
ದೂರ ತೀರವೆಲ್ಲಾ ಕಂಪು ಚಲ್ಲಬೇಕು
ಸ್ನೇಹ ಒಂದು ತ್ಯಾಗ ಸ್ನೇಹ ಒಂದು ಯೋಗ  ಓ..
ಲ ಲ ಲಾ ಲ ಲ...
ಲೋಕ ಲೋಕ ನೋಡೋದು ಹೀಗೇನೆ
ಸ್ನೇಹ ಸ್ನೇಹ ಕಾಣೋದು ಹೀಗೇನೆ
ಸ್ನೇಹಕ್ಕೆ ಬೇಕಿಲ್ಲ ಸಂಭಾವನೆ ಸ್ನೇಹಕ್ಕೆ ಸ್ನೇಹಾನೆ ಸಂಪಾದನೆ
ಸ್ನೇಹಕ್ಕೆ ಮೂಲನೆ ಸಂವೇದನೆ ಸ್ನೇಹಕ್ಕೆ ಬೇಕಯ್ಯ ಸದ್ಭಾವನೆ
ಗೆಳಯ ಗೆಳತಿ ನಾವಿಬ್ಬರು
ಲೋಕ ಲೋಕ ನೋಡೋದು ಹೀಗೇನೆ
ಸ್ನೇಹ ಸ್ನೇಹ ಕಾಣೋದು ಹೀಗೇನೆ
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್

ಜನನ ಮರಣಗಳೆರಡೂ ಕುರುಡು

ಚಿತ್ರ: ಪೋಲಿಹುಡುಗ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ

ಜನನ ಮರಣಗಳೆರಡೂ ಕುರುಡು
ಮುಂದೆ ಹೋಗದು ಹಿಂದೆ ಬಾರದು ನಿಂತಲ್ಲಿ ನಿಲ್ಲದು
ಸ್ನೇಹ ಪ್ರೀತಿಗಳೆರಡೂ ಕುರುಡು
ದೂರ ಹೋಗದು ಬೇರೆ ಆಗದು ಕಣ್ಣಿಗೆ ಕಾಣದು
ನಾಳೆ ಗೊತ್ತಿಲ್ಲದ ಬಾಳಿಗೆ ಈ ದಿನ ಬರ್ತ್ ಡೇ ಬರ್ತ್ ಡೇ
ಜನನ ಮರಣಗಳೆರಡೂ ಕುರುಡು
ಮುಂದೆ ಹೋಗದು ಹಿಂದೆ ಬಾರದು ನಿಂತಲ್ಲಿ ನಿಲ್ಲದು

ಕುಣಿಯುವ ಸಡಗರ ನಮಗೆ ಇದೆ
ಕುಣಿಸುವ ಢಮರುಗ ಯಾರಲಿದೆ.. ಯಾರಲಿದೆ, ಹೆಣ್ಣಲಿದೆ
ನಲಿಸುವ ರಾಗ ಒಲಿಸುವ ವೇಗ
ಆ ಹೆಣ್ಣಿನಲ್ಲಿದೆ ಆ ಕಣ್ಣಿನಲ್ಲಿದೆ ಆ ನೋಟದಲ್ಲಿದೆ ಮೈಮಾಟದಲ್ಲಿದೆ
ನಾಳೆ ಗೊತ್ತಿಲ್ಲದ ಬಾಳಿಗೆ ಈ ದಿನ ಬರ್ತ್ ಡೇ ಬರ್ತ್ ಡೇ
ಜನನ ಮರಣಗಳೆರಡೂ ಕುರುಡು
ಮುಂದೆ ಹೋಗದು ಹಿಂದೆ ಬಾರದು ನಿಂತಲ್ಲಿ ನಿಲ್ಲದು

ಹೂವಿಗೆ ಪ್ರತಿದಿನ ಜನುಮದಿನ
ಹಾರುವ ದುಂಬಿಗೆ ಏನುದಿನ.. ಏನುದಿನ, ಮದುವೆದಿನ
ಅರಳುವ ಗುಟ್ಟು ಬಯಲಿಗೆ ಬಿತ್ತು
ಬಾರೆ ನಾಳೆ ಎನ್ನದೆ ಬಾರೆ ವೇಳೆ ಮಾಡದೆ
ಬೇರೆ ರಾಗಹಾಡದೆ ಬಾರೆ ತಾಳ ತಪ್ಪದೆ
ನಾಳೆ ಗೊತ್ತಿಲ್ಲದ ಬಾಳಿಗೆ ಈ ದಿನ ಬರ್ತ್ ಡೇ ಬರ್ತ್ ಡೇ
ಜನನ ಮರಣಗಳೆರಡೂ ಕುರುಡು
ಮುಂದೆ ಹೋಗದು ಹಿಂದೆ ಬಾರದು ನಿಂತಲ್ಲಿ ನಿಲ್ಲದು
ಸ್ನೇಹ ಪ್ರೀತಿಗಳೆರಡೂ ಕುರುಡು
ದೂರ ಹೋಗದು ಬೇರೆ ಆಗದು ಕಣ್ಣಿಗೆ ಕಾಣದು

ಯಾರು ಪೋಲಿ

ಚಿತ್ರ: ಪೋಲಿಹುಡುಗ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಮಂಜುಳಾ ಗುರುರಾಜ್

ಯಾರು ಪೋಲಿ..  ಪೋಲಿ ಊರಲ್ಲಿ ನಾನೇನಾ
ಬೇರೆ ಎಲ್ಲಾ.. ಎಲ್ಲಾ ತುಂಬಾನೆ ಸಾಚಾನಾ
ಭೂತಗಾಜು.. ಗಾಜು  ತನ್ನಿರಿ ಹಾಕೋಣ
ಸಾಚಾ ಯಾರು.. ಯಾರು ಪತ್ತೆಯ ಮಾಡೋಣ
ಹುಡುಕಾಡಿ ಅವನನ್ನೇ ಕೇಳೋಣ
ಯಾರು ಪೋಲಿ..  ಪೋಲಿ ಊರಲ್ಲಿ ನಾನೇನಾ
ಬೇರೆ ಎಲ್ಲಾ.. ಎಲ್ಲಾ ತುಂಬಾನೆ ಸಾಚಾನಾ

ಊರೆಲ್ಲಾ ಪೋಲಿ ಬಿದ್ದಿದೆ ನೀಲಿಯ ಚಿತ್ರಕ್ಕೆ ಕಳ್ಳ ಸಾಲು ನಿಂತಿದೆ
ಬೀದೀಲಿ ಬೆತ್ತಲೆ ಗ್ರಂಥ ಒರಗಿ ನಿಂತಿದೆ
ನಾಡೆಲ್ಲಾ ಕೆಟ್ಟು ಹೋಗಿದೆ ಕ್ಯಾಬರೆ ನೃತ್ಯಕ್ಕೆ ಇಲ್ಲಿ ಲೈಸೆನ್ಸ್ ಸಿಕ್ಕಿದೆ
ಪತ್ರಿಕೆ ಮಧ್ಯದ ಪೇಜೆ ಬೆತ್ತಲಾಗಿದೆ
ಅಯ್ಯಯ್ಯೋ ಇವರಿಗೆ ಇಲ್ಲಯ್ಯ ಸೆನ್ಸಾರು
ಆಳೋರೆ ಕೆಟ್ಟರೆ ಕೇಳೋರು ಇನ್ಯಾರು
ಹುಡುಕಾಡಿ ಅವರನ್ನೇ ಕೇಳೋಣ
ಯಾರು ಪೋಲಿ..  ಪೋಲಿ ಊರಲ್ಲಿ ನಾನೇನಾ
ಬೇರೆ ಎಲ್ಲಾ.. ಎಲ್ಲಾ ತುಂಬಾನೆ ಸಾಚಾನಾ

ಧಿಕ್ಕಾರ ಧಿಕ್ಕಾರ B.P. ಕ್ಲಾಸಿಗೆ ಧಿಕ್ಕಾರ
ಧಿಕ್ಕಾರ ಧಿಕ್ಕಾರ B.P. ಕ್ಲಾಸಿಗೆ ಧಿಕ್ಕಾರ

ಹೋರಾಟ ನಿಲ್ಲಬಾರದು ಕಾರಣ ನ್ಯಾಯವು ನಮಗೆ ಬೇಗ ಬೇಕಿದೆ
ಮುಂದಕ್ಕೆ ನಾವಿನ್ನು ತುಂಬಾ ಓದಬೇಕಿದೆ
ಕಾಲೇಜು ಮುಚ್ಚಬಾರದು ಕಾರಣ ಪಾಯದ ಕೆಳಗೆ ನಮ್ಮ ದುಡ್ಡಿದೆ
ಅದರಲ್ಲಿ ನನ್ನದು ತುಂಬಾ ದೊಡ್ಡ ಷೇರಿದೆ
ಕೇಳಲಿ ಕೇಳಲಿ ನಮ್ಮ ಕ್ಷಮೆಯ ಕೇಳಲಿ
ಏಳಲಿ ಕೇಳಲಿ ನಮ್ಮ ಕ್ಷಮೆಯ ಕೇಳಲಿ
ಸೋಲೆಂಬ ಮಾತಂತು ಗೊತ್ತಿಲ್ಲ

ನೀನೇ ಪೋಲಿ ಇನ್ನೂ ಅನುಮಾನನಾ
ನೀನೇ ಪೋಲಿ ಇನ್ನೂ ಅನುಮಾನನಾ

ಯಾವುದೋ ಯಾವುದೋ ಈ ರಾಗಮಾಲಿಕೆ
ಯಾವುದೋ ಯಾವುದೋ ಬೇಲೂರ ಬಾಲಿಕೆ
ಯಾವುದೋ ಯಾವುದೋ ಈ ರಾಗಮಾಲಿಕೆ
ಯಾವುದೋ ಯಾವುದೋ ಬೇಲೂರ ಬಾಲಿಕೆ

ಆಚಾರ್ಯ ದೇವರೆಂಬುವ ಸತ್ಯಕ್ಕೆ ಗೌರವನೀಡಿ ಮೂಢರಾಗದೆ
ಗುರುವಿನ ಪೂಜೆಯ ಮಾಡಿ ಅಂಧರಾಗದೆ
ಓಂಕಾರ ಹೇಳಿಕೊಡುವ ಗುರುವೆತಾನೆ ನಮ್ಮ ಕಣ್ಣುಗಳು
ಅವು ಕಂಬನಿ ಸುರಿಸಿದರೆ ಶಾಪಗಳು

ಧಿಕ್ಕಾರ ಧಿಕ್ಕಾರ B.P. ಕ್ಲಾಸಿಗೆ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಧಿಕ್ಕಾರಕ್ಕೆ ಧಿಕ್ಕಾರ
ದುಡುಕದಿರಿ ಎಡವದಿರಿ ಕ್ಷಮೆಕೇಳಿ

ಯಾರು ಪೋಲಿ..  ಪೋಲಿ ಊರಲ್ಲಿ ನಾನೇನಾ
ಬೇರೆ ಎಲ್ಲಾ.. ಎಲ್ಲಾ ತುಂಬಾನೆ ಸಾಚಾನಾ
ಭೂತಗಾಜು.. ಗಾಜು  ತನ್ನಿರಿ ಹಾಕೋಣ
ಸಾಚಾ ಯಾರು.. ಯಾರು ಪತ್ತೆಯ ಮಾಡೋಣ
ಹುಡುಕಾಡಿ ಅವನನ್ನೇ ಕೇಳೋಣ

ಮಾಮ ಮಾಮ ಚಂದಮಾಮ

ಚಿತ್ರ: ಬೆಳ್ಳಿಕಾಲುಂಗುರ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ  & ಕೆ. ಎಸ್. ಚಿತ್ರ

ಮಾಮ ಮಾಮ ಚಂದಮಾಮ
ಚಂದವಳ್ಳಿ ಹೆಣ್ಣುನಾನು ಚಂದವೇನು ನಿನಗೆ ನಾನು
ರಾಮ ರಾಮ ಗೊಂಬೆ ರಾಮ
ಕೋಡಿಬೀಳೋ ಕೆರೆಯಹಾಗೆ ಬಂದುಸೇರೋ ಕಣಿವೆಯಾಗೆ

ಮೋಟುದ್ದ ಜೆಡೆಯನು ನಾ ಈಟುದ್ದ ಹೆಣೆದೆನು
ಸ್ಯಾವಂತಿ ಮುಡಿದೆನು ಚಿನ್ನ
ಹಾಲ್ಗೆನ್ನೆಗರಿಷಿಣ ಕೈಗೋರಂಟಿ ಬರೆಸಿ ನಾ
ಹಾಲ್ಕಾಸಿಕಾದೆ ನಾ ನಿನ್ನ
ರಾತ್ರಿ ಪೂರಾ ಕಾದು ಕಾದು ಯವ್ವಿ ಯವ್ವಿಯೊ
ಕಾಣ್ತವಲ್ಲೋ ನಾಲ್ಕುಐದು ಯವ್ವಿ ಯವ್ವಿಯೊ
ಯಾಕೆ ಕುಂತೆ ಏನು ಚಿಂತೆ ಪ್ರೀತಿಸೊ ನನ್ನ

ಮಾಮ ಮಾಮ ಚಂದಮಾಮ
ಬಂದನೋಡು ಗೊಂಬೆರಾಮ ತಂದನೋಡು ಪ್ರೀತಿಪ್ರೇಮ
ಮಾಮ ಮಾಮ ಚಂದಮಾಮ
ಬಂದನೋಡು ಗೊಂಬೆರಾಮ ತಂದನೋಡು ಪ್ರೀತಿಪ್ರೇಮ

ಮೈಯ್ಯಾಗೆ ಕಚಗುಳಿ ಇದೇನಪ್ಪೊ ಚಳವಳಿ
ನಿಂದೇನ ಬಳುವಳಿ ಗೆಳೆಯ
ಕಾಲಿಂದ ಬಿರ ಬಿರ ತಲೆಗೇರೈತಿ ಹರ ಹರ
ಈ ಮತ್ತು ನರ ನರ ಗೆಳತಿ
ಮಿಂಚು ಮಿಂಚು ಕಣ್ಣಿನಂಚು ಯವ್ವಿ ಯವ್ವಿಯೊ
ಮೈಯ್ಯಸೋಕಿ ಕಾದ ಹೆಂಚು ಯವ್ವಿ ಯವ್ವಿಯೊ
ಸೂತ್ರವಲ್ಲ ತಂತ್ರವಲ್ಲ ಪ್ರೇಮದ ಮಂತ್ರ

ಮಾಮ ಮಾಮ ಚಂದಮಾಮ
ಚಂದವಳ್ಳಿ ಹೆಣ್ಣುನಾನು ಚಂದವೇನು ನಿನಗೆ ನಾನು

ಕಾಡೆಲ್ಲಾ ಝಗ ಮಗ ಸಿಂಗಾರ ನಮ್ಮದುಗೆಗ
ಮೈಯೆಲ್ಲಾ ವಾಲಗ ಊದು
ಇದೇನಯ್ಯ ಗಗಮಗ ಇವೆಲ್ಲಾನೂ ಹೊಸಗಿಗ
ಏನೇನೊ ಸೋಜಿಗ ಜಾದೂ
ಈಟು ಹೊತ್ತು ಎಲ್ಲಿ ಇತ್ತು ಯವ್ವಿ ಯವ್ವಿಯೊ
ಹೊತ್ತು ಗೊತ್ತು ಜೋಡಿಮುತ್ತು ಯವ್ವಿ ಯವ್ವಿಯೊ
ಹಾಲಿನಂತ ಹುಣ್ಣಿಮೇಲಿ ನಿಯುವ ಬಾರಾ

ಮಾಮ ಮಾಮ ಚಂದಮಾಮ
ಬಂದನೋಡು ಗೊಂಬೆರಾಮ ತಂದನೋಡು ಪ್ರೀತಿಪ್ರೇಮ
ಮಾಮ ಮಾಮ ಚಂದಮಾಮ
ಚಂದವಳ್ಳಿ ಹೆಣ್ಣುನಾನು ಚಂದವೇನು ನಿನಗೆ ನಾನು
...

ಬಿದ್ದೆ ಬಿದ್ದೆ ಬಾತ್ ರೂಮಲ್ಲಿ ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ

ಚಿತ್ರ: ಗಡಿಬಿಡಿ ಗಂಡ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ಬಿದ್ದೆ ಬಿದ್ದೆ ಬಾತ್ ರೂಮಲ್ಲಿ ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ
ಗೆದ್ದೆ ಗೆದ್ದೆ ಬಾಯ್ ಫ್ರೆಂಡನ್ನ ಕಿಸ್ಸಲ್ಲಿ ಗೆದ್ದೆ ಕಿಸ್ಸಲ್ಲಿ ಗೆದ್ದೆ
ಬಾಯೆಲ್ಲಾ ಒದ್ದೆ ಮೈಯೆಲ್ಲಾ ಮುದ್ದೆ ಇನ್ನೆಲ್ಲಿ ನಿದ್ದೆ ಮಾವ
ಬಿದ್ದೆ ಬಿದ್ದೆ ಬಾತ್ ರೂಮಲ್ಲಿ ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ

ತಾ ಕಾಮಕೆ ದಿಗ್ಬಂಧನ ಈ ಪ್ರಣಯ ರಾತ್ರಿಗೆ
ತಾ ಬಳ್ಳಿಗೆ ರೋಮಾಂಚನ ಈ ಮಧುರ ಮೈತ್ರಿಗೆ
ತಾ ಆಸೆಗೆ ಆಲಿಂಗನ ಈ ರಾಸಲೀಲೆಗೆ
ತಾ ಹೂವಲಿ ಭೂಕಂಪನ ಈ ವಿರಹಜ್ವಾಲೆಗೆ
ಈ ಹರೆಯದ ನರಕೊಳಲಲಿ ಇದೆ ಸರಿಗಮ ಹುಳ್ಳೆಗಳು
ಈ ಮದನನ ಕಿರುಬೆರಳಲಿ ನವಿರೇಳದೆ ಗುಳ್ಳೆಗಳು
ಲವ್ವು ಕಿಸ್ಸು ಸೇರುವಾಗ ಎದೇಲಿ ಸದ್ದೇ ಎದೇಲಿ ಸದ್ದೇ
ಬಾಯೆಲ್ಲಾ ಒದ್ದೆ ಮೈಯೆಲ್ಲಾ ಮುದ್ದೆ ಇನ್ನೆಲ್ಲಿ ನಿದ್ದೆ ಬೇಬಿ
ಬಿದ್ದೆ ಬಿದ್ದೆ ಬಾತ್ ರೂಮಲ್ಲಿ ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ

ಈ ಸೀರೆಗೂ ಈ ನೀರೆಗೂ ಅದು ಏಕೆ ಸ್ನೇಹವೋ
ಈ ನೀರಿಗೂ ಈ ನಡುಕಕೂ ಅದು ಏಕೆ ಮೋಹವೋ
ಈ ಹರೆಯಕೂ ಈ ಪ್ರಣಯಕೂ ಅದು ಏನು ನಂಟಿದೆ
ಈ ಮೈಯ್ಯಿಗೂ ಈ ಮನಸಿಗೂ ಅದು ಏನು ಅಂಟಿದೆ
ಹೊರ ಬೆವರಿಗೂ ಒಳ ಬಯಕೆಗೂ ಇದೆ ಮಿಥುನದ ಹುಸಿಕದನ
ಹೊರ ಕಂಪಿಗೂ ಒಳ ಬೆಂಕಿಗೂ ಬಿಗಿ ಅಪ್ಪುಗೆ ಉಪಶಮನ
ಲವ್ವು ಕಿಸ್ಸು ಸೇರುವಾಗ ಎದೇಲಿ ಸದ್ದೇ ಎದೇಲಿ ಸದ್ದೇ
ಬಾಯೆಲ್ಲಾ ಒದ್ದೆ ಮೈಯೆಲ್ಲಾ ಮುದ್ದೆ ಇನ್ನೆಲ್ಲಿ ನಿದ್ದೆ ಬೇಬಿ
ಬಿದ್ದೆ ಬಿದ್ದೆ ಬಾತ್ ರೂಮಲ್ಲಿ ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ
ಗೆದ್ದೆ ಗೆದ್ದೆ ಬಾಯ್ ಫ್ರೆಂಡನ್ನ ಕಿಸ್ಸಲ್ಲಿ ಗೆದ್ದೆ ಕಿಸ್ಸಲ್ಲಿ ಗೆದ್ದೆ
ಬಾಯೆಲ್ಲಾ ಒದ್ದೆ ಮೈಯೆಲ್ಲಾ ಮುದ್ದೆ ಇನ್ನೆಲ್ಲಿ ನಿದ್ದೆ ಬೇಬಿ
ಬಿದ್ದೆ ಬಿದ್ದೆ ಬಾತ್ ರೂಮಲ್ಲಿ ಲವ್ವಲ್ಲಿ ಬಿದ್ದೆ ಲವ್ವಲ್ಲಿ ಬಿದ್ದೆ

ಮುದ್ದಾಡೆಂದಿದೆ ಮಲ್ಲಿಗೆ ಹೂ

ಚಿತ್ರ: ಗಡಿಬಿಡಿ ಗಂಡ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ ಮೊದಲು ಸಂಪಿಗೆಯಾ
ಸಂಪಿಗೆಯಾ ಮೊದಲು ಮಲ್ಲಿಗೆಯಾ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ

ಮುಡಿಯಲಿ ಮಲ್ಲಿಗೆಯ ಮುಡಿದವಳ
ಮೊದಲು ಮುಡಿಯಬೇಕು
ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು
ಮನಸಿನ ಮಧುವಿನ ಮಹಲೊಳಗೆ
ಮದನ ಮಣಿಯಬೇಕು
ಸುರತಿಯ ಪರಮಾನ ಇತಮಿತವಿರಬೇಕು
ವಿರಹಬಾಧೆ ದಹಿಸುವಾಗ ಬಾಲಬೋಧೆ ಏಕೆ
ಪ್ರಣಯ ನದಿಯೆ ತುಳುಕುವಾಗ ಮದನ ಮಳೆಯು ಬೇಕೇ
ಹಿಡಿದುಕೊ ಮೆಲ್ಲಗೆ ತಡೆದುಕೋ ಮಲ್ಲಿಗೆ
ಹರೆಯ ನೆರೆಯ ತಡೆಯೊ ಇನಿಯ

ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ ಮೊದಲು ಸಂಪಿಗೆಯಾ
ಸಂಪಿಗೆಯಾ ಮೊದಲು ಮಲ್ಲಿಗೆಯಾ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ

ಘಮ ಘಮ ಸಂಪಿಗೆಯ ಸುಮತಿಯನು ಕೆಣಕಿ ಕಾಯಿಸದಿರು
ಕುಸುಮದ ಎದೆಯೊಳಗೆ ಪ್ರಳಯವ ತಾರದಿರು
ಹಿಡಿಯಲಿ ಹಿಡಿಯುವ ನಡುವಿನಲಿ ಬಳುಕಿ ಬೇಯಿಸದಿರು
ತುಂಬಿದ ನಿಷೆಯೊಳಗೆ ಚಂದ್ರನ ಕೂಗದಿರು
ಎದೆಯ ಸೆರಗ ಮೋಡದಲ್ಲಿ ನೀನೆ ಚಂದ್ರನೀಗ
ಹೃದಯ ಮೇರುಗಿರಿಗಳಲ್ಲಿ ಕರಗಬೇಕೇ ಈಗ
ಬಳಸಿಕೊ ಕಂಪಿಗೆ ಸಹಿಸಿಕೋ ಸಂಪಿಗೆ
ಹರೆಯ ಹೊರೆಯ ಇಳಿಸೋ ಇನಿಯ

ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ ಮೊದಲು ಸಂಪಿಗೆಯಾ
ಸಂಪಿಗೆಯಾ ಮೊದಲು ಮಲ್ಲಿಗೆಯಾ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ

ಚೋರ ಚೋರ ಚೋರ ಬಂದ

ಚಿತ್ರ: ಗೋಪಿಕೃಷ್ಣ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಮನು & ಕೆ.ಎಸ್.ಚಿತ್ರ

ಚೋರಿ..  ಚೋರಿ.. ಚೋರಿ..  ಚೋರಿ..
ಚೋರಿ ಚೋರಿ ಚಿತ್ತ ಚೋರಿ
ಚೋರಿ ಚೋರಿ ಚಿತ್ತ ಚೋರಿ
ಚೋರ ಚೋರ ಚೋರ ಬಂದ
ಚೋರಿ ಚೋರಿ ಚೋರಿ ಎಂದ
ಬಾಯಿಗೆ ಬಾಯಿಂದ ಬೀಗ ಇಟ್ಟ
ಭಂಡಾರ ಕದಿಯುವ ಭೀತಿ ಇಟ್ಟ
ಚೋರ ಚೋರ ಚೋರ ಚಿತ್ತ ಚೋರ
ಚೋರ ಚೋರ ಚೋರ ಬಂದ
ಚೋರಿ ಚೋರಿ ಚೋರಿ ಎಂದ
ಬಾಯಿಗೆ ಬಾಯಿಂದ ಬೀಗ ಇಟ್ಟ
ಭಂಡಾರ ಕದಿಯುವ ಭೀತಿ ಇಟ್ಟ
ಚೋರಿ ಚೋರಿ ಚೋರಿ ಚಿತ್ತ ಚೋರಿ

ಆ ಅಂದ್ರು ಊ ಅಂದ್ರು ಎದ್ದಾರು ಮನೆಯೋರು
ಸದ್ದಿಲ್ಲದೇ ಹಾಡು ಶ್ ಶ್ ಶ್ ಶ್
ಸದ್ದಿಲ್ಲದೇ ನೋಡು ಶ್ ಶ್ ಶ್ ಶ್
ಕಚಗುಳಿ ಬಳಬಳಿ ಒಳಗೊಳಗೆ ಕೊಡಬೇಡ
ಕರಕೌಶಲ್ಯ ಸಾಕು ಶ್ ಶ್ ಶ್ ಶ್
ಬರೀ ಚಾಪಲ್ಯಸಾಕು ಶ್ ಶ್ ಶ್ ಶ್
ಶ್ ಶ್ ಶ್ ಶ್ ಶ್ ಶ್ ನವರತ್ನ ನೀನೀಗ ಈ ಇರುಳಲ್ಲಿ
ಶ್ ಶ್ ಶ್ ಶ್ ಶ್ ಶ್ ಮಣಿದೀಪ ನೀನಾದೆ ಈ ನಗುವಲ್ಲಿ
ಚೋರ ಚೋರ ಚೋರ ಬಂದ
ಚೋರಿ ಚೋರಿ ಚೋರಿ ಎಂದ
ಬಾಯಿಗೆ ಬಾಯಿಂದ ಬೀಗ ಇಟ್ಟ
ಭಂಡಾರ ಕದಿಯುವ ಭೀತಿ ಇಟ್ಟ
ಚೋರ ಚೋರ ಚೋರ ಚಿತ್ತ ಚೋರ

ಸ ರಿ ಗ ಮ ಪ..ಪ ದ..ದ ನಿ..ನಿ ಸ..ಸ ಪ..ಪ ದ..ದ ನಿ..ನಿ ಸ..ಸ
ಟಕ ಟಕ ಗಡಿಯಾರ ಳಕ ಳಕ ಹನಿನೀರ
ತಾಳಕ್ಕೆ ಕಿವಿಕೊಟ್ರೆ ಸುಂ ಸುಂ ಸುಂ ಸುಂ
ಮೇಳಕ್ಕೆ ಮನವಿಟ್ರೆ ಸುಂ ಸುಂ ಸುಂ ಸುಂ
ಮೇಲೆಲ್ಲೂ ಸದ್ದಿಲ್ಲ ಸದ್ದೆಲ್ಲಾ ಒಳಗಡೆ
ನರನಾಡಿ ನುಡಿಕೇಳು ಡುಂ ಡುಂ ಡುಂ ಡುಂ
ಎದೆಗೂಡ ನಡೆಕೇಳು ಡುಂ ಡುಂ ಡುಂ ಡುಂ
ಶ್ ಶ್ ಶ್ ಶ್ ಶ್ ಶ್ ಮಾತಲ್ಲಿ ಮೈಯ್ಯನ್ನು ಮರೆಸೋ ಜಾಣ
ಶ್ ಶ್ ಶ್ ಶ್ ಶ್ ಶ್ ಮತ್ತಲ್ಲಿ ತೆಗಿಬೇಡ ನನ್ನ ಪ್ರಾಣ
ಚೋರ ಚೋರ ಚೋರ ಬಂದ
ಚೋರಿ ಚೋರಿ ಚೋರಿ ಎಂದ
ಬಾಯಿಗೆ ಬಾಯಿಂದ ಬೀಗ ಇಟ್ಟ
ಭಂಡಾರ ಕದಿಯುವ ಭೀತಿ ಇಟ್ಟ
ಚೋರಿ ಚೋರಿ ಚೋರಿ ಚಿತ್ತ ಚೋರಿ
ಚೋರ ಚೋರ ಚೋರ ಬಂದ
ಚೋರಿ ಚೋರಿ ಚೋರಿ ಎಂದ
ಬಾಯಿಗೆ ಬಾಯಿಂದ ಬೀಗ ಇಟ್ಟ
ಭಂಡಾರ ಕದಿಯುವ ಭೀತಿ ಇಟ್ಟ
ಚೋರ ಚೋರ ಚೋರ ಚಿತ್ತ ಚೋರ

ಆ ಸೂರ್ಯನ್ನ ಸುತ್ತೋದು

ಚಿತ್ರ: ಪೋಲಿಹುಡುಗ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ವಾಣಿ ಜಯರಾಮ್

ಆ ಸೂರ್ಯನ್ನ ಸುತ್ತೋದು ಈ..  ಭೂಮಿಕಣೋ
ಈ ಭೂಮಿಯ ಸುತ್ತೋದು ಈ..  ಪ್ರೀತಿಕಣೋ
ಈ ಪ್ರೀತಿಯ ಎಂದೆಂದೂ ಸುತ್ತೋದು ಓ.. ನಾವುಕಣೋ
ಪ್ರೀತಿ ಸುತ್ತ ನಾವು ಪ್ರೀತಿಸುತ್ತ ನಾವು ಬದುಕೋಣ
ಆ ಸೂರ್ಯನ್ನ ಸುತ್ತೋದು ಈ..  ಭೂಮಿಕಣೋ

ಈ ಕಣ್ಣಿನ ಆ ವೇದನೆ ಹೇಮಂತದ ಆಲಾಪನೆ
ಕೆಣಕಿದೆ ಕಲಕಿದೆ ನನ್ನ ಭಾವನೆ
ಈ ರೂಪದ ಆಸ್ವಾದನೆ ಋತುಮಾನದ ಆರಾಧನೆ
ತುಂಬಿದೆ ನನ್ನೆದೆ ನೂರು ಕಲ್ಪನೆ
ಅಗೋಚರ ಪ್ರೇಮವು ಈ ದಿನ ನಿಂತಿದೆ ನನ್ನೆದುರು
ಆ ಸೂರ್ಯನ್ನ ಸುತ್ತೋದು ಈ..  ಭೂಮಿಕಣೋ

ನೀನಿಲ್ಲದ ಈ ಜೀವನ ಗೋವಿಲ್ಲದ ಬೃಂದಾವನ
ನಡೆಸು ಬಾ ನುಡಿಸು ಬಾ ಜೀವವಾಗಿ ನೀ
ಹೀಗಿದ್ದರೆ ಹಾಗೆನ್ನುವ ಹಾಗಿದ್ದರೆ ಹೀಗೆನ್ನುವ
ಲೋಕದ ಮಾತಿಗೆ ಶೂಲವಾಗೊ ನೀ
ಅಗೋಚರ ಪ್ರೇಮವು ಈ ದಿನ ಬಂದಿದೆ ನಮ್ಮೆದುರು

ಆ ಸೂರ್ಯನ್ನ ಸುತ್ತೋದು ಈ..  ಭೂಮಿಕಣೋ
ಈ ಭೂಮಿಯ ಸುತ್ತೋದು ಈ..  ಪ್ರೀತಿಕಣೋ
ಈ ಪ್ರೀತಿಯ ಎಂದೆಂದೂ ಸುತ್ತೋದು ಓ.. ನಾವುಕಣೋ
ಪ್ರೀತಿ ಸುತ್ತ ನಾವು ಪ್ರೀತಿಸುತ್ತ ನಾವು ಬದುಕೋಣ

ನಾದ ನಾದ ಪ್ರೇಮದ ನಾದ

ಚಿತ್ರ: ಅಂಡಮಾನ್ (1998)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ನಾದ ನಾದ ಪ್ರೇಮದ ನಾದ
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ ಯೌವ್ವನದ ಸಂಭ್ರಮದ
ತನನನ ತನುವಲಿ
ನಾದ ನಾದ ಪ್ರೇಮದ ನಾದ

ಕಡಲ ಸೇರೋ ನದಿಗೆ ದಾರಿ ತೋರಿದವರು ಯಾರು
ಪುಷ್ಪರಾಗ ರತಿಗೆ ಹಾಡು ಕಲಿಸಿದವರು ಯಾರು
ಪ್ರಣಯ ಭಾಷೆಯ ಅರಿತುಕೊಳ್ಳುವ ಕಣ್ಣಿಗ್ಯಾರು ಗುರು.. ಪ್ರೀತಿ ಅರಿತವರು
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ ಯೌವ್ವನದ ಸಂಭ್ರಮದ
ತನನನ ತನುವಲಿ
ನಾದ ನಾದ ಪ್ರೇಮದ ನಾದ

ಪ್ರಣಯ ಗಾಳಿಬೀಸಿ ಆಸೆಗಣ್ಣು ತೆರೆದು
ನಿದಿರೆ ಭಂಗವಾಗಿ ಬಯಕೆ ಲಜ್ಜೆತೊರೆದು
ತನ್ನನ್ನರಿಯದೇ ಕುಸುಮಸೇರುವ ದುಂಬಿಗಳ ಪಾಡು.. ನಮ್ಮ ಈ ಹಾಡು
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ ಯೌವ್ವನದ ಸಂಭ್ರಮದ
ತನನನ ತನುವಲಿ
ನಾದ ನಾದ ಪ್ರೇಮದ ನಾದ

ಕೋಟಿ ರಾತ್ರಿ ಬರಲಿ ಮೊದಲ ರಾತ್ರಿ ಮಧುರ
ನೆನಪಿನಾಳದಲ್ಲಿ ಮಧುರ ಮೈತ್ರಿ ಅಮರ
ಪ್ರಥಮ ಚುಂಬನ ಪ್ರಣಯ ಕಂಪನ ಬಂದ ಈ ಇರುಳು.. ಬಾಳ ಜೇನಿರುಳು
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ ಯೌವ್ವನದ ಸಂಭ್ರಮದ
ತನನನ ತನುವಲಿ
ನಾದ ನಾದ ಪ್ರೇಮದ ನಾದ

ಧಮ್ಮರೆ ಧಮ್ಮಮ್ಮ ನಾನ್ ಡಿಸ್ಕೊರುಕ್ಕಮ್ಮ

ಚಿತ್ರ: ಮಿಸ್ಟರ್ ರಾಜಾ (1987)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಜಯಪಾಲ್ & ಮಂಜುಳಾ ಗುರುರಾಜ್

.....
ಅರೆ ಧಮ್ಮರೆ ಧಮ್ಮಮ್ಮ ನಾನ್ ಡಿಸ್ಕೊರುಕ್ಕಮ್ಮ
ಅರೆ ಧಮ್ಮರೆ ಧಮ್ಮಮ್ಮ ನಾನ್ ಡಿಸ್ಕೊರುಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ ಕುಣಿಸೋ ಪ್ರಿಯತಮ
ತಕ ತಕಧಿಮಿ ತಕ ತಕಧಿಮಿ ಕುಣಿಸೋ ಪ್ರಿಯತಮ
ಅರೆ ಡಿಸ್ಕೊರುಕ್ಕಮ್ಮ ನಿನ್ನ ಹೆಜ್ಜೆ ಇಕ್ಕಮ್ಮ
ಅರೆ ಡಿಸ್ಕೊರುಕ್ಕಮ್ಮ ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ ನನ್ನ ಕುಣಿಸಮ್ಮ
ತಕ ತಕಧಿಮಿ ತಕ ತಕಧಿಮಿ ನನ್ನ ಕುಣಿಸಮ್ಮ
ಬಾರೆನ್ನ ಸರದಾರ ಈ ವಯಸು ಬಲುಭಾರ
ಈ ಭಾರದ ವ್ಯವಹಾರ ತಿಳಿದಿದ್ದವನೇ ಶೂರ
ಅರೆ ಡಿಸ್ಕೊರುಕ್ಕಮ್ಮ ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ ಕುಣಿಸೋ ಪ್ರಿಯತಮ

ಹೆಜ್ಜೆ ಇಟ್ಟಿದರೆ ಇಟ್ಟಿಟ್ಟು ನೋಡಿದರೆ
ಯೌವ್ವನವೆಲ್ಲಾ ಹಿಂದಿಂದೇನೆ ಬರುವುದು ನೋಡಿಲ್ಲಿ
ಮತ್ತೆ ಮುಟ್ಟಿದರೆ ಮುತ್ತಿಟ್ಟು ನೋಡಿದರೆ
ಮೈಮನವೆಲ್ಲಾ ಸಕ್ಕರೆಯಂತೆ ಕರಗುವುದೇಕಿಲ್ಲಿ
ಜೀವನವೆಂದರೇನು ಬಾ ಏಳು ದಿನದ ವಾರ
ಯೌವ್ವನವೆಂದರೇನು ಅದರಲ್ಲಿ ಭಾನುವಾರ
ಜೀವನವೆಂದರೇನು ಬಾ ಏಳು ದಿನದ ವಾರ
ಯೌವ್ವನವೆಂದರೇನು ಅದರಲ್ಲಿ ಭಾನುವಾರ
ಬಾರೆನ್ನ ಸರದಾರ ಈ ವಯಸು ಬಲುಭಾರ
ಈ ಭಾರದ ವ್ಯವಹಾರ ತಿಳಿದಿದ್ದವನೇ ಶೂರ
ಅರೆ ಧಮ್ಮರೆ ಧಮ್ಮಮ್ಮ ನಾನ್ ಡಿಸ್ಕೊರುಕ್ಕಮ್ಮ
ಅರೆ ಡಿಸ್ಕೊರುಕ್ಕಮ್ಮ ನಿನ್ನ ಹೆಜ್ಜೆ ಇಕ್ಕಮ್ಮ

ಜುಂ ತರ ಜುಂ ತರ ಜುಂ ತರ ಜುಂ
ಜುಂ ತರ ಜುಂ ತರ ಜುಂ ತರ ಜುಂ

ಕುಣಿಸು ಎಂದರೆ ನೀ ಗುಣಿಸೋದ್ಯಾಕಮ್ಮೊ
ಗುಂಡಾಕಿದ್ದರು ಟೈಟಾಗಿದ್ದರು ಬುದ್ಧಿಕೆಟ್ಟಿಲ್ಲ
ಕುಡಿಸು ಎಂದರೆ ನೀ ಗುಡಿಸೋದ್ಯಾಕಮ್ಮೋ
ಸಂಸಾರಸ್ಥರ ರೂಲ್ಸುಗಳನ್ನ ನಾನು ಮೀರಲ್ಲ
ದೂರದ ಬೆಟ್ಟವೆಲ್ಲ ಕಾಣೋದು ನುಣ್ಣಗೇನೆ
ಹತ್ತಿರ ಹೋದರೆಲ್ಲ ಬರೀ ಕಲ್ಲು ಮುಳ್ಳುತಾನೇ
ದೂರದ ಬೆಟ್ಟವೆಲ್ಲ ಕಾಣೋದು ನುಣ್ಣಗೇನೆ
ಹತ್ತಿರ ಹೋದರೆಲ್ಲ ಬರೀ ಕಲ್ಲು ಮುಳ್ಳುತಾನೇ
ನೀ ಏನೇ ಹೇಳಮ್ಮ ಆ ಕೆಲಸ ಬ್ಯಾಡಮ್ಮ
ಬರೀ ಕುಣಿತ ಇದ್ದರೆ ನನಗಷ್ಟೇ ಸಾಕಮ್ಮ
ಅರೆ ಧಮ್ಮರೆ ಧಮ್ಮಮ್ಮ ನಾನ್ ಡಿಸ್ಕೊರುಕ್ಕಮ್ಮ
ಅರೆ ಡಿಸ್ಕೊರುಕ್ಕಮ್ಮ ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ ಕುಣಿಸೋ ಪ್ರಿಯತಮ
ತಕ ತಕಧಿಮಿ ತಕ ತಕಧಿಮಿ ನನ್ನ ಕುಣಿಸಮ್ಮ
ಬಾರೆನ್ನ ಸರದಾರ ಈ ವಯಸು ಬಲುಭಾರ
ಈ ಭಾರದ ವ್ಯವಹಾರ ತಿಳಿದಿದ್ದವನೇ ಶೂರ
ಅರೆ ಧಮ್ಮರೆ ಧಮ್ಮಮ್ಮ ಬಾ ಡಿಸ್ಕೊರುಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ ಕುಣಿಸೋ ಪ್ರಿಯತಮ
ತಕ ತಕಧಿಮಿ ತಕ ತಕಧಿಮಿ ನನ್ನ ಕುಣಿಸಮ್ಮ
ತಕ ತಕಧಿಮಿ ತಕ ತಕಧಿಮಿ ಕುಣಿಸೋ ಪ್ರಿಯತಮ

ಕಡಲಿಗೆ ಒಂದು ಕೊನೆಇದೆ ಸ್ನೇಹಕೆ ಎಲ್ಲಿದೆ

ಚಿತ್ರ: ಇಂದ್ರಜಿತ್ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಚಂದ್ರಿಕಾ ಗುರುರಾಜ್

ಕಡಲಿಗೆ ಒಂದು ಕೊನೆಇದೆ ಸ್ನೇಹಕೆ ಎಲ್ಲಿದೆ
ಸಾವಿಗೂ ಒಂದು ಮಿತಿಇದೆ ಪ್ರೀತಿಗೆ ಎಲ್ಲಿದೆ
ಸ್ನೇಹ ಎಂಬ ಹೂಬನದಲ್ಲಿ ಬಾ ಓಲಾಡುವ
ಪ್ರೀತಿ ಎಂಬ ಬಾನಂಚಲ್ಲಿ ಬಾ ತೇಲಾಡುವ
ನೋಡಲ್ಲಿ ಆ ಬೆಳ್ಳಿಸೂರ್ಯನು ಹರಸುತ ಜೊತೆಯಲಿ ಬಂದನು
ನೋಡಲ್ಲಿ ಆ ಬೆಳ್ಳಿಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಇದೆ ಸ್ನೇಹಕೆ ಎಲ್ಲಿದೆ
ಸಾವಿಗೂ ಒಂದು ಮಿತಿಇದೆ ಪ್ರೀತಿಗೆ ಎಲ್ಲಿದೆ

ಓ.. ಹೊ ಮುಂಜಾವಿನ ಹೂ ಮೇಲಿನ ಆ ಮಂಜಿನ ನಗು ಇಲ್ಲಿದೆ
ಆ.. ಹ ಅನುರಾಗದ ಆ ಮೋದದ ಆನಂದದ ಹಾಡಿಲ್ಲಿದೆ
ಈ ಕಣ್ಣ ಕೊಳದ ಹಂಸವೆ ನೀನು ಹೃದಯ ಮಿಡಿಯುವೆ
ಈ ನನ್ನ ಎದೆಯ ತುಡಿತವೆ ನೀನು ನನ್ನ ನುಡಿಸುವೆ
ಬಾ ಹೃದಯದೊಲವೇ ಹೊಂಬಿಸಿಲ ಚಲುವೆ ನೀನಿರಲು ಎಲ್ಲಾ ಗೆಲುವೇ ಗೆಲುವೇ
ಈ ಬಾಳಿನ ಮುಗಿಯದ ಪಯಣದ ನಡುವೆಯೂ
ಲ ಲ ಲ ಲ ಲ ಲ ಲ ನೋಡಲ್ಲಿ ಆ ಬೆಳ್ಳಿಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಇದೆ ಸ್ನೇಹಕೆ ಎಲ್ಲಿದೆ
ಸಾವಿಗೂ ಒಂದು ಮಿತಿಇದೆ ಪ್ರೀತಿಗೆ ಎಲ್ಲಿದೆ

ಓ.. ಹೊ ಇತಿಹಾಸದ ಛಲಗಾರರ ಬೆನ್ ಹಿಂದೆಯೇ ಹೆಣ್ಣೊಂದಿದೆ
ಈ ಹೋರಾಟದ ಬಲವೆಲ್ಲವೂ ಈ ನಿನ್ನಯ ಒಲವೆಲ್ಲಿದೆ
ಈ ಉಸಿರಮೇಲೆ ನಿನ್ನಯ ಹೆಸರು ನಾನು ಬರೆಯುವೆ
ಈ ಹಸಿರ ನೆನಪು ಮರೆಯದೆ ನಾನು ಹೀಗೆ ಉಳಿಸುವೆ
ಬಾ ಹೃದಯದೊಲವೇ ಹೊಂಬಿಸಿಲ ಚಲುವೆ ನೀನಿರಲು ಎಲ್ಲಾ ಗೆಲುವೇ ಗೆಲುವೇ
ಈ ಬಾಳಿನ ಮುಗಿಯದ ಪಯಣದ ನಡುವೆಯೂ
ಲ ಲ ಲ ಲ ಲ ಲ ಲ ನೋಡಲ್ಲಿ ಆ ಬೆಳ್ಳಿಸೂರ್ಯನು ಹರಸುತ ಜೊತೆಯಲಿ ಬಂದನು
ಕಡಲಿಗೆ ಒಂದು ಕೊನೆಇದೆ ಸ್ನೇಹಕೆ ಎಲ್ಲಿದೆ
ಸಾವಿಗೂ ಒಂದು ಮಿತಿಇದೆ ಪ್ರೀತಿಗೆ ಎಲ್ಲಿದೆ
ಸ್ನೇಹ ಎಂಬ ಹೂಬನದಲ್ಲಿ ಬಾ ಓಲಾಡುವ
ಪ್ರೀತಿ ಎಂಬ ಬಾನಂಚಲ್ಲಿ ಬಾ ತೇಲಾಡುವ
ನೋಡಲ್ಲಿ ಆ ಬೆಳ್ಳಿಸೂರ್ಯನು ಹರಸುತ ಜೊತೆಯಲಿ ಬಂದನು
....

ಬೆಳ್ಳಿರಥದಲಿ ಸೂರ್ಯತಂದ ಕಿರಣ

ಚಿತ್ರ: ಇಂದ್ರಜಿತ್ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಬಿ.ಆರ್. ಛಾಯಾ

ಬೆಳ್ಳಿರಥದಲಿ ಸೂರ್ಯತಂದ ಕಿರಣ...
ಬೆಳ್ಳಿರಥದಲಿ ಸೂರ್ಯತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿರಥದಲಿ ಸೂರ್ಯತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಮೇಘಶ್ಯಾಮನ ಮುರುಳಿಲೋಲನ ಪ್ರೀತಿಯೊಂದು ಕವನ
ನುಡಿಸು ಕೊಳಲನು ನಾ ಬರುವೆ ಹಿಡಿದು ಶ್ರುತಿಯನ್ನ
ಹರಿಸು ಹೊನಲನು ಸೇರುತಲಿ ಪ್ರೀತಿ ಕಡಲನ್ನ
ಹವಳ ಮುತ್ತನು ಕಡಲ ಅಲೆಯನು ನಿನಗೆ ತರುವೆ ನಾನು
ಸೇರಿ ನಿನ್ನನು ಮುತ್ತಲ್ಲೇ ಮನೆಯ ಕಟ್ಟುವೆನು
ಮುಗಿಲ ಮಿಂಚನೆ ತಂದಿರಿಸಿ ದೀಪ ಹಚ್ಚುವೆನು
ಕರಗಿದೆ ನಿನ್ನ ಒಲವಿಗೆ ಹೂ ಹಾಸುವೆ ನಿನ್ನ ಹಾದಿಗೆ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿರಥದಲಿ ಸೂರ್ಯತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸಗಾನ

ಹಗಲು ಇರುಳಲಿ ಬಿಸಿಲು ಮಳೆಯಲಿ ಹೊಳೆವ ನಿನ್ನ ನಯನ
ಪ್ರೀತಿ ಹರಿಸಿದೆ ತುಂಬೆನ್ನ ತಾಯಿಮಡಿಲನ್ನ
ಜನುಮ ಜನುಮಕೂ ನಾ ಬಂದು ಸೇರುವೆನು ನಿನ್ನ
ಭೂಮಿಬಿರಿದರೂ ಪ್ರಳಯವಾದರೂ ಇರಲಿ ಎಂದೂ ಮಿಲನ
ಭೂಮಿ ಇಲ್ಲವೇ ನಾ ಬರುವೆ ಬಾನಿಗೆ ಓ ಚಿನ್ನ
ಬಾನು ಇಲ್ಲವೇ ನಿನ್ನುಸಿರ ತಾಳಲು ಬಲುಚನ್ನ
ಅರಳಿದೆ ಹೂ ಮಲ್ಲಿಗೆ ಉಸಿರಾಡಿದೆ ನಿನಗಾಗಿಯೇ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಬೆಳ್ಳಿರಥದಲಿ ಸೂರ್ಯತಂದ ಕಿರಣ
ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸಗಾನ
ನೀ ನನಗೆ ನಾ ನಿನಗೆ ಜೀವನ ನಗುತಲಿದೆ

ಎಲೆ ಹೊಂಬಿಸಿಲೆ ಎಲೆ ತಂಬೆಲರೆ

ಚಿತ್ರ: ಹಾಲುಂಡ ತವರು (1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರ ಕಂಡಿರಾ
ಎಲೆ ನೀರಿನಲೆ ಎಲೆ ಹಸಿರಸಿರೆ
ಇಂಥಾ ಜೋಡಿನಾ ಎಂದಾರ ಕಂಡಿರಾ
ಓ.. ಕುಹೂ ಇಂಚರವೆ ಸುಖೀ ಸಂಕುಲವೆ
ಇಂಥಾ ಹಿಂಗಾರಿನ ಮುಂಗಾರಿನ ಮಿಲನ ಕಂಡಿರಾ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರ ಕಂಡಿರಾ

ನನ್ನವಳು ಚಂದನ ಹೆಂಗರುಳ ಹೂಮನ
ಋತುವೇ ಸುರಿಸು ಇವಳಿಗೆ ಹೂಮಳೆ
ಎದೆಯಲಿ ಆದರ ತುಂಬಿರುವ ಸಾಗರ
ನನ್ನ ದೊರೆಯ ಹೃದಯನಿವಾಸಿ ನಾ
ಅರೆರೆ ನುಡಿದೆ ಕವನ
ನುಡಿಸೋ ಕವಿಗೆ ನಮನ
ಹೋ.. ಮಹಾ ಮೇಘಗಳೇ ಅಸ್ತುದೈವಗಳೇ
ಇಂಥಾ ಆಂತರ್ಯದ ಸೌಂದರ್ಯದ ಸೊಬಗು ಕಂಡಿರಾ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರ ಕಂಡಿರಾ

ತನನನಾ ತಾನನಾ.. ತಂದನನಾ ತಾನನಾ
ಹುಣ್ಣಿಮೆಯ ಆಗಸ ಬೆಳಕಿನ ಪಾಯಸ
ಸುರಿಸೇ ಸವಿದೆ ಸತಿಯೇ ನೀ ಸವಿ
ನಿಮ್ಮ ತುಟಿ ತೋರಿಸಿ ನನ್ನ ತುಟಿ ಸೇರಿಸಿ
ನೀವು ಸವಿದ ಸವಿಗೂ ಇದು ಸವಿ
ಅರೆರೆ ನುಡಿದೆ ಪ್ರಾಸ
ಕವಿಯ ಜೊತೆಗೆ ವಾಸ
ಹೋ.. ಚುಕ್ಕಿ ತಾರೆಗಳೆ ಸುಖೀ ಮೇಳಗಳೆ
ಇಂಥಾ ಸಂಸಾರದ ಸವಿಯೂಟದ ಸವಿಯ ಕಂಡಿರಾ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರ ಕಂಡಿರಾ
ಎಲೆ ನೀರಿನಲೆ ಎಲೆ ಹಸಿರಸಿರೆ
ಇಂಥಾ ಜೋಡಿನಾ ಎಂದಾರ ಕಂಡಿರಾ
ಓ.. ಕುಹೂ ಇಂಚರವೆ ಸುಖೀ ಸಂಕುಲವೆ
ಇಂಥಾ ಹಿಂಗಾರಿನ ಮುಂಗಾರಿನ ಮಿಲನ ಕಂಡಿರಾ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥಾ ಜೋಡಿನಾ ಎಲ್ಲಾರ ಕಂಡಿರಾ
ಎಲೆ ......

ಅಂದವೋ ಅಂದವು ಕನ್ನಡನಾಡು

ಚಿತ್ರ: ಮಲ್ಲಿಗೆ ಹೂವೆ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಡಾII ಕೆ. ಜೆ. ಯೇಸುದಾಸ್

ಅಂದವೋ ಅಂದವು ಕನ್ನಡನಾಡು, ನನ್ನಗೂಡು ಅಲ್ಲಿದೆ ನೋಡು
ಚಂದವೋ ಚಂದವು ನನ್ನಯಗೂಡು, ನನ್ನಹಾಡು ಅಲ್ಲಿದೆ ನೋಡು
ಕಾವೇರಿ ಹರಿವಳು ನನ್ನ ಮನೆಯ ಅಂಗಳದಲ್ಲಿ
ಕಸ್ತೂರಿ ಮೆರೆವಳು ನನ್ನ ಮಡದಿ ಮಲ್ಲಿಗೆಯಲ್ಲಿ II ಅಂದವೋ II

ನನ್ನ ಮನೆಯ ಮುಂದೆ ಸಹ್ಯಾದ್ರಿಗಿರಿಯ ಹಿಂದೆ
ದಿನವು ನೂರು ಶಶಿಯು ಹುಟ್ಟಿಬಂದರೂ
ನನ್ನರತಿಯ ಮೊಗವ ಮರೆಮಾಚದಂಥ ನಗುವ
ಅವನೆಂದೂ ತಾರಲಿಲ್ಲವೇ ಪ್ರಿಯೆ .. ಒ.. ಹೋ
ನನ್ನ ಕಣ್ಣಮುಂದೆ ಮರಗಿಡದ ಮಂದೆ ಮಂದೆ
ಕೋಟಿ ಪಕ್ಷಿ ಕೂಗು ಕೇಳಿ ಬಂದರೂ
ನನ್ನ ಚಲುವೆ ಹಾಡ ಅನುರಾಗದಿಂದ ನೋಡೋ
ಆ ರಾಗ ನೋಟ ಕಾಣದೇ ಪ್ರಿಯೆ .. ಎ.. ಹೇ
ಸಹ್ಯಾದ್ರಿಕಾಯ್ವಳು ನನ್ನ ಮನೆಯ ಕರುಣೆಯಮೇಲೆ
ಆಗುಂಬೆ ನಗುವಳು ನನ್ನ ಮಡದಿನೊಸಲಿನ ಮೇಲೆ II ಅಂದವೋ II

ನಾಳೆಗಿಂತ ಇಂದೇ ಸಿಹಿಯಾದ ದಿವಸವಂತೆ
ಇಂದುನಾಳೆ ಸಿಹಿಯು ಸೇರೊದೆಂಬುದು
ಅಂತರಾಳವೆಂಬ ನೇತ್ರಾವತಿಯ ತುಂಬಾ
ಈ ಸ್ನೇಹ ಜಲದ ಸೆಳೆಯು ನಿಲ್ಲದೋ .. ಎ.. ಹೇ
ಉಸಿರು ಎಂಬ ಹಕ್ಕಿ ಎದೆಗೂಡಿನಲ್ಲಿ ಸಿಕ್ಕಿ
ಕುಹೂ ಕುಹೂ ಎಂದರೇನೇ ಜೀವನ
ಬೆಚ್ಚಗಿರುವ ಮನೆಯ ತನ್ನ ಇಚ್ಛೆ ಅರಿವ ಸತಿಯ
ಸವಿಪ್ರೇಮ ದೊರೆತ ಬಾಳು ಧನ್ಯವೋ .. ಎ.. ಹೇ
ಈ ನಾಡು ನುಡಿಯಿದು ನನಗೆ ಎಂದೂ ಕೋಟಿ ರೂಪಾಯಿ
ಈ ಬಾಳ ಗುಡಿಯಲಿ ನಿಜದಮುಂದೆ ನಾನು ಸಿಪಾಯಿ II ಅಂದವೋ II

ಚಂದನ ಚಂದನದಿಂದ ಕೊರೆದ ಬೊಂಬೆಯ ಅಂದ ಚಂದ

ಚಿತ್ರ: ಮಿಡಿದ ಹೃದಯಗಳು (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ಚಂದನ ಚಂದನದಿಂದ ಕೊರೆದ ಬೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೆ
ಸರಿಗಮ ಬೊಂಬೆ ನುಡಿದರೆ
ಚಂದನ ಚಂದನದಿಂದ ಕೊರೆದ ಬೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೆ
ಸರಿಗಮ ಬೊಂಬೆ ನುಡಿದರೆ

ತುಂಬಿರುವ ತುಂಗೆ ನೀನು ಸೌಂದರ್ಯ ವನದ ಜೇನು
ಬಳುಕಿದರೆ ನೀ ಮುಳುಗುವೆನು ನಾ
ರಸವಂತ ಚಿತ್ರಕಾರ ನನ್ನಪ್ರೇಮ ಸೂತ್ರಧಾರ
ತೀಡಿದರೆ ನೀ ಮೂಡುವೆನು ನಾ
ಮಾತಾಡಬಲ್ಲದೀ ಬೇಲೂರ ಬಾಲಿಕೆ
ಸಿಹಿಯಾದ ಕಾಣಿಕೆ ಕೊಡಬಲ್ಲ ಮದನಿಕೆ II ಚಂದನ II

ಕಲ್ಪನೆಯ ಕನ್ಯೆ ನಾನು ಕಂಗೊಳಿಸೋ ಕವಿಯು ನೀನು
ಬಯಸಿದರೆ ನೀ ಬಳಸುವೆನು ನಾ
ಕರ್ಪೂರ ಅಲ್ಲ ನೀನು ಕರಗೋಕೆ ಬಲ್ಲೆಯೇನು
ಕರಗಿದರೆ ನೀ ಉರಿಸುವೆನು ನಾ
ಅಸಾಮಾನ್ಯ ಶೂರನೇ ಸುಕುಮಾರಿ ಚೋರನೇ
ಅಪರೂಪ ಭಂಗಿಯೇ ರತಿದೇವಿ ತಂಗಿಯೇ II ಚಂದನ II

ದೇವಲೋಕ ಪ್ರೇಮಲೋಕ ನನ್ನ ಮನೆಈಗ

ಚಿತ್ರ: ಮಿಡಿದ ಹೃದಯಗಳು (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ದೇವಲೋಕ ಪ್ರೇಮಲೋಕ ನನ್ನ ಮನೆಈಗ
ಇಲ್ಲಿ ನಾನು, ನನ್ನಗಂಡ, ನನ್ನಮಗುವೇ
ಪ್ರತೀ ರಾತ್ರಿ, ಪ್ರತೀ ಹಗಲು, ಬರೀ ನಗುವೆ
ದೇವಲೋಕ ಪ್ರೇಮಲೋಕ ನನ್ನ ಮನೆಈಗ
ಇಲ್ಲಿ ನಾನು, ನನ್ನಹೆಂಡತಿ, ನನ್ನಮಗುವೇ
ಪ್ರತೀ ರಾತ್ರಿ, ಪ್ರತೀ ಹಗಲು, ಬರೀ ನಗುವೆ

ಕನಸಿನಮಾಲೆ ಕಟ್ಟಿದಮೇಲೆ ನನಸುಮಾಡಿದೆ
ಮನಸುನೀಡಿದೆ ಹೃದಯ ಮಿಡಿಸಿದೆ
ಬಡತನ ನಾನು ಹೊಸತನ ನೀನು ನನ್ನ ವರಿಸಿದೆ
ಜೀವ ಬೆರೆಸಿದೆ ನೋವ ಮರೆಸಿದೆ
ಕಾವೇರಿ ನನಗಕ್ಕ ನಾ ಕಪಿಲ
ನಿನ್ನಿಂದ ಪಡಕೊಂಡೆ ನಾ ಸಕಲ
ಈ ಜನುಮದಲಿ ಮರುಜನುಮದಲಿ ನನ್ನಾಳುವ ಪತಿನೀನೇ

ವರುಷಗಳೆಲ್ಲಾ ನಿಮಿಷಗಳಂತೆ ಉರುಳಿಹೋದವು
ನಿನ್ನ ಜೊತೆಯಲಿ ಪ್ರೇಮಕಥೆಯಲಿ
ಬಯಕೆಗಳೆಲ್ಲಾ ಹೊಸಚಿಗುರಂತೆ ಮರಳಿಬಂದವು
ನಿನ್ನ ನಗುವಲಿ ಪ್ರೇಮವರದಲಿ
ಇಲ್ಲಿ ಕೋಪ ಇಲ್ಲಿ ತಾಪ ಅಪರೂಪ
ಅತೀ ಸರಳ ಅತೀ ವಿರಳ ನಿನ್ನರೂಪ
ಈ ಜನುಮದಲಿ ಮರುಜನುಮದಲಿ ನನ್ನಾಳುವ ದೊರೆನೀನೇ

ಅರಿಷಿಣ ಕುಂಕುಮ ಭಾಗ್ಯದ ಸಂಗಮ

ಚಿತ್ರ: ತಾಯಿ ಇಲ್ಲದ ತವರು (1995)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಡಾll ರಾಜ್ ಕುಮಾರ್

ಅರಿಷಿಣ ಕುಂಕುಮ ಭಾಗ್ಯದ ಸಂಗಮ
ಅರಿಷಿಣ ಕುಂಕುಮ ಪುಣ್ಯದ ಸಂಗಮ
ಸಾವಿನಾಚೆಯು ನಾರಿ ತಾನು,
ಸಾವಿನಾಚೆಯು ನಾರಿ ತಾನು
ಬಯಸುವ ಮಹಾ ಸಂಬ್ರಮ II ಅರಿಷಿಣ II

ಹಣೆಯ ಕುಂಕುಮವು ಹರನ ಹಣೆಗಣ್ಣು
ಅರಿಷಿಣದ ದಾರ ನಮ್ಮ ಆಚಾರ
ಹರಸಿ ಬಳೆಯಲಿ ಬಾಳ ನಗಿಸಿ
ವರಿಸಿ ಹೂವಲಿ ಮನವ ಸುಖಿಸಿ
ಜೀವ ಸವೆಸುವಳು II ಸಾವಿನಾಚೆಯು II

ಅರಿಷಿಣ ಕುಂಕುಮ ಭಾಗ್ಯದ ಸಂಗಮ
ಅರಿಷಿಣ ಕುಂಕುಮ ಸೌಭಾಗ್ಯದ ಸಂಗಮ

ಹಣೆಯ ಅಳಿಸಿದರೆ ಅಚಲವಾಗುವಳು
ತಾಳಿ ತೆಗೆಸಿದರೆ ತಾಳಿ ಬಾಳುವಳು
ಹಣೆಯ ಬರಹವ ಅಳಿಸಬಲ್ಲ ಶಕುತಿ ಇಲ್ಲದ ಜಗವನೆಲ್ಲ
ನಗುತ ನೋಡುವಳು II ಸಾವಿನಾಚೆಯು II

ಅರಿಷಿಣ ಕುಂಕುಮ ಭಾಗ್ಯದ ಸಂಗಮ
ಅರಿಷಿಣ ಕುಂಕುಮ ಪುಣ್ಯದ ಸಂಗಮ
ಸಾವಿನಾಚೆಯು ನಾರಿ ತಾನು,
ಸಾವಿನಾಚೆಯು ನಾರಿ ತಾನು
ಬಯಸುವ ಈ ಸಂಬ್ರಮ II ಅರಿಷಿಣ II

ನನ್ನವನು ನನ್ನವನು

ಚಿತ್ರ: ಚಿನ್ನ (1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಕೆ. ಎಸ್. ಚಿತ್ರ

ನನ್ನವನು ನನ್ನವನು
ನನ್ನವಳೇ ಎಂದವನು
ನನ್ನಬಿಟ್ಟು ಮರೆಯಾದನು
ಕಣ್ಣಿನಂತೆ ಎಂದವನು
ಕಣ್ಣೆದುರೇ ಇದ್ದವನು
ಕಣ್ಣೆದುರೇ ದೂರಾದನು..
ಕಣ್ಣಿನಲಿ ನೀರಾದನು ll ನನ್ನವನು ll

ನವರಂಗಿನ ನವರಂಗಿನ
ನವರಂಗಿನ ನನ್ನ ಜೀವನ ಬಿಳಿಯಾಯಿತು
ಬಳೆ ಹೋಯಿತು, ಬರಿದಾಯಿತು
ತಾಳಿ ಹೋದಮೇಲೆ ತಾಳಿ ಬಾಳಲೇ..
ಒಡಲಲ್ಲಿ ಒಲವಿರಿಸಿ ಒಗಟಾಗಿ ಹೋದ ll ನನ್ನವನು ll

ಬೆಳದಿಂಗಳೇ ತಂಗಾಳಿಯೇ
ನಿನ್ನೊಡಲಲಿ ನಿನ್ನುಸಿರಲಿ ಅವನಿರುವನೇ
ಅವನಿರುವನೇ ಅವಿತಿರುವನೇ
ಕರುಣೆ ತೋರಿ ನನ್ನ-ಅವನ ಸೇರಿಸಿ
ಅವನಿರದ ತಂಬೆಳಕು ಚಿತೆ ಏರೋ ಬೆಂಕಿ ll ನನ್ನವನು ll

ಉಸಿರ ಮೇಲೆ ಏದುಸಿರು ಅರೆ ಇದು ಏನಿದೇನಿದು

ಚಿತ್ರ: ಅಭಿಮನ್ಯು (1990)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್. ಪಿ. ಬಿ. & ಮಂಜುಳ ಗುರುರಾಜ್

ಉಸಿರ ಮೇಲೆ ಏದುಸಿರು ಅರೆ ಇದು ಏನಿದೇನಿದು
ನಿನ್ನ ಮುಖವು ನೂರಾರು ಅರೆ ಇದು ಯಾಕಿದ್ಯಾಕಿದು
ಪ್ರೀತಿಲಿ ಬಿದ್ದೆ ಪೋಲೀಸು, ನನ್ನೆದೆ ನಿನ್ನ ಆಫೀಸು II
ಎದೆಯ ಒಳಗೆ ಪಿಸುಮಾತು ಅರೆ ಕೇಳು ಅದೇನದು
ಹೊರಗೆ ಬರದೇ ನಿಂತೋಯ್ತು ಅರೆ ಹೇಳು ಇದ್ಯಾಕಿದು
ಮಾತೆಲ್ಲಾ ಯಾಕೆ ಪೋಲೀಸು ನಿನ್ನೆದೆ ನನ್ನ ಪ್ಯಾಲೇಸು II

ಅರೆ ರೆ ರೆ ಏನಿದು ನಿನಗೆ ಹಣೆಮೇಲೆ ಬೆವರಹನಿ ಸಾಲು
ಅರೆ ರೆ ರೆ ತಿಳಿಯದೇ ನಿನಗೆ ಇದು ಪ್ರೇಮದಕ್ಷತೆಯ ಕಾಳು
ಆ.. ಇನ್ನೂ ನಿನ್ನ ಸೋಕೇ ಇಲ್ಲ ಕೆಂಪಾಗೋಯ್ತು ಕೆನ್ನೆ-ಗಲ್ಲ
ಮೈಯ್ಯಲ್ಲಿರೋ ಪ್ರಾಣ ಎಲ್ಲಾ ಕೆನ್ನೆ ಮೇಲೆ ಬಂತೊ ನಲ್ಲ
ಪ್ರೀತಿ ಎಂದರೇ ಏನು..
ಹಾಲು ಸಕ್ಕರೆ ಜೇನು..
ಮದುವೆಯ ಊಟಕೆ ಪ್ರೀತಿಯೇ ಸಿಹಿ ನಂಚಿಕೆ
ನಮ್ಮನೆ ಊಟಕೆ ಕರೆಯಲು ನಾಚಿಕೆ II ಉಸಿರಮೇಲೆ II

ಅರೆ ರೆ ರೆ ಏನಿದು ನಿನಗೆ ಏಕಾಂತದಲ್ಲೂ ಹೊಸ ಚಿಂತೆ
ಉಡುಗೊರೆ ನೀಡಲು ನಿನಗೆ ನನ್ನಲ್ಲಿ ಏನೂ ಇಲ್ಲಂತೆ
ಆ.. ಮೋಡಿ ಮಾಡೋ ಜೋಡಿ ಕಣ್ಣು ಮುಚ್ಚಿ ಕೊಡೆ ತೊಂಡೆಹಣ್ಣು
ನೀನೆ ನನ್ನ ಕಣ್ಣು ಜಾಣ ಕೇಳೋ ನನ್ನ ಆರೂ ಪ್ರಾಣ
ಅಚ್ಛೆ ಮಲ್ಲಿಗೆ ಹೆಣ್ಣಿದು..
ಅಚ್ಚು ಬೆಲ್ಲದ ಗಂಡಿದು..
ಹುಡುಗಿ ನೀ ಹೂ ಗೊಂಚಲು ಜೇನಿನ ಸಿಹಿ ಬಟ್ಟಲು
ಬಡಿಸುವೆ ಬಾ ತಿನ್ನಲು ಬಿಗಿಯುವೆ ಕೈ ತೊಟ್ಟಿಲು

ಉಸಿರ ಮೇಲೆ ಏದುಸಿರು ಅರೆ ಇದು ಏನಿದೇನಿದು
ಎದೆಯ ಒಳಗೆ ಪಿಸುಮಾತು ಅರೆ ಕೇಳು ಅದೇನದು
ಹೆಂಡತಿಗಿದು ಈ ಕೇಸು ಲಾಕಪ್ಪಿನಲ್ಲಿ ಪೋಲೀಸು
ಹಾಸಿಗೆ ಈಗ ಆಫೀಸು ನೀಡಯ್ಯ ಒಂದು ಕೈಗೂಸು

ಮುತ್ತೇ ಪ್ರಥಮ ಅದುವೇ ಜಗದ ನಿಯಮ

ಚಿತ್ರ: ಯುಗಪುರುಷ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್. ಪಿ. ಬಿ & ವಾಣಿ ಜಯರಾಮ್

ಮುತ್ತೇ ಪ್ರಥಮ ಅದುವೇ ಜಗದ ನಿಯಮ
ಮದುವೆ ಪ್ರಥಮ ಅದುವೇ ಜನರ ನಿಯಮ
ಆ ಸೂರ್ಯ ಕಿರಣಗಳು ಹಸಿರು ಭೂಮಿಯನು ಚುಂಬಿಸದೇ
ಸಾಗರದ ಅಲೆಗಳಿವು ಮರಳ ತೀರವನು ಚುಂಬಿಸದೇ
ಝೇಂಕರಿಸೊ ದುಂಬಿಗಳು ನಗುವ ಹೂಗಳನು ಮುದ್ಧಿಸದೇ II ಮುತ್ತೇ II

ತಣ್ಣನೆ ಗಾಳಿ ಇದು ಬೀಸುತಿದೆ, ನಿನ್ನಯ ಮೈಸಿರಿಗೆ ಮುತ್ತಿಟ್ಟಿದೆ
ಸೋಕದ ನಿನ್ನಯ ತುಟಿಗಳ ನಾ ಸೋಕಬಾರದೇ.. ಸೋಕಬಾರದೇ
ಸಂಜೆಯ ವೇಳೆ ಇದು ಜಾರುತಿದೆ, ನಿನ್ನಯ ಸಂಯಮವು ಮೀರುತಿದೆ
ಮುತ್ತಿನ ಹಾರದಿ ನೀಡುವೆ ನಾ ತಾಳಬಾರದೇ.. ತಾಳಬಾರದೇ II ಮುತ್ತೇ II

ಸಾವಿರ ಆಸೆಗಳು ಕಣ್ಣಲ್ಲಿದೆ, ತೀರುವ ದಾರಿಗಳು ಮುತ್ತಲ್ಲಿದೆ
ಹಾರುವ ಮನಸಿಗೆ ಚುಂಬನವಾ ನೀಡಬಾರದೇ, ನೀಡಬಾರದೇ
ದೂರದ ಸ್ನೇಹದಲಿ ಪ್ರೇಮವಿದೆ, ನೋಡುವ ನೋಟದಲಿ ಮೋಹವಿದೆ
ಸೇರಲು ಕಾಯುವ ವಿರಹದಲೇ ಆಸೆ ತೀರದೇ, ಆಸೆ ತೀರದೇ II ಮುತ್ತೇ II

ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ

ಚಿತ್ರ: ತಾಯಿ ಇಲ್ಲದ ತವರು (1995)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಕೆ. ಎಸ್. ಚಿತ್ರ

ಕುಕ್ಕುಕ್ಕುಕ್ಕೂ ಕೋಗಿಲೆ ವಸಂತಕಾಲ ಬಂದಿದೆ
ಕುಕ್ಕುಕ್ಕುಕ್ಕೂ ಕೋಗಿಲೆ ಮದುವೆಮಾಲೆ ತಂದಿದೆ
ಪ್ರೇಮದ ಮನೆಯ ತೋರಣವಾಗೋ ಮಾಮರದೆಲೆ ನಾನು IIಕುಕ್ಕುಕ್ಕುಕ್ಕೂII

ಓ ನನ್ನ ಮಂದಾರ ಕೇಳೆ ಹೂವಿಗೆ ಕಲ್ಯಾಣ ನಾಳೆ
ಪ್ರೇಮದ ಪಲ್ಲಂಗದಲ್ಲಿ ದುಂಬಿಯ ಪಾಲಾಗೋವೇಳೆ
ನನ್ನ ಕೂಡಿರು ನನ್ನ ಕೂಡಿರು ನಿನ್ನ ಜೇನನು ಸಾಲ ತಂದಿರು

ಓ ಪ್ರೇಮವೇ ಕವನ ನಾ ಪ್ರೇಮದ ಗಮನ
ಪ್ರೇಮದ ಮನೆಯ ತೋರಣವಾಗೋ ಮಾಮರದೆಲೆ ನಾನು IIಕುಕ್ಕುಕ್ಕುಕ್ಕೂII

ತಂದನನ ತನನನ ತನನ ತನನ ತನನ ತನನ ತನನ ತನ II

ಓ ನನ್ನ ತಂಗಾಳಿ ಕೇಳೆ ಹೂಡೂವೆ ಸಂಸಾರ ನಾಳೆ
ಜೀವನ ಕಾವೇರಿ ತುಂಬಾ ಪ್ರೀತಿಯು ಹಾಲಾಗೋ ವೇಳೆ
ನನ್ನ ತೇಲಿಸು ನನ್ನ ತೇಲಿಸು ಪ್ರೇಮತೀರಕೆ ನನ್ನ ಸೇರಿಸು

ಓ ಪ್ರೇಮವೇ ನಮನ ನೀ ನಗಿಸಿದೆ ಸುಮನ
ಪ್ರೇಮದ ಮನೆಯ ತೋರಣವಾಗೋ ಮಾಮರದೆಲೆ ನಾನು IIಕುಕ್ಕುಕ್ಕುಕ್ಕೂII

ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ

ಚಿತ್ರ: ನವತಾರೆ (1991)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ

ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ..
ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ..
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಈ ಮರಗಳಿಗೆ ಮರದೊಳಗಾಗಿಳಿಗಳಿಗೆ
ಗಿಳಿಗಳ ಆ ಚಿಲಿಪಿಲಿಗೆ ಚೇತನವೀ ಶುಭಘಳಿಗೆ
ಸರಸರ ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು

ಒಂಟಿಕಾಲ ಮೇಲಿನ ಸೂರ್ಯಕಾಂತಿ ಹೂ ನರ್ತನ
ಮಾವು ಸೀಬೆಯು ಮೈಗೆ ಹಚ್ಚಿಕೊಂಡವು ಅರಿಷಿಣ
ತೆರೆದವು ಹಸಿರೆಲೆಗಳು ಮುತ್ತಿನಂಗಡಿ
ನಕ್ಕವು ಗಂಗಮ್ಮನ ರತ್ನ ಕೋಶವು
ಈ ಕವಿಗಳಿಗೆ ಕವಿಯೊಳಗೀ ಪದಗಳಿಗೆ
ಸವಿಯುವ ಜಾಣ್ಗಿವಿಗಳಿಗೆ ಚೇತನವೀ ಶುಭಘಳಿಗೆ
ಸರಸರ ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು

ಆ... ನೂರುಹಿಂಡು ಬಾನಾಡಿ ಬಾನ ತುಂಬ ಹಾರಾಡಿ
ವಂದನೆ ನಿನಗೆ ನೇಸರ ಎಂದವು ತೊರೆದು ಬೇಸರ
ಮೊಳಗಿತು ಗುಡಿಘಂಟೆಯ ವೇದಘೋಷವು
ಹರಸಿತು ಜಗವೆಲ್ಲವ ಸುಪ್ರಭಾತವು
ಈ ಜಗದೊಳಗೆ ಜಗದೊಳಗೀ ಜನಗಳಿಗೆ
ಜನಗಳ ಈ ನಡೆಗಳಿಗೆ ಚೇತನವೀ ಶುಭಘಳಿಗೆ
ಸರಸರ ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಮೂಡಣದರಮನೆ ಬಾಗಿಲ ತೆರೆದನು ಬಾನಿನ ರವಿತೇಜ
ಬೆಳಕಿನ ರಾಶಿ ಇದು ಬದುಕಿನ ಓಟವಿದು
ಬೆಳಕಿನ ರಾಶಿ ಇದು ಬದುಕಿನ ಓಟವಿದು

ಏನು ಹುಡುಗಿನೋ.. ಅ ಅ ಅ ಅಹ

ಚಿತ್ರ: ಮೇಘಮಾಲೆ (1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ...

ಏನು ಹುಡುಗಿನೋ.. ಅ ಅ ಅ ಅಹ
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದಳು

ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ
ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ

ಏನು ಹುಡುಗನೋ.. ಅ ಅ ಅ ಅಹ
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದನು

ಓಂ ಪ್ರಥಃ ಓಂ ಪ್ರಥಃ  ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ
ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ

ಏಯ್! ಡು ಯು ಲವ್ ಮೀ
ಯಃ.. ಐ ಲವ್ ಯು

ಏನೂ ಕಾಣಿಸದು...
ಏನೂ ಕೇಳಿಸದು...
ಕಿವಿಯತುಂಬಾ ಚುಂಬನಾದ
ಭೂಮಿಮೇಲೆ ಇಲ್ಲಾ ಪಾದ
ನೋಡುವುದಂತೆ, ನೇರ ನೋಡುವುದಂತೆ
ಹೇಳಲು ಹೋಗಿ ಬಾಯಿ ಕೂಡುವುದಂತೆ
ಆಸೆಯಾಯಿತೆಂದು, ಸಿಹಿ ಜೇನಿನೂಟ ತಿಂದು
ರಾಣಿಜೇನ ಮಗಳು ನಾಚುತಾಳೆ ಇವಳು
ಏನು ಹುಡುಗಿನೋ.. ಅ ಅ ಅ ಅಹ
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದಳು

ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ
ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ

ಇಂದೇ ಪ್ರೇಮದಿನ...
ಇಂದೇ ಪರ್ವದಿನ...
ಎದೆಯ ತುಂಬಾ ಕುಂಭಮೇಳ
ತರುಣ ತಂದನಾನ ತಾಳ
ಮಂಥರವಿಲ್ಲ, ಯಾವ ಎತ್ತರವಿಲ್ಲ
ಇಬ್ಬರ ನಡುವೆ, ಈಗ ಅಂತರವಿಲ್ಲ
ಪ್ರೇಮದೆಲ್ಲಾ ಸಾಲು, ನಾ ಹೇಳಿಯಾದಮೇಲೂ
ಕಾಳಿದಾಸನಿವನು ಕಾಡುತಾನೆ ಇವನು
ಏನು ಹುಡುಗನೋ.. ಅ ಅ ಅ ಅಹ
ಪ್ರೀತಿ ಎಂದು ಹೇಳಿ ಮೊದಲ ಮುತ್ತು ತಂದನು

ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ
ಓಂ ಪ್ರಥಃ ಓಂ ಪ್ರಥಃ ಓಂ ಪ್ರಥಃ ಓಂ
ಪ್ರೇಂ ಪ್ರಥಃ ಓಂ ಪ್ರಥಃ ಓಂ

ಓ.. ಪುಟ್ಟನಂಜ ನೀನು ನಮ್ಮೂರ ಒಕ್ಕಲಂಜ

ಚಿತ್ರ: ಲಾಕಪ್ ಡೆತ್ (1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಓ.. ಪುಟ್ಟನಂಜ ನೀನು ನಮ್ಮೂರ ಒಕ್ಕಲಂಜ
ಓ.. ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ
ಸುತ್ತಾಲು ಹೆಂಗಸರೇ ಗೊತ್ತಾಗಿ ಹಂಗಿಸರೆ
ಮುದ್ದಾಟ ಬಯಲಲ್ಲೇ
ಓ.. ಪುಟ್ಟನಂಜಿ, ಓ ಓ ಓ.. ಪುಕ್ಕಲಂಜಿ
ನಾನು ಸಂಜೆಗೆ ಕಾಯುತೀನಿ
ನಾನು ಮುಂಜಾನೆ ಕೂಗುತೀನಿ

ಓ.. ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ
ಓ.. ಪುಟ್ಟನಂಜ ನೀನು ನಮ್ಮೂರ ಒಕ್ಕಲಂಜ

ತಾಳ್ ನಂಜಿ ತಾಳ್ ಓಡಬ್ಯಾಡ
ಮರೆಯೊಳಗೆ ಮುದ್ದುಮಾಡ
ಕೇಳ್ ನಂಜ ಕೇಳ್ ಕಾಡಬ್ಯಾಡ
ಬಿಸಿಲೊಳಗೆ ಬಿಸಿಬ್ಯಾಡ
ತಾಳ್ ನಂಜಿ ತಾಳ್ ಅಂಜಬ್ಯಾಡ
ಬಿಸಿಮೈಯ್ಯ ಕಾಸಬ್ಯಾಡ

ನಮ್ಮೂರು ನಿಯಮಗಳ ತವರು
ಪಂಚಾಯ್ತಿ ಬಾಯಿಗಳು ಜೋರು
ಗುಲ್ಲಾದರೇ ಗಡಿಪಾರು ಪಾರುಮಾಡು ಪಾರು
ಗುಟ್ಟೇನೈತೆ ನಾನು ನೀನು ಪ್ರೀತಿ ಮಾಡುತೀವಿ
ಬೀದಿಮೇಲೆ ಹಾಡಿ-ಕಾಡಿ ಕೆಟ್ಟೋರಾಗುತೀವಿ
ತಪ್ಪೇನೈತೆ ನಾಳೆ ನಾವು ಮದುವೆ ಆಗುತೀವಿ
ಮದುವೆಮಾತ್ರ ಬೀದಿಲಿದ್ರೆ ಊರುಗಲ್ಲಿ ಸೇರಿ

ಓ.. ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ
ಓ.. ಪುಟ್ಟನಂಜ ನೀನು ನಮ್ಮೂರ ಒಕ್ಕಲಂಜ
ಎಲ್ಲಾರು ನಮ್ಮವರು ತುಂಟಾಟ ಮೆಚ್ಚುವರು ತಪ್ಪಾದ್ರು ತಿದ್ದುತ್ತಾರೆ
ಓ.. ಪುಟ್ಟನಂಜ ಓ ಓ ಓ.. ಒಕ್ಕಲಂಜ
ನಾಳೆ ಮುಂಜಾನೆ ಕೂಗುತೀನಿ
ಇಂದು ಸಂಜೇನೆ ಕಾಯುತೀನಿ

ಓ.. ಪುಟ್ಟನಂಜ ನೀನು ನಮ್ಮೂರ ಒಕ್ಕಲಂಜ
ಓ.. ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ

ಏಯ್ ನಂಜಿ, ಈ ಮರ‌ದ್ಹಿಂದೆ ಮರೆಐತೆ ಬಾ ಬಾ
ಅಯ್ಯೋ! ಜಾಲಿ ಮರದಲ್ಲಿ ನೆರಳಾ, ಎಲ್ಲಾ ಕಾಣ್ತೈತೆ

ಕಾಡೋರ ಮೆಚ್ಚುತ್ತೀರಿ ನೀವು
ಹಂಗಾಗಿ ಹೆಚ್ಚುತ್ತೀವಿ ನಾವು
ಕಲ್ಲ್ ಹಾಕದೇ ಕೋಲ್ಎತ್ತದೇ ಹಾರತೈತ ಹಾವು
ಹಾಲು ಖೀರು ಹಾಕುತೀವಿ ಹಾವು ದೇವರಂತ
ಹಾವು ಹಾನಿ ಮಾಡದಂತೆ ಪ್ರೀತಿ ಪೂಜೆಯಂತ
ಬೆಂಕಿ ಹಾಕಿ ಹಾಡುತೀವಿ ಕಾಮ ಸಾಯಲಂತ
ಕಾಮ ಹೋಗಿ ಪ್ರೀತಿಯಾಗಿ ಜನ್ಮ ತಾಳಿತಂತ

ಓ.. ಪುಟ್ಟನಂಜ ನೀನು ನಮ್ಮೂರ ಒಕ್ಕಲಂಜ
ಓ.. ಪುಟ್ಟನಂಜಿ ನೀನು ನಮ್ಮೂರ ಪುಕ್ಕಲಂಜಿ
ಸುತ್ತಾಲು ಹೆಂಗಸರೇ ಗೊತ್ತಾಗಿ ಹಂಗಿಸರೆ
ಮುದ್ದಾಟ ಬಯಲಲ್ಲೇ
ಓ.. ಪುಟ್ಟನಂಜಿ, ಓ ಓ ಓ.. ಪುಕ್ಕಲಂಜಿ
ನಾನು ಸಂಜೆಗೆ ಕಾಯುತೀನಿ
ನಾನು ಮುಂಜಾನೆ ಕೊ ಕೊ ಕೋ ಕೊ

ಊರು ಕೇರಿ ಬೇಡ ಬಾ ಹೋಗೋಣ

ಚಿತ್ರ: ವಾಂಟೆಡ್ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಊರು ಕೇರಿ ಬೇಡ ಬಾ ಹೋಗೋಣ
ಬನದೊಳಗೋ, ವನದೊಳಗೋ
ಮರೆಯೊಳಗೋ, ಪೊದೆಯೊಳಗೋ
ಊರು ಕೇರಿ ಬೇಡ ಬಾ ಹೋಗೋಣ
ಬನದೊಳಗೋ, ವನದೊಳಗೋ
ಮರೆಯೊಳಗೋ, ಪೊದೆಯೊಳಗೋ
ಊರು ಕೇರಿ ಬೇಡ ಬಾ ಹೋಗೋಣ

ಮಾಗಿ ಮುಚ್ಚಿದ ಮಂಜಿನಲ್ಲಿ
ತೂರಿ ತೂರಾಡಿ ನಡುಗೋಣ
ಮಾಗಿ ಮುಚ್ಚಿದ ಮಂಜಿನಲ್ಲಿ
ತೂರಿ ತೂರಾಡಿ ನಡುಗೋಣ
ಬೂದಿ ಮುಚ್ಚಿದ ಕೆಂಡದ ಬೆಂಕಿಗೆ
ಮೈ ಹಚ್ಚುತಾ ಕಾಯಿಸೋಣ
ಬೂದಿ ಮುಚ್ಚಿದ ಕೆಂಡದ ಬೆಂಕಿಗೆ
ಮೈ ಹಚ್ಚುತಾ ಕಾಯಿಸೋಣ
ಬೆಟ್ಟವೋ, ಗುಡ್ಡವೋ
ತಪ್ಪಲೋ, ಕೊಪ್ಪಲೋ
ಕೋಟೆಯೋ, ಕೊತ್ತಲೋ
ಕತ್ತಲೋ, ಬೆತ್ತಲೋ

ಊರು ಕೇರಿ ಬೇಡ ಬಾ ಹೋಗೋಣ
ಬನದೊಳಗೋ
ವನದೊಳಗೋ
ಮರೆಯೊಳಗೋ
ಪೊದೆಯೊಳಗೋ
ಊರು ಕೇರಿ ಬೇಡ ಬಾ ಹೋಗೋಣ

ಸೂರ್ಯ ಸುಡದ ಜಾವದಲ್ಲಿ
ಹೂವ ಚಲ್ಲಾಡಿ ಮಲಗೋಣ
ಸೂರ್ಯ ಸುಡದ ಜಾವದಲ್ಲಿ
ಹೂವ ಚಲ್ಲಾಡಿ ಮಲಗೋಣ
ಜೇನು ಜಾರುವಾ ಕೊಂಬೆಯ ಕೆಳಗೆ
ಬಾಯಿ ತೆರೆದು ಪ್ರೀತಿಸೋಣ
ಜೇನು ಜಾರುವಾ ಕೊಂಬೆಯ ಕೆಳಗೆ
ಬಾಯಿ ತೆರೆದು ಪ್ರೀತಿಸೋಣ
ನಾರಲ್ಲೋ, ಬೇರಲ್ಲೋ
ಗೆಡ್ಡೆಲ್ಲೋ, ಗೆಣಸಲ್ಲೋ
ಒಪ್ಪತ್ತೋ, ಇಪ್ಪತ್ತೋ
ಆಗತ್ತೋ, ಹೋಗತ್ತೋ

ಊರು ಕೇರಿ ಬೇಡ ಬಾ ಹೋಗೋಣ
ಬನದೊಳಗೋ, ವನದೊಳಗೋ
ಮರೆಯೊಳಗೋ, ಪೊದೆಯೊಳಗೋ
ಊರು ಕೇರಿ ಬೇಡ ಬಾ ಹೋಗೋಣ
ಬನದೊಳಗೋ, ವನದೊಳಗೋ
ಮರೆಯೊಳಗೋ, ಪೊದೆಯೊಳಗೋ
ಊರು ಕೇರಿ ಬೇಡ ಬಾ ಹೋಗೋಣ

ಗುಡು ಗುಡಿ ಬಾ ಹೊಡಿ

ಚಿತ್ರ: ಬೇಡಿ (1987)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ವಾಣಿಜಯರಾಮ್

ಗುಡು ಗುಡಿ ಬಾ ಹೊಡಿ
ಈ ಹುಡುಗಿಯ ಕೈ ಹಿಡಿ
ಎಡವದೆ ನೀ ನಡಿ
ಬಾ ಸ್ವರ್ಗಕೆ ಮೂರಡಿ
ತೇಲಾಡು ಮತ್ತಲ್ಲಿ ಈಜಾಡಿ
ತೇಲಾಡು ಮತ್ತಲ್ಲಿ ಈಜಾಡಿ
ಗುಡು ಗುಡಿ ಬಾ ಹೊಡಿ
ಈ ಹುಡುಗಿಯ ಕೈ ಹಿಡಿ

ಈ ಬಾಳು ಚಿಕ್ಕದು, ಪುಟ್ಟದು, ಸಣ್ಣದು
ತುಂಬ ಹೂತ್ತೇನು ನಿಲ್ಲದು
ಕಳೆದರೇ ಮತ್ತೆ ದೊರಕದು
ಈ ಲೋಕ ಕೆಟ್ಟದು, ಕೆಟ್ಟರೇ, ನೋಡದು
ನಮ್ಮ ಸುಖಭೋಗ ಒಪ್ಪದು
ಇಂಥ ಸಂತೋಷ ಸಹಿಸದು
ಬೇಡ ವಿಷಾದ..
ಬೇಡ ವಿಷಾದ, ಬೇಕಾ ವಿನೋದ
ಒಂದೊಂದು ದಮ್ಮಲ್ಲೂ ಆನಂದ
ಒಂದೊಂದು ದಮ್ಮಲ್ಲೂ ಆನಂದ

ಈ ಭೂಮಿ ನಿಲ್ಲದು, ನಿಂತರೇ ಉಳಿಯದು
ಯಾಕೆ ಏನೆಂದು ತಿಳಿಯದು
ತಿಳಿದರೇ ಮತ್ತು ಬರುವುದು
ಈ ಗೋಲ ತಿರುಗಿದೆ, ಕಾರಣ ಕುಡಿದಿದೆ
ಏನೂ ಹೇಳೋಕೆ ಆಗದೇ
ತಾನೇ ಮತ್ತಲ್ಲಿ ಮುಳುಗಿದೆ
ಭೂಮಿ ಮತ್ತಲ್ಲಿ...
ಭೂಮಿ ಮತ್ತಲ್ಲಿ, ನಾವೂ ಮತ್ತಲ್ಲಿ
ತೇಲೋಣ ಎಲ್ಲಾರೂ ಮತ್ತಲ್ಲಿ
ತೇಲೋಣ ಎಲ್ಲಾರೂ ಮತ್ತಲ್ಲಿ

ಗುಡು ಗುಡಿ ಬಾ ಹೊಡಿ
ಈ ಹುಡುಗಿಯ ಕೈ ಹಿಡಿ
ಎಡವದೆ ನೀ ನಡಿ
ಬಾ ಸ್ವರ್ಗಕೆ ಮೂರಡಿ..

Wednesday 30 November 2016

ಮಾವಿನಮರವೇ ಮಾವಿನಮರವೇ ನನ್ನ ಮರೆತೆಯಾ

ಚಿತ್ರ: ಬಾಳೊಂದು ಭಾವಗೀತೆ (1988)
ಸಾಹಿತ್ಯ: ಎಮ್. ಎನ್. ವ್ಯಾಸರಾವ್
ಸಂಗೀತ: ನಾದಬ್ರಹ್ಮ
ಗಾಯನ: ಲತಾ ಹಂಸಲೇಖ & ಬಿ. ಆರ್. ಛಾಯಾ

ಮಾವಿನಮರವೇ ಮಾವಿನಮರವೇ ನನ್ನ ಮರೆತೆಯಾ
ನಿನ್ನ ಮಡಿಲಿನ ಗೂಡಿನಲಿ ನೆಲೆ ನೀಡೆಯಾ
ಕೋಗಿಲೆಮರಿಯೇ ಕೋಗಿಲೆಮರಿಯೇ ಹೇಗೆ ಮರೆಯಲಿ
ನಿನ್ನ ತಬ್ಬಲಿ ಮಾಡಿನೊಂದೆ ಈ ಬಾಳಿನಲಿ

ಅಮ್ಮ ಮುದ್ದು ಅಮ್ಮ ಬಲಿಸು ಬಗಲ ರೆಕ್ಕೆ ಅಮ್ಮ ನನ್ನ ಅಮ್ಮ ತೊಡಿಸು ಪ್ರೀತಿ ರಕ್ಷೆ
ತಾಯಿಯಾಗಿ ಪ್ರೀತಿ ಮಮತೆ ನಿನಗೆ ನೀಡಲಿಲ್ಲ
ಯಾವ ಗೂಡಿನಲ್ಲೋ ನಿನ್ನ ಬಿಟ್ಟು ಬಂದೆನಲ್ಲಾ
ಮರವಾಗಿ ನೆರಳಾಗಿ ಇರುವಾಸೆ ಇದೆ
ಒಲವಿಂದು ಕವಲಾಗಿ ಹಾಯ್ದಾಡುತಿದೆ
ಇದೆ.. ಇದೆ..

ಮಾವಿನಮರವೇ ಮಾವಿನಮರವೇ ನನ್ನ ಮರೆತೆಯಾ
ನಿನ್ನ ಮಡಿಲಿನ ಗೂಡಿನಲಿ ನೆಲೆ ನೀಡೆಯಾ

ಗುಮ್ಮ ಬಂದನಮ್ಮ ಇರುಳ ಭಯವ ನೀಗೆ ಅಮ್ಮ ನನ್ನ ಅಮ್ಮ ನನಗೂ ಕಥೆಯ ಹೇಳೇ
ಎದೆಗೆ ಗಾಯಮಾಡಿದಂಥ ಕಥೆಯ ಹೇಳಲೇನು
ಎರಡು ದೋಣಿಯಲ್ಲಿ ನಿಂತ ಬದುಕ ತಿಳಿಸಲೇನು
ನೀನಿಂದು ನೆನಪಾಗಿ ನಾ ಬೆಂದೆ ಮಗು
ಬಾಳೆಲ್ಲಾ ಉರಿವಾಗ ಇನ್ನೆಲ್ಲಿ ನಗು
ನಗು.. ಮಗು

ಮಾವಿನಮರವೇ ಮಾವಿನಮರವೇ ನನ್ನ ಮರೆತೆಯಾ
ನಿನ್ನ ಮಡಿಲಿನ ಗೂಡಿನಲಿ ನೆಲೆ ನೀಡೆಯಾ
ಕೋಗಿಲೆಮರಿಯೇ ಕೋಗಿಲೆಮರಿಯೇ ಹೇಗೆ ಮರೆಯಲಿ
ನಿನ್ನ ತಬ್ಬಲಿ ಮಾಡಿನೊಂದೆ ಈ ಬಾಳಿನಲಿ

ದೂರದಿಕ್ಕಿಗೆ ಹಾರೋ ಹಕ್ಕಿಗೆ ತೀರ ಸಿಕ್ಕಿತು ಬಾ

ಚಿತ್ರ: ಮಿಸ್ಟರ್ ವಾಸು (1995)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ರಂಗೀಲಾ.. ರಂಗೀಲಾ.. ಐ ಲವ್ ಯು

ದೂರದಿಕ್ಕಿಗೆ ಹಾರೋ ಹಕ್ಕಿಗೆ ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ ಜೋಡಿ ಸಿಕ್ಕಿತು ಬಾ
ರಂಗೀಲಾ.. ಐ ಲವ್ ಯು.. ಐ ಲವ್ ಯು

ಐ ಲವ್ ಯು.. ಐ ಲವ್ ಯು.. ಐ ಲವ್ ಯು..
ದೂರದಿಕ್ಕಿಗೆ ಹಾರೋ ಹಕ್ಕಿಗೆ ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ ಜೋಡಿ ಸಿಕ್ಕಿತು ಬಾ
ಐ ಲವ್ ಯು.. ಓ ರಾಜಾ.. ಐ ಲವ್ ಯು..

ರಂಗೀಲಾ.. ರಂಗೀಲಾ.. ಐ ಲವ್ ಯು

ಎದೆಯ ಗೂಡಿನಂಜಿಕೆ ಹಾರಿ ಹೋಯಿತು
ಅನುಮಾನ ಮರೆಯಾಯ್ತು
ಅಭಿಮಾನ ನನದಾಯ್ತು
ನನ್ನ ಮನದ ನಂಬಿಕೆ ಹಾಡಿ ಹೇಳಿತು
ಈ ಚಲುವೆ ನನ್ನವಳು
ನನಗಾಗಿ ಇರುವವಳು

ಒ.. ಓ.. ಒ.. ಓ..
ಪ್ರೇಮ.. ಕೈ ಮುಗಿವೆ, ಶರಣೆನುವೆ,
ಕಂಬನಿ ಕುಸುಮ ಚರಣ ಕೇಳುವೆ
ಒಲಿಯಿತು ಬಾ ಫಲಿಸಿತು ನನ್ನ ನಿನ್ನ ಮಿಲನಕಿಂದು ಪ್ರೇಮಾಂಜಲಿ

ರಂಗೀಲಾ.. ರಂಗೀಲಾ.. ಐ ಲವ್ ಯು

ದೂರದಿಕ್ಕಿಗೆ ಹಾರೋ ಹಕ್ಕಿಗೆ ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ ಜೋಡಿ ಸಿಕ್ಕಿತು ಬಾ
ಐ ಲವ್ ಯು.. ಓ ರಾಜಾ.. ಐ ಲವ್ ಯು..

ರಂಗೀಲಾ.. ಐ ಲವ್ ಯು.. ರಂಗೀಲಾ..

ಅಂದವಾದ ಹೂವಿಗೆ ನಾನೇ ಕಾವಲು
ಲತೆಯಲ್ಲಿ ಎಲೆಯಾಗಿ, ಜೊತೆಯಲ್ಲಿ ನೆರಳಾಗಿ
ನಿನ್ನ ಕಣ್ಣ ಕನ್ನಡಿ ನನ್ನೇ ಕಾಣಲು
ಅಳುವಲ್ಲಿ ಹನಿಯಾಗಿ, ನಗುವಲ್ಲಿ ದನಿಯಾಗಿ
ಈ.. ಸ್ನೇಹ ಬದುಕಿನಲಿ ನೆನಪಿರಲಿ
ಹೃದಯದ ಕವನ ನುಡಿಯುತಲಿರಲಿ
ಒಲಿಯಿತು ಬಾ ಫಲಿಸಿತು ನನ್ನ ನಿನ್ನ ಮಿಲನಕಿಂದು ಗೀತಾಂಜಲಿ

ಐ ಲವ್ ಯು.. ಐ ಲವ್ ಯು.. ಐ ಲವ್ ಯು..

ದೂರದಿಕ್ಕಿಗೆ ಹಾರೋ ಹಕ್ಕಿಗೆ ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ ಜೋಡಿ ಸಿಕ್ಕಿತು ಬಾ
ರಂಗೀಲಾ.. ಐ ಲವ್ ಯು.. ಐ ಲವ್ ಯು
ಐ ಲವ್ ಯು.. ಓ ರಾಣಿ.. ಐ ಲವ್ ಯು

ಹೃದಯವೇ.. ನೀನು ವಿಧಿಯ ಕೈಯ್ಯಲಿರುವ ಜಾಗಕೆ

ಚಿತ್ರ: ಬಾಳೊಂದು ಭಾವಗೀತೆ (1988)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ.

ಹೃದಯವೇ.. ನೀನು ವಿಧಿಯ ಕೈಯ್ಯಲಿರುವ ಜಾಗಕೆ
ಸಾವು ಬರುವ ಮುನ್ನ ನುಡಿವೆ ಜಾಗ್ರತೆ
ನಿದ್ದೆ ಮಾಡದೆ ಮಾತೆಲ್ಲಾ ಕೇಳುವೆ
ಸದ್ದು ಮಾಡುತಾ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೆ

ಹೃದಯವೇ.. ನೀನು ವಿಧಿಯ ಕೈಯ್ಯಲಿರುವ ಜಾಗಕೆ
ಸಾವು ಬರುವ ಮುನ್ನ ನುಡಿವೆ ಜಾಗ್ರತೆ

ಕಣ್ಣಿಂದಲೇ ಎಲ್ಲಾರನು ಮಾತಾಡಿಸುವೆ
ಹೆಣ್ಣಾಗಲೀ ಗಂಡಾಗಲೀ ಜತೆಗೂಡಿಸುವೆ
ಮನಮಿಡಿಯುವ ಕಥೆಯಿದ್ದರೆ ಕಣ್ಣೀರಿಡುವೆ
ಸಂತೋಷದ ಭರದಲ್ಲಿ ಎಲ್ಲಾ ಮರೆವೆ
ನೋವೇ.. ನಿನ್ನ ಮುಖದ ನಗೆಯೋ
ಸಾವೇ.. ನಿನ್ನ ಸುಖದ ಕೊನೆಯೋ
ನಿದ್ದೆ ಮಾಡದೆ ಮಾತೆಲ್ಲಾ ಕೇಳುವೆ
ಸದ್ದು ಮಾಡುತಾ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೆ

ಕೋಟ್ಯಾಂತರ ನರನಾಡಿಯ ಕೋಟೆಯಲಿರುವೆ
ಹರಿದಾಡುವ ಬಿಸಿರಕ್ತದ ಮಡುವಲ್ಲಿರುವೆ
ಮೂಳೆಗಳ ಕಾವಲಲಿ ಮಿಡಿಯುತಲಿರುವೆ
ನಾಳೆಗಳ ಎಣಿಸುತಲಿ ನಡುಗುತಲಿರುವೆ
ನಿನ್ನ.. ಹಾಡಿನ ಕೊನೆಯ ತಾಳ
ನನ್ನ.. ಬಾಳಿನ ಕೊನೆಯ ಕಾಲ
ನಿದ್ದೆ ಮಾಡದೆ ಮಾತೆಲ್ಲಾ ಕೇಳುವೆ
ಸದ್ದು ಮಾಡುತಾ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೆ

ಹೃದಯವೇ.. ನೀನು ವಿಧಿಯ ಕೈಯ್ಯಲಿರುವ ಜಾಗಕೆ
ಸಾವು ಬರುವ ಮುನ್ನ ನುಡಿವೆ ಜಾಗ್ರತೆ

ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ

ಚಿತ್ರ: ರೌಡಿ MLA (1991)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ರೂಪ್ ತೇರಾ ಮಸ್ತಾನ ಪ್ಯಾರ್ ಮೇರಾ ದೀವಾನ
ಈ ಇರುಳಿನಲಿ ತಂಗಾಳಿಯಲಿ ನೀ ಸರಿ ವಿರಹ
ನೀ ಸರಿ ವಿರಹ

ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ರೂಪ್ ತೇರಾ ಮಸ್ತಾನ ಪ್ಯಾರ್ ಮೇರಾ ದೀವಾನ
ಈ ಇರುಳಿನಲಿ ತಂಗಾಳಿಯಲಿ ನೀ ಸರಿ ವಿರಹ
ನೀ ಸರಿ ವಿರಹ

ಈ.. ಅಂದಭಾರ, ಚಂದಭಾರ
ಆಸೆಭಾರ, ಇಳಿಸುಬಾರಾ...
ಹಾ.. ಮಿನುಗುತಾರೆ, ಕುಲುಕುತಾರೆ
ಬಳುಕುತಾರೆ, ಎಲ್ಲಾತಾರೆ..
ಈ ಸೆರೆ ಕನ್ಯಾಸೆರೆ
ಈ ಹೊರೆ ಭೂವೀಹೊರೆ
ಸಹಿಸೆನು ಸಹಿಸೆನು ಸಹಿಸೆನು ಈ ಹೊರೆ ಸಹಿಸೆ ನಾ
ಸೈರಣೇ ಸೈರಣೇ ಇದ್ದರೇ ಸಂತಸ ತರುವೆ ನಾ

ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ

ಹಾ... ನಿದ್ದೆಯಲ್ಲಿ ಸೌಖ್ಯವಿಲ್ಲ
ಊಟದಲ್ಲಿ ಸ್ವಾದವಿಲ್ಲ
ಹೆ, ಬಾ... ಒಂಟಿಬಾಳು ಸಾಲಲಿಲ್ಲ
ಬ್ರಹ್ಮಚಾರ್ಯ ಹೊಂದಲಿಲ್ಲ
ಸ್ವಾಗತ, ಸುಸ್ವಾಗತ
ಹಾಸಿಗೆ ಹೂವಾಯಿತಾ
ಮರೆಯೆನು ಮರೆಯೆನು ಮರೆಯೆನು ಈದಿನ ಮರೆಯೆನಾ
ಮರೆತರೆ ಮರೆತರೆ ಬರುವೆನು ಪ್ರತೀದಿನ ಹೀಗೆ ನಾ

ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ರೂಪ್ ತೇರಾ ಮಸ್ತಾನ ಪ್ಯಾರ್ ಮೇರಾ ದೀವಾನ
ಈ ಇರುಳಿನಲಿ ತಂಗಾಳಿಯಲಿ ನೀ ಸರಿ ವಿರಹ
ನೀ ಸರಿ ವಿರಹ

ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ

ಚಿತ್ರ: ಮಣ್ಣಿನ ದೋಣಿ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ
ಮನ ಹರೆಯದ ನದಿಯಾಗಿದೆ.. ಓ..
ತನು ಬದುಕಿನ ಕಡಲಾಗಿದೆ

ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ
ಮನ ಹರೆಯದ ನದಿಯಾಗಿದೆ.. ಓ..
ತನು ಬದುಕಿನ ಕಡಲಾಗಿದೆ

ಮೊದಲನೇ ನೋಟ ಮದನಮಳೆ
ಮೊದಲನೇ ಸ್ಪರ್ಶ ರತಿಯಮಳೆ
ಮೊದಲನೇ ಮಾತು ಕವನಮಳೆ
ಮೊದಲನೇ ನಗುವು ಹುಣ್ಣಿಮೆಮಳೆ
ತುಂತುರು ತುಂತುರು ಮಳೆಯಲಿ ಮೊದಲನೇ ಮಿಲನ
ಮಳೆಯ ಮಣ್ಣಿನ ಮದುವೆಲಿ ಬೆರೆತವು ನಯನ
ಗುಡಿಸಿದವು ಗುಡುಗುಗಳು
ಬೆಡಗಿದವು ಮಿಂಚುಗಳು
ಮಳೆಯ ಹಾಡ ಮರೆಯ ಬಲ್ಲದೇ...

ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ
ಮನ ಹರೆಯದ ನದಿಯಾಗಿದೆ.. ಓ..
ತನು ಬದುಕಿನ ಕಡಲಾಗಿದೆ

ಆಲಿಂಗನಕೆ ಭರಣಿಮಳೆ
ಸಿಹಿ ಚುಂಬನಕೆ ಸ್ವಾತಿಮಳೆ
ವಸಗೆಯ ಹಗಲು ಹಸ್ತಮಳೆ
ಬೆಸುಗೆಯ ರಾತ್ರಿ ಚಿತ್ತಮಳೆ
ಮಧುರ ಮಧುರ ಮೈತ್ರಿಯ ಮಳೆಯಲಿ ಶಯನ
ಒಡಲ ಒಳಗೆ ಉರಿಯುವ ಬಯಕೆಯ ಶಮನ
ಮುಂಗಾರು ಹಿಂಗಾರು
ಮಳೆ ನೀರೇ ಪನ್ನೀರು
ಮಳೆಯ ಹಾಡ ಮರೆಯ ಬಲ್ಲದೇ...

ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ
ಮನ ಹರೆಯದ ನದಿಯಾಗಿದೆ.. ಓ..
ತನು ಬದುಕಿನ ಕಡಲಾಗಿದೆ

ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ
ಮನ ಹರೆಯದ ನದಿಯಾಗಿದೆ.. ಓ..
ತನು ಬದುಕಿನ ಕಡಲಾಗಿದೆ

ದುಂಬಿ ದುಂಬಿ ದುಂಬಿ ದುಂಬಿ ದೂರ ಹೋಗೋ ದುಂಬಿ

ಚಿತ್ರ: ಮುಂಜಾನೆಯ ಮಂಜು (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ದುಂಬಿ ದುಂಬಿ ದುಂಬಿ ದುಂಬಿ ದೂರ ಹೋಗೋ ದುಂಬಿ
ಆಯಿತು ಸಾಯಂಕಾಲ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಇಂದು ರಾತ್ರಿ ಇಲ್ಲೇ
ನಿಂತರೇ ಅನುಕೂಲ
ಆಗದು ಹೋಯ್.. ಆಗದು ಹೋಯ್
ಹಾಗಾಗದು ಹೋಯ್.. ಹಾಗಾಗದು ಹೋಯ್
ಜಾಣನಾಗಿ ಊರು ಸೇರಿಕೋ

ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಇಂದು ರಾತ್ರಿ ಇಲ್ಲೇ
ನಿಂತರೇ ಅನುಕೂಲ
ದುಂಬಿ ದುಂಬಿ ದುಂಬಿ ದುಂಬಿ ದೂರ ಹೋಗೋ ದುಂಬಿ
ಆಯಿತು ಸಾಯಂಕಾಲ
ಆಗದು ಹೋಯ್.. ಆಗದು ಹೋಯ್
ಹಾಗಾಗದು ಹೋಯ್.. ಹಾಗಾಗದು ಹೋಯ್
ನನ್ನ ಮುತ್ತ ಒತ್ತೆ ಇಟ್ಟುಕೋ

ಊರೇಕೆ ದುಂಬಿಗೆ, ಸೂರೇಕೆ ದುಂಬಿಗೆ
ಮಲ್ಲಿಗೆ ಮನೆದುಂಬಿ ಹಾಡೋ ಜಾಗ
ಹಾಡಿನ ಮಧ್ಯ ಜೇನು ಹೀರೋ ಯೋಗ
ಜಾಣ ಜಾಣ ನೀನು ಹಾಡಿನ ಬಾಣ ಹೂಡುವೆ
ಜೀವ ಜಾರುವಾಗ ಅರ್ಧ ಪ್ರಾಣ ನೀಡುವೆ
ಅಂಜುವೆ ಏಕೆ ಮಲ್ಲಿ, ಕಂಪಿನ ತೋಟದಲ್ಲಿ
ಉತ್ತಮನಾಗಿ ಓಡಾಡುವೆ..
ಮಾನವ ಮಲ್ಲಿ ನಾನು ನಾಚಿಕೆ ಕಾಡದೇನು
ಕತ್ತಲೆಗಾಗಿ ನಾ ಬೇಡುವೆ..
ಆಗದು ಹೋಯ್.. ಆಗದು ಹೋಯ್
ಹಾಗಾಗದು ಹೋಯ್.. ಹಾಗಾಗದು ಹೋಯ್
ಕಣ್ಣುಮುಚ್ಚಿ ಕತ್ತಲೆಂದುಕೋ

ದುಂಬಿ ದುಂಬಿ ದುಂಬಿ ದುಂಬಿ ದೂರ ಹೋಗೋ ದುಂಬಿ
ಆಯಿತು ಸಾಯಂಕಾಲ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಇಂದು ರಾತ್ರಿ ಇಲ್ಲೇ
ನಿಂತರೇ ಅನುಕೂಲ

ಬಾ ನನ್ನ ಹತ್ತಿರ, ಬಾ ಇನ್ನೂ ಹತ್ತಿರ
ಹತ್ತಿರ ಬಂದಮೇಲೆ ಹೆಚ್ಚಬೇಡ
ನೆಚ್ಚಿನ ರಾಸಲೀಲೆ ನೆನ್ಚಬೇಡ
ಮಾತು ಮತ್ತು ಮುತ್ತು ಈಗ ಸಾಲ ನೀಡು
ಅಂತರಂಗ ಒಪ್ಪಿದಾಗ ಪ್ರೀತಿಮಾಡು
ತಣ್ಣನೇ ಗಾಳಿಯಂತ ಸಂಜೆಯ ರಂಗಿನಂತ
ದುಂಬಿಯ ಹಾಡಿಗೆ ಸೋಲೆನು
ಮಾಗಿಯ ಕಾಲದಂತ ಮಾವಿನ ಹೂವಿನಂತ
ಹೆಣ್ಣಿನ ಕಂಪು ನಾ ತಾಳೆನು
ಆಗದು ಹೋಯ್.. ಆಗದು ಹೋಯ್
ಹಾಗಾಗದು ಹೋಯ್.. ಹಾಗಾಗದು ಹೋಯ್
ಹಣ್ಣು ತಿಂದು ಹೆಣ್ಣು ಎಂದುಕೋ

ದುಂಬಿ ದುಂಬಿ ದುಂಬಿ ದುಂಬಿ ದೂರ ಹೋಗೋ ದುಂಬಿ
ಆಯಿತು ಸಾಯಂಕಾಲ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಇಂದು ರಾತ್ರಿ ಇಲ್ಲೇ
ನಿಂತರೇ ಅನುಕೂಲ

ಕೋಗಿಲೆಯೇ ಕ್ಷೇಮವೇ

ಚಿತ್ರ: ಮಣ್ಣಿನ ದೋಣಿ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಜಾನಕಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ..

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ
ಏಳಿರಿ ಏಳಿರಿ ಮೇಲೆ
ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ ತೊಳೆದು ಬಂದು ಹಾಡಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ

ಕಾನನದಲಿ ಬೀಸುವ ಗಾಳಿಗೆ
ಎಂದು ಆಲಸ್ಯ ಬಂದಿದೆ ಹೇಳಿ
ಬೆಟ್ಟಗಳಲ್ಲಿ ಓಡುವ ನದಿಯು
ಎಂದು ದಣಿದು ನಿಂತಿದೆ ಕೇಳಿ
ತಾರೆಗಳಂತೆ ಮೂಡುವ ಮೇಘಗಳಿಗೆ
ಬೇಸರ ಬಂದಿತ್ತೆ ಕೇಳಿ
ವೀರರ ಕೈಲಿ ಬಗ್ಗದ ಮಳೆಯ ಬಿಲ್ಲು
ಬರೆನು ಎಂಬುದೆ ಹೇಳಿ
ಭುವನ ತಿರುಗಿದೆ.. ಓ.. ಗಗನ ಚಲಿಸಿದೆ
ಕವನ ಕಡೆದಿದೆ.. ಓ.. ಬದುಕು ಬರೆಸಿದೆ
ಏಳಿರಿ ಏಳಿರಿ ಮೇಲೆ
ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ ತೊಳೆದು ಬಂದು ಹಾಡಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ

ಜಾಣರ ಗುಂಪು ಕಂಪಿನ ತೋಟಕ್ಕೆ ಹಾರಿ
ಸೊಂಪಿನ ಜೇನನ್ನು ತಂದವು
ಪುಂಡರ ಗುಂಪು ಹುಳಿಯ ತೋಪಿಗೆ ನುಗ್ಗಿ
ಹೊಟ್ಟೆಯ ಬಿರಿಯ ತಿಂದವು
ತಪ್ಪಲಿನಲ್ಲಿ ರಂಗಿನ ಅಟ್ಟೆಯ ಹೊಯ್ದ
ಪತಂಗ ಪಡೆಯ ಪಯಣ
ಕೆಚ್ಚಲಿನಲ್ಲಿ ಗೋವಿನ ಕೂಸಿನ
ದೊಡ್ಡ ಕಣ್ಣಿನ ಮೆಚ್ಚಿನ ಮೌನ
ಕಮಲ ಕುಳಿತೆಯಾ.. ಓ.. ಅಳಿಲೆ ಅವಿತೆಯಾ
ನವಿಲೆ ನಿಂತೆಯಾ.. ಓ.. ಕನಸೆ ಮರೆತೆಯಾ
ಏಳಿರಿ ಏಳಿರಿ ಮೇಲೆ
ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ ತೊಳೆದು ಬಂದು ಹಾಡಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ

ನಂದು ನಿಂದು ಇಂದು ಒಂದೇ ಪೋಯಮ್ಮು

ಚಿತ್ರ: ಮಣ್ಣಿನ ದೋಣಿ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಓ ಓ ಓ ಓ ಓ ಓ ಓ ಓ
ಓ ಓ ಓ ಓ ಓ ಓ ಓ ಓ

ನಂದು ನಿಂದು ಇಂದು ಒಂದೇ ಪೋಯಮ್ಮು
ಓ ನಂದು ನಿಂದು ಇಂದು ಒಂದೇ ರಿದಮ್ಮು
ರಿದಂ ರಿದಂ ಇದೆಂಥಾ ರಿದಂ
ಪೋಯಂ ಪೋಯಂ ಇದೆಂಥಾ ಪೋಯಂ

ನಂದು ನಿಂದು ಇಂದು ಒಂದೇ ಪೋಯಮ್ಮು
ಓ ನಂದು ನಿಂದು ಇಂದು ಒಂದೇ ರಿದಮ್ಮು
ರಿದಂ ರಿದಂ ಇದೆಂಥಾ ರಿದಂ
ಪೋಯಂ ಪೋಯಂ ಇದೆಂಥಾ ಪೋಯಂ

ಓ ಓ ಓ ಓ ಓ ಓ ಓ
ಇದು ಮದುವೆಮನೆ
ಪೋಯಂ ಪೋಯಂ ಪೋಯಂ
ಇದು ಒಸಗೆ ಮನೆ
ರಿದಂ ರಿದಂ ರಿದಂ
ಇದು ಹೇಗಾಯಿತು
ಸಡನ್ ಸಡನ್ ಸಡನ್
ಇದು ಏಕಾಯಿತು
ಹಿಡನ್ ಹಿಡನ್ ಹಿಡನ್
ಹಾ ಇದೆಂಥ ಟಚ್ಚಿಂಗ್
ಪ್ರಹಾರ ಪ್ರಹಾರ..
ಇದೆಂಥ ಕಿಸ್ಸಿಂಗ್
ಹೆಜ್ಜೇನ ಭೋಜನ

ನಂದು ನಿಂದು ಇಂದು ಒಂದೇ ಪೋಯಮ್ಮು
ಓ ನಂದು ನಿಂದು ಇಂದು ಒಂದೇ ರಿದಮ್ಮು
ರಿದಂ ರಿದಂ ಇದೆಂಥಾ ರಿದಂ
ಪೋಯಂ ಪೋಯಂ ಇದೆಂಥಾ ಪೋಯಂ

ಇಂದು ಇಂಪಾಗಿದೆ
ಸಿಂಗಿಂಗ್ ಸಿಂಗಿಂಗ್ ಸಿಂಗಿಂಗ್
ಇಂದು ಹೊಸದಾಗಿದೆ
ಈವ್ನಿಂಗ್ ಈವ್ನಿಂಗ್ ಈವ್ನಿಂಗ್
ಇಂದು ನಮಗಾಗಿದೆ
ವೆಡ್ಡಿಂಗ್ ವೆಡ್ಡಿಂಗ್ ವೆಡ್ಡಿಂಗ್
ಇಂದು ನಮಗೆ ಇದೆ
ಬೆಡ್ಡಿಂಗ್ ಬೆಡ್ಡಿಂಗ್ ಬೆಡ್ಡಿಂಗ್
ಇದೆಂಥಾ ಫಿಗರ್
ಅಜಂತಾ ಎಲ್ಲೋರ
ಇದೆಂಥಾ ಪವರ್
ಶರಾವತಿ ಶರಾವತಿ

ನಂದು ನಿಂದು ಇಂದು ಒಂದೇ ಪೋಯಮ್ಮು
ಓ ನಂದು ನಿಂದು ಇಂದು ಒಂದೇ ರಿದಮ್ಮು
ರಿದಂ ರಿದಂ ಇದೆಂಥಾ ರಿದಂ
ಪೋಯಂ ಪೋಯಂ ಇದೆಂಥಾ ಪೋಯಂ

ಓ ಓ ಓ ಓ ಓ ಓ ಓ

ಶಿವ ಶಿವ ಇವ ಶಿವ

ಚಿತ್ರ: ಪುರುಷೋತ್ತಮ (1992)
ಸಾಹಿತ್ಯ- ಸಂಗೀತ: ಹಂಸಲೇಖ
ಗಾಯಕರು: ಡಾII ರಾಜ್ ಕುಮಾರ್

ಶಿವ ಶಿವ ಇವ ಶಿವ, ಶಿವ ಶಿವ ಇವ ಶಿವ
ಸದಾ ಜಯ ತೊಳಲ್ಲಿರುವ ಗಂಡು ಶಿವ
ನಯ ಭಯ ಬಾಳಲ್ಲಿರುವ ಗಂಡು ಶಿವ
ಹೇ ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
ಶಿವ ಶಿವ ಇವ ಶಿವ, ಶಿವ ಶಿವ ಇವ ಶಿವ
ಸದಾ ಜಯ ತೊಳಲ್ಲಿರುವ ಗಂಡು ಶಿವ
ನಯ ಭಯ ಬಾಳಲ್ಲಿರುವ ಗಂಡು ಶಿವ
ಹೇ ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
ಶಿವ ಶಿವ ಇವ ಶಿವ, ಶಿವ ಶಿವ ಇವ ಶಿವ

ಹಗಲುರಾತ್ರಿ ದುಡಿದು ದುಡಿದು ದಣಿದುಬಂದ ಹೃದಯಗಳಿಗೆ
ತಂಪನೆರೆವ ಸೇವಕ
ಬೆವರ ನೀರ ಹರಿಸಿ ಹರಿಸಿ ಬಳಲಿಬಂದ ಮನಸುಗಳಿಗೆ
ಇಂಪನಿಡುವ ಗಾಯಕ
ಬದತನದಲಿ ಬೆರೆಯುವೆ, ಸಿಹಿಕಹಿಯಲಿ ಉಳಿಯುವೆ
ಶ್ರಮಿಸುವ ರಸಋಷಿಗಳಜೊತೆ ಕುಣಿಯುತ ದಿನ ಕಳೆಯುವೆ
ದುಡಿದು ದುಡಿದು ಬಡವರಾದ ಕೆಲಸಗಾರ ಬಂಧುಗಳಿಗೆ
ನ್ಯಾಯಕೇಳೋ ನಾಯಕ
ಕನಸುಕಂಡು ಕುರುಡರಾಗಿ ಕರುಣೆಬಯಸೋ ಕಾರ್ಮಿಕರಿಗೆ
ಉಸಿರುನಿಡೋ ಮಾಂತ್ರಿಕ
ಕನಸುಗಳನು ತೆರೆಯುವೆ, ಮನಸುಗಳನು ನಗಿಸುವೆ
ಶ್ರಮಿಸುವ ರಸಋಷಿಗಳಜೊತೆ ಕುಣಿಯುತ ದಿನ ಕಳೆಯುವೆ
ಸದಾ ಜಯ ತೊಳಲ್ಲಿರುವ ಗಂಡು ಶಿವ
ನಯ ಭಯ ಬಾಳಲ್ಲಿರುವ ಗಂಡು ಶಿವ
ಹೇ ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
ಶಿವ ಶಿವ ಇವ ಶಿವ, ಶಿವ ಶಿವ ಇವ ಶಿವ

ದಾಸ್ಯಹೋಗಿ ಹಸಿವು ಉಳಿದು, ನಮ್ಮನಾಡ ಬಡವನೀಗ
ಒಂದು ಯಂತ್ರಮಾನವ
ಕೆಲಸಹೆಚ್ಚು ಕೂಲಿಕಡಿಮೆ, ನಮ್ಮನಾಡ ಧನಿಕನೀಗ
ಒಬ್ಬ ಕ್ರೂರದಾನವ
ಬರಿಬವಣೆಯ ಬೆಳೆವರು, ಸಂಘಟನೆಯ ಮುರಿವರು
ಶ್ರಮಿಸುವ ಕಡುಗಲಿಗಳ ಕಥೆ ಕಂಬನಿಯಲಿ ಬರೆವರು
ಏನೇ ಇರಲಿ, ಏನೇ ಬರಲಿ, ನಮ್ಮ ಜನದ ಶಾಂತಿಸುಖದ
ಕಾಲವೊಂದು ಮುಂದಿದೆ
ತುಳಿತವಿರಲಿ, ಕೊರೆತವಿರಲಿ ನಮ್ಮ ಜಯದ ಬೆಳ್ಳಿದಿನದ
ಘಳಿಗೆ ಮುಂದೆ ಬರಲಿದೆ
ತೋಳ್ಬಲವನು ಬಳಸುವ, ತಾಯ್ನೆಲವನು ಉಳಿಸುವ
ತಿರುಗುವ ಭೂಮಂಡಲದಲಿ ನಮ್ಮ ಧ್ವಜವ ನಿಲಿಸುವ
ಸದಾ ಜಯ ತೊಳಲ್ಲಿರುವ ಗಂಡು ಶಿವ
ನಯ ಭಯ ಬಾಳಲ್ಲಿರುವ ಗಂಡು ಶಿವ
ಹೇ ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
ಶಿವ ಶಿವ ಇವ ಶಿವ, ಇವ ಶಿವ ಶಿವ ಇವ
ಸದಾ ಜಯ ತೊಳಲ್ಲಿರುವ ಗಂಡು ಶಿವ
ನಯ ಭಯ ಬಾಳಲ್ಲಿರುವ ಗಂಡು ಶಿವ
ಹೇ ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ

ವಿಶ್ವ ವಿಶ್ವ ವಿಶ್ವಾಸವೇ ವಿಶ್ವ

ಚಿತ್ರ: ವಿಶ್ವ (1999)
ಸಾಹಿತ್ಯ- ಸಂಗೀತ: ನಾದಬ್ರಹ್ಮ
ಗಾಯಕರು: ಡಾII ರಾಜ್ ಕುಮಾರ್

ವಿಶ್ವ ವಿಶ್ವ ವಿಶ್ವ ವಿಶ್ವ .... II
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ.
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ

ಅನುರಾಗವೇ ಉಚ್ವಾಸವು, ಅನುರಾಗವೇ ನಿಶ್ವಾಸವು
ನ್ಯಾಯ ಇದರ ದೇಹ, ಸತ್ಯ ಇದರ ದಾಹ
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ

ಸತ್ಯಾನೆ ಉಸಿರಂತೆ ನ್ಯಾಯದೇವಿಗೆ, ಅವಳೆದೆಯ ಹಾಲಂತೆ  ಕಾನೂನಿಗೆ
ಸತ್ಯಾನೆ ಉಸಿರಂತೆ ನ್ಯಾಯದೇವಿಗೆ, ಅವಳೆದೆಯ ಹಾಲಂತೆ  ಕಾನೂನಿಗೆ
ಎದೆ ಹಾಲೇ ವಿಷವಾದರೆ ಉಳಿದೆಲ್ಲಿದೆ ಕಾನೂನಿಗೆ
ಕಾನೂನೇ ಕೊಲೆಯಾದರೆ  ಕಾವಲಾರೋ ಅಪರಾಧಿಗೆ
ಅಪರಾಧವೆ ದೊರೆಯಾದರೆ ಭಯವೆಲ್ಲಿದೆ ದಾನವತೆಗೆ,
ನೆಲೆ ಎಲ್ಲಿದೆ ಸಜ್ಜನರಿಗೆ, ಬೆಲೆ ಎಲ್ಲಿದೆ ಮಾನವತೆಗೆ
ನಂಬಿಕೆಗಳೇ ಉರುಳಾದರೆ, ಅಂಜಿಕೆಗಳೇ ನೆರಳಾದರೆ,
ನಂಬಿದವರೇ ಯಮರಾದರೆ, ಬರೀ ದ್ರೋಹವೆ ಜಗವಾದರೆ
ಧ್ರೋಹದುಸಿರಲೋಕದಲ್ಲಿ, ನರನ ಶ್ವಾಸಕೋಶದಲ್ಲಿ
ದೇವನಿರುವನೆಂಬಾ ವಿಶ್ವಾಸ ಉಳಿವುದೇ ...

ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ

ಜಗವೆಂದು ಸೆಣಸಾಡೋ ರಣರಂಗವೋ, ಸತ್ಯಕ್ಕೆ ಎಂದೆಂದು ಜಯಭೇರಿಯೋ
ಜಗವೆಂದು ಸೆಣಸಾಡೋ ರಣರಂಗವೋ, ಸತ್ಯಕ್ಕೆ ಎಂದೆಂದು ಜಯಭೇರಿಯೋ
ಸತ್ಯಕ್ಕೆ ಸಾವಿಲ್ಲ, ಧರ್ಮಕ್ಕೆ ದಣಿವಿಲ್ಲ,
ರಕ್ಕಸರ ನಿರ್ಮೂಲನ ಕದನಕ್ಕೆ ಕೊನೆಇಲ್ಲ
ಆಘಾತದ ಹೃದಯಕ್ಕೂ ಅನುಕಂಪದ ಅಲೆಇಲ್ಲಿದೆ,
ನೋವುಗಳನು ಹೂವಾಗಿಸೋ ಒಲವೆಂಬುವ ಜೇನಿಲ್ಲಿದೆ
ಅನ್ಯಾಯದ ಅವತಾರಕೆ ಪ್ರತೀಘಳಿಗೆಯು ಸಾವಿಲ್ಲಿದೆ,
ಧರ್ಮಗಳ ಪಡೆಇಲ್ಲಿದೆ, ನಿಜದೈವದ ನೆರಳಿಲ್ಲಿದೆ
ಎಲ್ಲ ಇರುವ ಲೋಕದಲ್ಲಿ ಕಾಣದಿರುವ ದೇವರಲ್ಲಿ
ವಿಶ್ವಾಸವೇ ಆತ್ಮಧಯುಧ

ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ
ಅನುರಾಗವೇ ಉಚ್ವಾಸವು, ಅನುರಾಗವೇ ನಿಶ್ವಾಸವು
ನ್ಯಾಯ ಇದರ ದೇಹ, ಸತ್ಯ ಇದರ ದಾಹ
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ

ಈ ಸಾಗರ ಆ ನೇಸರ

ಚಿತ್ರ: ತುಂಗಭದ್ರ (1995)
ಸಾಹಿತ್ಯ - ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ
ಗಂಧದ ಸನ್ನಿಧಿಯೊಳಗೆ ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ
ಮಲ್ಲಿಗೆ ಮಾಲಿನಿಯೊಳಗೆ ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಈ ಸಾಗರ ಆ ನೇಸರ
ತಾಪಕೂ ತಂಪಿಗೂ ತಪಿಸುವ ದಿನವಿದು
ಈ ಯೌವ್ವನ ಈ ಹೂಮನ
ಕಾಮಕೂ ಪ್ರೇಮಕೂ ತಪಿಸುವ ಕ್ಷಣವಿದು
ಧಗ ಧಗ ಮೇಲೆ ಕುತ ಕುತ ಒಳಗೆ
ಹರೆಯಕೆ ತಂಪೆರಿಯೇ
ಢವ ಢವ ಒಳಗೆ ಥಕ ಥಕ ಮೇಲೆ
ಪ್ರಣಯಕೆ ನೀ ಕರಿಯೇ

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ
ಮಲ್ಲಿಗೆ ಮಾಲಿನಿಯೊಳಗೆ ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ
ಗಂಧದ ಸನ್ನಿಧಿಯೊಳಗೆ ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಈ ಹರೆಯದ ಈ ಓಲೆಯು
ಕಣ್ಣಿಗೆ ಕಾಣದು ಕಾಣದೇ ಉರಿಸಿದೆ
ಈ ಆಸೆಯು ಮಾತಾಡದೆ
ಹೇಳದೇ ಕೇಳದೇ ಹಸಿವಲಿ ಬಳಲಿದೆ
ಕರೆದರೂ ಬೆಂಕಿ ಸರಿದರೂ ಬೆಂಕಿ
ಬೆಂಕಿಯ ಬಲೆಯೊಳಗೆ
ಕಂಡರೂ ಹಸಿವು ಉಂಡರೂ ಹಸಿವು
ಹಸಿವಿನ ಕಲೆಯೊಳಗೆ

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ
ಗಂಧದ ಸನ್ನಿಧಿಯೊಳಗೆ ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ
ಮಲ್ಲಿಗೆ ಮಾಲಿನಿಯೊಳಗೆ ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಪ್ರೇಮವು ಬೇಡ ಪ್ರೇಯಸಿ ಬೇಡ

ಚಿತ್ರ: ಅನಂತ ಪ್ರೇಮ (1990)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯನ: ಕೆ.ಜೆ.ಯೇಸುದಾಸ್

ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ
ಆಸೆಯು ಬೇಡ ನಿರಾಸೆಯು ಬೇಡ, ಕನಸೆ ಸಾಕೆನಗೆ
ಕಣ್ಣನು ನಂಬಿ ಹಾರುವ ದುಂಬಿ, ಮಾರುಹೋಗಬೇಡ ನೀನು ಕಾಗದದ ಹೂವಿಗೆ

ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ

ನಿಜವೇ ನೀ ದೂರ.. ನಿನ್ನ ಕಾಣಿಕೆ ಬಲು ಭಾರ.. ನಾನಿರುವೆ ನಿನಗೆ ದೂರ...
ಈ ಭ್ರಮೆಗಳ ಆಸರೆ ಸಾಕೆನಗೆ
ಬೆರೆಯುವ ಮಾತೇಕೆ.. ಬೇರಾಗುವ ಗೋಜೇಕೆ.. ಜನ ನೋಡಿ ನಗುವುದೇಕೆ..
ಕಹಿ ವಿಷಮಯ ಅನುಭವ ಸಾಕೆನಗೆ
ಹೃದಯವೇ ಕಲ್ಲಾದರೂ.. ಲೋಕವೇ ಮುಳ್ಳಾದರೂ..
ನಿಜದ ಬೆಂಕಿ ಮೇಲೆ ಇರುವೇ ನಾ

ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ

ನಂಜಿನ ಕಣ್ಣುಗಳು.. ಕನ್ನಡಿಯ ರೀತಿಯಲ್ಲ.. ನಿಜವನ್ನೇ ನುಡಿವುದಿಲ್ಲ
ಅತೀ ಆತುರ ಮನಸಿನ ಕಡುವೈರಿ
ಮಂಜಿನ ಪರದೆಗಳು.. ಸ್ಥಿರವಾಗಿ ಇರುವುದಿಲ್ಲ.. ಬೆಳಕನ್ನು ತಡೆವುದಿಲ್ಲ
ರವಿ ಬಂದರೆ ತೆರೆವುದು ತಾ ಜಾರಿ
ಬದುಕಿದು.. ಇರುವುದು.. ನೆನೆಯಲು.. ನೆರವಾಗಲು..
ಪರರ ಹಿತದ ಮೇಲೆ ಇರುವೆ ನಾ..

ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ
ಆಸೆಯು ಬೇಡ ನಿರಾಸೆಯು ಬೇಡ, ಕನಸೆ ಸಾಕೆನಗೆ
ಕಣ್ಣನು ನಂಬಿ ಹಾರುವ ದುಂಬಿ, ಮಾರುಹೋಗಬೇಡ ನೀನು ಕಾಗದದ ಹೂವಿಗೆ

ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ

ಸಂಕ್ರಾಂತಿ ಬಂತು

ಚಿತ್ರ: ಹಳ್ಳಿಮೇಷ್ಟ್ರು (1992)
ಸಾಹಿತ್ಯ - ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಎಸ್. ಜಾನಕಿ

ಸಂಕ್ರಾಂತಿ ಬಂತು.. ರತ್ತೋ ರತ್ತೋ
ಮನಸಲ್ಲಿ ಮನಸು.. ಬಿತ್ತೋ ಬಿತ್ತೋ

ಸುಮ್ ಸುಮ್ ಸುಮ್ ಸು ಸುಮ್ ಸುಮ್ ಸುಮ್ ಸುಮ್ ಸುಮ್

ಸಂಕ್ರಾಂತಿ ಬಂತು.. ರತ್ತೋ ರತ್ತೋ
ಮನಸಲ್ಲಿ ಮನಸು.. ಬಿತ್ತೋ ಬಿತ್ತೋ

ಎಳ್ಳುಬೆಲ್ಲ.. ಬೀರಾಯಿತು
ಕೊಟ್ಟು-ತೊಗೋ.. ಮಾತಾಯಿತು
ಮುತ್ತಾಯಿತು ಮತ್ತಾಯಿತು
ಮೈಯ್ಯಲ್ಲಿ ಏರುತಿದೆ ಮನ್ಮಥನ ರಂಗುಗಳು

ಸುಮ್ ಸುಮ್ ಸುಮ್ ಸು ಸುಮ್ ಸುಮ್ ಸುಮ್ ಸುಮ್ ಸುಮ್

ಸಂಕ್ರಾಂತಿ ಬಂತು.. ರತ್ತೋ ರತ್ತೋ
ಮನಸಲ್ಲಿ ಮನಸು.. ಬಿತ್ತೋ ಬಿತ್ತೋ
ಎಳ್ಳುಬೆಲ್ಲ.. ಬೀರಾಯಿತು
ಕೊಟ್ಟು-ತೊಗೋ.. ಮಾತಾಯಿತು
ಮುತ್ತಾಯಿತು ಮತ್ತಾಯಿತು
ಮೈಯ್ಯಲ್ಲಿ ಏರುತಿದೆ ಮನ್ಮಥನ ರಂಗುಗಳು

ಸುಮ್ ಸುಮ್ ಸುಮ್ ಸು ಸುಮ್ ಸುಮ್ ಸುಮ್ ಸುಮ್ ಸುಮ್
.....
ಸುಮ್ ಸುಮ್ ಸುಮ್ ಸು ಸುಮ್ ಸುಮ್ ಸುಮ್ ಸುಮ್ ಸುಮ್

ಹದಿನಾರು ದಾಟಿದ ಎಳೆಮೈಯಿ ಕೇಳಿದ
ಚೆಲುವ ಚೆಲುವ ನೀನೇನಾ
ದಿನಾರಾತ್ರಿ ಕಾಡಿದ ಕುಡಿಮೀಸೆ ಕೂಗಿದ
ಚೆಲುವೆ ಚೆಲುವೆ ನೀನೇನಾ
ಕಣ್ಣಿಗಿಟ್ಟ ಕಪ್ಪುಕಾಡಿಗೆ ಮೂಗಿಗಿಟ್ಟ ಕೆಂಪು ಮೂಗುತಿ
ನಡೆಸಿದ ಹುಡುಕಾಟ ನಿನಗೆ
ಅತ್ತ-ಇತ್ತ ಆಡೋ ಮನಸು ಚಿತ್ತಭಂಗ ಮಾಡೋ ಕನಸು
ನಡೆಸಿದ ಪರದಾಟ ನಿನಗೆ

ಮಹಾರಾಜ ನನ್ನ ಜೊತೆಗಾರ..
ಮಹಾರಾಣಿ ನನ್ನ ಜೊತೆಗಾತಿ..
ಸುಗ್ಗಿಕಾಲದಂತೆ.. ಸುಗ್ಗಿಹಾಡಿನಂತೆ
ನೀ ಬಂದೆ.. ನೀ ಬಂದೆ.. ನನ್ನ ಬಾಳಿಗೆ

ಸಂಕ್ರಾಂತಿ ಬಂತು.. ರತ್ತೋ ರತ್ತೋ
ಮನಸಲ್ಲಿ ಮನಸು.. ಬಿತ್ತೋ ಬಿತ್ತೋ
ಎಳ್ಳುಬೆಲ್ಲ.. ಬೀರಾಯಿತು,
ಕೊಟ್ಟು-ತೊಗೋ.. ಮಾತಾಯಿತು
ಮುತ್ತಾಯಿತು.. ಮತ್ತಾಯಿತು..
ಮೈಯ್ಯಲ್ಲಿ ಏರುತಿದೆ ಮನ್ಮಥನ ರಂಗುಗಳು

ಸುಮ್ ಸುಮ್ ಸುಮ್ ಸು ಸುಮ್ ಸುಮ್ ಸುಮ್ ಸುಮ್ ಸುಮ್

ಚಿತ್ತಾರ ಹಾಕುತ ರಂಗೋಲಿ ಹಾಕಿದೆ
ಪ್ರೀತಿಯ ಸುಗ್ಗಿಯ ಕಣದಲ್ಲಿ
ಸುವ್ವಾಲಿ ಹಾಡುತ ಕೋಲಾಟ ಸಾಗಿದೆ
ಪ್ರೀತಿಯ ರಾಶಿಯ ಎದುರಲ್ಲಿ
ಹೊ.. ಪುಟ್ಟಬಾಯಿ ಕೆಂಪು ಕುಂಚದ ತಿದ್ದಿತಿಡೊ ಮುದ್ದು ಚಿತ್ರದ
ಸೂಗಸಿಗೆ ಮನಸೋತೆ ಮರುಳೇ..
ಹೊಯ್.. ಗಾಳಿಗಿಷ್ಟು ಜಾಗವಿಲ್ಲದೆ ಅಪ್ಪಿಕೊಳ್ಳೋ ಹಳ್ಳಿ ಗಂಡಿದೆ
ಗಡುಸಿಗೆ ಬೆರಗಾದೆ ಮರುಳ..

ಮಹಾರಾಣಿ ನನ್ನ ಜೊತೆಗಾತಿ..
ಮಹಾರಾಜ ನನ್ನ ಜೊತೆಗಾರ..
ಸುಗ್ಗಿಕಾಲದಂತೆ.. ಸುಗ್ಗಿಹಾಡಿನಂತೆ
ನೀ ಬಂದೆ.. ನೀ ಬಂದೆ.. ನನ್ನ ಬಾಳಿಗೆ

ಸಂಕ್ರಾಂತಿ ಬಂತು.. ರತ್ತೋ ರತ್ತೋ
ಮನಸಲ್ಲಿ ಮನಸು.. ಬಿತ್ತೋ ಬಿತ್ತೋ
ಎಳ್ಳುಬೆಲ್ಲ.. ಬೀರಾಯಿತು,
ಕೊಟ್ಟು-ತೊಗೋ.. ಮಾತಾಯಿತು
ಮುತ್ತಾಯಿತು.. ಮತ್ತಾಯಿತು..
ಮೈಯ್ಯಲ್ಲಿ ಏರುತಿದೆ ಮನ್ಮಥನ ರಂಗುಗಳು

ಸುಮ್ ಸುಮ್ ಸುಮ್ ಸು ಸುಮ್ ಸುಮ್ ಸುಮ್ ಸುಮ್ ಸುಮ್

ತಂದೆ ಕೊಡಿಸೊ ಸೀರೆ ಮದುವೆ ಆಗೋವರೆಗೆ

ಚಿತ್ರ:-ಮಿಡಿದ ಹೃದಯಗಳು(1993)
ಸಾಹಿತ್ಯ-ಸಂಗೀತ:-ಹಂಸಲೇಖ
ಗಾಯಕರು:-ಡಾ.ರಾಜ್ ಕುಮಾರ್

ತಂದೆ ಕೊಡಿಸೊ ಸೀರೆ ಮದುವೆ ಆಗೋವರೆಗೆ
ತಾಯಿ ಉಡಿಸೋ ಸೀರೆ ತಾಯಿ ಆಗೋವರೆಗೆ
ಬಂಧು ಕೊಡಿಸೋ ಸೀರೆ ಬಣ್ಣಹೋಗೊ ವರೆಗೆ
ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ
ಹೆಣ್ಣಿನ ಜನುಮಕಳೆವವರೆಗೆ ಮಣ್ಣಿನ ಮಮತೆ ಮರೆವವರೆಗೆ

ಭೂಮಿಎಂದು ಜನ ಭಾರ ಎನುವುದಿಲ್ಲ
ತಾಯಿ ಎಂದು ತನ್ನ ಮಗುವ ಬಿಡುವುದಿಲ್ಲ
ಇದ್ದು ಸತ್ತ ಆಗೆ ಮಗುವ ಬಿಟ್ಟ ತಾಯಿ
ತಾಯಿಗಿಂತ ಇಲ್ಲಿ ದೊಡ್ಡದಿಲ್ಲ ಸ್ಥಾಯಿ
ಸೀತಮಾತೆ ಸ್ಥಾನ ಗಂಡನ ಅನುಸರಿಸಿದರೆ
ಗಂಗೆ ಗೌರಿ ಸ್ಥಾನ ಕಥೆಯ ಅನುಕರಿಸಿದರೆ
ಗಂಡ ಹೆಂಡತಿ ನಂಟು ಬ್ರಹ್ಮ ಹಾಕಿದ ಗಂಟು
ಹುಟ್ಟು ಸಾವಿನ ನಂಟು ಹೃದಯ ಮಿಡಿವವರೆಗೆ
ಪ್ರೇಮದ ತುತ್ತತುದಿಯವರೆಗೆ ಬಾಳಿನಗುಟ್ಟು ತಿಳಿವವರೆಗೆ

ಒಳ್ಳೆ ಮನಸು ಇದ್ದರೇನೆ ಕಷ್ಟವಂತೆ
ಕರಗೋ ಹೃದಯ ಇದ್ದರಂತೂ ಚಿಂತೆಯಂತೆ
ಪ್ರೀತಿ ಹರಿವ ನೀರು ಒಡೆದ ಮನಸಿನಲ್ಲಿ
ಬಾಳು ಕಣ್ಣ ನೀರು ಮಿಡಿದ ಹೃದಯದಲ್ಲಿ
ತಂದೆ ಕೊಡಿಸೊ ಸೀರೆ ಮದುವೆ ಆಗೋವರೆಗೆ
ತಾಯಿ ಉಡಿಸೋ ಸೀರೆ ತಾಯಿ ಆಗೋವರೆಗೆ
ಬಂಧು ಕೊಡಿಸೋ ಸೀರೆ ಬಣ್ಣಹೋಗೊ ವರೆಗೆ
ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ
ಹೆಣ್ಣಿನ ಜನುಮಕಳೆವವರೆಗೆ ಮಣ್ಣಿನ ಮಮತೆ ಮರೆವವರೆಗೆ

ಚಿಗುರು ಮೀಸೆಯ ಹುಡುಗ ನಿನ್ನ ಮೆಚ್ಚಿಕೊಂಡೆ ನಾನು

ಚಿತ್ರ: ಶಿವರಾಜ್ (1991)
ಸಾಹಿತ್ಯ - ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು

ಚಿಗುರು ಮೀಸೆಯ ಹುಡುಗ ನಿನ್ನ ಮೆಚ್ಚಿಕೊಂಡೆ ನಾನು
ತುಂಟ ನಗುವಿನ ತುಡುಗ ನಿನ್ನ ಹಚ್ಚಿಕೊಂಡೆ ನಾನು
ಮೆಚ್ಚಿಕೊಂಡೆ ನಾನು ನಿನ್ನ ಹಚ್ಚಿಕೊಂಡೆ ನಾನು
ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು
ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು

ಬೊಗಸೆ ಕಣ್ಣಿನ ಹುಡುಗಿ ನಿನ್ನ ಮೆಚ್ಚಿಕೊಂಡೆ ನಾನು
ಗಿಣಿಯ ಮೂಗಿನ ಬೆಡಗಿ ನಿನ್ನ ಹಚ್ಚಿಕೊಂಡೆ ನಾನು
ಮೆಚ್ಚಿಕೊಂಡೆ ನಾನು ನಿನ್ನ ಹಚ್ಚಿಕೊಂಡೆ ನಾನು
ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು
ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು

ಆ ದಿಂಬಿಗೆ ತಲೆಕೊಟ್ಟರೆ ಅರೆನಿದ್ದೆಲಿ ನಿನ್ನ ಯೋಚನೆ
ಬೆಳಗಾದರೆ ಕಣ್ಬಿಟ್ಟರೆ ನಿನ್ನ ಹೆಸರಲಿ ದಿನ ಪ್ರಾರ್ಥನೆ
ಕಾಣೆಯಾಯ್ತಮ್ಮ ಬೀಗದಿ ಸೆಳೆಯಮ್ಮ
ಪೋರಿ ನಿನ್ನ ಮನಸಿನ ಕೋಣೆಯಲಿ
ನನ್ನಯ ಹೃದಯ ಕೂಡಿಇಟ್ಟೆ ತಿಳಿಯದೇ ಮರುವಿನಲಿ

ಚಿಗುರು ಮೀಸೆಯ ಹುಡುಗ ನಿನ್ನ ಮೆಚ್ಚಿಕೊಂಡೆ ನಾನು
ಗಿಣಿಯ ಮೂಗಿನ ಬೆಡಗಿ ನಿನ್ನ ಹಚ್ಚಿಕೊಂಡೆ ನಾನು
ಮೆಚ್ಚಿಕೊಂಡೆ ನಾನು ನಿನ್ನ ಹಚ್ಚಿಕೊಂಡೆ ನಾನು
ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು
ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು

ಆಗುಂಬೆಯ ಆ ಕೊಂಬೆಯ ತುದಿಯಂಚಲಿ ಕುಹೂ ಧ್ವನಿ
ಅದ ನೋಡಲು ಗಿರಿ ಏರಲು ಕೂ ಎನ್ನುತಾ ಅಲ್ಲಿದ್ದೆ ನೀ
ಏನು ಹೇಳಲಿ ಹೇಗೆ ಹೇಳಲಿ ಜಾರಿಹೋಗೋ ಸೂರ್ಯನು ನೀನೆಂದು
ಪ್ರೇಮದ ಮತ್ತಲಿ ಕೂಗಿಕೊಂಡೆ ಮರಗಳ ಮೇಲಿಂದು

ಚಿಗುರು ಮೀಸೆಯ ಹುಡುಗ ನಿನ್ನ ಮೆಚ್ಚಿಕೊಂಡೆ ನಾನು
ತುಂಟ ನಗುವಿನ ತುಡುಗ ನಿನ್ನ ಹಚ್ಚಿಕೊಂಡೆ ನಾನು
ಮೆಚ್ಚಿಕೊಂಡೆ ನಾನು ನಿನ್ನ ಹಚ್ಚಿಕೊಂಡೆ ನಾನು
ಐ ಲವ್ ಯು.. ಲವ್ ಯು, ಐ ಲವ್ ಯು ಲವ್ ಯು ಲವ್ ಯು.. ಲವ್ ಯು
ಐ ಲವ್ ಯು.. ಲವ್ ಯು, ಐ ಲವ್ ಯು ಲವ್ ಯು ಲವ್ ಯು.. ಲವ್ ಯು

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು

ಚಿತ್ರ: ರಾಮಾಚಾರಿ (1991)
ಸಾಹಿತ್ಯ - ಸಂಗೀತ: ನಾದಬ್ರಹ್ಮ
ಗಾಯಕರು: ಮನು

ಸುವ್ವಿ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ ಸುವ್ವಿ ಸುವ್ವಿ
ಸುವ್ವಿ ಜಾಣೆ ಸುವ್ವಿ ಏರು ಉಯ್ಯಾಲೆ ಸುವ್ವಿ ಸುವ್ವಿ
ಎಳೆ ದವಡೆಯಲಿ ಮೊಳೆ ಹಲ್ಲಂತೆ
ಹಸಿ ಹೊಲದೊಳಗೆ ಹೊಸ ಕಳೆಯಂತೆ
ಮೈ ನೆರದೋಳ್ಯಾರವ್ವಾ ನಮ್ಮೂರ ಕೂಸವ್ವಾ
ಸುವ್ವಿ ಸುವ್ವಿ..
ಸಣ್ಣ ಕೆರೆಯೊಳಗೆ ದೊಡ್ಡ ಮಳೆಯಂತೆ
ಹಸಿ ತಲೆಯೊಳಗೆ ಬಿಸಿ ನೀರಂತೆ
ನೀರೆರೆದೋಳ್ಯಾರವ್ವಾ ನಿಮ್ಮೂರ ಸೀತವ್ವ
ಸುವ್ವಿ ಸುವ್ವಿ..

ಹಾ ಆ ಓ ಹೋ..

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು..
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು..

ಲಾ ಲ ಲ ಲ ಲಾ ಲ ಲ
ಲಾ ಲ ಲಾ ಲ ಲಾ ಲ ಲಾ ಲ ಲಾ..

ಶ್ರೀಗಂಧ ಈ ಗೊಂಬೆ ಇವಳಿಗೇಕೆ ಗಂಧವೋ
ಬಂಗಾರ ಈ ಹೆಣ್ಣು ಇವಳಿಗೇಕೆ ಒಡವೆಯೋ
ತಾರೆಗೆ ಈ ತಾರೆಗೆ ಈ ತಾರೆಗೇಕೆ ಮಿನುಗು ದೀಪವೋ
ಈ ಬೆಳಕಿಗೇಕೆ ಬಿರುಸು ಬಾಣವೋ
ಕೆನ್ನೆ ಮೇಲೆ ಸೇಬಿದೆ ಅಲ್ಲೇ ಗಿಣಿಯ ಮೂಗಿದೆ
ತೊಂಡೆ ಹಣ್ಣು ತುಟಿಯಲಿ ದಾಳಿಂಬೆ ಕಾಳು ಬಾಯಲಿ
ಏನಿದು ಏನು ಮೋಜಿದು ಏನಿದೇನು ಮೋಜಿದು

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು..

ದಯಮಾಡಿ ಮುಗಿಲಾಚೆ ಸ್ವಲ್ಪ ನೋಡಿ ಎಲ್ಲರು
ಸಾಲಾಗಿ ಮುಕ್ಕೋಟಿ ದೇವರುಗಳು ನಿಂತರು
ದೇವತೆ ಈ ದೇವತೆ ಈ ದೇವತೆಯ ಚೆಲುವ ನೋಡಲು
ಈ ಮಾಯಗಾತಿ ನಗುವ ಕಲಿಯಲು
ನೋಡಲಿವಳು ಹುಣ್ಣಿಮೆ ಬಿರಿಯಲಿವಳು ನೈದಿಲೆ
ಚಿಗುರು ಮಾವು ಬಯಸಿದೆ ಒಳಗೆ ಕುಹೂ ದನಿಯಿದೆ
ಏನಿದು ಏನು ಮೋಜಿದು ಏನಿದೇನು ಮೋಜಿದು

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು

ತನನಂ ತನನಂ ಎನಲು ಮನಸು ನೀನೇ ಕಾರಣ

ಚಿತ್ರ: ರಸಿಕ (1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ. ಬಿ & ಕೆ.ಎಸ್. ಚಿತ್ರ  

ತನನಂ ತನನಂ ತನನಂ ತನನಂ
ತನನಂ ತನನಂ ಎನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೇ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ ಆಕಾಶ ಭೂಮಿ ಎಲ್ಲಾ ಚಪ್ಪರ
ತನನಂ ತನನಂ ತನನಂ ತನನಂ
ತನನಂ ತನನಂ ಎನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೇ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ ಆಕಾಶ ಭೂಮಿ ಎಲ್ಲಾ ಚಪ್ಪರ
ತನನಂ ತನನಂ ಎನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೇ ಎದೆಗೆ ಮದುವೆ ತೋರಣ

ಮದುವೆ ಮುಗಿದಮೇಲೆ ಮಾತೇ ನಿಲಿಸೋಣ
ಹೋಗಿ ಬಂದು ಹೋಗಿ ಪ್ರೀತಿ ಮಾಡೋಣ
ಕಣ್ಣಲ್ಲಿ ಕಾಮಣ್ಣ ಕಂಡಾಗ ಕರೆಯೋಣ
ಅವನಿಂದ ಸರಿಯಾಗಿ ಸರಸಾನ ಕಲಿಯೋಣ
ತಂದಾನ ತಾನನನ ತಾನಾನನಾ ತಾಳಿನೆ ದೂರದಂತ ಆಲಿಂಗನ
ತಂದಾನ ತಾನನನ ತಾನಾನನಾ ಕೇಳೋಣ ಕಿವಿತುಂಬ ಪ್ರೇಮಾಯಣ
ನನ್ನ ಕೃಷ್ಣನು ನೀನು ನನ್ನ ರುಕ್ಮಿಣಿ ನೀನು
ನಂಗು ನಿಂಗೂ ನಾಳೆ ಕಲ್ಯಾಣ

ತನನಂ ತನನಂ ತನನಂ ತನನಂ
ತನನಂ ತನನಂ ಎನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೇ ಎದೆಗೆ ಮದುವೆ ತೋರಣ

ಹುಡುಗಿ ರಾಗಿಮುದ್ದೆ ನುಂಗೋ ಹಾಗಿಲ್ಲ
ಹುಡುಗ ಬೆಣ್ಣೆಮುದ್ದೆ ಕರಗೋ ಹಾಗಿಲ್ಲ
ಪಂಚಾಗ ನೋಡೋಣ ಸೋಬಾನೆ ಹಾಡೋಣ
ಮುದ್ದೆನೂ ಬೆಣ್ಣೆನೂ ಆ ರಾತ್ರಿ ಮುಗಿಸೋಣ
ತಂದಾನ ತಾನನನ ತಾನಾನನಾ ತಾನಾಗಿ ಹುಟ್ಟುವುದೇ ಆಲಾಪನ
ತಂದಾನ ತಾನನನ ತಾನಾನನಾ ತಂದಂಗೆ ನೀಡುವುದೇ ಆರಾಧನ
ನನ್ನ ನಾಯಕಿ ನೀನು ನನ್ನ ನಾಯಕ ನೀನು
ನಂಗು ನಿಂಗೂ ನಾಳೆ ಕಲ್ಯಾಣ

ತನನಂ ತನನಂ ತನನಂ ತನನಂ
ತನನಂ ತನನಂ ಎನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೇ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ ಆಕಾಶ ಭೂಮಿ ಎಲ್ಲಾ ಚಪ್ಪರ
ತನನಂ ತನನಂ ಎನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೇ ಎದೆಗೆ ಮದುವೆ ತೋರಣ

ಅಮ್ಮಮ್ಮ ಗುಮ್ಮ ನನ್ನ ಗಂಡ

ಚಿತ್ರ: ನಮ್ಮೂರ ಹಮ್ಮೀರ (1990)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಮಂಜುಳಾ ಗುರುರಾಜ್

ಅಮ್ಮಮ್ಮ ಗುಮ್ಮ ನನ್ನ ಗಂಡ  ನನ್ನಿಂದ ಎಲ್ಲಾ ತಿಳ್ಕೊಂಡ
ಅಮ್ಮಮ್ಮ ಕಳ್ಳಿ ನನ್ನ ಮಳ್ಳಿ ಇವಳಂತೆ ಇಲ್ಲಾ ಊರಲ್ಲಿ
ನೋಡಲೇನೊ ಗುಮ್ಮ ಸರಸದಲಿ ಅಮ್ಮಾ
ನನ್ನ ಮಗುವಿನಮ್ಮ ಕಾಡಬೇಡ ಬಾಮ್ಮ
ಅಮ್ಮಮ್ಮ ಗುಮ್ಮ ನನ್ನ ಗಂಡ  ನನ್ನಿಂದ ಎಲ್ಲಾ ತಿಳ್ಕೊಂಡ

ಸೋಕಿದರೆ ಚಳಿಗಾಲ ತಾಕಿದರೆ ಮಳೆಗಾಲ
ನಡುಗುತಿದೆ ನೆನೆಯುತಿದೆ ತನುವೀಗ
ದೂರವಿದೆ ಸೆಕೆಗಾಲ ಸೇರದಿರೆ ಬರಗಾಲ
ಬೆವರುತಿದೆ ಬಿರಿಯುತಿದೆ ಮನವೀಗ
ಆಷಾಢ ನಾಚಿಕೆ ಆಷಾಢ, ಸಹಿಸೀಗ ನಾಚುವ ಕಾರ್ಮೋಡ
ಈ ಆಟ ಈ ಪಾಠ ಹೇಳೋರೇ ಯಾರೂ ಇಲ್ಲ
ಅಮ್ಮಮ್ಮ ಗುಮ್ಮ ನನ್ನ ಗಂಡ  ನನ್ನಿಂದ ಎಲ್ಲಾ ತಿಳ್ಕೊಂಡ
ಅಮ್ಮಮ್ಮ ಕಳ್ಳಿ ನನ್ನ ಮಳ್ಳಿ ಇವಳಂತೆ ಇಲ್ಲಾ ಊರಲ್ಲಿ

ಮೌನದಲಿ ಕೊಸರಾಟ ನವಸುಖದ ಉಸಿರಾಟ
ಹಾಸಿಗೆಯ ಪಾಠಗಳ ಓಂಕಾರ
ಆಸೆಗಳ ವೀಣೆಯಲಿ ಬಯಕೆಗಳ ತಂತಿಯಲಿ
ಮೀಟಿದರೆ ಮೀಟಿದರೆ ಝೇಂಕಾರ
ಹಣೆಬೊಟ್ಟು ನನ್ನ ಎದೆಯಲ್ಲಿ, ಗೋರಂಟಿ ಗುರುತು ಕೆನ್ನೇಲಿ
ಈ ಆಟ ಈ ಪಾಠ ಹೇಳೋರೆ ಯಾರೂ ಇಲ್ಲ
ಅಮ್ಮಮ್ಮ ಗುಮ್ಮ ನನ್ನ ಗಂಡ  ನನ್ನಿಂದ ಎಲ್ಲಾ ತಿಳ್ಕೊಂಡ
ಅಮ್ಮಮ್ಮ ಕಳ್ಳಿ ನನ್ನ ಮಳ್ಳಿ ಇವಳಂತೆ ಇಲ್ಲಾ ಊರಲ್ಲಿ
ನೋಡಲೇನೊ ಗುಮ್ಮ ಸರಸದಲಿ ಅಮ್ಮಾ
ನನ್ನ ಮಗುವಿನಮ್ಮ ಕಾಡಬೇಡ ಬಾಮ್ಮ
ಅಮ್ಮಮ್ಮ ಗುಮ್ಮ ನನ್ನ ಗಂಡ  ನನ್ನಿಂದ ಎಲ್ಲಾ ತಿಳ್ಕೊಂಡ

ಬಂಗಾರದಿಂದ ಬಣ್ಣಾನ ತಂದ

ಚಿತ್ರ: ಪ್ರೀತ್ಸೋದ್ ತಪ್ಪಾ
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಕೆ. ಜೆ. ವೈ

ಬಂಗಾರದಿಂದ ಬಣ್ಣಾನ ತಂದ..
ಸಾರಂಗದಿಂದ.. ನಯನಾನ ತಂದ..
ಮಂದಾರವನ್ನು.. ಹೆಣ್ಣಾಗು ಎಂದ..
ದಾಳಿಂಬೆಯಿಂದ.. ದಂತಾನ ತಂದ..
ಮಕರಂದ ತುಂಬಿ.. ಅಧರಾನ ತಂದ..
ನನ್ನನ್ನು ತಂದ.. ರುಚಿನೋಡು ಎಂದ..

ತಂದಾನ ತಂದ  ತಂದಾನ ತಂದ..
ಅಪರೂಪದಂದ.. ನನಗಾಗಿ ತಂದ..

ಚಂದಮಾಮನಿಂದ ಹೊಳಪನುತಂದ,
ಬಾಳೆದಿಂಡಿನಿಂದ ನುಣುಪನು ತಂದ
ಅಂದ... ಅಂದ...
ಅಂದ ಚಂದ ಹೊರುವ ಕಂಬದ ಜೋಡಿಗೆ ಮಿಂಚಿರಿ ಎಂದ..
ಹಂಸದಿಂದ ಕೊಂಚ ನಡಿಗೆಯ ತಂದ,
ನವಿಲಿನಿಂದ ಕೊಂಚ ನಾಟ್ಯವ ತಂದ
ನಯವೋ... ಲಯವೋ...
ನಯವೋ ಲಯವೋ ರೂಪ ಲಯವೋ ರಸಿಕನೇ ಹೇಳು ನೀ ಎಂದ..
ತಂಗಾಳಿಯಿಂದ.. ಸ್ನೇಹನ ತಂದ..
ಲತೆಬಳ್ಳಿಯಿಂದ.. ಸಿಗ್ಗನ್ನು ತಂದ..
ಸಿಗ್ಗನ್ನು ಇವಳ.. ನಡುವಾಗು ಎಂದ..
ನಡುವನ್ನು ಅಳಿಸಿ.. ಎದೆಭಾರ ತಂದ..
ನನ್ನನ್ನು ಲತೆಗೆ.. ಮರವಾಗು ಎಂದ..

ತಂದಾನ ತಂದ  ತಂದಾನ ತಂದ..
ಅಪರೂಪದಂದ.. ನನಗಾಗಿ ತಂದ..

ಗಂಧ ತಂದನೋ ಧಮನುಗಳಿಂದ,
ರತಿಯ ತಂದನೋ ಅಮಲುಗಳಿಂದ
ಧಮನ... ಅಮಲ...
ಧಮನ ಅಮಲ ಕಂಪನ ಕಡಲ ದೋಣಿಗೆ ಕಾಮನ ತಂದ..
ಭೂಮಿಸುತ್ತ ಇರೋ ಕಾಂತವ ತಂದ,
ಬಾನಿನಿಂದ ಏಕಾಂತವ ತಂದ
ಒಲವು... ಚೆಲುವು...
ಒಲವು ಚೆಲುವು ಕೂಡೋ ಕಲೆಗೆ ಘರ್ಷಣೆ ಆಕರ್ಷಣೆ ತಂದ..
ಕರಿಮೋಡದಿಂದ.. ಮುಂಗುರುಳ ತಂದ..
ಕೋಲ್ಮಿಂಚಿನಿಂದ.. ರತಿ ನೋಟ ತಂದ..
ಜಲಧಾರೆಯಿಂದ.. ಒಲವನ್ನು ತಂದ..
ಒಲವನ್ನು ಓಡೋ.. ನದಿಯಾಗು ಎಂದ..
ನನ್ನನ್ನು ನದಿಗೆ.. ಕಡಲಾಗು ಎಂದ..

ಬಂಗಾರದಿಂದ.. ಬಣ್ಣಾನ ತಂದ..
ಸಾರಂಗದಿಂದ.. ನಯನಾನ ತಂದ..
ಮಂದಾರವನ್ನು.. ಹೆಣ್ಣಾಗು ಎಂದ..
ದಾಳಿಂಬೆಯಿಂದ.. ದಂತಾನ ತಂದ..
ಮಕರಂದ ತುಂಬಿ.. ಅಧರಾನ ತಂದ..
ನನ್ನನ್ನು ತಂದ.. ರುಚಿನೋಡು ಎಂದ..

ತಂದಾನ ತಂದ  ತಂದಾನ ತಂದ..
ಅಪರೂಪದಂದ.. ನನಗಾಗಿ ತಂದ..

ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ

ಚಿತ್ರ : ಚಿನ್ನ (1994)
ಸಾಹಿತ್ಯ - ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ರಂಬಾ ಲೆ ರಂಬಾ.. ಓ.. ಹೋಯ್ ಲಾ
ಡುಂಬಾ ಲೆ ಡುಂಬಾ.. ಓ.. ಹೋಯ್ ಲಾ

ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಜಿಂಕೆ ಆಯ್ತು ಹೆಣ್ಣುಹುಲಿ ಪ್ರೀತಿ ಹತ್ತಿರ
ಎಷ್ಟು ಹತ್ತಿರ, ಪ್ರೀತಿ ಎಷ್ಟು ಎತ್ತರ, ಪ್ರಶ್ನೆಗಿಲ್ಲ ಉತ್ತರ

ರಂಬಾ ಲೆ ರಂಬಾ.. ಓ.. ಹೋಯ್ ಲಾ
ಡುಂಬಾ ಲೆ ಡುಂಬಾ.. ಓ.. ಹೋಯ್ ಲಾ

ಇದು ಕಾಡಾದರೂ ಅಂತರಂಗ ಇದೆ
ಪ್ರಾಣಿ ಗೂಡಾದರೂ ಸ್ನೇಹ ಗಂಧ ಇದೆ
ಝುಳು ಝುಳು ಝುಳು ನೀರಿನಲಿ ಹಾಡಿದೆ ಅನುರಾಗದಲಿ
ಘಮ ಘಮಿಸುವ ಮುತ್ತುಗಳ ಊಟಕೆ ಇಡಲೆ
ಹೂವಾಗಿ ಮಲ್ಲಿಗೆಯ ಗಂಧ ಕೊಡು
ಹಾವಾಗಿ ಅಪ್ಪುಗೆಯ ಬಂಧ ಕೊಡು
ಹೆಣ್ಣಾಗಿ ಅಮೃತದ ಪ್ರೀತಿ ಕೊಡು

ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಜಿಂಕೆ ಆಯ್ತು ಹೆಣ್ಣುಹುಲಿ ಪ್ರೀತಿ ಹತ್ತಿರ
ಎಷ್ಟು ಹತ್ತಿರ, ಪ್ರೀತಿ ಎಷ್ಟು ಎತ್ತರ, ಪ್ರಶ್ನೆಗಿಲ್ಲ ಉತ್ತರ

ರಂಬಾ ಲೆ ರಂಬಾ.. ಓ.. ಹೋಯ್ ಲಾ
ಡುಂಬಾ ಲೆ ಡುಂಬಾ.. ಓ.. ಹೋಯ್ ಲಾ

ಮಾತನಾಡೊ ಹುಲಿ ಮುದ್ದು ಮಾಡೋದ್ ಕಲಿ
ಮುದ್ದಿನಾ ಬೇಟೆಲಿ ಇದ್ದುದ್ದೆಲ್ಲಾ ಬಲಿ
ಗಡಿಬಿಡಿಯಲಿ ಗಂಡು ಹುಲಿ
ಹೆದರಿಕೆಯಲಿ ಹೆಣ್ಣು ಹುಲಿ
ಒಳಗಡೆ ಇರೊ ಕನಸುಗಳು ಹೊರಗಡೆ ಬರಲಿ
ನೀ ನನ್ನ ಕನಸಿಗೆ ಆಧಾರವೋ
ನಾ ನಿನ್ನ ಬಯಕೆಗೆ ಆಹಾರವೋ
ಈ ರಾತ್ರಿ ಪ್ರಣಯಕೆ ಸತ್ಕಾರವೋ

ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಜಿಂಕೆ ಆಯ್ತು ಹೆಣ್ಣುಹುಲಿ ಪ್ರೀತಿ ಹತ್ತಿರ
ಎಷ್ಟು ಹತ್ತಿರ, ಪ್ರೀತಿ ಎಷ್ಟು ಎತ್ತರ, ಪ್ರಶ್ನೆಗಿಲ್ಲ ಉತ್ತರ

ರಂಬಾ ಲೆ ರಂಬಾ.. ಓ.. ಹೋಯ್ ಲಾ
ಡುಂಬಾ ಲೆ ಡುಂಬಾ.. ಓ.. ಹೋಯ್ ಲಾ

ರಾಗಿಹೊಲದಾಗೆ ಖಾಲಿ ಗುಡಿಸಲು

ಚಿತ್ರ: ಅಣ್ಣಯ್ಯ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಕುಂಕುಮ ಅರ್ಧವಿದೆ..
ಕೈ ಬಳೆ ಕಮ್ಮಿ ಇದೆ..
ಬೈತಲೆ ಕೆಟ್ಟಿದೆ, ಗಲ್ಲವು ಕಟ್ಟಿದೆ, ಎಲ್ಲಿಗೆ ಹೋಗಿದ್ದೆಯೇ..
ಕಾಲ್ಗಳು ಬೀಗುತಿವೆ..
ಕಣ್ಗಳು ತೇಗುತಿವೆ..
ಸೊಂಟವು ಜಗ್ಗದೆ, ಹೆಣ್ಣೆದೆ ಹಿಗ್ಗಿದೆ, ಯಾಕ್ಹಿಂಗೆ ಬಾಗಿದ್ದಿಯೇ..

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತನಾಡಲು.. ಓಹೋ
ನನ್ನ ಪತಿರಾಯರಿಗೆ ತಿನಿಸಲು.. ಓಹೋ
ಜೇನುತುಪ್ಪ ತಂದೆ ಮಾತು ಬರಿಸಲು.. ಓಹೋ
ತುಂಬಾ ಹೊಸ ಮಾತು ಕಲಿಸಿಕೊಟ್ಟಳಮ್ಮ
ಜೇನುತುಪ್ಪ ಕೊಟ್ಟು, ಕೊಡು ಎಂದಳಮ್ಮ.. ಹೋಯ್

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತನಾಡಲು.. ಓಹೋ

ತಾಳಿಯು ಬೆನ್ನಲಿದೆ..
ಸತ್ಯವು ಕಾಣುತಿದೆ..
ಕತ್ತಲು ಕಾಯದೇ, ಲೋಕವ ನೋಡದೇ
ಏನೇನು ಕಾಡಿದ್ದಿಯೇ..

ನನ್ನ ಪುಟ್ಟ ಪತಿರಾಯ
ಪುಟ್ಟ ದಿಟ್ಟ ಚನ್ನಿಗರಾಯ.. ಕೇಳಿರಿ
ಹತ್ತಿರಕ್ಕೆ ಬಾ ಎಂದರು
ಬೇಡ ಅಂದ್ರೆ ಬಿಟ್ಟುಕೊಟ್ಟರು.. ತಿಳಿಯಿರಿ

ನೀನು ತಾನೇ ಆಸೆ ತಂದೆ
ನೀನು ಯಾಕೆ ಜೇನು ತಿಂದೆ
ಹೌದು ತಿಂದೆ ಏನು ಮುಂದೆ
ನಾನು ತಾಯಿ ನೀನು ತಂದೆ
ಕೂಸಿಲ್ಲದೇನೆ ತಾಯಾಸೆಯೇನೇ
ಬಾ ಬಿಡಿಸು ಈ ಒಗಟನು
ಒ..ಓ.. ಮುಂದೇನೋ ನಾ ಅರಿಯೆನು

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತು ಕೇಳಲು.. ಓಹೋ
ತನ್ನ ಪತಿರಾಯನಿಗೆ ತಿನಿಸಲು.. ಓಹೋ
ತಂದ ಜೇನು ತಿಂದೆ ಮಾತು ಕಲಿಯಲು.. ಓಹೋ
ತುಂಬಾ ಹೊಸ ಮಾತು ಕಲಿತುಕೊಂಡರಮ್ಮ
ಜೇನು ತಿಂದು ನೀನು ತಿನ್ನು ಎಂದರಮ್ಮ.. ಹೋ

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತು ಕೇಳಲು.. ಓಹೋ

ಪಂಚೆಯ ಅಂಚು ಎಲ್ಲಿ..
ಲಂಗದ ಮೂತಿ ಎಲ್ಲಿ..
ಬಟ್ಟೆಗಳೆಲ್ಲಾವು ತಿರುವು ಮುರುವು ಏನೇನು ಸಾಗಿತ್ತಲ್ಲಿ..

ದೂರದಿಂದ ನೋಡಿದರು
ಸಣ್ಣಪದ ಹಾಡಿದರು.. ಕೇಳಿರಿ
ಕಣ್ಣುಗಳ ಹೊಗಳಿದರು
ತಾಳಿಅಂದ್ರೆ ನಿಲ್ಲಿಸಿದರು.. ತಿಳಿಯಿರಿ

ನೀನು ತಾನೇ ಹಾಡು ಎಂದೆ
ಯಾಕೆ ನನ್ನ ಪ್ರಾಣ ಎಂದೆ
ಪ್ರೀತಿಯಿಂದ ಹಾಗೆ ಅಂದೆ
ನಾವು ಇನ್ನು ಪ್ರೀತಿ ಹಿಂದೆ
ಈ ಪ್ರೇಮಪಾಠ ಈ ಜೇನಿನೋಟ
ಈ ತಲೆಗೆ ಈಗೇರಿತು
ಅ..ಆ.. ಓ ಚಲುವೆ ಏನಾಯಿತು

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತನಾಡಲು.. ಓಹೋ
ತನ್ನ ಪತಿರಾಯನಿಗೆ ತಿನಿಸಲು.. ಓಹೋ
ತಂದ ಜೇನು ತಿಂದೆ ಮಾತು ಕಲಿಯಲು.. ಓಹೋ
ತುಂಬಾ ಹೊಸ ಮಾತು ಕಲಿತುಕೊಂಡರಮ್ಮ
ಜೇನು ತಿಂದು ನೀನು ತಿನ್ನು ಎಂದರಮ್ಮ.. ಹೋ

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತು ಕೇಳಲು.. ಓಹೋ

ಮಧುವಾದೆ ನೀನು ನನ್ನ ಹಾಡಿಗೆ

ಚಿತ್ರ: ಪುರುಷೋತ್ತಮ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಮಂಜುಳ ಗುರುರಾಜ್

ಮಧುವಾದೆ ನೀನು ನನ್ನ ಹಾಡಿಗೆ
ವಧುವಾದೆ ನೀನು ನನ್ನ ಬಾಳಿಗೆ
ಮಧುವಿಲ್ಲದೇ ಸುಮವಾಗದು
ಒಲವಿಲ್ಲದೇ ಜೊತೆಯಾಗದು

ವರವಾದೆ ನೀನು ನನ್ನ ಪ್ರೀತಿಗೆ
ವರನಾದೆ ನೀನು ನನ್ನ ಬಾಳಿಗೆ
ವರವಿಲ್ಲದೇ ಮನ ಸೇರದು
ಮನ ಸೇರದೇ ಒಲವಾಗದು

ಮರೆತೆವು ಜಗದ ನೂರು ಚಿಂತೆ
ತೊರೆದೆವು ಸುಖದ ಅಂತೆ ಕಂತೆ
ಅಳಿದವು ಭ್ರಮೆಯ ಹಗಲುಗನಸು
ಉಳಿದವು ಎರಡು ತಿಳಿಯ ಮನಸು

ಮರೆತೆವು ಜಗದ ನೂರು ಚಿಂತೆ
ತೊರೆದೆವು ಸುಖದ ಅಂತೆ ಕಂತೆ
ಅಳಿದವು ಭ್ರಮೆಯ ಹಗಲುಗನಸು
ಉಳಿದವು ಎರಡು ತಿಳಿಯ ಮನಸು

ಪ್ರೇಮದ ತುಟಿಗೆ ಯೌವ್ವನ
ನೀಡಿತು ಮಧುರ ಚುಂಬನ
ಮನಸಿಗೆ ಹೃದಯ ಕಂಪನ
ಹೃದಯಕೆ ಪ್ರೇಮ ದರ್ಶನ

ಮಧುವಾದೆ ನೀನು ನನ್ನ ಹಾಡಿಗೆ
ವರನಾದೆ ನೀನು ನನ್ನ ಬಾಳಿಗೆ
ಮಧುವಿಲ್ಲದೇ ಸುಮವಾಗದು
ಮನ ಸೇರದೇ ಒಲವಾಗದು

ಬಿರಿಯಲಿ ನಾವು ನಿಂತ ನೆಲವು
ಸುರಿಸಲಿ ಬೆಂಕಿಮಳೆಯ ಬಾನು
ಹರಿಯಲಿ ದಡವ ಮೀರಿ ಕಡಲು
ತಿರುಗಲಿ ಎದುರು ನಿಂತು ಜಗವು

ಬಿರಿಯಲಿ ನಾವು ನಿಂತ ನೆಲವು
ಸುರಿಸಲಿ ಬೆಂಕಿಮಳೆಯ ಬಾನು
ಹರಿಯಲಿ ದಡವ ಮೀರಿ ಕಡಲು
ತಿರುಗಲಿ ಎದುರು ನಿಂತು ಜಗವು

ಅಮರವೀ ಪ್ರೇಮ ಕಲರವ
ಮಧುರವೀ ಸ್ನೇಹದನುಭವ
ಸತ್ಯವೀ ಹೃದಯ ಸಂಗಮ
ನಿತ್ಯವೀ ಪ್ರೇಮ ಸರಿಗಮ

ಮಧುವಾದೆ ನೀನು ನನ್ನ ಹಾಡಿಗೆ
ವಧುವಾದೆ ನೀನು ನನ್ನ ಬಾಳಿಗೆ
ಮಧುವಿಲ್ಲದೇ ಸುಮವಾಗದು
ಒಲವಿಲ್ಲದೇ ಜೊತೆಯಾಗದು

ನೀ ಓಡು ಮುಂದೆ ನಾ ನಿನ್ನ ಹಿಂದೆ

ಚಿತ್ರ: ಪರಶುರಾಮ್ (1989)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯಕರು: ಡಾ.ರಾಜ್‌ಕುಮಾರ್, ಸ್ವರ್ಣಲತಾ

ಸರದಾರ ಬಾ ಬಾಳಿನ ಸಿಂಧೂರ
ಬಾ ಬಂಗಾರ ನನ್ನ ಸಿಂಗಾರ
ಸೇರು ಬಾ ಮಯೂರ

ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ಬರುವೆ ಬರುವೆ ನಿನ್ನ ಬಳಸಲು ಬರುವೆ
ತರುವೆ ನಿನಗೆ ಸಿಹಿ ಕಾಣಿಕೆ ತರುವೆ
ಬೇಲೂರಿನ ಬಾಲೆ ಈ ಕೊರಳಿಗೆ ಮಾಲೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ

ಈ ಸುಮಗಳ ನಗುವಲಿ ನಿನ್ನ ಮೊಗವಿದೆ
ಈ ಲತೆಯಲಿ ಬಳುಕುವ ನಿನ್ನ ನಡುವಿದೆ
ಆ ಕೋಗಿಲೆ ಗಾನ ನಿನ್ನ ಧ್ವನಿಯ ಹಾಗಿದೆ
ಆ ರಾಗದ ಮೇಲೆ ನನ್ನ ಪಯಣ ಸಾಗಿದೆ
ಸರದಾರ ಬಾ ಬಾಳಿನ ಸಿಂಧೂರ
ಬೇಲೂರಿನ ಬಾಲೆ ಈ ಕೊರಳಿಗೆ ಮಾಲೆ

ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ

ಈ ಜೀವನ ನಲಿವುದು ನಿನ್ನ ಹಾಡಿಗೆ
ರೋಮಾಂಚನ ನಿನ್ನಯ ಕಣ್ಣ ಮೋಡಿಗೆ
ಈ ಸ್ನೇಹಕೆ ನಾನು ನೂರು ಜನ್ಮ ಬೇಡುವೆ
ಜೊತೆಯಾಗಿರೆ ನೀನು ಏನೆ ಬರಲಿ ಗೆಲ್ಲುವೆ
ಸರದಾರ ಬಾ ಬಾಳಿನ ಸಿಂಧೂರ
ಬೇಲೂರಿನ ಬಾಲೆ ಈ ಕೊರಳಿಗೆ ಮಾಲೆ

ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ಬರುವೆ ಬರುವೆ ನಿನ್ನ ಬಳಸಲು ಬರುವೆ
ತರುವೆ ನಿನಗೆ ಸಿಹಿ ಕಾಣಿಕೆ ತರುವೆ

ನಮಸ್ಕಾರ ನಿನಗೆ ಭಾಸ್ಕರ

ಚಿತ್ರ: ಸಂಭ್ರಮ (1999)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯಕರು: ರಮೇಶ್ ಚಂದ್ರ, ಅನುರಾಧ ಶ್ರೀರಾಮ್

ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ
ನಿತ್ಯ ಲೋಕ ಸಂಚಾರ, ಸಂಚಾರ, ಸಂಚಾರ
ಸೃಷ್ಟಿಗೆಲ್ಲ ಆಧಾರ, ಆಧಾರ, ಆಧಾರ
ಅಂಧಕಾರ ಸಂಹಾರ, ಸಂಹಾರ, ಸಂಹಾರ
ಜಗದ ಮನದ ಒಳಗೂ ಹೊರಗೂ ಬೆಳಗು ಬೆಳಗು
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ

ಸರಿಗಮಪದನಿಗಳೆ
ಸರಿಗಮಪದನಿಗಳೆ
ನಿನ್ನ ಹಗಲು, ನಿನ್ನ ಇರುಳು
ನಿನ್ನ ಹಗಲು ಇರುಳು ರಥದ ಅಶ್ವಗಳೆ
ನವರಸ ಬಾಳ ವೀಣೆ ನೀಡಿ
ನಮ್ಮನು ನಾಕು ತಂತಿ ಮಾಡಿ
ನುಡಿಸುವ ಗಾನ ಲೋಲ ನೀನು
ಸಸಸಸಸ ನಿಸನಿಸಸಸ ಪದನಿಸಸಸ
ಗಪದನಿಸಸ ಸಗಪದನಿದಸ
ಕಾಲಾಯ ತಸ್ಮೈ ನಮಃ
ಏಕ ಕಂಠ ನಿರ್ಧಾರ, ನಿರ್ಧಾರ, ನಿರ್ಧಾರ
ಸಪ್ತ ಶೋಕ ಪರಿಹಾರ, ಪರಿಹಾರ, ಪರಿಹಾರ
ಅಂಧಕಾರ ಸಂಹಾರ, ಸಂಹಾರ, ಸಂಹಾರ
ಜಗದ ಮನದ ಒಳಗೂ ಹೊರಗೂ ಬೆಳಗು ಬೆಳಗು
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ

ಋತುಗಳ ಯಜಮಾನನೆ
ಋತುಗಳ ಯಜಮಾನನೆ
ಈ ಚಿಗುರು, ಈ ಹಸಿರು
ಈ ಚಿಗುರು ಹಸಿರು ನಿನ್ನ ಸಂಭ್ರಮವೆ
ಬೆಳಕಿನ ಮನೆಯು ನಿನ್ನದಂತೆ
ಹಸಿರೆ ತಳಿರು ತೋರಣವಂತೆ
ಬೆಳೆವುದೆ ನಿನ್ನ ಹಬ್ಬವಂತೆ
ಗಾನ ಕಲಕಲ ನೀರ ಕಿಲಕಿಲ
ಮಲಯ ಮಾರುತದ ಮಾತು ಸಲಸಲ
ನಿಸರ್ಗ ಸಲ್ಲಾಪವೆ
ಕಾಲಾಯ ತಸ್ಮೈ ನಮಃ
ಕಾಲ ಕೋಶ ಕರ್ತಾರ, ಕರ್ತಾರ, ಕರ್ತಾರ
ವರ್ತಮಾನ ವಕ್ತಾರ, ವಕ್ತಾರ, ವಕ್ತಾರ
ಅಂಧಕಾರ ಸಂಹಾರ, ಸಂಹಾರ, ಸಂಹಾರ
ಜಗದ ಮನದ ಒಳಗೂ ಹೊರಗೂ ಬೆಳಗು ಬೆಳಗು
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ

ಓಹೋ ಚಂದ್ರಮ, ಕೇಳಯ್ಯ ಚಂದ್ರಮ

ಚಿತ್ರ: ಚಂದ್ರೋದಯ (1999)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಿ.

ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಒಲ್ಲದ ಒಲವಿನಲಿ, ಬಾಳುವ ಈ ಜೊತೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ

ಗುಲಾಬಿ ಹೂವಿನಲ್ಲಿ, ಅದೇಕೊ ನಗುವೆ ಇಲ್ಲ
ಮುಳ್ಳಿಂದ ಮುತ್ತಿನೆಡೆಗೆ, ಅದೇಕೊ ಬಾರದಲ್ಲ
ಕಂಗಳಿಂದ ಕಂಗಳ, ಕನಸ ಕಾಣಲು ಕೊಡದಲ್ಲ
ಹೃದಯದಿಂದ ಹೃದಯವ, ಅಳೆದು ನೋಡಲು ಬಿಡದಲ್ಲ
ಸಪ್ತಪದಿಗಳೆಂಬ, ಸೆರೆಯಲಿರುವ ಹೊಸ ಕಥೆಯ

ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಒಲ್ಲದ ಒಲವಿನಲಿ, ಬಾಳುವ ಈ ಜೊತೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ

ನಿಟ್ಟುಸಿರ ಜಗಳದಲ್ಲಿ, ದೂರಾಯ್ತು ಜೋಡಿ ಮಂಚ
ಭಾವಗಳ ಕದನದಲ್ಲಿ, ಹೋಳು ಹೃದಯದ ಪ್ರಪಂಚ
ಅಂತರಂಗದ ಆಗಸ, ಬೆಳಕು ಕಾಣದೆ ಅಲೆಯುತಿದೆ
ಅಂದದ ಈ ಅಂತಃಪುರ, ಅರ್ಥವಿಲ್ಲದೆ ಆಳುತಲಿದೆ
ವಿರಹವೆಂಬ ವಿಷವ, ವಿನಾ ಕಾರಣ ಕುಡಿದವರ

ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಒಲ್ಲದ ಒಲವಿನಲಿ, ಬಾಳುವ ಈ ಜೊತೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ

ಲೂನಾ ಮೇಲೆ ನನ್ನ ಮೈನಾ

: ದಿಗ್ವಿಜಯ (1987)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಿ.

ಅಂಬಚ್ಚೂರಲ ಗುಂಬಚ್ಚೂರಲ ಗುಸಗುಚ್ಚೂರಲ ತಲಗಚ್ಚ
ಶರ್ಟ್ ಇನ್ ಮಾಡು, ಕ್ರಾಪ್ ಸರಿ ಮಾಡು, ಮೀಸೆ ತೀಡು, ಮುಂದೆ ನೋಡು,
ಹಿಂದೆ ಓಡು, ಗಿಂಚ್ಕೊಂಡ್ ನೋಡು, ಜಂಗ್ಲಿ ಸ್ಟೈಲ್‌ನಲ್ಲಿ ಗಾನ ಹಾಡು
ಲೇಡಿ ಮೇಲೆ, ಗಡಚಿಚಿಗ, ಗಾಡಿ ಮೇಲೆ ಲೇಡಿ ಮುಂದೆ ಹೋಗಲು ಬಿಡಬೇಡ
ಹಿಂದೆ ಬಂದರು ಬಿಡಬೇಡ, ನಿನ್ನ ಬೈದರು ಬಿಡಬೇಡ, ನಿನ್ನ ಉಗಿದರು ಬಿಡಬೇಡ
ಯಾಹೂ....

ಲೂನಾ ಮೇಲೆ ನನ್ನ ಮೈನಾ
ಕುಲುಕೀಸ ಬೇಡ ನಿನ್ನ ಮೈ ನಾ
ಲೂನಾ ಮೇಲೆ ನನ್ನ ಮೈನಾ
ಕುಲುಕೀಸ ಬೇಡ ನಿನ್ನ ಮೈ ನಾ
ಈ ನೀಲಿ ಕಣ್ಣುಗಳು
ಮಿನುಗುವ ತಾರೆಗಳು
ಈ ಕಣ್ಣು ಹುಬ್ಬು ರೆಪ್ಪೆ ಮೂಗು ಕೆನ್ನೆ ಗಲ್ಲ ಎಲ್ಲಾ
ಅಂಗಾಗ ಪೂರ ನೀನು ನನ್ನವಳು
ನನ್ನಾಣೆ ಚಿನ್ನ ನೀನು ನನ್ನವಳು
ಲೂನಾ ಮೇಲೆ ನನ್ನ ಮೈನಾ
ಕುಲುಕೀಸ ಬೇಡ ನಿನ್ನ ಮೈ ನಾ

ನಿನ್ನ ಮುಂಗುರುಳು, ಮುಸ್ಸಂಜೆ ಮೋಡಗಳು
ಹಾರಿದಾಗ ಹಾರುತಿದೆ ಪಂಚಪ್ರಾಣಗಳು
ನಿನ್ನ ತೋಳುಗಳು, ಎಳೆ ಬಾಳೆ ದಿಂಡುಗಳು
ಬಾರೊ ಬಾರೊ ಎನ್ನುತಿದೆ ಅಪ್ಪಿಕೊಂಡಿರಲು
ಇಂದ್ರಲೋಕದಿಂದ, ಲೂನ ಮೇಲೆ ಬಂದ
ಸುಂದರಾಂಗಿ ನನ್ನೊಮ್ಮೆ ನೋಡೆ, ಹುಡುಗಿ ಹುಡುಗಿ
ನಿನ್ನ ದಾರಿಗಾಗಿ, ಕಾಯೋ ಪ್ರೇಮ ಯೋಗಿ
ನನ್ನನ್ನೀಗ ನೀ ಪ್ರೀತಿ ಮಾಡೆ
ಈ ನೀಲಿ ಕಣ್ಣುಗಳು, ಮಿನುಗುವ ತಾರೆಗಳು
ಈ ಕಣ್ಣು ಹುಬ್ಬು ರೆಪ್ಪೆ ಮೂಗು ಕೆನ್ನೆ ಗಲ್ಲ ಎಲ್ಲಾ
ಅಂಗಾಗ ಪೂರ ನೀನು ನನ್ನವಳು
ನನ್ನಾಣೆ ಚಿನ್ನ ನೀನು ನನ್ನವಳು

ಲೂನಾ ಮೇಲೆ ನನ್ನ ಮೈನಾ
ಕುಲುಕೀಸ ಬೇಡ ನಿನ್ನ ಮೈ ನಾ

ಸೂರ್ಯ ಬಂದಾಗ, ಆ ತಾವರೆ ನಗದೇನೆ
ನನ್ನ ನೀನು ಕಂಡಾಗ, ಪ್ರೀತಿ ಬರದೇನೆ
ಚಂದ್ರ ಬಂದಾಗ, ಆ ನೈದಿಲೆ ನಗದೇನೆ
ನಾನು ನೀನು ಸೇರೋದೆ, ದೇವರ ನಿಯಮಾನೆ
ಭೂಮಿ ತಾಯಿ ಆಣೆ, ಬೇರೆ ಹೆಣ್ಣ ಕಾಣೆ
ಒಂಟಿ ಬಾಳು ಸಾಕಾಯ್ತು ಕೇಳೆ,
ಬಿಲೀವ್ ಮಿ ಡಾರ್ಲಿಂಗ್
ಕರುಣೆ ತೋರಿ ನೋಡು, ನನ್ನ ಪ್ರೀತಿ ಮಾಡು
ಈ ಕಣ್ಣಿಗಾಗಿ ನಾ ಸೋತೆ ಕೇಳೆ
ಈ ನೀಲಿ ಕಣ್ಣುಗಳು, ಮಿನುಗುವ ತಾರೆಗಳು
ಈ ಕಣ್ಣು ಹುಬ್ಬು ರೆಪ್ಪೆ ಮೂಗು ಕೆನ್ನೆ ಗಲ್ಲ ಎಲ್ಲಾ
ಅಂಗಾಗ ಪೂರ ನೀನು ನನ್ನವಳು
ನನ್ನಾಣೆ ಚಿನ್ನ ನೀನು ನನ್ನವಳು

ಲೂನಾ ಮೇಲೆ ನನ್ನ ಮೈನಾ
ಕುಲುಕೀಸ ಬೇಡ ನಿನ್ನ ಮೈ ನಾ
ಲೂನಾ ಮೇಲೆ ನನ್ನ ಮೈನಾ
ಕುಲುಕೀಸ ಬೇಡ ನಿನ್ನ ಮೈ ನಾ

ಸೂಪರೋ ಸೂಪರೋ ಸೂಪರೋ

ಚಿತ್ರ: ಪುರುಷೋತ್ತಮ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಸೂಪರೋ ಸೂಪರೋ ಸೂಪರೋ
ಹುಡುಗಿ ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ
ಹುಡುಗ ಸೂಪರೋ ಸೂಪರೋ ಸೂಪರೋ

ಚಂದುಳ್ಳಿ ಹೆಣ್ಣೆ ಮಿಂಚುಳ್ಳಿ ಕಣ್ಣೆ
ಈ ನಿನ್ನ ನೋಟ ಬಾಣದಂತೆ, ಹೂವ ಬಾಣದಂತೆ

ಬೆಣ್ಣೆಯಂತೆ ನಾ ಕರಗಿ ಹೋಗುವೆ
ನಿನ್ನ ಬೆಚ್ಚನೆ ಮಾತಿಗೆ
ಬಳ್ಳಿಯಂತೆ ನಾ ಸುತ್ತಿಕೊಳ್ಳುವೆ
ನನ್ನ ಮೆಚ್ಚಿನ ಗಂಡಿಗೆ
ಬಣ್ಣದಲ್ಲಿ ಬೆಳ್ಳಿ ನೀನು
ಹೂಗಳಲ್ಲಿ ಮಲ್ಲೆ ನೀನು
ಹಬ್ಬದಲ್ಲಿ ಸುಗ್ಗಿ ನೀನು
ಅಂದಗಾತಿ ಚಂದಗಾತಿ

ಚಂದುಳ್ಳಿ ಹೆಣ್ಣೆ ಮಿಂಚುಳ್ಳಿ ಕಣ್ಣೆ
ಈ ನಿನ್ನ ನೋಟ ಬಾಣದಂತೆ, ಹೂವ ಬಾಣದಂತೆ

ಸೂಪರೋ ಸೂಪರೋ ಸೂಪರೋ
ಹುಡುಗಿ ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ
ಹುಡುಗ ಸೂಪರೋ ಸೂಪರೋ ಸೂಪರೋ

ಚಕೋರಿ.. ನಿನ್ನ ತಿಳಿ ನಗು ನೋಡಿ
ದಾಳಿಂಬೆ ತನ್ನ ಬಾಯಿ ಮುಚ್ಚಾಯ್ತು
ಮಯೂರಿ.. ನಿನ್ನ ನಡು ನಡೆ ನೋಡಿ
ಮಯೂರ ತನ್ನ ಗರಿ ಮಚ್ಚಾಯ್ತು
ಗಾಳಿಯಲ್ಲಿ ನಾ ತೇಲಿ ಹೋಗುವೆ
ನಿನ್ನ ಪದ್ಯದ ಮೋಡಿಗೆ
ಗಂಧದಂತೆ ನಾ ಸವೆದು ಹೋಗುವೆ
ನಿನ್ನ ಮುತ್ತಿನ ದಾಳಿಗೆ
ಸಂಜೆಗೆಂಪು ಕೆನ್ನೆಮೇಲೆ
ಹವಳನಿಂಬು ತುಟಿಯ ಮೇಲೆ
ತೊಡಿಸು ಬಾರೆ ತೋಳಮಾಲೆ
ಮಾಯಗಾತಿ ಮಾಟಗಾತಿ

ಚಂದುಳ್ಳಿ ಹೆಣ್ಣೆ ಮಿಂಚುಳ್ಳಿ ಕಣ್ಣೆ
ಈ ನಿನ್ನ ನೋಟ ಬಾಣದಂತೆ, ಹೂವ ಬಾಣದಂತೆ

ಸೂಪರೋ ಸೂಪರೋ ಸೂಪರೋ
ಹುಡುಗಿ ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ
ಹುಡುಗ ಸೂಪರೋ ಸೂಪರೋ ಸೂಪರೋ

ಮಂದಾರ.. ನಿನ್ನ ಹೊನ್ನ ಬಣ್ಣ ನೋಡಿ
ಬಂಗಾರ ತಾನು ಮಿಂಚಿ ಮಂಕಾಯ್ತು
ವೈಯ್ಯಾರಿ.. ನಿನ್ನ ಬಳೆ ಧನಿ ಕೇಳಿ
ಕಾವೇರಿ ನೀರ ಅಲೆ ಮೂಕಾಯ್ತು
ಉಟ್ಟಬಟ್ಟೆಯ ಬಿಗಿಯ ಮಾಡಿದೆ
ಸುಮ್ಮಸುಮ್ಮನೇ ಹೊಗಳುತಾ
ನನ್ನ ಅಂದವೇ ನಾಚಿ ಕೊಂಡಿದೆ
ದುಂಬಿ ಹಾಡನು ಕೇಳುತಾ
ಕಲೆಗಳಲ್ಲಿ ಚಿತ್ರ ನೀನು
ತಿಂಗಳಲ್ಲಿ ಚೈತ್ರ ನೀನು
ನನ್ನ ಕುಣಿಸೋ ಪಾತ್ರನೀನು
ಮೋಹನಾಂಗಿ ಕಾಮನಾಂಗಿ

ಚಂದುಳ್ಳಿ ಹೆಣ್ಣೆ ಮಿಂಚುಳ್ಳಿ ಕಣ್ಣೆ
ಈ ನಿನ್ನ ನೋಟ ಬಾಣದಂತೆ, ಹೂವ ಬಾಣದಂತೆ

ಸೂಪರೋ ಸೂಪರೋ ಸೂಪರೋ
ಹುಡುಗ ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ
ಹುಡುಗಿ ಸೂಪರೋ ಸೂಪರೋ ಸೂಪರೋ

BA, MA ಡಿಗ್ರಿ ಇದ್ರೂ ಇಲ್ಲಾ ವರಮಾನ

ಚಿತ್ರ: ನರಸಿಂಹ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ

ಅಣ್ಣಾ... ಚಾಕರಿ ಕೊಡಣ್ಣ
ಯಪ್ಪೋ... ನೌಕರಿ ಕೊಡಪ್ಪೋ

BA, MA ಡಿಗ್ರಿ ಇದ್ರೂ ಇಲ್ಲಾ ವರಮಾನ.. ಇಲ್ಲಾ ವರಮಾನ
ಬೀದಿಲ್ಕುಂತು ಪಾಲಿಶ್ ಹೊಡೆದ್ರು ಇಲ್ಲಾ ಅವಮಾನ.. ಇಲ್ಲಾ ಅವಮಾನ
ಮುಂಡಕ್ಕಿಂತ ಭಾರ ಈ ರುಂಡ, ದಂಡ ನಮಗೆ ಇಲ್ಲಿ
ಕಲಿಸೋಕ್ಕಿಂತ ಹೆಚ್ಚು ಡೊನೇಷನ್, ಫೀಸು ಕಾಲೇಜಲ್ಲಿ
ಗೋಳಿಟ್ವೋ ಅರ್ಜಿಗೆ
ಹೂಳಿಟ್ಟೋ ಸೀಟಿಗೆ
ಪಾಸಾಗೋ ಕೋಪಕ್ಕೆ
ನೀರಿಟ್ವೋ ಹೊಟ್ಟೆಗೆ

BA, MA ಡಿಗ್ರಿ ಇದ್ರೂ ಇಲ್ಲಾ ವರಮಾನ.. ಇಲ್ಲಾ ವರಮಾನ
ಬೀದಿಲ್ಕುಂತು ಪಾಲಿಶ್ ಹೊಡೆದ್ರು ಇಲ್ಲಾ ಅವಮಾನ.. ಇಲ್ಲಾ ಅವಮಾನ

ಅಣ್ಣಾ ಚಾಕರಿ ಕೊಡಣ್ಣ...
ಅಂತ ಕೇಳಾಯ್ತು, ಕೇಳಿ ಸಾಕಾಯ್ತು
ಯಪ್ಪೋ ನೌಕರಿ ಕೊಡಪ್ಪೋ..
ಅಂತ ಬೇಡಾಯ್ತು, ಕಾದು ಸಾಕಾಯ್ತು
ಇಂಟೆರ್ವ್ಯೋ.. ಬಾ ಅಂತಾರೆ
ಇನ್ ಫ್ಲೂಎನ್ಸ್.. ತಾ ಅಂತಾರೆ
ಎಲ್ಲಾ ಬ್ಯೂರೋಕ್ರೆಸಿ
ನೀತಿಲ್ಲಿದ್ದರೂ, ಜಾತಿಲಿ ಇಲ್ಲದಿದ್ದರೆ
ಕೆಲಸಕ್ಕೆ ಕಟಾವ್.. ಅವ್ರ್  ಗೇಟಿಂದ ಹಠಾವ್
ಬೇಸಾಯ ಮರ್ತೋಯ್ತು
ಸಂತಾನ ಹೆಚ್ಚೋಯ್ತು
ಉದ್ಯೋಗ ತುಂಬೋಯ್ತು
ಅದಾಯ ನಿಂತೋಯ್ತು

BA, MA ಡಿಗ್ರಿ ಇದ್ರೂ ಇಲ್ಲಾ ವರಮಾನ.. ಇಲ್ಲಾ ವರಮಾನ
ಬೀದಿಲ್ಕುಂತು ಪಾಲಿಶ್ ಹೊಡೆದ್ರು ಇಲ್ಲಾ ಅವಮಾನ.. ಇಲ್ಲಾ ಅವಮಾನ

ದೇಶ ಹಾಳುಬೀಳುವಾಗ..
ಕಾಸುಮಾಡೋ ಆಳು, ನಾಯಿಗಿಂತ ಕೀಳು
ಮನಷ್ಯ ಗೋಳು ಹೇಳುವಾಗ..
ಕೀವುಡು ನರಿಯ ವೇಷ, ತೆಗೆಯಬೇಕು ದೇಶ..
ನಮ್ ದುಡ್ಡು ಮಿಸ್ ಆಗಿಲ್ಲಿ,
ಕೊಳಿಯೋದು ಸ್ವಿಸ್ ಬ್ಯಾಂಕ್ ಅಲ್ಲಿ
ಎಲ್ಲಾ ಫಿಟೋಕ್ರೆಸಿ
ಗ್ಲೋಬಲ್ಲಿದ್ದರೂ ಜಾಬಲ್ಲಿ ಹಿಂದೆಬಿದ್ದರೆ
ಆಟಂಬಾಂಬ್ ಬೇಕೇ ನಾವ್ ಹಾಳಾಗ್ಹೋಗೋಕ್ಕೆ
ಯುಎಸ್ಎ ಫಸ್ಟ್ ಅಂತೆ
ಜಪಾನ್ ಫಾಸ್ಟ್  ಅಂತೆ
ಯೂರೋಪ್ ಬೆಸ್ಟ್ ಅಂತೆ
ನಮ್ ರೋಪ್ ಇಷ್ಟ್ ಅಂತೆ

BA, MA ಡಿಗ್ರಿ ಇದ್ರೂ ಇಲ್ಲಾ ವರಮಾನ.. ಇಲ್ಲಾ ವರಮಾನ
ಬೀದಿಲ್ಕುಂತು ಪಾಲಿಶ್ ಹೊಡೆದ್ರು ಇಲ್ಲಾ ಅವಮಾನ.. ಇಲ್ಲಾ ಅವಮಾನ
ಮುಂಡಕ್ಕಿಂತ ಭಾರ ಈ ರುಂಡ, ದಂಡ ನಮಗೆ ಇಲ್ಲಿ
ಕಲಿಸೋಕ್ಕಿಂತ ಹೆಚ್ಚು ಡೊನೇಷನ್, ಫೀಸು ಕಾಲೇಜಲ್ಲಿ
ಗೋಳಿಟ್ವೋ ಅರ್ಜಿಗೆ
ಹೂಳಿಟ್ಟೋ ಸೀಟಿಗೆ
ಪಾಸಾಗೋ ಕೋಪಕ್ಕೆ
ನೀರಿಟ್ವೋ ಹೊಟ್ಟೆಗೆ

BA, MA ಡಿಗ್ರಿ ಇದ್ರೂ ಇಲ್ಲಾ ವರಮಾನ.. ಇಲ್ಲಾ ವರಮಾನ
ಬೀದಿಲ್ಕುಂತು ಪಾಲಿಶ್ ಹೊಡೆದ್ರು ಇಲ್ಲಾ ಅವಮಾನ.. ಇಲ್ಲಾ ಅವಮಾನ

ಆರಂಭ ಪ್ರೇಮದಾರಂಭ

ಚಿತ್ರ: ಮನೆದೇವ್ರು (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್. ಪಿ. ಬಿ & ಕೆ. ಎಸ್. ಚಿತ್ರ

ದೊಂಗ ದೊಂಗ ದೊಂಗ...

ಆರಂಭ ಪ್ರೇಮದಾರಂಭ
ಶುಭವೇಳೇಲಿ ಪ್ರೇಮದಾರಂಭ
ಕುಶಲ ಕೇಳಿತು ಕಣ್ಣು
ವಿಷಯ ಹೇಳಿತು ಮನಸು
ಉದಯವಾಯಿತು ಸ್ನೇಹ
ಹೃದಯ ತುಂಬಿತು ಪ್ರೇಮ

ಆರಂಭ ಪ್ರೇಮದಾರಂಭ

ಆರಂಭ ಪ್ರೇಮದಾರಂಭ
ಶುಭವೇಳೇಲಿ ಪ್ರೇಮದಾರಂಭ

ಮೊದಲನೇ ಚುಂಬನ, ನೆನೆದರೇ ಕಂಪನ
ಮೊದಲನೇ ಅಪ್ಪುಗೆ, ನೆನೆದರೇ ಮೆಚ್ಚುಗೆ
ನೆನೆಯದೇ ನಡೆದವು ಬಿಸಿಬಿಸಿ ಸಲಿಗೆಯ ಸರಸಗಳು
ತಿಳಿದು ಬಂತು ಹೊಸ ವರಸೆಗಳು

ಸೈಕಲು ಪೋತೆ ಪೋನಿಲೆ ನೀ ಮುಂದಗ
ಬದುಕೇ ಪಂಡಗ
ತೀಸುಕೋ ದೊಂಗರಾಮುಡ ಈ ಮುತ್ಯಮ
ನೀಕೇ ನಿತ್ಯಮ
ಆರಂಭ ಪ್ರಣಯದಾರಂಭ..
ಆರಂಭ ಪ್ರಣಯದಾರಂಭ

ಆರಂಭ ಪ್ರಣಯದಾರಂಭ
ಶುಭವೇಳೇಲಿ ಆರಂಭ ಪ್ರಣಯದಾರಂಭ

ದೊಂಗ ದೊಂಗ ದೊಂಗ...
ದೊಂಗ ದೊಂಗ ದೊಂಗ...

ಪ್ರೇಮಕೇ ಒಡವೆಯೇ
ಪ್ರೇಮಕೇ ಮದುವೆಯೇ
ಪ್ರೇಮಕೇ ಶಾಸ್ತೃವೇ
ಪ್ರೇಮಕೇ ಮಂತ್ರವೇ
ಪ್ರೇಮವೇ ದೇವರು ಸರಿಸಮ ಇಬ್ಬರು ಅದರೆದುರು
ಮನದ ಮದುವೆಇದು ಮರೆಯದಿರು

ಪ್ರೇಮಕೀ ನೀ ಮಾಟಕಿ ನಾ ವಂದನಂ
ನಾನೇ ಅಂಕಿತಂ
ಮಾಟಕೀ ನಾನು ತಪ್ಪಿದರೆ ಪ್ರಾಣಾರ್ಪಿತಂ
ಇದುಮೇ ಜೀವಿತಂ

ಆರಂಭ ಜೀವನಾರಂಭ
ಆರಂಭ ಜೀವನಾರಂಭ

ಕಲ್ಯಾಣ ಪ್ರೇಮ ಕಲ್ಯಾಣ
ಕುಶಲ ಕೇಳಿತು ಕಣ್ಣು
ವಿಷಯ ಹೇಳಿತು ಮನಸು
ಸಿಹಿಯ ಹಂಚಿತು ರೂಪ
ಸಹಿಯ ಹಾಕಿತು ಹೃದಯ
ಕಲ್ಯಾಣ ಪ್ರೇಮ ಕಲ್ಯಾಣ

ಕಚ್ಚಿಕೊಂಡಾಡೋಣ ಬಾರೋ

ಚಿತ್ರ: ಲಾಕಪ್ ಡೆತ್ (1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಕೆ.ಎಸ್.ಚಿತ್ರ

ಕಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಬಾಯಿಗೆ ಬಾಯಿಯ ಬೀಗವ ಏರಿಸಿ..

ಕಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....

ಸಿಹಿಎಲ್ಲಾ ಇಟ್ಟುಕೊಂಡು ಹುಳಿಎಲ್ಲಾ ಬಿಟ್ಟುಕೊಂಡು
ಮಾವಿನತೋಪಿನ ತುಂಬಾ ಉರುಳುರುಳಾಡೋಣ
ಎದುರು ಬದುರು ಗಲ್ಲ ನಡುವೆ ಗಾಳಿ ಇಲ್ಲ
ಆಲೆ ಮನೆಯ ಬೆಲ್ಲ ತುಟಿಯ ಮೇಲೆ ನಲ್ಲ
ಘಮ ಘಮ ಗಂಧ ಚಿಲಿಪಿಲಿ ರಾಗ ಕಚ್ಚಿಕೊಂಡಿರುವಾಗ
ತಕ ತಕ ಆಸೆ ಮಿಕ ಮಿಕ ಕಣ್ಣು ಬಿಚ್ಚಿಕೊಂಡಿರುವಾಗ

ಕಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....

ತಂಗಾಳಿನ್ ತಬ್ಕೊಂಡು ಬೆಳದಿಂಗ್ಳನ್ ಬಳ್ಕೊಂಡು
ಅರೆಬಟ್ಟೆ ಉಟ್ಟುಬಿಟ್ಟು ಹಳಗುಡಿ ಆಡೋಣ
ನಾನು ಸೋತ್ರೆ ನೀನು ನೀನು ಸೋತ್ರೆ ನಾನು
ಆಟ ನಡೆಯಬೇಕು ಯಾರು ಗೆದ್ದರೇನು
ಮನಸಿಗೆ ಮನಸು ಮಾತಿಗೆ ಮಾತು ನೆಚ್ಚಿಕೊಂಡಿರುವಾಗ
ಉಸಿರಿಗೆ ಉಸಿರು ಹೆಸರಿಗೆ ಹೆಸರು ಹಚ್ಚಿಕೊಂಡಿರುವಾಗ

ಕಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಬಾಯಿಗೆ ಬಾಯಿಯ ಬೀಗವ ಏರಿಸಿ..

ಕಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....

ಜನುಮ ನಮಗಿರುವುದು ಒಂದೇ ಜನುಮ

ಚಿತ್ರ: ಲಾಕಪ್ ಡೆತ್(1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು: ಎಸ್. ಪಿ. ಬಿ

ಜನುಮ ನಮಗಿರುವುದು ಒಂದೇ ಜನುಮ
ಈ ಜನುಮದಲಿರಲಿ ಧರ್ಮ
ಉಳಿಸು ಧರ್ಮ...
ಅಳಿಸು ಅಧರ್ಮ...
ಗೆಲುವು ಸೋಲು ನಿನದೇ ಕೊನೆ ತೀರ್ಮಾನ
ಪ್ರಭು ನೀನೆ.. ಪ್ರಜೆ ನೀನೆ..

ಬೂಟು ತೊಟ್ಟ ಭೂತಗಳ ಆಚೆ ಅಟ್ಟಬೇಕು
ಹಾಳು ಬಿದ್ದ ಬೇಲಿಗಳನು ಕೀಳಬೇಕು
ಧೀನರನ್ನು ಮುಟ್ಟದಂತ ಕೋಟೆ ಕಟ್ಟಬೇಕು
ಕೋಟಿಯಡಿ ಭಕ್ಷಕರನು ಮುಚ್ಚಬೇಕು
ನಾವು ಕೇಳದೇ ನ್ಯಾಯ ದಕ್ಕದು
ನಾವು ಕಾಯದೇ ನ್ಯಾಯ ಬಾಳದು
ಪಡೆಯೋ ಪಡೆಯ ಪಾತ್ರ ನಿನ್ನದು
ಪ್ರಭು ನೀನೆ.. ಪ್ರಜೆ ನೀನೆ..

ಜನುಮ ನಮಗಿರುವುದು ಒಂದೇ ಜನುಮ
ಈ ಜನುಮದಲಿರಲಿ ಧರ್ಮ
ಉಳಿಸು ಧರ್ಮ...
ಅಳಿಸು ಅಧರ್ಮ...
ಗೆಲುವು ಸೋಲು ನಿನದೆ ಕೊನೆ ತೀರ್ಮಾನ
ಪ್ರಭು ನೀನೆ.. ಪ್ರಜೆ ನೀನೆ..

ಭೂಜು ಹಿಡಿದ ಕಟ್ಟಳೆಯ ಧೂಳು ಕೊಡವಬೇಕು
ತಾತನಿಟ್ಟ ತಪ್ಪುಗಳನ್ನು ತಿದ್ದಬೇಕು
ಮಾರಿಕೊಳ್ಳೊ ಮಂತ್ರಗಳ ಮಾನಬಿಚ್ಚಬೇಕು
ಜಾರಿಕೊಳ್ಳೊ ದಾರಿಗಳನು ಮುಚ್ಚಬೇಕು
ನಾವು ಏಳದೆ ಊರು ಏಳದು
ನಾವು ಸಾಯದೆ ಸ್ವರ್ಗ ಕಾಣದು
ಅಳಿಸಿ ಉಳಿಸೊ ಕಾರ್ಯ ನಿನದು
ಪ್ರಭು ನೀನೆ.. ಪ್ರಜೆ ನೀನೆ..

ಜನುಮ ನಮಗಿರುವುದು ಒಂದೇ ಜನುಮ
ಈ ಜನುಮದಲಿರಲಿ ಧರ್ಮ
ಉಳಿಸು ಧರ್ಮ...
ಅಳಿಸು ಅಧರ್ಮ...
ಗೆಲುವು ಸೋಲು ನಿನದೇ ಕೊನೆ ತೀರ್ಮಾನ
ಪ್ರಭು ನೀನೆ.. ಪ್ರಜೆ ನೀನೆ..

ನಯನದ ಮೇಲಿಂಬಿಂಬದೊಳೀಗ ಪ್ರೇಮದ ಅಂಕುರಂ

ಚಿತ್ರ: ಕಾದಂಬರಿ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು: ಮನು & ಚಂದ್ರಿಕಾ ಗುರುರಾಜ್

ನಯನದ ಮೇಲಿಂಬಿಂಬದೊಳೀಗ ಪ್ರೇಮದ ಅಂಕುರಂ ಆಗಿಹುದೇ
ಅಧರದ ಮೇಲಿಂ ಮಧುವಣಕೀಗ ನವರಸ ಸಿಂಚನಂ ಆಗಿಹುದೇ
ಕುಂತೆಡೆ ನಿಂತೆಡೆ ಹೃದಯದ ಸೇರ್ಪಡೆ ಪ್ರೇಮದ ಪಾಠಕೆ ಮೂಲವಿದೇ
ಚುಂಬನ ಚುಂಬನ ಪ್ರಥಮದ ಚುಂಬನ ಪ್ರೇಮದ ರಾಜ್ಯಕೆ ದಾರಿಯಿದೇ

ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ
ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ
ಪ್ರಿಯಕರಂ ಮಧುಕರಂ..
ಪ್ರಿಯಕರಂ ಮಧುಕರಂ..
ಕಂಪನಂ ಚುಂಬನಂ..
ಕಂಪನಂ ಚುಂಬನಂ.. ಓಹೋ..

ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ
ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ

ಗಾಳಿ..ನೀರು..ನೀರು..ಗಾಳಿ
ಭೂಮಿ..ಕಾಲ..ಕಾಲ..ಭೂಮಿ
ಸೃಷ್ಠಿಯ ಚರಿತಂ.. ಹಾ.. ಚುಂಬನ ಭರಿತಂ
ಬಿಂದು ಬಿಂದುಗೆ..
ಸಂಗ ಮುತ್ತಿಗೆ..
ಅಂದು ಇಂದಿಗೆ..
ಮಿಂದ ಹೊತ್ತಿಗೆ..
ನಾದದಂಕುರ ನಾದದಿಂದಿಲೇ ಪ್ರೇಮದಂಕುರ

ಪ್ರೇಮ..ಪ್ರಾಣ..ಪ್ರಾಣ..ಪ್ರೇಮ
ನಾನು..ನೀನು..ನೀನು..ನಾನು
ಮಿಥುನಕೆ ಶರಣಂ.. ಹಾ.. ಸ್ನೇಹಕೆ ಕವಚಂ
ಅಶ್ಲೀಲವಲ್ಲ.. ಆನಂದ ಎಲ್ಲಾ
ಪ್ರಶ್ನೆಯೇ ಇಲ್ಲಾ.. ಉತ್ತರ ಎಲ್ಲಾ
ಮುತ್ತು ಸುಳ್ಳಲ್ಲ ಮುತ್ತಿನಿಂದಲೇ ಪ್ರೇಮ ಇಲ್ಲೆಲ್ಲಾ
ನಿರ್ಮಲಂ ನಿರ್ಗುಣಂ..
ಬಂಧುರಂ ಸುಂದರಂ..
ಸತ್ಯವೇ ಚುಂಬನಂ..
ಚುಂಬನಂ ಸ್ವೀಕರಂ.. ಓಹೋ..

ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ
ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ

ಅಲ್ಲೋ..ಇಲ್ಲೋ..ಬೇರೆ..ಎಲ್ಲೋ
ಆಗೋ..ಈಗೋ.. ಇಂದೋ.. ಎಂದೋ
ಮಿಲನದ ಸಮಯಂ.. ಹಾ.. ಪೂರ್ವದ ಲಿಖಿತಂ
ಕಣ್ಣುಕಣ್ಣಿಗೆ.. ಕೊಟ್ಟ ಮುತ್ತಿಗೆ
ಮಾತು ಮೌನಕೆ.. ಇಟ್ಟ ಮುತ್ತಿಗೆ
ಮುತ್ತು ರೂಪದ ಪ್ರೇಮ ವೇದದ ಅರ್ಥ ಗೋಚರಂ

ಪ್ರೇಮಿ..ನಾನು..ಕೇಳು..ಏನು
ನೀನು..ನಾನು..ಕೊಟ್ಟ..ಮುತ್ತು
ಪುನರಪಿ ಜನನಂ.. ಓ.. ನವರಸ ಜನಕಂ
ಹೆಣ್ಣು ಗಂಡಿಗೆ.. ಪ್ರೀತಿಯಾದರೇ
ಮುತ್ತು ಎಂಬುದೇ.. ನೆನಪಿನುಡುಗೊರೆ
ಜನ್ಮ ಜನ್ಮಕೂ ಮುತ್ತು ಅಕ್ಷಯಂ ನಿನಗೆ ಅರ್ಪಣಂ
ವಂದನಂ ಚುಂಬನಂ..
ಶಾಶ್ವತಂ ಬಂಧನಂ..
ಅರ್ಪಿತಂ ಜೀವನಂ..
ಧನ್ಯವೀ ಚುಂಬನಂ.. ಓ..ಹೋ

ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ
ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ
ಪ್ರಿಯಕರಂ ಮಧುಕರಂ..
ಪ್ರಿಯಕರಂ ಮಧುಕರಂ..
ಕಂಪನಂ ಚುಂಬನಂ..
ಕಂಪನಂ ಚುಂಬನಂ.. ಓ.. ಹೋ

ಬಾಗೂರಪ್ಪನ ಮಗನೂರಳ್ಳಿಯ

ಕಿರಾತಕ (1988)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ

ಬಾಗೂರಪ್ಪನ ಮಗನೂರಳ್ಳಿಯ ತಳವಾರಯ್ಯನ
ಮಗನ ಅಕ್ಕನಯ್ಯನವ್ವ ತಾತ ನಿಲ್ಲದವನ
ಮಾವನ ಭಾವಮೈದ.. ಈ ಹಳ್ಳಿ ಹೈದ

ಕೆಟ್ಟು ಪಟ್ಟಣ ಸೇರಬೇಡ.. ಸೇರಿದರೂ
ಕೆಟ್ಟ ದಳ್ಳಾಳಿಗಳ ಕೂಡಬೇಡ.. ಕೂಡಿದರೂ
ಕೆಟ್ಟ ಬ್ರಾಂಧಿ ವಿಸ್ಕಿ ಇಗ್ಗಬೇಡ.. ಇಗ್ಗಿದರೂ
ಕೆಟ್ಟ ಜೂಜು ಗೀಜು ಆಡಬೇಡ.. ಆಡಿದರೂ..ಆಡಿದರೂ..ಆಡಿದರೂ..
ಬಿಳಿಯ ಸೊಂಟದ ಮೈಯ್ಯ..
ಹಾಯ್..ಹಾಯ್..ಹಾಯ್..ಹಾಯ್
ಬಳೆಯ ತುಂಬಿದ ಕೈಯ ಹಿಡಿಯ ಬಾರದು
ಹಿಡಿದರೇ ಗೋವಿಂದನ ಮರೆಯಬಾರದು
ಗೋವಿಂದ.. ಗೋವಿಂದ

420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗೂಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ
ತಂದಿದ್ದ ಕಾಸು ಎಲ್ಲಾನು ಲಾಸು
ಇರೋದಿಷ್ಟೇ ಹಾಸು..
ಬಾರೆ ನನ್ನ ಜುಮಕಿ ಜುಮಕಿ ಜಮುನಾ
ನಾಚ್ ಮೇರೆ ನೂರುಜ್ಹಾನ್ ಯಮುನಾ
ವಾಡಿ ಎನ್ನ ತಂಜಾವೂರು ಪೊಣ್ಣೆ
ರಾವೆ ನಾ ಚಲಿಯ ಚಿನ್ನದಾನ

420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗೂಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ

ರಂಗಿನ ಪಟ್ಟಣ ಬೆಂಕಿ ಪೊಟ್ಟಣವೂ
ಒಳ್ಳೆಯತನಕೆ ಯಾರಿಗೂ ಬಗ್ಗದು
ಹಳ್ಳಿಯ ಜನಕೆ ಈ ಊರು ಒಗ್ಗದು
ನಮ್ಮೂರು ಚಿಕ್ಕದು ನಿಮ್ಮೂರು ದೊಡ್ಡದವ್ವ
ಊರಿನ ಜೊತೆಗೆ ಸಂತೆಯು ದೊಡ್ಡದಿಲ್ಲಿ
ಎಮ್ಮೆಯ ಕಟ್ಟುವ ಗೂಟವು ದೊಡ್ಡದು
ಗದ್ದೆ ಹೂಳುವ ಕೈಯಿ.. ಅಯ್ಯೋ
ಮುಟ್ಟಿ ಒದ್ದೆಯಾಯ್ತು ಮೈಯಿ
ನಿನ್ನ ಕೈಯಿ ಚಿಕ್ಕದು
ಮುಟ್ಟಿದರೇ ಕೈಯಿ ರೇಟು ಕೂಡ ದೊಡ್ಡದು
ಗೋವಿಂದ.. ಗೋವಿಂದ

420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗೂಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ

ಕಲಿಯುಗಕಿನ್ನು ಬಂತು ಕೊನೆಗಾಲ
ಕಲ್ಲಿನ ಕೋಳಿ ಕೂಗುವ ಕಾಲ
ಕಲ್ಲಿನ ಬಸವ ಮೇಯುವ ಕಾಲ
ನಮ್ಮನು ನಾವೇ ತಿನ್ನುವ ಶನಿಗಾಲ
ಇನ್ನೇನು ಬಂತು ಕಾಯಿರಿ ಎಲ್ಲಾ
ಸಾಯುವ ಮುಂಚೆ ಮೆರೆಯಿರಿ ಎಲ್ಲಾ
ಶಿವನು ದಡ್ಡನಲ್ಲ.. ಶಿವ ಶಿವ
ನಮ್ಮ ಕಥೆಯನೆಲ್ಲಾ ಬಲ್ಲ
ನಮ್ಮ ಪಾಪದ ಬುಟ್ಟಿ ದೊಡ್ಡದು
ಚಿತ್ರಗುಪ್ತನ ಶಿಕ್ಷೆಯ ಲೀಷ್ಟು ಕೂಡ ದೊಡ್ಡದು
ಗೋವಿಂದ.. ಗೋವಿಂದ

ಅರೆ..ಅರೆ..ಅಹಾ..
420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗೂಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ
ತಂದಿದ್ದ ಕಾಸು ಎಲ್ಲಾನು ಲಾಸು
ಇರೋದಿಷ್ಟೇ ಹಾಸು..
ಬಾರೆ ನನ್ನ ಜುಮಕಿ ಜುಮಕಿ ಜಮುನಾ
ನಾಚ್ ಮೇರೆ ನೂರುಜ್ಹಾನ್ ಯಮುನಾ
ವಾಡಿ ಎನ್ನ ತಂಜಾವೂರು ಪೊಣ್ಣೆ
ರಾವೆ ನಾ ಚಲಿಯ ಚಿನ್ನದಾನ..

ನಾನು ನೀನು ಬೇರೆಯಾದರೆ ಏನು ಮಾಡುವೆ

ಚಿತ್ರ: ಝೇಂಕಾರ (1992)
ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ನಾನು ನೀನು ಬೇರೆಯಾದರೆ ಏನು ಮಾಡುವೆ
ನನ್ನ ಮರೆಯುವೆಯಾ, ನನ್ನನ್ನೇ ನೆನೆಯುವೆಯಾ

ಒ.. ಓ.....

ನಾನು ನೀನು ಬೇರೆಯಾದರೆ ಏನು ಮಾಡುವೆ
ನನ್ನ ಮರೆಯುವೆಯಾ, ನನ್ನನ್ನೇ ನೆನೆಯುವೆಯಾ
ಆಸೆ ಅಳಿಸುವೆಯಾ, ನನ್ನಾಣೆ ಉಳಿಸುವೆಯಾ
ನಾನು ನೀನು ಬೇರೆಯಾದರೆ ಏನು ಮಾಡುವೆ
ನನ್ನ ಮರೆಯುವೆಯಾ, ನನ್ನನ್ನೇ ನೆನೆಯುವೆಯಾ
ಆಸೆ ಅಳಿಸುವೆಯಾ, ನನ್ನಾಣೆ ಉಳಿಸುವೆಯಾ

ಭೂಮಿಯಿದು ಎರಡಾಗಿ ಹೋಗಿ
ನಾನ್ ಆಕಡೆ ನೀನ್ ಈಕಡೆ, ಆಗ ಗತಿ ಏನು
ಗಾಳಿಯಿದು ವಿಷವಾಗಿ ಹೋಗಿ
ನಾನಳಿದರೆ ನೀನುಳಿದರೆ, ಆಗ ಗತಿ ಏನು
ನಿಜವಾಗಿಯೇ ಪ್ರೀತಿಸೋ ಜೋಡಿಯಲಿ
ಬರೀ ಒಬ್ಬರು ಸಾಯುವರೇ
ನಿಜವಾಗಿಯು ಭೂಮಿಯು ಸೀಳಿದರೆ
ಜನ ಪ್ರೀತಿಯ ನಂಬುವರೇ

ನಾನು ನೀನು ಬೇರೆಯಾದರೆ ಏನು ಮಾಡುವೆ
ನನ್ನ ಮರೆಯುವೆಯಾ, ನನ್ನನ್ನೇ ನೆನೆಯುವೆಯಾ
ಆಸೆ ಅಳಿಸುವೆಯಾ, ನನ್ನಾಣೆ ಉಳಿಸುವೆಯಾ

ದಿನಕರನೇ ಬರದಂತೆ ಆಗಿ
ಹಗಲಿಲ್ಲದೇ ನಾ ದೊರಕದೇ ಹೇಗಿರುವೆ ನೀನು
ನಿದಿರೆಯು ತಾ ಬರದಂತೆ ಆಗಿ
ಕನಸಿಲ್ಲದೇ ನನ್ನ ನೋಡದೇ ಹೇಗಿರುವೆ ನೀನು
ಮನಸಲ್ಲಿರೋ ನಿನ್ನಯ ಮೊಗವನ್ನೇ ನನ್ನ ಕಣ್ಣಿಗೆ ಎಳೆತರುವೆ
ಇರುಳೆಲ್ಲವೂ ನಿನ್ನಯ ಮೊಗದೆದುರು ನನ್ನ ಕಣ್ಗಳ ಬೆಳಗಿಸುವೆ

ನಾನು ನೀನು ಬೇರೆ.....

ನಿರ್ಮಲತೆ ಈ ಪ್ರೇಮಸಾಗರ
ಬಿಡು ಅಂಜಿಕೆ ಇಡು ನಂಬಿಕೆ, ಪ್ರೀತಿಸುವ ಬಾರಾ

ನಾನು ನೀನು ಬೇರೆಯಾದರೆ ಏನು ಮಾಡುವೆ...