Wednesday 30 November 2016

ಮಾವಿನಮರವೇ ಮಾವಿನಮರವೇ ನನ್ನ ಮರೆತೆಯಾ

ಚಿತ್ರ: ಬಾಳೊಂದು ಭಾವಗೀತೆ (1988)
ಸಾಹಿತ್ಯ: ಎಮ್. ಎನ್. ವ್ಯಾಸರಾವ್
ಸಂಗೀತ: ನಾದಬ್ರಹ್ಮ
ಗಾಯನ: ಲತಾ ಹಂಸಲೇಖ & ಬಿ. ಆರ್. ಛಾಯಾ

ಮಾವಿನಮರವೇ ಮಾವಿನಮರವೇ ನನ್ನ ಮರೆತೆಯಾ
ನಿನ್ನ ಮಡಿಲಿನ ಗೂಡಿನಲಿ ನೆಲೆ ನೀಡೆಯಾ
ಕೋಗಿಲೆಮರಿಯೇ ಕೋಗಿಲೆಮರಿಯೇ ಹೇಗೆ ಮರೆಯಲಿ
ನಿನ್ನ ತಬ್ಬಲಿ ಮಾಡಿನೊಂದೆ ಈ ಬಾಳಿನಲಿ

ಅಮ್ಮ ಮುದ್ದು ಅಮ್ಮ ಬಲಿಸು ಬಗಲ ರೆಕ್ಕೆ ಅಮ್ಮ ನನ್ನ ಅಮ್ಮ ತೊಡಿಸು ಪ್ರೀತಿ ರಕ್ಷೆ
ತಾಯಿಯಾಗಿ ಪ್ರೀತಿ ಮಮತೆ ನಿನಗೆ ನೀಡಲಿಲ್ಲ
ಯಾವ ಗೂಡಿನಲ್ಲೋ ನಿನ್ನ ಬಿಟ್ಟು ಬಂದೆನಲ್ಲಾ
ಮರವಾಗಿ ನೆರಳಾಗಿ ಇರುವಾಸೆ ಇದೆ
ಒಲವಿಂದು ಕವಲಾಗಿ ಹಾಯ್ದಾಡುತಿದೆ
ಇದೆ.. ಇದೆ..

ಮಾವಿನಮರವೇ ಮಾವಿನಮರವೇ ನನ್ನ ಮರೆತೆಯಾ
ನಿನ್ನ ಮಡಿಲಿನ ಗೂಡಿನಲಿ ನೆಲೆ ನೀಡೆಯಾ

ಗುಮ್ಮ ಬಂದನಮ್ಮ ಇರುಳ ಭಯವ ನೀಗೆ ಅಮ್ಮ ನನ್ನ ಅಮ್ಮ ನನಗೂ ಕಥೆಯ ಹೇಳೇ
ಎದೆಗೆ ಗಾಯಮಾಡಿದಂಥ ಕಥೆಯ ಹೇಳಲೇನು
ಎರಡು ದೋಣಿಯಲ್ಲಿ ನಿಂತ ಬದುಕ ತಿಳಿಸಲೇನು
ನೀನಿಂದು ನೆನಪಾಗಿ ನಾ ಬೆಂದೆ ಮಗು
ಬಾಳೆಲ್ಲಾ ಉರಿವಾಗ ಇನ್ನೆಲ್ಲಿ ನಗು
ನಗು.. ಮಗು

ಮಾವಿನಮರವೇ ಮಾವಿನಮರವೇ ನನ್ನ ಮರೆತೆಯಾ
ನಿನ್ನ ಮಡಿಲಿನ ಗೂಡಿನಲಿ ನೆಲೆ ನೀಡೆಯಾ
ಕೋಗಿಲೆಮರಿಯೇ ಕೋಗಿಲೆಮರಿಯೇ ಹೇಗೆ ಮರೆಯಲಿ
ನಿನ್ನ ತಬ್ಬಲಿ ಮಾಡಿನೊಂದೆ ಈ ಬಾಳಿನಲಿ

ದೂರದಿಕ್ಕಿಗೆ ಹಾರೋ ಹಕ್ಕಿಗೆ ತೀರ ಸಿಕ್ಕಿತು ಬಾ

ಚಿತ್ರ: ಮಿಸ್ಟರ್ ವಾಸು (1995)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ರಂಗೀಲಾ.. ರಂಗೀಲಾ.. ಐ ಲವ್ ಯು

ದೂರದಿಕ್ಕಿಗೆ ಹಾರೋ ಹಕ್ಕಿಗೆ ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ ಜೋಡಿ ಸಿಕ್ಕಿತು ಬಾ
ರಂಗೀಲಾ.. ಐ ಲವ್ ಯು.. ಐ ಲವ್ ಯು

ಐ ಲವ್ ಯು.. ಐ ಲವ್ ಯು.. ಐ ಲವ್ ಯು..
ದೂರದಿಕ್ಕಿಗೆ ಹಾರೋ ಹಕ್ಕಿಗೆ ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ ಜೋಡಿ ಸಿಕ್ಕಿತು ಬಾ
ಐ ಲವ್ ಯು.. ಓ ರಾಜಾ.. ಐ ಲವ್ ಯು..

ರಂಗೀಲಾ.. ರಂಗೀಲಾ.. ಐ ಲವ್ ಯು

ಎದೆಯ ಗೂಡಿನಂಜಿಕೆ ಹಾರಿ ಹೋಯಿತು
ಅನುಮಾನ ಮರೆಯಾಯ್ತು
ಅಭಿಮಾನ ನನದಾಯ್ತು
ನನ್ನ ಮನದ ನಂಬಿಕೆ ಹಾಡಿ ಹೇಳಿತು
ಈ ಚಲುವೆ ನನ್ನವಳು
ನನಗಾಗಿ ಇರುವವಳು

ಒ.. ಓ.. ಒ.. ಓ..
ಪ್ರೇಮ.. ಕೈ ಮುಗಿವೆ, ಶರಣೆನುವೆ,
ಕಂಬನಿ ಕುಸುಮ ಚರಣ ಕೇಳುವೆ
ಒಲಿಯಿತು ಬಾ ಫಲಿಸಿತು ನನ್ನ ನಿನ್ನ ಮಿಲನಕಿಂದು ಪ್ರೇಮಾಂಜಲಿ

ರಂಗೀಲಾ.. ರಂಗೀಲಾ.. ಐ ಲವ್ ಯು

ದೂರದಿಕ್ಕಿಗೆ ಹಾರೋ ಹಕ್ಕಿಗೆ ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ ಜೋಡಿ ಸಿಕ್ಕಿತು ಬಾ
ಐ ಲವ್ ಯು.. ಓ ರಾಜಾ.. ಐ ಲವ್ ಯು..

ರಂಗೀಲಾ.. ಐ ಲವ್ ಯು.. ರಂಗೀಲಾ..

ಅಂದವಾದ ಹೂವಿಗೆ ನಾನೇ ಕಾವಲು
ಲತೆಯಲ್ಲಿ ಎಲೆಯಾಗಿ, ಜೊತೆಯಲ್ಲಿ ನೆರಳಾಗಿ
ನಿನ್ನ ಕಣ್ಣ ಕನ್ನಡಿ ನನ್ನೇ ಕಾಣಲು
ಅಳುವಲ್ಲಿ ಹನಿಯಾಗಿ, ನಗುವಲ್ಲಿ ದನಿಯಾಗಿ
ಈ.. ಸ್ನೇಹ ಬದುಕಿನಲಿ ನೆನಪಿರಲಿ
ಹೃದಯದ ಕವನ ನುಡಿಯುತಲಿರಲಿ
ಒಲಿಯಿತು ಬಾ ಫಲಿಸಿತು ನನ್ನ ನಿನ್ನ ಮಿಲನಕಿಂದು ಗೀತಾಂಜಲಿ

ಐ ಲವ್ ಯು.. ಐ ಲವ್ ಯು.. ಐ ಲವ್ ಯು..

ದೂರದಿಕ್ಕಿಗೆ ಹಾರೋ ಹಕ್ಕಿಗೆ ತೀರ ಸಿಕ್ಕಿತು ಬಾ
ತೀರ ಸಿಕ್ಕಿದ ಮೇಲೆ ಮೆಚ್ಚಿದ ಜೋಡಿ ಸಿಕ್ಕಿತು ಬಾ
ರಂಗೀಲಾ.. ಐ ಲವ್ ಯು.. ಐ ಲವ್ ಯು
ಐ ಲವ್ ಯು.. ಓ ರಾಣಿ.. ಐ ಲವ್ ಯು

ಹೃದಯವೇ.. ನೀನು ವಿಧಿಯ ಕೈಯ್ಯಲಿರುವ ಜಾಗಕೆ

ಚಿತ್ರ: ಬಾಳೊಂದು ಭಾವಗೀತೆ (1988)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ.

ಹೃದಯವೇ.. ನೀನು ವಿಧಿಯ ಕೈಯ್ಯಲಿರುವ ಜಾಗಕೆ
ಸಾವು ಬರುವ ಮುನ್ನ ನುಡಿವೆ ಜಾಗ್ರತೆ
ನಿದ್ದೆ ಮಾಡದೆ ಮಾತೆಲ್ಲಾ ಕೇಳುವೆ
ಸದ್ದು ಮಾಡುತಾ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೆ

ಹೃದಯವೇ.. ನೀನು ವಿಧಿಯ ಕೈಯ್ಯಲಿರುವ ಜಾಗಕೆ
ಸಾವು ಬರುವ ಮುನ್ನ ನುಡಿವೆ ಜಾಗ್ರತೆ

ಕಣ್ಣಿಂದಲೇ ಎಲ್ಲಾರನು ಮಾತಾಡಿಸುವೆ
ಹೆಣ್ಣಾಗಲೀ ಗಂಡಾಗಲೀ ಜತೆಗೂಡಿಸುವೆ
ಮನಮಿಡಿಯುವ ಕಥೆಯಿದ್ದರೆ ಕಣ್ಣೀರಿಡುವೆ
ಸಂತೋಷದ ಭರದಲ್ಲಿ ಎಲ್ಲಾ ಮರೆವೆ
ನೋವೇ.. ನಿನ್ನ ಮುಖದ ನಗೆಯೋ
ಸಾವೇ.. ನಿನ್ನ ಸುಖದ ಕೊನೆಯೋ
ನಿದ್ದೆ ಮಾಡದೆ ಮಾತೆಲ್ಲಾ ಕೇಳುವೆ
ಸದ್ದು ಮಾಡುತಾ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೆ

ಕೋಟ್ಯಾಂತರ ನರನಾಡಿಯ ಕೋಟೆಯಲಿರುವೆ
ಹರಿದಾಡುವ ಬಿಸಿರಕ್ತದ ಮಡುವಲ್ಲಿರುವೆ
ಮೂಳೆಗಳ ಕಾವಲಲಿ ಮಿಡಿಯುತಲಿರುವೆ
ನಾಳೆಗಳ ಎಣಿಸುತಲಿ ನಡುಗುತಲಿರುವೆ
ನಿನ್ನ.. ಹಾಡಿನ ಕೊನೆಯ ತಾಳ
ನನ್ನ.. ಬಾಳಿನ ಕೊನೆಯ ಕಾಲ
ನಿದ್ದೆ ಮಾಡದೆ ಮಾತೆಲ್ಲಾ ಕೇಳುವೆ
ಸದ್ದು ಮಾಡುತಾ ನೀ ಮೋಜು ನೋಡುವೆ
ಗಾಳವ ಹಾಕದೇನೆ ಜೀವ ತೆಗೆಯುವೆ

ಹೃದಯವೇ.. ನೀನು ವಿಧಿಯ ಕೈಯ್ಯಲಿರುವ ಜಾಗಕೆ
ಸಾವು ಬರುವ ಮುನ್ನ ನುಡಿವೆ ಜಾಗ್ರತೆ

ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ

ಚಿತ್ರ: ರೌಡಿ MLA (1991)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ರೂಪ್ ತೇರಾ ಮಸ್ತಾನ ಪ್ಯಾರ್ ಮೇರಾ ದೀವಾನ
ಈ ಇರುಳಿನಲಿ ತಂಗಾಳಿಯಲಿ ನೀ ಸರಿ ವಿರಹ
ನೀ ಸರಿ ವಿರಹ

ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ರೂಪ್ ತೇರಾ ಮಸ್ತಾನ ಪ್ಯಾರ್ ಮೇರಾ ದೀವಾನ
ಈ ಇರುಳಿನಲಿ ತಂಗಾಳಿಯಲಿ ನೀ ಸರಿ ವಿರಹ
ನೀ ಸರಿ ವಿರಹ

ಈ.. ಅಂದಭಾರ, ಚಂದಭಾರ
ಆಸೆಭಾರ, ಇಳಿಸುಬಾರಾ...
ಹಾ.. ಮಿನುಗುತಾರೆ, ಕುಲುಕುತಾರೆ
ಬಳುಕುತಾರೆ, ಎಲ್ಲಾತಾರೆ..
ಈ ಸೆರೆ ಕನ್ಯಾಸೆರೆ
ಈ ಹೊರೆ ಭೂವೀಹೊರೆ
ಸಹಿಸೆನು ಸಹಿಸೆನು ಸಹಿಸೆನು ಈ ಹೊರೆ ಸಹಿಸೆ ನಾ
ಸೈರಣೇ ಸೈರಣೇ ಇದ್ದರೇ ಸಂತಸ ತರುವೆ ನಾ

ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ

ಹಾ... ನಿದ್ದೆಯಲ್ಲಿ ಸೌಖ್ಯವಿಲ್ಲ
ಊಟದಲ್ಲಿ ಸ್ವಾದವಿಲ್ಲ
ಹೆ, ಬಾ... ಒಂಟಿಬಾಳು ಸಾಲಲಿಲ್ಲ
ಬ್ರಹ್ಮಚಾರ್ಯ ಹೊಂದಲಿಲ್ಲ
ಸ್ವಾಗತ, ಸುಸ್ವಾಗತ
ಹಾಸಿಗೆ ಹೂವಾಯಿತಾ
ಮರೆಯೆನು ಮರೆಯೆನು ಮರೆಯೆನು ಈದಿನ ಮರೆಯೆನಾ
ಮರೆತರೆ ಮರೆತರೆ ಬರುವೆನು ಪ್ರತೀದಿನ ಹೀಗೆ ನಾ

ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ವಿರಹ ವಿರಹ ವಿರಹ ದಿನವೂ ಇದೇ ಹಣೆಬರಹ
ರೂಪ್ ತೇರಾ ಮಸ್ತಾನ ಪ್ಯಾರ್ ಮೇರಾ ದೀವಾನ
ಈ ಇರುಳಿನಲಿ ತಂಗಾಳಿಯಲಿ ನೀ ಸರಿ ವಿರಹ
ನೀ ಸರಿ ವಿರಹ

ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ

ಚಿತ್ರ: ಮಣ್ಣಿನ ದೋಣಿ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ
ಮನ ಹರೆಯದ ನದಿಯಾಗಿದೆ.. ಓ..
ತನು ಬದುಕಿನ ಕಡಲಾಗಿದೆ

ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ
ಮನ ಹರೆಯದ ನದಿಯಾಗಿದೆ.. ಓ..
ತನು ಬದುಕಿನ ಕಡಲಾಗಿದೆ

ಮೊದಲನೇ ನೋಟ ಮದನಮಳೆ
ಮೊದಲನೇ ಸ್ಪರ್ಶ ರತಿಯಮಳೆ
ಮೊದಲನೇ ಮಾತು ಕವನಮಳೆ
ಮೊದಲನೇ ನಗುವು ಹುಣ್ಣಿಮೆಮಳೆ
ತುಂತುರು ತುಂತುರು ಮಳೆಯಲಿ ಮೊದಲನೇ ಮಿಲನ
ಮಳೆಯ ಮಣ್ಣಿನ ಮದುವೆಲಿ ಬೆರೆತವು ನಯನ
ಗುಡಿಸಿದವು ಗುಡುಗುಗಳು
ಬೆಡಗಿದವು ಮಿಂಚುಗಳು
ಮಳೆಯ ಹಾಡ ಮರೆಯ ಬಲ್ಲದೇ...

ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ
ಮನ ಹರೆಯದ ನದಿಯಾಗಿದೆ.. ಓ..
ತನು ಬದುಕಿನ ಕಡಲಾಗಿದೆ

ಆಲಿಂಗನಕೆ ಭರಣಿಮಳೆ
ಸಿಹಿ ಚುಂಬನಕೆ ಸ್ವಾತಿಮಳೆ
ವಸಗೆಯ ಹಗಲು ಹಸ್ತಮಳೆ
ಬೆಸುಗೆಯ ರಾತ್ರಿ ಚಿತ್ತಮಳೆ
ಮಧುರ ಮಧುರ ಮೈತ್ರಿಯ ಮಳೆಯಲಿ ಶಯನ
ಒಡಲ ಒಳಗೆ ಉರಿಯುವ ಬಯಕೆಯ ಶಮನ
ಮುಂಗಾರು ಹಿಂಗಾರು
ಮಳೆ ನೀರೇ ಪನ್ನೀರು
ಮಳೆಯ ಹಾಡ ಮರೆಯ ಬಲ್ಲದೇ...

ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ
ಮನ ಹರೆಯದ ನದಿಯಾಗಿದೆ.. ಓ..
ತನು ಬದುಕಿನ ಕಡಲಾಗಿದೆ

ಮಳೆ ಮಳೆ ಮಳೆ ಮಳೆ ಒಲವಿನ ಸುರಿಮಳೆ
ಮಳೆ ಮಳೆ ಮಳೆ ಮಳೆ ಕನಸಿನ ಸುರಿಮಳೆ
ಮನ ಹರೆಯದ ನದಿಯಾಗಿದೆ.. ಓ..
ತನು ಬದುಕಿನ ಕಡಲಾಗಿದೆ

ದುಂಬಿ ದುಂಬಿ ದುಂಬಿ ದುಂಬಿ ದೂರ ಹೋಗೋ ದುಂಬಿ

ಚಿತ್ರ: ಮುಂಜಾನೆಯ ಮಂಜು (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ದುಂಬಿ ದುಂಬಿ ದುಂಬಿ ದುಂಬಿ ದೂರ ಹೋಗೋ ದುಂಬಿ
ಆಯಿತು ಸಾಯಂಕಾಲ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಇಂದು ರಾತ್ರಿ ಇಲ್ಲೇ
ನಿಂತರೇ ಅನುಕೂಲ
ಆಗದು ಹೋಯ್.. ಆಗದು ಹೋಯ್
ಹಾಗಾಗದು ಹೋಯ್.. ಹಾಗಾಗದು ಹೋಯ್
ಜಾಣನಾಗಿ ಊರು ಸೇರಿಕೋ

ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಇಂದು ರಾತ್ರಿ ಇಲ್ಲೇ
ನಿಂತರೇ ಅನುಕೂಲ
ದುಂಬಿ ದುಂಬಿ ದುಂಬಿ ದುಂಬಿ ದೂರ ಹೋಗೋ ದುಂಬಿ
ಆಯಿತು ಸಾಯಂಕಾಲ
ಆಗದು ಹೋಯ್.. ಆಗದು ಹೋಯ್
ಹಾಗಾಗದು ಹೋಯ್.. ಹಾಗಾಗದು ಹೋಯ್
ನನ್ನ ಮುತ್ತ ಒತ್ತೆ ಇಟ್ಟುಕೋ

ಊರೇಕೆ ದುಂಬಿಗೆ, ಸೂರೇಕೆ ದುಂಬಿಗೆ
ಮಲ್ಲಿಗೆ ಮನೆದುಂಬಿ ಹಾಡೋ ಜಾಗ
ಹಾಡಿನ ಮಧ್ಯ ಜೇನು ಹೀರೋ ಯೋಗ
ಜಾಣ ಜಾಣ ನೀನು ಹಾಡಿನ ಬಾಣ ಹೂಡುವೆ
ಜೀವ ಜಾರುವಾಗ ಅರ್ಧ ಪ್ರಾಣ ನೀಡುವೆ
ಅಂಜುವೆ ಏಕೆ ಮಲ್ಲಿ, ಕಂಪಿನ ತೋಟದಲ್ಲಿ
ಉತ್ತಮನಾಗಿ ಓಡಾಡುವೆ..
ಮಾನವ ಮಲ್ಲಿ ನಾನು ನಾಚಿಕೆ ಕಾಡದೇನು
ಕತ್ತಲೆಗಾಗಿ ನಾ ಬೇಡುವೆ..
ಆಗದು ಹೋಯ್.. ಆಗದು ಹೋಯ್
ಹಾಗಾಗದು ಹೋಯ್.. ಹಾಗಾಗದು ಹೋಯ್
ಕಣ್ಣುಮುಚ್ಚಿ ಕತ್ತಲೆಂದುಕೋ

ದುಂಬಿ ದುಂಬಿ ದುಂಬಿ ದುಂಬಿ ದೂರ ಹೋಗೋ ದುಂಬಿ
ಆಯಿತು ಸಾಯಂಕಾಲ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಇಂದು ರಾತ್ರಿ ಇಲ್ಲೇ
ನಿಂತರೇ ಅನುಕೂಲ

ಬಾ ನನ್ನ ಹತ್ತಿರ, ಬಾ ಇನ್ನೂ ಹತ್ತಿರ
ಹತ್ತಿರ ಬಂದಮೇಲೆ ಹೆಚ್ಚಬೇಡ
ನೆಚ್ಚಿನ ರಾಸಲೀಲೆ ನೆನ್ಚಬೇಡ
ಮಾತು ಮತ್ತು ಮುತ್ತು ಈಗ ಸಾಲ ನೀಡು
ಅಂತರಂಗ ಒಪ್ಪಿದಾಗ ಪ್ರೀತಿಮಾಡು
ತಣ್ಣನೇ ಗಾಳಿಯಂತ ಸಂಜೆಯ ರಂಗಿನಂತ
ದುಂಬಿಯ ಹಾಡಿಗೆ ಸೋಲೆನು
ಮಾಗಿಯ ಕಾಲದಂತ ಮಾವಿನ ಹೂವಿನಂತ
ಹೆಣ್ಣಿನ ಕಂಪು ನಾ ತಾಳೆನು
ಆಗದು ಹೋಯ್.. ಆಗದು ಹೋಯ್
ಹಾಗಾಗದು ಹೋಯ್.. ಹಾಗಾಗದು ಹೋಯ್
ಹಣ್ಣು ತಿಂದು ಹೆಣ್ಣು ಎಂದುಕೋ

ದುಂಬಿ ದುಂಬಿ ದುಂಬಿ ದುಂಬಿ ದೂರ ಹೋಗೋ ದುಂಬಿ
ಆಯಿತು ಸಾಯಂಕಾಲ
ಮಲ್ಲೇ ಮಲ್ಲೇ ಮಲ್ಲೇ ಮಲ್ಲೇ ಇಂದು ರಾತ್ರಿ ಇಲ್ಲೇ
ನಿಂತರೇ ಅನುಕೂಲ

ಕೋಗಿಲೆಯೇ ಕ್ಷೇಮವೇ

ಚಿತ್ರ: ಮಣ್ಣಿನ ದೋಣಿ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಜಾನಕಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ..

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ
ಏಳಿರಿ ಏಳಿರಿ ಮೇಲೆ
ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ ತೊಳೆದು ಬಂದು ಹಾಡಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ

ಕಾನನದಲಿ ಬೀಸುವ ಗಾಳಿಗೆ
ಎಂದು ಆಲಸ್ಯ ಬಂದಿದೆ ಹೇಳಿ
ಬೆಟ್ಟಗಳಲ್ಲಿ ಓಡುವ ನದಿಯು
ಎಂದು ದಣಿದು ನಿಂತಿದೆ ಕೇಳಿ
ತಾರೆಗಳಂತೆ ಮೂಡುವ ಮೇಘಗಳಿಗೆ
ಬೇಸರ ಬಂದಿತ್ತೆ ಕೇಳಿ
ವೀರರ ಕೈಲಿ ಬಗ್ಗದ ಮಳೆಯ ಬಿಲ್ಲು
ಬರೆನು ಎಂಬುದೆ ಹೇಳಿ
ಭುವನ ತಿರುಗಿದೆ.. ಓ.. ಗಗನ ಚಲಿಸಿದೆ
ಕವನ ಕಡೆದಿದೆ.. ಓ.. ಬದುಕು ಬರೆಸಿದೆ
ಏಳಿರಿ ಏಳಿರಿ ಮೇಲೆ
ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ ತೊಳೆದು ಬಂದು ಹಾಡಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ

ಜಾಣರ ಗುಂಪು ಕಂಪಿನ ತೋಟಕ್ಕೆ ಹಾರಿ
ಸೊಂಪಿನ ಜೇನನ್ನು ತಂದವು
ಪುಂಡರ ಗುಂಪು ಹುಳಿಯ ತೋಪಿಗೆ ನುಗ್ಗಿ
ಹೊಟ್ಟೆಯ ಬಿರಿಯ ತಿಂದವು
ತಪ್ಪಲಿನಲ್ಲಿ ರಂಗಿನ ಅಟ್ಟೆಯ ಹೊಯ್ದ
ಪತಂಗ ಪಡೆಯ ಪಯಣ
ಕೆಚ್ಚಲಿನಲ್ಲಿ ಗೋವಿನ ಕೂಸಿನ
ದೊಡ್ಡ ಕಣ್ಣಿನ ಮೆಚ್ಚಿನ ಮೌನ
ಕಮಲ ಕುಳಿತೆಯಾ.. ಓ.. ಅಳಿಲೆ ಅವಿತೆಯಾ
ನವಿಲೆ ನಿಂತೆಯಾ.. ಓ.. ಕನಸೆ ಮರೆತೆಯಾ
ಏಳಿರಿ ಏಳಿರಿ ಮೇಲೆ
ನೇಸರ ಬಂದನು ಮೇಲೆ ನೋಡಿ
ಮಂಜಿನ ನೀರಲ್ಲಿ ಮುದ್ದು ಮೋರೆಯ ತೊಳೆದು ಬಂದು ಹಾಡಿ

ಕೋಗಿಲೆಯೇ ಕ್ಷೇಮವೇ
ಕಸ್ತೂರಿಯೇ ಸೌಖ್ಯವೇ
ನೈದಿಲೆಯೇ ನಿದಿರೆಯೇ
ಮಲ್ಲಿಗೆಯೇ ಮಂಪರೇ

ನಂದು ನಿಂದು ಇಂದು ಒಂದೇ ಪೋಯಮ್ಮು

ಚಿತ್ರ: ಮಣ್ಣಿನ ದೋಣಿ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಓ ಓ ಓ ಓ ಓ ಓ ಓ ಓ
ಓ ಓ ಓ ಓ ಓ ಓ ಓ ಓ

ನಂದು ನಿಂದು ಇಂದು ಒಂದೇ ಪೋಯಮ್ಮು
ಓ ನಂದು ನಿಂದು ಇಂದು ಒಂದೇ ರಿದಮ್ಮು
ರಿದಂ ರಿದಂ ಇದೆಂಥಾ ರಿದಂ
ಪೋಯಂ ಪೋಯಂ ಇದೆಂಥಾ ಪೋಯಂ

ನಂದು ನಿಂದು ಇಂದು ಒಂದೇ ಪೋಯಮ್ಮು
ಓ ನಂದು ನಿಂದು ಇಂದು ಒಂದೇ ರಿದಮ್ಮು
ರಿದಂ ರಿದಂ ಇದೆಂಥಾ ರಿದಂ
ಪೋಯಂ ಪೋಯಂ ಇದೆಂಥಾ ಪೋಯಂ

ಓ ಓ ಓ ಓ ಓ ಓ ಓ
ಇದು ಮದುವೆಮನೆ
ಪೋಯಂ ಪೋಯಂ ಪೋಯಂ
ಇದು ಒಸಗೆ ಮನೆ
ರಿದಂ ರಿದಂ ರಿದಂ
ಇದು ಹೇಗಾಯಿತು
ಸಡನ್ ಸಡನ್ ಸಡನ್
ಇದು ಏಕಾಯಿತು
ಹಿಡನ್ ಹಿಡನ್ ಹಿಡನ್
ಹಾ ಇದೆಂಥ ಟಚ್ಚಿಂಗ್
ಪ್ರಹಾರ ಪ್ರಹಾರ..
ಇದೆಂಥ ಕಿಸ್ಸಿಂಗ್
ಹೆಜ್ಜೇನ ಭೋಜನ

ನಂದು ನಿಂದು ಇಂದು ಒಂದೇ ಪೋಯಮ್ಮು
ಓ ನಂದು ನಿಂದು ಇಂದು ಒಂದೇ ರಿದಮ್ಮು
ರಿದಂ ರಿದಂ ಇದೆಂಥಾ ರಿದಂ
ಪೋಯಂ ಪೋಯಂ ಇದೆಂಥಾ ಪೋಯಂ

ಇಂದು ಇಂಪಾಗಿದೆ
ಸಿಂಗಿಂಗ್ ಸಿಂಗಿಂಗ್ ಸಿಂಗಿಂಗ್
ಇಂದು ಹೊಸದಾಗಿದೆ
ಈವ್ನಿಂಗ್ ಈವ್ನಿಂಗ್ ಈವ್ನಿಂಗ್
ಇಂದು ನಮಗಾಗಿದೆ
ವೆಡ್ಡಿಂಗ್ ವೆಡ್ಡಿಂಗ್ ವೆಡ್ಡಿಂಗ್
ಇಂದು ನಮಗೆ ಇದೆ
ಬೆಡ್ಡಿಂಗ್ ಬೆಡ್ಡಿಂಗ್ ಬೆಡ್ಡಿಂಗ್
ಇದೆಂಥಾ ಫಿಗರ್
ಅಜಂತಾ ಎಲ್ಲೋರ
ಇದೆಂಥಾ ಪವರ್
ಶರಾವತಿ ಶರಾವತಿ

ನಂದು ನಿಂದು ಇಂದು ಒಂದೇ ಪೋಯಮ್ಮು
ಓ ನಂದು ನಿಂದು ಇಂದು ಒಂದೇ ರಿದಮ್ಮು
ರಿದಂ ರಿದಂ ಇದೆಂಥಾ ರಿದಂ
ಪೋಯಂ ಪೋಯಂ ಇದೆಂಥಾ ಪೋಯಂ

ಓ ಓ ಓ ಓ ಓ ಓ ಓ

ಶಿವ ಶಿವ ಇವ ಶಿವ

ಚಿತ್ರ: ಪುರುಷೋತ್ತಮ (1992)
ಸಾಹಿತ್ಯ- ಸಂಗೀತ: ಹಂಸಲೇಖ
ಗಾಯಕರು: ಡಾII ರಾಜ್ ಕುಮಾರ್

ಶಿವ ಶಿವ ಇವ ಶಿವ, ಶಿವ ಶಿವ ಇವ ಶಿವ
ಸದಾ ಜಯ ತೊಳಲ್ಲಿರುವ ಗಂಡು ಶಿವ
ನಯ ಭಯ ಬಾಳಲ್ಲಿರುವ ಗಂಡು ಶಿವ
ಹೇ ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
ಶಿವ ಶಿವ ಇವ ಶಿವ, ಶಿವ ಶಿವ ಇವ ಶಿವ
ಸದಾ ಜಯ ತೊಳಲ್ಲಿರುವ ಗಂಡು ಶಿವ
ನಯ ಭಯ ಬಾಳಲ್ಲಿರುವ ಗಂಡು ಶಿವ
ಹೇ ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
ಶಿವ ಶಿವ ಇವ ಶಿವ, ಶಿವ ಶಿವ ಇವ ಶಿವ

ಹಗಲುರಾತ್ರಿ ದುಡಿದು ದುಡಿದು ದಣಿದುಬಂದ ಹೃದಯಗಳಿಗೆ
ತಂಪನೆರೆವ ಸೇವಕ
ಬೆವರ ನೀರ ಹರಿಸಿ ಹರಿಸಿ ಬಳಲಿಬಂದ ಮನಸುಗಳಿಗೆ
ಇಂಪನಿಡುವ ಗಾಯಕ
ಬದತನದಲಿ ಬೆರೆಯುವೆ, ಸಿಹಿಕಹಿಯಲಿ ಉಳಿಯುವೆ
ಶ್ರಮಿಸುವ ರಸಋಷಿಗಳಜೊತೆ ಕುಣಿಯುತ ದಿನ ಕಳೆಯುವೆ
ದುಡಿದು ದುಡಿದು ಬಡವರಾದ ಕೆಲಸಗಾರ ಬಂಧುಗಳಿಗೆ
ನ್ಯಾಯಕೇಳೋ ನಾಯಕ
ಕನಸುಕಂಡು ಕುರುಡರಾಗಿ ಕರುಣೆಬಯಸೋ ಕಾರ್ಮಿಕರಿಗೆ
ಉಸಿರುನಿಡೋ ಮಾಂತ್ರಿಕ
ಕನಸುಗಳನು ತೆರೆಯುವೆ, ಮನಸುಗಳನು ನಗಿಸುವೆ
ಶ್ರಮಿಸುವ ರಸಋಷಿಗಳಜೊತೆ ಕುಣಿಯುತ ದಿನ ಕಳೆಯುವೆ
ಸದಾ ಜಯ ತೊಳಲ್ಲಿರುವ ಗಂಡು ಶಿವ
ನಯ ಭಯ ಬಾಳಲ್ಲಿರುವ ಗಂಡು ಶಿವ
ಹೇ ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
ಶಿವ ಶಿವ ಇವ ಶಿವ, ಶಿವ ಶಿವ ಇವ ಶಿವ

ದಾಸ್ಯಹೋಗಿ ಹಸಿವು ಉಳಿದು, ನಮ್ಮನಾಡ ಬಡವನೀಗ
ಒಂದು ಯಂತ್ರಮಾನವ
ಕೆಲಸಹೆಚ್ಚು ಕೂಲಿಕಡಿಮೆ, ನಮ್ಮನಾಡ ಧನಿಕನೀಗ
ಒಬ್ಬ ಕ್ರೂರದಾನವ
ಬರಿಬವಣೆಯ ಬೆಳೆವರು, ಸಂಘಟನೆಯ ಮುರಿವರು
ಶ್ರಮಿಸುವ ಕಡುಗಲಿಗಳ ಕಥೆ ಕಂಬನಿಯಲಿ ಬರೆವರು
ಏನೇ ಇರಲಿ, ಏನೇ ಬರಲಿ, ನಮ್ಮ ಜನದ ಶಾಂತಿಸುಖದ
ಕಾಲವೊಂದು ಮುಂದಿದೆ
ತುಳಿತವಿರಲಿ, ಕೊರೆತವಿರಲಿ ನಮ್ಮ ಜಯದ ಬೆಳ್ಳಿದಿನದ
ಘಳಿಗೆ ಮುಂದೆ ಬರಲಿದೆ
ತೋಳ್ಬಲವನು ಬಳಸುವ, ತಾಯ್ನೆಲವನು ಉಳಿಸುವ
ತಿರುಗುವ ಭೂಮಂಡಲದಲಿ ನಮ್ಮ ಧ್ವಜವ ನಿಲಿಸುವ
ಸದಾ ಜಯ ತೊಳಲ್ಲಿರುವ ಗಂಡು ಶಿವ
ನಯ ಭಯ ಬಾಳಲ್ಲಿರುವ ಗಂಡು ಶಿವ
ಹೇ ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ
ಶಿವ ಶಿವ ಇವ ಶಿವ, ಇವ ಶಿವ ಶಿವ ಇವ
ಸದಾ ಜಯ ತೊಳಲ್ಲಿರುವ ಗಂಡು ಶಿವ
ನಯ ಭಯ ಬಾಳಲ್ಲಿರುವ ಗಂಡು ಶಿವ
ಹೇ ಕನ್ನಡದ ಮಣ್ಣಿನಲ್ಲಿ ಹುಟ್ಟಿರುವ ಹುಟ್ಟಿರುವ ಕನ್ನಡಿಗ

ವಿಶ್ವ ವಿಶ್ವ ವಿಶ್ವಾಸವೇ ವಿಶ್ವ

ಚಿತ್ರ: ವಿಶ್ವ (1999)
ಸಾಹಿತ್ಯ- ಸಂಗೀತ: ನಾದಬ್ರಹ್ಮ
ಗಾಯಕರು: ಡಾII ರಾಜ್ ಕುಮಾರ್

ವಿಶ್ವ ವಿಶ್ವ ವಿಶ್ವ ವಿಶ್ವ .... II
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ.
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ

ಅನುರಾಗವೇ ಉಚ್ವಾಸವು, ಅನುರಾಗವೇ ನಿಶ್ವಾಸವು
ನ್ಯಾಯ ಇದರ ದೇಹ, ಸತ್ಯ ಇದರ ದಾಹ
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ

ಸತ್ಯಾನೆ ಉಸಿರಂತೆ ನ್ಯಾಯದೇವಿಗೆ, ಅವಳೆದೆಯ ಹಾಲಂತೆ  ಕಾನೂನಿಗೆ
ಸತ್ಯಾನೆ ಉಸಿರಂತೆ ನ್ಯಾಯದೇವಿಗೆ, ಅವಳೆದೆಯ ಹಾಲಂತೆ  ಕಾನೂನಿಗೆ
ಎದೆ ಹಾಲೇ ವಿಷವಾದರೆ ಉಳಿದೆಲ್ಲಿದೆ ಕಾನೂನಿಗೆ
ಕಾನೂನೇ ಕೊಲೆಯಾದರೆ  ಕಾವಲಾರೋ ಅಪರಾಧಿಗೆ
ಅಪರಾಧವೆ ದೊರೆಯಾದರೆ ಭಯವೆಲ್ಲಿದೆ ದಾನವತೆಗೆ,
ನೆಲೆ ಎಲ್ಲಿದೆ ಸಜ್ಜನರಿಗೆ, ಬೆಲೆ ಎಲ್ಲಿದೆ ಮಾನವತೆಗೆ
ನಂಬಿಕೆಗಳೇ ಉರುಳಾದರೆ, ಅಂಜಿಕೆಗಳೇ ನೆರಳಾದರೆ,
ನಂಬಿದವರೇ ಯಮರಾದರೆ, ಬರೀ ದ್ರೋಹವೆ ಜಗವಾದರೆ
ಧ್ರೋಹದುಸಿರಲೋಕದಲ್ಲಿ, ನರನ ಶ್ವಾಸಕೋಶದಲ್ಲಿ
ದೇವನಿರುವನೆಂಬಾ ವಿಶ್ವಾಸ ಉಳಿವುದೇ ...

ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ

ಜಗವೆಂದು ಸೆಣಸಾಡೋ ರಣರಂಗವೋ, ಸತ್ಯಕ್ಕೆ ಎಂದೆಂದು ಜಯಭೇರಿಯೋ
ಜಗವೆಂದು ಸೆಣಸಾಡೋ ರಣರಂಗವೋ, ಸತ್ಯಕ್ಕೆ ಎಂದೆಂದು ಜಯಭೇರಿಯೋ
ಸತ್ಯಕ್ಕೆ ಸಾವಿಲ್ಲ, ಧರ್ಮಕ್ಕೆ ದಣಿವಿಲ್ಲ,
ರಕ್ಕಸರ ನಿರ್ಮೂಲನ ಕದನಕ್ಕೆ ಕೊನೆಇಲ್ಲ
ಆಘಾತದ ಹೃದಯಕ್ಕೂ ಅನುಕಂಪದ ಅಲೆಇಲ್ಲಿದೆ,
ನೋವುಗಳನು ಹೂವಾಗಿಸೋ ಒಲವೆಂಬುವ ಜೇನಿಲ್ಲಿದೆ
ಅನ್ಯಾಯದ ಅವತಾರಕೆ ಪ್ರತೀಘಳಿಗೆಯು ಸಾವಿಲ್ಲಿದೆ,
ಧರ್ಮಗಳ ಪಡೆಇಲ್ಲಿದೆ, ನಿಜದೈವದ ನೆರಳಿಲ್ಲಿದೆ
ಎಲ್ಲ ಇರುವ ಲೋಕದಲ್ಲಿ ಕಾಣದಿರುವ ದೇವರಲ್ಲಿ
ವಿಶ್ವಾಸವೇ ಆತ್ಮಧಯುಧ

ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ
ಅನುರಾಗವೇ ಉಚ್ವಾಸವು, ಅನುರಾಗವೇ ನಿಶ್ವಾಸವು
ನ್ಯಾಯ ಇದರ ದೇಹ, ಸತ್ಯ ಇದರ ದಾಹ
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ
ವಿಶ್ವ ವಿಶ್ವ ವಿಶ್ವಾಸವೇ  ವಿಶ್ವ

ಈ ಸಾಗರ ಆ ನೇಸರ

ಚಿತ್ರ: ತುಂಗಭದ್ರ (1995)
ಸಾಹಿತ್ಯ - ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ
ಗಂಧದ ಸನ್ನಿಧಿಯೊಳಗೆ ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ
ಮಲ್ಲಿಗೆ ಮಾಲಿನಿಯೊಳಗೆ ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಈ ಸಾಗರ ಆ ನೇಸರ
ತಾಪಕೂ ತಂಪಿಗೂ ತಪಿಸುವ ದಿನವಿದು
ಈ ಯೌವ್ವನ ಈ ಹೂಮನ
ಕಾಮಕೂ ಪ್ರೇಮಕೂ ತಪಿಸುವ ಕ್ಷಣವಿದು
ಧಗ ಧಗ ಮೇಲೆ ಕುತ ಕುತ ಒಳಗೆ
ಹರೆಯಕೆ ತಂಪೆರಿಯೇ
ಢವ ಢವ ಒಳಗೆ ಥಕ ಥಕ ಮೇಲೆ
ಪ್ರಣಯಕೆ ನೀ ಕರಿಯೇ

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ
ಮಲ್ಲಿಗೆ ಮಾಲಿನಿಯೊಳಗೆ ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ
ಗಂಧದ ಸನ್ನಿಧಿಯೊಳಗೆ ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಈ ಹರೆಯದ ಈ ಓಲೆಯು
ಕಣ್ಣಿಗೆ ಕಾಣದು ಕಾಣದೇ ಉರಿಸಿದೆ
ಈ ಆಸೆಯು ಮಾತಾಡದೆ
ಹೇಳದೇ ಕೇಳದೇ ಹಸಿವಲಿ ಬಳಲಿದೆ
ಕರೆದರೂ ಬೆಂಕಿ ಸರಿದರೂ ಬೆಂಕಿ
ಬೆಂಕಿಯ ಬಲೆಯೊಳಗೆ
ಕಂಡರೂ ಹಸಿವು ಉಂಡರೂ ಹಸಿವು
ಹಸಿವಿನ ಕಲೆಯೊಳಗೆ

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ
ಗಂಧದ ಸನ್ನಿಧಿಯೊಳಗೆ ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಝುಂ ಝುಮ ಝುಂ ಝುಮ ಝುಂ ಝುಮ
ಝುಂ ಝುಮ ಝುಮ ಝುಮ ಝುಂ
ಮಲ್ಲಿಗೆ ಮಾಲಿನಿಯೊಳಗೆ ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಪ್ರೇಮವು ಬೇಡ ಪ್ರೇಯಸಿ ಬೇಡ

ಚಿತ್ರ: ಅನಂತ ಪ್ರೇಮ (1990)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯನ: ಕೆ.ಜೆ.ಯೇಸುದಾಸ್

ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ
ಆಸೆಯು ಬೇಡ ನಿರಾಸೆಯು ಬೇಡ, ಕನಸೆ ಸಾಕೆನಗೆ
ಕಣ್ಣನು ನಂಬಿ ಹಾರುವ ದುಂಬಿ, ಮಾರುಹೋಗಬೇಡ ನೀನು ಕಾಗದದ ಹೂವಿಗೆ

ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ

ನಿಜವೇ ನೀ ದೂರ.. ನಿನ್ನ ಕಾಣಿಕೆ ಬಲು ಭಾರ.. ನಾನಿರುವೆ ನಿನಗೆ ದೂರ...
ಈ ಭ್ರಮೆಗಳ ಆಸರೆ ಸಾಕೆನಗೆ
ಬೆರೆಯುವ ಮಾತೇಕೆ.. ಬೇರಾಗುವ ಗೋಜೇಕೆ.. ಜನ ನೋಡಿ ನಗುವುದೇಕೆ..
ಕಹಿ ವಿಷಮಯ ಅನುಭವ ಸಾಕೆನಗೆ
ಹೃದಯವೇ ಕಲ್ಲಾದರೂ.. ಲೋಕವೇ ಮುಳ್ಳಾದರೂ..
ನಿಜದ ಬೆಂಕಿ ಮೇಲೆ ಇರುವೇ ನಾ

ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ

ನಂಜಿನ ಕಣ್ಣುಗಳು.. ಕನ್ನಡಿಯ ರೀತಿಯಲ್ಲ.. ನಿಜವನ್ನೇ ನುಡಿವುದಿಲ್ಲ
ಅತೀ ಆತುರ ಮನಸಿನ ಕಡುವೈರಿ
ಮಂಜಿನ ಪರದೆಗಳು.. ಸ್ಥಿರವಾಗಿ ಇರುವುದಿಲ್ಲ.. ಬೆಳಕನ್ನು ತಡೆವುದಿಲ್ಲ
ರವಿ ಬಂದರೆ ತೆರೆವುದು ತಾ ಜಾರಿ
ಬದುಕಿದು.. ಇರುವುದು.. ನೆನೆಯಲು.. ನೆರವಾಗಲು..
ಪರರ ಹಿತದ ಮೇಲೆ ಇರುವೆ ನಾ..

ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ
ಆಸೆಯು ಬೇಡ ನಿರಾಸೆಯು ಬೇಡ, ಕನಸೆ ಸಾಕೆನಗೆ
ಕಣ್ಣನು ನಂಬಿ ಹಾರುವ ದುಂಬಿ, ಮಾರುಹೋಗಬೇಡ ನೀನು ಕಾಗದದ ಹೂವಿಗೆ

ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ

ಸಂಕ್ರಾಂತಿ ಬಂತು

ಚಿತ್ರ: ಹಳ್ಳಿಮೇಷ್ಟ್ರು (1992)
ಸಾಹಿತ್ಯ - ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಎಸ್. ಜಾನಕಿ

ಸಂಕ್ರಾಂತಿ ಬಂತು.. ರತ್ತೋ ರತ್ತೋ
ಮನಸಲ್ಲಿ ಮನಸು.. ಬಿತ್ತೋ ಬಿತ್ತೋ

ಸುಮ್ ಸುಮ್ ಸುಮ್ ಸು ಸುಮ್ ಸುಮ್ ಸುಮ್ ಸುಮ್ ಸುಮ್

ಸಂಕ್ರಾಂತಿ ಬಂತು.. ರತ್ತೋ ರತ್ತೋ
ಮನಸಲ್ಲಿ ಮನಸು.. ಬಿತ್ತೋ ಬಿತ್ತೋ

ಎಳ್ಳುಬೆಲ್ಲ.. ಬೀರಾಯಿತು
ಕೊಟ್ಟು-ತೊಗೋ.. ಮಾತಾಯಿತು
ಮುತ್ತಾಯಿತು ಮತ್ತಾಯಿತು
ಮೈಯ್ಯಲ್ಲಿ ಏರುತಿದೆ ಮನ್ಮಥನ ರಂಗುಗಳು

ಸುಮ್ ಸುಮ್ ಸುಮ್ ಸು ಸುಮ್ ಸುಮ್ ಸುಮ್ ಸುಮ್ ಸುಮ್

ಸಂಕ್ರಾಂತಿ ಬಂತು.. ರತ್ತೋ ರತ್ತೋ
ಮನಸಲ್ಲಿ ಮನಸು.. ಬಿತ್ತೋ ಬಿತ್ತೋ
ಎಳ್ಳುಬೆಲ್ಲ.. ಬೀರಾಯಿತು
ಕೊಟ್ಟು-ತೊಗೋ.. ಮಾತಾಯಿತು
ಮುತ್ತಾಯಿತು ಮತ್ತಾಯಿತು
ಮೈಯ್ಯಲ್ಲಿ ಏರುತಿದೆ ಮನ್ಮಥನ ರಂಗುಗಳು

ಸುಮ್ ಸುಮ್ ಸುಮ್ ಸು ಸುಮ್ ಸುಮ್ ಸುಮ್ ಸುಮ್ ಸುಮ್
.....
ಸುಮ್ ಸುಮ್ ಸುಮ್ ಸು ಸುಮ್ ಸುಮ್ ಸುಮ್ ಸುಮ್ ಸುಮ್

ಹದಿನಾರು ದಾಟಿದ ಎಳೆಮೈಯಿ ಕೇಳಿದ
ಚೆಲುವ ಚೆಲುವ ನೀನೇನಾ
ದಿನಾರಾತ್ರಿ ಕಾಡಿದ ಕುಡಿಮೀಸೆ ಕೂಗಿದ
ಚೆಲುವೆ ಚೆಲುವೆ ನೀನೇನಾ
ಕಣ್ಣಿಗಿಟ್ಟ ಕಪ್ಪುಕಾಡಿಗೆ ಮೂಗಿಗಿಟ್ಟ ಕೆಂಪು ಮೂಗುತಿ
ನಡೆಸಿದ ಹುಡುಕಾಟ ನಿನಗೆ
ಅತ್ತ-ಇತ್ತ ಆಡೋ ಮನಸು ಚಿತ್ತಭಂಗ ಮಾಡೋ ಕನಸು
ನಡೆಸಿದ ಪರದಾಟ ನಿನಗೆ

ಮಹಾರಾಜ ನನ್ನ ಜೊತೆಗಾರ..
ಮಹಾರಾಣಿ ನನ್ನ ಜೊತೆಗಾತಿ..
ಸುಗ್ಗಿಕಾಲದಂತೆ.. ಸುಗ್ಗಿಹಾಡಿನಂತೆ
ನೀ ಬಂದೆ.. ನೀ ಬಂದೆ.. ನನ್ನ ಬಾಳಿಗೆ

ಸಂಕ್ರಾಂತಿ ಬಂತು.. ರತ್ತೋ ರತ್ತೋ
ಮನಸಲ್ಲಿ ಮನಸು.. ಬಿತ್ತೋ ಬಿತ್ತೋ
ಎಳ್ಳುಬೆಲ್ಲ.. ಬೀರಾಯಿತು,
ಕೊಟ್ಟು-ತೊಗೋ.. ಮಾತಾಯಿತು
ಮುತ್ತಾಯಿತು.. ಮತ್ತಾಯಿತು..
ಮೈಯ್ಯಲ್ಲಿ ಏರುತಿದೆ ಮನ್ಮಥನ ರಂಗುಗಳು

ಸುಮ್ ಸುಮ್ ಸುಮ್ ಸು ಸುಮ್ ಸುಮ್ ಸುಮ್ ಸುಮ್ ಸುಮ್

ಚಿತ್ತಾರ ಹಾಕುತ ರಂಗೋಲಿ ಹಾಕಿದೆ
ಪ್ರೀತಿಯ ಸುಗ್ಗಿಯ ಕಣದಲ್ಲಿ
ಸುವ್ವಾಲಿ ಹಾಡುತ ಕೋಲಾಟ ಸಾಗಿದೆ
ಪ್ರೀತಿಯ ರಾಶಿಯ ಎದುರಲ್ಲಿ
ಹೊ.. ಪುಟ್ಟಬಾಯಿ ಕೆಂಪು ಕುಂಚದ ತಿದ್ದಿತಿಡೊ ಮುದ್ದು ಚಿತ್ರದ
ಸೂಗಸಿಗೆ ಮನಸೋತೆ ಮರುಳೇ..
ಹೊಯ್.. ಗಾಳಿಗಿಷ್ಟು ಜಾಗವಿಲ್ಲದೆ ಅಪ್ಪಿಕೊಳ್ಳೋ ಹಳ್ಳಿ ಗಂಡಿದೆ
ಗಡುಸಿಗೆ ಬೆರಗಾದೆ ಮರುಳ..

ಮಹಾರಾಣಿ ನನ್ನ ಜೊತೆಗಾತಿ..
ಮಹಾರಾಜ ನನ್ನ ಜೊತೆಗಾರ..
ಸುಗ್ಗಿಕಾಲದಂತೆ.. ಸುಗ್ಗಿಹಾಡಿನಂತೆ
ನೀ ಬಂದೆ.. ನೀ ಬಂದೆ.. ನನ್ನ ಬಾಳಿಗೆ

ಸಂಕ್ರಾಂತಿ ಬಂತು.. ರತ್ತೋ ರತ್ತೋ
ಮನಸಲ್ಲಿ ಮನಸು.. ಬಿತ್ತೋ ಬಿತ್ತೋ
ಎಳ್ಳುಬೆಲ್ಲ.. ಬೀರಾಯಿತು,
ಕೊಟ್ಟು-ತೊಗೋ.. ಮಾತಾಯಿತು
ಮುತ್ತಾಯಿತು.. ಮತ್ತಾಯಿತು..
ಮೈಯ್ಯಲ್ಲಿ ಏರುತಿದೆ ಮನ್ಮಥನ ರಂಗುಗಳು

ಸುಮ್ ಸುಮ್ ಸುಮ್ ಸು ಸುಮ್ ಸುಮ್ ಸುಮ್ ಸುಮ್ ಸುಮ್

ತಂದೆ ಕೊಡಿಸೊ ಸೀರೆ ಮದುವೆ ಆಗೋವರೆಗೆ

ಚಿತ್ರ:-ಮಿಡಿದ ಹೃದಯಗಳು(1993)
ಸಾಹಿತ್ಯ-ಸಂಗೀತ:-ಹಂಸಲೇಖ
ಗಾಯಕರು:-ಡಾ.ರಾಜ್ ಕುಮಾರ್

ತಂದೆ ಕೊಡಿಸೊ ಸೀರೆ ಮದುವೆ ಆಗೋವರೆಗೆ
ತಾಯಿ ಉಡಿಸೋ ಸೀರೆ ತಾಯಿ ಆಗೋವರೆಗೆ
ಬಂಧು ಕೊಡಿಸೋ ಸೀರೆ ಬಣ್ಣಹೋಗೊ ವರೆಗೆ
ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ
ಹೆಣ್ಣಿನ ಜನುಮಕಳೆವವರೆಗೆ ಮಣ್ಣಿನ ಮಮತೆ ಮರೆವವರೆಗೆ

ಭೂಮಿಎಂದು ಜನ ಭಾರ ಎನುವುದಿಲ್ಲ
ತಾಯಿ ಎಂದು ತನ್ನ ಮಗುವ ಬಿಡುವುದಿಲ್ಲ
ಇದ್ದು ಸತ್ತ ಆಗೆ ಮಗುವ ಬಿಟ್ಟ ತಾಯಿ
ತಾಯಿಗಿಂತ ಇಲ್ಲಿ ದೊಡ್ಡದಿಲ್ಲ ಸ್ಥಾಯಿ
ಸೀತಮಾತೆ ಸ್ಥಾನ ಗಂಡನ ಅನುಸರಿಸಿದರೆ
ಗಂಗೆ ಗೌರಿ ಸ್ಥಾನ ಕಥೆಯ ಅನುಕರಿಸಿದರೆ
ಗಂಡ ಹೆಂಡತಿ ನಂಟು ಬ್ರಹ್ಮ ಹಾಕಿದ ಗಂಟು
ಹುಟ್ಟು ಸಾವಿನ ನಂಟು ಹೃದಯ ಮಿಡಿವವರೆಗೆ
ಪ್ರೇಮದ ತುತ್ತತುದಿಯವರೆಗೆ ಬಾಳಿನಗುಟ್ಟು ತಿಳಿವವರೆಗೆ

ಒಳ್ಳೆ ಮನಸು ಇದ್ದರೇನೆ ಕಷ್ಟವಂತೆ
ಕರಗೋ ಹೃದಯ ಇದ್ದರಂತೂ ಚಿಂತೆಯಂತೆ
ಪ್ರೀತಿ ಹರಿವ ನೀರು ಒಡೆದ ಮನಸಿನಲ್ಲಿ
ಬಾಳು ಕಣ್ಣ ನೀರು ಮಿಡಿದ ಹೃದಯದಲ್ಲಿ
ತಂದೆ ಕೊಡಿಸೊ ಸೀರೆ ಮದುವೆ ಆಗೋವರೆಗೆ
ತಾಯಿ ಉಡಿಸೋ ಸೀರೆ ತಾಯಿ ಆಗೋವರೆಗೆ
ಬಂಧು ಕೊಡಿಸೋ ಸೀರೆ ಬಣ್ಣಹೋಗೊ ವರೆಗೆ
ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ
ಹೆಣ್ಣಿನ ಜನುಮಕಳೆವವರೆಗೆ ಮಣ್ಣಿನ ಮಮತೆ ಮರೆವವರೆಗೆ

ಚಿಗುರು ಮೀಸೆಯ ಹುಡುಗ ನಿನ್ನ ಮೆಚ್ಚಿಕೊಂಡೆ ನಾನು

ಚಿತ್ರ: ಶಿವರಾಜ್ (1991)
ಸಾಹಿತ್ಯ - ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು

ಚಿಗುರು ಮೀಸೆಯ ಹುಡುಗ ನಿನ್ನ ಮೆಚ್ಚಿಕೊಂಡೆ ನಾನು
ತುಂಟ ನಗುವಿನ ತುಡುಗ ನಿನ್ನ ಹಚ್ಚಿಕೊಂಡೆ ನಾನು
ಮೆಚ್ಚಿಕೊಂಡೆ ನಾನು ನಿನ್ನ ಹಚ್ಚಿಕೊಂಡೆ ನಾನು
ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು
ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು

ಬೊಗಸೆ ಕಣ್ಣಿನ ಹುಡುಗಿ ನಿನ್ನ ಮೆಚ್ಚಿಕೊಂಡೆ ನಾನು
ಗಿಣಿಯ ಮೂಗಿನ ಬೆಡಗಿ ನಿನ್ನ ಹಚ್ಚಿಕೊಂಡೆ ನಾನು
ಮೆಚ್ಚಿಕೊಂಡೆ ನಾನು ನಿನ್ನ ಹಚ್ಚಿಕೊಂಡೆ ನಾನು
ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು
ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು

ಆ ದಿಂಬಿಗೆ ತಲೆಕೊಟ್ಟರೆ ಅರೆನಿದ್ದೆಲಿ ನಿನ್ನ ಯೋಚನೆ
ಬೆಳಗಾದರೆ ಕಣ್ಬಿಟ್ಟರೆ ನಿನ್ನ ಹೆಸರಲಿ ದಿನ ಪ್ರಾರ್ಥನೆ
ಕಾಣೆಯಾಯ್ತಮ್ಮ ಬೀಗದಿ ಸೆಳೆಯಮ್ಮ
ಪೋರಿ ನಿನ್ನ ಮನಸಿನ ಕೋಣೆಯಲಿ
ನನ್ನಯ ಹೃದಯ ಕೂಡಿಇಟ್ಟೆ ತಿಳಿಯದೇ ಮರುವಿನಲಿ

ಚಿಗುರು ಮೀಸೆಯ ಹುಡುಗ ನಿನ್ನ ಮೆಚ್ಚಿಕೊಂಡೆ ನಾನು
ಗಿಣಿಯ ಮೂಗಿನ ಬೆಡಗಿ ನಿನ್ನ ಹಚ್ಚಿಕೊಂಡೆ ನಾನು
ಮೆಚ್ಚಿಕೊಂಡೆ ನಾನು ನಿನ್ನ ಹಚ್ಚಿಕೊಂಡೆ ನಾನು
ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು
ಐ ಲವ್ ಯು, ಐ ಲವ್ ಯು ಲವ್ ಯು ಲವ್ ಯು

ಆಗುಂಬೆಯ ಆ ಕೊಂಬೆಯ ತುದಿಯಂಚಲಿ ಕುಹೂ ಧ್ವನಿ
ಅದ ನೋಡಲು ಗಿರಿ ಏರಲು ಕೂ ಎನ್ನುತಾ ಅಲ್ಲಿದ್ದೆ ನೀ
ಏನು ಹೇಳಲಿ ಹೇಗೆ ಹೇಳಲಿ ಜಾರಿಹೋಗೋ ಸೂರ್ಯನು ನೀನೆಂದು
ಪ್ರೇಮದ ಮತ್ತಲಿ ಕೂಗಿಕೊಂಡೆ ಮರಗಳ ಮೇಲಿಂದು

ಚಿಗುರು ಮೀಸೆಯ ಹುಡುಗ ನಿನ್ನ ಮೆಚ್ಚಿಕೊಂಡೆ ನಾನು
ತುಂಟ ನಗುವಿನ ತುಡುಗ ನಿನ್ನ ಹಚ್ಚಿಕೊಂಡೆ ನಾನು
ಮೆಚ್ಚಿಕೊಂಡೆ ನಾನು ನಿನ್ನ ಹಚ್ಚಿಕೊಂಡೆ ನಾನು
ಐ ಲವ್ ಯು.. ಲವ್ ಯು, ಐ ಲವ್ ಯು ಲವ್ ಯು ಲವ್ ಯು.. ಲವ್ ಯು
ಐ ಲವ್ ಯು.. ಲವ್ ಯು, ಐ ಲವ್ ಯು ಲವ್ ಯು ಲವ್ ಯು.. ಲವ್ ಯು

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು

ಚಿತ್ರ: ರಾಮಾಚಾರಿ (1991)
ಸಾಹಿತ್ಯ - ಸಂಗೀತ: ನಾದಬ್ರಹ್ಮ
ಗಾಯಕರು: ಮನು

ಸುವ್ವಿ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ ಸುವ್ವಿ ಸುವ್ವಿ
ಸುವ್ವಿ ಜಾಣೆ ಸುವ್ವಿ ಏರು ಉಯ್ಯಾಲೆ ಸುವ್ವಿ ಸುವ್ವಿ
ಎಳೆ ದವಡೆಯಲಿ ಮೊಳೆ ಹಲ್ಲಂತೆ
ಹಸಿ ಹೊಲದೊಳಗೆ ಹೊಸ ಕಳೆಯಂತೆ
ಮೈ ನೆರದೋಳ್ಯಾರವ್ವಾ ನಮ್ಮೂರ ಕೂಸವ್ವಾ
ಸುವ್ವಿ ಸುವ್ವಿ..
ಸಣ್ಣ ಕೆರೆಯೊಳಗೆ ದೊಡ್ಡ ಮಳೆಯಂತೆ
ಹಸಿ ತಲೆಯೊಳಗೆ ಬಿಸಿ ನೀರಂತೆ
ನೀರೆರೆದೋಳ್ಯಾರವ್ವಾ ನಿಮ್ಮೂರ ಸೀತವ್ವ
ಸುವ್ವಿ ಸುವ್ವಿ..

ಹಾ ಆ ಓ ಹೋ..

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು..
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು..

ಲಾ ಲ ಲ ಲ ಲಾ ಲ ಲ
ಲಾ ಲ ಲಾ ಲ ಲಾ ಲ ಲಾ ಲ ಲಾ..

ಶ್ರೀಗಂಧ ಈ ಗೊಂಬೆ ಇವಳಿಗೇಕೆ ಗಂಧವೋ
ಬಂಗಾರ ಈ ಹೆಣ್ಣು ಇವಳಿಗೇಕೆ ಒಡವೆಯೋ
ತಾರೆಗೆ ಈ ತಾರೆಗೆ ಈ ತಾರೆಗೇಕೆ ಮಿನುಗು ದೀಪವೋ
ಈ ಬೆಳಕಿಗೇಕೆ ಬಿರುಸು ಬಾಣವೋ
ಕೆನ್ನೆ ಮೇಲೆ ಸೇಬಿದೆ ಅಲ್ಲೇ ಗಿಣಿಯ ಮೂಗಿದೆ
ತೊಂಡೆ ಹಣ್ಣು ತುಟಿಯಲಿ ದಾಳಿಂಬೆ ಕಾಳು ಬಾಯಲಿ
ಏನಿದು ಏನು ಮೋಜಿದು ಏನಿದೇನು ಮೋಜಿದು

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು..

ದಯಮಾಡಿ ಮುಗಿಲಾಚೆ ಸ್ವಲ್ಪ ನೋಡಿ ಎಲ್ಲರು
ಸಾಲಾಗಿ ಮುಕ್ಕೋಟಿ ದೇವರುಗಳು ನಿಂತರು
ದೇವತೆ ಈ ದೇವತೆ ಈ ದೇವತೆಯ ಚೆಲುವ ನೋಡಲು
ಈ ಮಾಯಗಾತಿ ನಗುವ ಕಲಿಯಲು
ನೋಡಲಿವಳು ಹುಣ್ಣಿಮೆ ಬಿರಿಯಲಿವಳು ನೈದಿಲೆ
ಚಿಗುರು ಮಾವು ಬಯಸಿದೆ ಒಳಗೆ ಕುಹೂ ದನಿಯಿದೆ
ಏನಿದು ಏನು ಮೋಜಿದು ಏನಿದೇನು ಮೋಜಿದು

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು

ತನನಂ ತನನಂ ಎನಲು ಮನಸು ನೀನೇ ಕಾರಣ

ಚಿತ್ರ: ರಸಿಕ (1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ. ಬಿ & ಕೆ.ಎಸ್. ಚಿತ್ರ  

ತನನಂ ತನನಂ ತನನಂ ತನನಂ
ತನನಂ ತನನಂ ಎನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೇ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ ಆಕಾಶ ಭೂಮಿ ಎಲ್ಲಾ ಚಪ್ಪರ
ತನನಂ ತನನಂ ತನನಂ ತನನಂ
ತನನಂ ತನನಂ ಎನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೇ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ ಆಕಾಶ ಭೂಮಿ ಎಲ್ಲಾ ಚಪ್ಪರ
ತನನಂ ತನನಂ ಎನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೇ ಎದೆಗೆ ಮದುವೆ ತೋರಣ

ಮದುವೆ ಮುಗಿದಮೇಲೆ ಮಾತೇ ನಿಲಿಸೋಣ
ಹೋಗಿ ಬಂದು ಹೋಗಿ ಪ್ರೀತಿ ಮಾಡೋಣ
ಕಣ್ಣಲ್ಲಿ ಕಾಮಣ್ಣ ಕಂಡಾಗ ಕರೆಯೋಣ
ಅವನಿಂದ ಸರಿಯಾಗಿ ಸರಸಾನ ಕಲಿಯೋಣ
ತಂದಾನ ತಾನನನ ತಾನಾನನಾ ತಾಳಿನೆ ದೂರದಂತ ಆಲಿಂಗನ
ತಂದಾನ ತಾನನನ ತಾನಾನನಾ ಕೇಳೋಣ ಕಿವಿತುಂಬ ಪ್ರೇಮಾಯಣ
ನನ್ನ ಕೃಷ್ಣನು ನೀನು ನನ್ನ ರುಕ್ಮಿಣಿ ನೀನು
ನಂಗು ನಿಂಗೂ ನಾಳೆ ಕಲ್ಯಾಣ

ತನನಂ ತನನಂ ತನನಂ ತನನಂ
ತನನಂ ತನನಂ ಎನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೇ ಎದೆಗೆ ಮದುವೆ ತೋರಣ

ಹುಡುಗಿ ರಾಗಿಮುದ್ದೆ ನುಂಗೋ ಹಾಗಿಲ್ಲ
ಹುಡುಗ ಬೆಣ್ಣೆಮುದ್ದೆ ಕರಗೋ ಹಾಗಿಲ್ಲ
ಪಂಚಾಗ ನೋಡೋಣ ಸೋಬಾನೆ ಹಾಡೋಣ
ಮುದ್ದೆನೂ ಬೆಣ್ಣೆನೂ ಆ ರಾತ್ರಿ ಮುಗಿಸೋಣ
ತಂದಾನ ತಾನನನ ತಾನಾನನಾ ತಾನಾಗಿ ಹುಟ್ಟುವುದೇ ಆಲಾಪನ
ತಂದಾನ ತಾನನನ ತಾನಾನನಾ ತಂದಂಗೆ ನೀಡುವುದೇ ಆರಾಧನ
ನನ್ನ ನಾಯಕಿ ನೀನು ನನ್ನ ನಾಯಕ ನೀನು
ನಂಗು ನಿಂಗೂ ನಾಳೆ ಕಲ್ಯಾಣ

ತನನಂ ತನನಂ ತನನಂ ತನನಂ
ತನನಂ ತನನಂ ಎನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೇ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ ಆಕಾಶ ಭೂಮಿ ಎಲ್ಲಾ ಚಪ್ಪರ
ತನನಂ ತನನಂ ಎನಲು ಮನಸು ನೀನೇ ಕಾರಣ
ಮನಸು ನುಡಿದ ಮಾತೇ ಎದೆಗೆ ಮದುವೆ ತೋರಣ

ಅಮ್ಮಮ್ಮ ಗುಮ್ಮ ನನ್ನ ಗಂಡ

ಚಿತ್ರ: ನಮ್ಮೂರ ಹಮ್ಮೀರ (1990)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಮಂಜುಳಾ ಗುರುರಾಜ್

ಅಮ್ಮಮ್ಮ ಗುಮ್ಮ ನನ್ನ ಗಂಡ  ನನ್ನಿಂದ ಎಲ್ಲಾ ತಿಳ್ಕೊಂಡ
ಅಮ್ಮಮ್ಮ ಕಳ್ಳಿ ನನ್ನ ಮಳ್ಳಿ ಇವಳಂತೆ ಇಲ್ಲಾ ಊರಲ್ಲಿ
ನೋಡಲೇನೊ ಗುಮ್ಮ ಸರಸದಲಿ ಅಮ್ಮಾ
ನನ್ನ ಮಗುವಿನಮ್ಮ ಕಾಡಬೇಡ ಬಾಮ್ಮ
ಅಮ್ಮಮ್ಮ ಗುಮ್ಮ ನನ್ನ ಗಂಡ  ನನ್ನಿಂದ ಎಲ್ಲಾ ತಿಳ್ಕೊಂಡ

ಸೋಕಿದರೆ ಚಳಿಗಾಲ ತಾಕಿದರೆ ಮಳೆಗಾಲ
ನಡುಗುತಿದೆ ನೆನೆಯುತಿದೆ ತನುವೀಗ
ದೂರವಿದೆ ಸೆಕೆಗಾಲ ಸೇರದಿರೆ ಬರಗಾಲ
ಬೆವರುತಿದೆ ಬಿರಿಯುತಿದೆ ಮನವೀಗ
ಆಷಾಢ ನಾಚಿಕೆ ಆಷಾಢ, ಸಹಿಸೀಗ ನಾಚುವ ಕಾರ್ಮೋಡ
ಈ ಆಟ ಈ ಪಾಠ ಹೇಳೋರೇ ಯಾರೂ ಇಲ್ಲ
ಅಮ್ಮಮ್ಮ ಗುಮ್ಮ ನನ್ನ ಗಂಡ  ನನ್ನಿಂದ ಎಲ್ಲಾ ತಿಳ್ಕೊಂಡ
ಅಮ್ಮಮ್ಮ ಕಳ್ಳಿ ನನ್ನ ಮಳ್ಳಿ ಇವಳಂತೆ ಇಲ್ಲಾ ಊರಲ್ಲಿ

ಮೌನದಲಿ ಕೊಸರಾಟ ನವಸುಖದ ಉಸಿರಾಟ
ಹಾಸಿಗೆಯ ಪಾಠಗಳ ಓಂಕಾರ
ಆಸೆಗಳ ವೀಣೆಯಲಿ ಬಯಕೆಗಳ ತಂತಿಯಲಿ
ಮೀಟಿದರೆ ಮೀಟಿದರೆ ಝೇಂಕಾರ
ಹಣೆಬೊಟ್ಟು ನನ್ನ ಎದೆಯಲ್ಲಿ, ಗೋರಂಟಿ ಗುರುತು ಕೆನ್ನೇಲಿ
ಈ ಆಟ ಈ ಪಾಠ ಹೇಳೋರೆ ಯಾರೂ ಇಲ್ಲ
ಅಮ್ಮಮ್ಮ ಗುಮ್ಮ ನನ್ನ ಗಂಡ  ನನ್ನಿಂದ ಎಲ್ಲಾ ತಿಳ್ಕೊಂಡ
ಅಮ್ಮಮ್ಮ ಕಳ್ಳಿ ನನ್ನ ಮಳ್ಳಿ ಇವಳಂತೆ ಇಲ್ಲಾ ಊರಲ್ಲಿ
ನೋಡಲೇನೊ ಗುಮ್ಮ ಸರಸದಲಿ ಅಮ್ಮಾ
ನನ್ನ ಮಗುವಿನಮ್ಮ ಕಾಡಬೇಡ ಬಾಮ್ಮ
ಅಮ್ಮಮ್ಮ ಗುಮ್ಮ ನನ್ನ ಗಂಡ  ನನ್ನಿಂದ ಎಲ್ಲಾ ತಿಳ್ಕೊಂಡ

ಬಂಗಾರದಿಂದ ಬಣ್ಣಾನ ತಂದ

ಚಿತ್ರ: ಪ್ರೀತ್ಸೋದ್ ತಪ್ಪಾ
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಕೆ. ಜೆ. ವೈ

ಬಂಗಾರದಿಂದ ಬಣ್ಣಾನ ತಂದ..
ಸಾರಂಗದಿಂದ.. ನಯನಾನ ತಂದ..
ಮಂದಾರವನ್ನು.. ಹೆಣ್ಣಾಗು ಎಂದ..
ದಾಳಿಂಬೆಯಿಂದ.. ದಂತಾನ ತಂದ..
ಮಕರಂದ ತುಂಬಿ.. ಅಧರಾನ ತಂದ..
ನನ್ನನ್ನು ತಂದ.. ರುಚಿನೋಡು ಎಂದ..

ತಂದಾನ ತಂದ  ತಂದಾನ ತಂದ..
ಅಪರೂಪದಂದ.. ನನಗಾಗಿ ತಂದ..

ಚಂದಮಾಮನಿಂದ ಹೊಳಪನುತಂದ,
ಬಾಳೆದಿಂಡಿನಿಂದ ನುಣುಪನು ತಂದ
ಅಂದ... ಅಂದ...
ಅಂದ ಚಂದ ಹೊರುವ ಕಂಬದ ಜೋಡಿಗೆ ಮಿಂಚಿರಿ ಎಂದ..
ಹಂಸದಿಂದ ಕೊಂಚ ನಡಿಗೆಯ ತಂದ,
ನವಿಲಿನಿಂದ ಕೊಂಚ ನಾಟ್ಯವ ತಂದ
ನಯವೋ... ಲಯವೋ...
ನಯವೋ ಲಯವೋ ರೂಪ ಲಯವೋ ರಸಿಕನೇ ಹೇಳು ನೀ ಎಂದ..
ತಂಗಾಳಿಯಿಂದ.. ಸ್ನೇಹನ ತಂದ..
ಲತೆಬಳ್ಳಿಯಿಂದ.. ಸಿಗ್ಗನ್ನು ತಂದ..
ಸಿಗ್ಗನ್ನು ಇವಳ.. ನಡುವಾಗು ಎಂದ..
ನಡುವನ್ನು ಅಳಿಸಿ.. ಎದೆಭಾರ ತಂದ..
ನನ್ನನ್ನು ಲತೆಗೆ.. ಮರವಾಗು ಎಂದ..

ತಂದಾನ ತಂದ  ತಂದಾನ ತಂದ..
ಅಪರೂಪದಂದ.. ನನಗಾಗಿ ತಂದ..

ಗಂಧ ತಂದನೋ ಧಮನುಗಳಿಂದ,
ರತಿಯ ತಂದನೋ ಅಮಲುಗಳಿಂದ
ಧಮನ... ಅಮಲ...
ಧಮನ ಅಮಲ ಕಂಪನ ಕಡಲ ದೋಣಿಗೆ ಕಾಮನ ತಂದ..
ಭೂಮಿಸುತ್ತ ಇರೋ ಕಾಂತವ ತಂದ,
ಬಾನಿನಿಂದ ಏಕಾಂತವ ತಂದ
ಒಲವು... ಚೆಲುವು...
ಒಲವು ಚೆಲುವು ಕೂಡೋ ಕಲೆಗೆ ಘರ್ಷಣೆ ಆಕರ್ಷಣೆ ತಂದ..
ಕರಿಮೋಡದಿಂದ.. ಮುಂಗುರುಳ ತಂದ..
ಕೋಲ್ಮಿಂಚಿನಿಂದ.. ರತಿ ನೋಟ ತಂದ..
ಜಲಧಾರೆಯಿಂದ.. ಒಲವನ್ನು ತಂದ..
ಒಲವನ್ನು ಓಡೋ.. ನದಿಯಾಗು ಎಂದ..
ನನ್ನನ್ನು ನದಿಗೆ.. ಕಡಲಾಗು ಎಂದ..

ಬಂಗಾರದಿಂದ.. ಬಣ್ಣಾನ ತಂದ..
ಸಾರಂಗದಿಂದ.. ನಯನಾನ ತಂದ..
ಮಂದಾರವನ್ನು.. ಹೆಣ್ಣಾಗು ಎಂದ..
ದಾಳಿಂಬೆಯಿಂದ.. ದಂತಾನ ತಂದ..
ಮಕರಂದ ತುಂಬಿ.. ಅಧರಾನ ತಂದ..
ನನ್ನನ್ನು ತಂದ.. ರುಚಿನೋಡು ಎಂದ..

ತಂದಾನ ತಂದ  ತಂದಾನ ತಂದ..
ಅಪರೂಪದಂದ.. ನನಗಾಗಿ ತಂದ..

ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ

ಚಿತ್ರ : ಚಿನ್ನ (1994)
ಸಾಹಿತ್ಯ - ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ರಂಬಾ ಲೆ ರಂಬಾ.. ಓ.. ಹೋಯ್ ಲಾ
ಡುಂಬಾ ಲೆ ಡುಂಬಾ.. ಓ.. ಹೋಯ್ ಲಾ

ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಜಿಂಕೆ ಆಯ್ತು ಹೆಣ್ಣುಹುಲಿ ಪ್ರೀತಿ ಹತ್ತಿರ
ಎಷ್ಟು ಹತ್ತಿರ, ಪ್ರೀತಿ ಎಷ್ಟು ಎತ್ತರ, ಪ್ರಶ್ನೆಗಿಲ್ಲ ಉತ್ತರ

ರಂಬಾ ಲೆ ರಂಬಾ.. ಓ.. ಹೋಯ್ ಲಾ
ಡುಂಬಾ ಲೆ ಡುಂಬಾ.. ಓ.. ಹೋಯ್ ಲಾ

ಇದು ಕಾಡಾದರೂ ಅಂತರಂಗ ಇದೆ
ಪ್ರಾಣಿ ಗೂಡಾದರೂ ಸ್ನೇಹ ಗಂಧ ಇದೆ
ಝುಳು ಝುಳು ಝುಳು ನೀರಿನಲಿ ಹಾಡಿದೆ ಅನುರಾಗದಲಿ
ಘಮ ಘಮಿಸುವ ಮುತ್ತುಗಳ ಊಟಕೆ ಇಡಲೆ
ಹೂವಾಗಿ ಮಲ್ಲಿಗೆಯ ಗಂಧ ಕೊಡು
ಹಾವಾಗಿ ಅಪ್ಪುಗೆಯ ಬಂಧ ಕೊಡು
ಹೆಣ್ಣಾಗಿ ಅಮೃತದ ಪ್ರೀತಿ ಕೊಡು

ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಜಿಂಕೆ ಆಯ್ತು ಹೆಣ್ಣುಹುಲಿ ಪ್ರೀತಿ ಹತ್ತಿರ
ಎಷ್ಟು ಹತ್ತಿರ, ಪ್ರೀತಿ ಎಷ್ಟು ಎತ್ತರ, ಪ್ರಶ್ನೆಗಿಲ್ಲ ಉತ್ತರ

ರಂಬಾ ಲೆ ರಂಬಾ.. ಓ.. ಹೋಯ್ ಲಾ
ಡುಂಬಾ ಲೆ ಡುಂಬಾ.. ಓ.. ಹೋಯ್ ಲಾ

ಮಾತನಾಡೊ ಹುಲಿ ಮುದ್ದು ಮಾಡೋದ್ ಕಲಿ
ಮುದ್ದಿನಾ ಬೇಟೆಲಿ ಇದ್ದುದ್ದೆಲ್ಲಾ ಬಲಿ
ಗಡಿಬಿಡಿಯಲಿ ಗಂಡು ಹುಲಿ
ಹೆದರಿಕೆಯಲಿ ಹೆಣ್ಣು ಹುಲಿ
ಒಳಗಡೆ ಇರೊ ಕನಸುಗಳು ಹೊರಗಡೆ ಬರಲಿ
ನೀ ನನ್ನ ಕನಸಿಗೆ ಆಧಾರವೋ
ನಾ ನಿನ್ನ ಬಯಕೆಗೆ ಆಹಾರವೋ
ಈ ರಾತ್ರಿ ಪ್ರಣಯಕೆ ಸತ್ಕಾರವೋ

ಹುಲಿ ಬಂತು ಹುಲಿ ಬಂತು ಜಿಂಕೆ ಹತ್ತಿರ
ಜಿಂಕೆ ಆಯ್ತು ಹೆಣ್ಣುಹುಲಿ ಪ್ರೀತಿ ಹತ್ತಿರ
ಎಷ್ಟು ಹತ್ತಿರ, ಪ್ರೀತಿ ಎಷ್ಟು ಎತ್ತರ, ಪ್ರಶ್ನೆಗಿಲ್ಲ ಉತ್ತರ

ರಂಬಾ ಲೆ ರಂಬಾ.. ಓ.. ಹೋಯ್ ಲಾ
ಡುಂಬಾ ಲೆ ಡುಂಬಾ.. ಓ.. ಹೋಯ್ ಲಾ

ರಾಗಿಹೊಲದಾಗೆ ಖಾಲಿ ಗುಡಿಸಲು

ಚಿತ್ರ: ಅಣ್ಣಯ್ಯ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಕುಂಕುಮ ಅರ್ಧವಿದೆ..
ಕೈ ಬಳೆ ಕಮ್ಮಿ ಇದೆ..
ಬೈತಲೆ ಕೆಟ್ಟಿದೆ, ಗಲ್ಲವು ಕಟ್ಟಿದೆ, ಎಲ್ಲಿಗೆ ಹೋಗಿದ್ದೆಯೇ..
ಕಾಲ್ಗಳು ಬೀಗುತಿವೆ..
ಕಣ್ಗಳು ತೇಗುತಿವೆ..
ಸೊಂಟವು ಜಗ್ಗದೆ, ಹೆಣ್ಣೆದೆ ಹಿಗ್ಗಿದೆ, ಯಾಕ್ಹಿಂಗೆ ಬಾಗಿದ್ದಿಯೇ..

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತನಾಡಲು.. ಓಹೋ
ನನ್ನ ಪತಿರಾಯರಿಗೆ ತಿನಿಸಲು.. ಓಹೋ
ಜೇನುತುಪ್ಪ ತಂದೆ ಮಾತು ಬರಿಸಲು.. ಓಹೋ
ತುಂಬಾ ಹೊಸ ಮಾತು ಕಲಿಸಿಕೊಟ್ಟಳಮ್ಮ
ಜೇನುತುಪ್ಪ ಕೊಟ್ಟು, ಕೊಡು ಎಂದಳಮ್ಮ.. ಹೋಯ್

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತನಾಡಲು.. ಓಹೋ

ತಾಳಿಯು ಬೆನ್ನಲಿದೆ..
ಸತ್ಯವು ಕಾಣುತಿದೆ..
ಕತ್ತಲು ಕಾಯದೇ, ಲೋಕವ ನೋಡದೇ
ಏನೇನು ಕಾಡಿದ್ದಿಯೇ..

ನನ್ನ ಪುಟ್ಟ ಪತಿರಾಯ
ಪುಟ್ಟ ದಿಟ್ಟ ಚನ್ನಿಗರಾಯ.. ಕೇಳಿರಿ
ಹತ್ತಿರಕ್ಕೆ ಬಾ ಎಂದರು
ಬೇಡ ಅಂದ್ರೆ ಬಿಟ್ಟುಕೊಟ್ಟರು.. ತಿಳಿಯಿರಿ

ನೀನು ತಾನೇ ಆಸೆ ತಂದೆ
ನೀನು ಯಾಕೆ ಜೇನು ತಿಂದೆ
ಹೌದು ತಿಂದೆ ಏನು ಮುಂದೆ
ನಾನು ತಾಯಿ ನೀನು ತಂದೆ
ಕೂಸಿಲ್ಲದೇನೆ ತಾಯಾಸೆಯೇನೇ
ಬಾ ಬಿಡಿಸು ಈ ಒಗಟನು
ಒ..ಓ.. ಮುಂದೇನೋ ನಾ ಅರಿಯೆನು

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತು ಕೇಳಲು.. ಓಹೋ
ತನ್ನ ಪತಿರಾಯನಿಗೆ ತಿನಿಸಲು.. ಓಹೋ
ತಂದ ಜೇನು ತಿಂದೆ ಮಾತು ಕಲಿಯಲು.. ಓಹೋ
ತುಂಬಾ ಹೊಸ ಮಾತು ಕಲಿತುಕೊಂಡರಮ್ಮ
ಜೇನು ತಿಂದು ನೀನು ತಿನ್ನು ಎಂದರಮ್ಮ.. ಹೋ

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತು ಕೇಳಲು.. ಓಹೋ

ಪಂಚೆಯ ಅಂಚು ಎಲ್ಲಿ..
ಲಂಗದ ಮೂತಿ ಎಲ್ಲಿ..
ಬಟ್ಟೆಗಳೆಲ್ಲಾವು ತಿರುವು ಮುರುವು ಏನೇನು ಸಾಗಿತ್ತಲ್ಲಿ..

ದೂರದಿಂದ ನೋಡಿದರು
ಸಣ್ಣಪದ ಹಾಡಿದರು.. ಕೇಳಿರಿ
ಕಣ್ಣುಗಳ ಹೊಗಳಿದರು
ತಾಳಿಅಂದ್ರೆ ನಿಲ್ಲಿಸಿದರು.. ತಿಳಿಯಿರಿ

ನೀನು ತಾನೇ ಹಾಡು ಎಂದೆ
ಯಾಕೆ ನನ್ನ ಪ್ರಾಣ ಎಂದೆ
ಪ್ರೀತಿಯಿಂದ ಹಾಗೆ ಅಂದೆ
ನಾವು ಇನ್ನು ಪ್ರೀತಿ ಹಿಂದೆ
ಈ ಪ್ರೇಮಪಾಠ ಈ ಜೇನಿನೋಟ
ಈ ತಲೆಗೆ ಈಗೇರಿತು
ಅ..ಆ.. ಓ ಚಲುವೆ ಏನಾಯಿತು

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತನಾಡಲು.. ಓಹೋ
ತನ್ನ ಪತಿರಾಯನಿಗೆ ತಿನಿಸಲು.. ಓಹೋ
ತಂದ ಜೇನು ತಿಂದೆ ಮಾತು ಕಲಿಯಲು.. ಓಹೋ
ತುಂಬಾ ಹೊಸ ಮಾತು ಕಲಿತುಕೊಂಡರಮ್ಮ
ಜೇನು ತಿಂದು ನೀನು ತಿನ್ನು ಎಂದರಮ್ಮ.. ಹೋ

ರಾಗಿಹೊಲದಾಗೆ ಖಾಲಿ ಗುಡಿಸಲು.. ಓಹೋ
ಗುಡಿಸಲಿಗೆ ಹೋದೆ ಮಾತು ಕೇಳಲು.. ಓಹೋ

ಮಧುವಾದೆ ನೀನು ನನ್ನ ಹಾಡಿಗೆ

ಚಿತ್ರ: ಪುರುಷೋತ್ತಮ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಮಂಜುಳ ಗುರುರಾಜ್

ಮಧುವಾದೆ ನೀನು ನನ್ನ ಹಾಡಿಗೆ
ವಧುವಾದೆ ನೀನು ನನ್ನ ಬಾಳಿಗೆ
ಮಧುವಿಲ್ಲದೇ ಸುಮವಾಗದು
ಒಲವಿಲ್ಲದೇ ಜೊತೆಯಾಗದು

ವರವಾದೆ ನೀನು ನನ್ನ ಪ್ರೀತಿಗೆ
ವರನಾದೆ ನೀನು ನನ್ನ ಬಾಳಿಗೆ
ವರವಿಲ್ಲದೇ ಮನ ಸೇರದು
ಮನ ಸೇರದೇ ಒಲವಾಗದು

ಮರೆತೆವು ಜಗದ ನೂರು ಚಿಂತೆ
ತೊರೆದೆವು ಸುಖದ ಅಂತೆ ಕಂತೆ
ಅಳಿದವು ಭ್ರಮೆಯ ಹಗಲುಗನಸು
ಉಳಿದವು ಎರಡು ತಿಳಿಯ ಮನಸು

ಮರೆತೆವು ಜಗದ ನೂರು ಚಿಂತೆ
ತೊರೆದೆವು ಸುಖದ ಅಂತೆ ಕಂತೆ
ಅಳಿದವು ಭ್ರಮೆಯ ಹಗಲುಗನಸು
ಉಳಿದವು ಎರಡು ತಿಳಿಯ ಮನಸು

ಪ್ರೇಮದ ತುಟಿಗೆ ಯೌವ್ವನ
ನೀಡಿತು ಮಧುರ ಚುಂಬನ
ಮನಸಿಗೆ ಹೃದಯ ಕಂಪನ
ಹೃದಯಕೆ ಪ್ರೇಮ ದರ್ಶನ

ಮಧುವಾದೆ ನೀನು ನನ್ನ ಹಾಡಿಗೆ
ವರನಾದೆ ನೀನು ನನ್ನ ಬಾಳಿಗೆ
ಮಧುವಿಲ್ಲದೇ ಸುಮವಾಗದು
ಮನ ಸೇರದೇ ಒಲವಾಗದು

ಬಿರಿಯಲಿ ನಾವು ನಿಂತ ನೆಲವು
ಸುರಿಸಲಿ ಬೆಂಕಿಮಳೆಯ ಬಾನು
ಹರಿಯಲಿ ದಡವ ಮೀರಿ ಕಡಲು
ತಿರುಗಲಿ ಎದುರು ನಿಂತು ಜಗವು

ಬಿರಿಯಲಿ ನಾವು ನಿಂತ ನೆಲವು
ಸುರಿಸಲಿ ಬೆಂಕಿಮಳೆಯ ಬಾನು
ಹರಿಯಲಿ ದಡವ ಮೀರಿ ಕಡಲು
ತಿರುಗಲಿ ಎದುರು ನಿಂತು ಜಗವು

ಅಮರವೀ ಪ್ರೇಮ ಕಲರವ
ಮಧುರವೀ ಸ್ನೇಹದನುಭವ
ಸತ್ಯವೀ ಹೃದಯ ಸಂಗಮ
ನಿತ್ಯವೀ ಪ್ರೇಮ ಸರಿಗಮ

ಮಧುವಾದೆ ನೀನು ನನ್ನ ಹಾಡಿಗೆ
ವಧುವಾದೆ ನೀನು ನನ್ನ ಬಾಳಿಗೆ
ಮಧುವಿಲ್ಲದೇ ಸುಮವಾಗದು
ಒಲವಿಲ್ಲದೇ ಜೊತೆಯಾಗದು

ನೀ ಓಡು ಮುಂದೆ ನಾ ನಿನ್ನ ಹಿಂದೆ

ಚಿತ್ರ: ಪರಶುರಾಮ್ (1989)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯಕರು: ಡಾ.ರಾಜ್‌ಕುಮಾರ್, ಸ್ವರ್ಣಲತಾ

ಸರದಾರ ಬಾ ಬಾಳಿನ ಸಿಂಧೂರ
ಬಾ ಬಂಗಾರ ನನ್ನ ಸಿಂಗಾರ
ಸೇರು ಬಾ ಮಯೂರ

ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ಬರುವೆ ಬರುವೆ ನಿನ್ನ ಬಳಸಲು ಬರುವೆ
ತರುವೆ ನಿನಗೆ ಸಿಹಿ ಕಾಣಿಕೆ ತರುವೆ
ಬೇಲೂರಿನ ಬಾಲೆ ಈ ಕೊರಳಿಗೆ ಮಾಲೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ

ಈ ಸುಮಗಳ ನಗುವಲಿ ನಿನ್ನ ಮೊಗವಿದೆ
ಈ ಲತೆಯಲಿ ಬಳುಕುವ ನಿನ್ನ ನಡುವಿದೆ
ಆ ಕೋಗಿಲೆ ಗಾನ ನಿನ್ನ ಧ್ವನಿಯ ಹಾಗಿದೆ
ಆ ರಾಗದ ಮೇಲೆ ನನ್ನ ಪಯಣ ಸಾಗಿದೆ
ಸರದಾರ ಬಾ ಬಾಳಿನ ಸಿಂಧೂರ
ಬೇಲೂರಿನ ಬಾಲೆ ಈ ಕೊರಳಿಗೆ ಮಾಲೆ

ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ

ಈ ಜೀವನ ನಲಿವುದು ನಿನ್ನ ಹಾಡಿಗೆ
ರೋಮಾಂಚನ ನಿನ್ನಯ ಕಣ್ಣ ಮೋಡಿಗೆ
ಈ ಸ್ನೇಹಕೆ ನಾನು ನೂರು ಜನ್ಮ ಬೇಡುವೆ
ಜೊತೆಯಾಗಿರೆ ನೀನು ಏನೆ ಬರಲಿ ಗೆಲ್ಲುವೆ
ಸರದಾರ ಬಾ ಬಾಳಿನ ಸಿಂಧೂರ
ಬೇಲೂರಿನ ಬಾಲೆ ಈ ಕೊರಳಿಗೆ ಮಾಲೆ

ನೀ ಓಡು ಮುಂದೆ ನಾ ನಿನ್ನ ಹಿಂದೆ
ನೀ ಓಡು ಮುಂದೆ ನಾ ನಿನ್ನ ಹಿಂದೆ
ಬರುವೆ ಬರುವೆ ನಿನ್ನ ಬಳಸಲು ಬರುವೆ
ತರುವೆ ನಿನಗೆ ಸಿಹಿ ಕಾಣಿಕೆ ತರುವೆ

ನಮಸ್ಕಾರ ನಿನಗೆ ಭಾಸ್ಕರ

ಚಿತ್ರ: ಸಂಭ್ರಮ (1999)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯಕರು: ರಮೇಶ್ ಚಂದ್ರ, ಅನುರಾಧ ಶ್ರೀರಾಮ್

ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ
ನಿತ್ಯ ಲೋಕ ಸಂಚಾರ, ಸಂಚಾರ, ಸಂಚಾರ
ಸೃಷ್ಟಿಗೆಲ್ಲ ಆಧಾರ, ಆಧಾರ, ಆಧಾರ
ಅಂಧಕಾರ ಸಂಹಾರ, ಸಂಹಾರ, ಸಂಹಾರ
ಜಗದ ಮನದ ಒಳಗೂ ಹೊರಗೂ ಬೆಳಗು ಬೆಳಗು
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ

ಸರಿಗಮಪದನಿಗಳೆ
ಸರಿಗಮಪದನಿಗಳೆ
ನಿನ್ನ ಹಗಲು, ನಿನ್ನ ಇರುಳು
ನಿನ್ನ ಹಗಲು ಇರುಳು ರಥದ ಅಶ್ವಗಳೆ
ನವರಸ ಬಾಳ ವೀಣೆ ನೀಡಿ
ನಮ್ಮನು ನಾಕು ತಂತಿ ಮಾಡಿ
ನುಡಿಸುವ ಗಾನ ಲೋಲ ನೀನು
ಸಸಸಸಸ ನಿಸನಿಸಸಸ ಪದನಿಸಸಸ
ಗಪದನಿಸಸ ಸಗಪದನಿದಸ
ಕಾಲಾಯ ತಸ್ಮೈ ನಮಃ
ಏಕ ಕಂಠ ನಿರ್ಧಾರ, ನಿರ್ಧಾರ, ನಿರ್ಧಾರ
ಸಪ್ತ ಶೋಕ ಪರಿಹಾರ, ಪರಿಹಾರ, ಪರಿಹಾರ
ಅಂಧಕಾರ ಸಂಹಾರ, ಸಂಹಾರ, ಸಂಹಾರ
ಜಗದ ಮನದ ಒಳಗೂ ಹೊರಗೂ ಬೆಳಗು ಬೆಳಗು
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ

ಋತುಗಳ ಯಜಮಾನನೆ
ಋತುಗಳ ಯಜಮಾನನೆ
ಈ ಚಿಗುರು, ಈ ಹಸಿರು
ಈ ಚಿಗುರು ಹಸಿರು ನಿನ್ನ ಸಂಭ್ರಮವೆ
ಬೆಳಕಿನ ಮನೆಯು ನಿನ್ನದಂತೆ
ಹಸಿರೆ ತಳಿರು ತೋರಣವಂತೆ
ಬೆಳೆವುದೆ ನಿನ್ನ ಹಬ್ಬವಂತೆ
ಗಾನ ಕಲಕಲ ನೀರ ಕಿಲಕಿಲ
ಮಲಯ ಮಾರುತದ ಮಾತು ಸಲಸಲ
ನಿಸರ್ಗ ಸಲ್ಲಾಪವೆ
ಕಾಲಾಯ ತಸ್ಮೈ ನಮಃ
ಕಾಲ ಕೋಶ ಕರ್ತಾರ, ಕರ್ತಾರ, ಕರ್ತಾರ
ವರ್ತಮಾನ ವಕ್ತಾರ, ವಕ್ತಾರ, ವಕ್ತಾರ
ಅಂಧಕಾರ ಸಂಹಾರ, ಸಂಹಾರ, ಸಂಹಾರ
ಜಗದ ಮನದ ಒಳಗೂ ಹೊರಗೂ ಬೆಳಗು ಬೆಳಗು
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ

ಓಹೋ ಚಂದ್ರಮ, ಕೇಳಯ್ಯ ಚಂದ್ರಮ

ಚಿತ್ರ: ಚಂದ್ರೋದಯ (1999)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಿ.

ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಒಲ್ಲದ ಒಲವಿನಲಿ, ಬಾಳುವ ಈ ಜೊತೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ

ಗುಲಾಬಿ ಹೂವಿನಲ್ಲಿ, ಅದೇಕೊ ನಗುವೆ ಇಲ್ಲ
ಮುಳ್ಳಿಂದ ಮುತ್ತಿನೆಡೆಗೆ, ಅದೇಕೊ ಬಾರದಲ್ಲ
ಕಂಗಳಿಂದ ಕಂಗಳ, ಕನಸ ಕಾಣಲು ಕೊಡದಲ್ಲ
ಹೃದಯದಿಂದ ಹೃದಯವ, ಅಳೆದು ನೋಡಲು ಬಿಡದಲ್ಲ
ಸಪ್ತಪದಿಗಳೆಂಬ, ಸೆರೆಯಲಿರುವ ಹೊಸ ಕಥೆಯ

ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಒಲ್ಲದ ಒಲವಿನಲಿ, ಬಾಳುವ ಈ ಜೊತೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ

ನಿಟ್ಟುಸಿರ ಜಗಳದಲ್ಲಿ, ದೂರಾಯ್ತು ಜೋಡಿ ಮಂಚ
ಭಾವಗಳ ಕದನದಲ್ಲಿ, ಹೋಳು ಹೃದಯದ ಪ್ರಪಂಚ
ಅಂತರಂಗದ ಆಗಸ, ಬೆಳಕು ಕಾಣದೆ ಅಲೆಯುತಿದೆ
ಅಂದದ ಈ ಅಂತಃಪುರ, ಅರ್ಥವಿಲ್ಲದೆ ಆಳುತಲಿದೆ
ವಿರಹವೆಂಬ ವಿಷವ, ವಿನಾ ಕಾರಣ ಕುಡಿದವರ

ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಒಲವಿನಾ ಕಥೆಯ, ಒಲವಿನಾ ಕಥೆಯ
ಒಲ್ಲದ ಒಲವಿನಲಿ, ಬಾಳುವ ಈ ಜೊತೆಯ
ಓಹೋ ಚಂದ್ರಮ, ಕೇಳಯ್ಯ ಚಂದ್ರಮ
ಓಹೋ ಚಂದ್ರಮ

ಲೂನಾ ಮೇಲೆ ನನ್ನ ಮೈನಾ

: ದಿಗ್ವಿಜಯ (1987)
ಸಾಹಿತ್ಯ-ಸಂಗೀತ: ಹಂಸಲೇಖ
ಗಾಯನ: ಎಸ್.ಪಿ.ಬಿ.

ಅಂಬಚ್ಚೂರಲ ಗುಂಬಚ್ಚೂರಲ ಗುಸಗುಚ್ಚೂರಲ ತಲಗಚ್ಚ
ಶರ್ಟ್ ಇನ್ ಮಾಡು, ಕ್ರಾಪ್ ಸರಿ ಮಾಡು, ಮೀಸೆ ತೀಡು, ಮುಂದೆ ನೋಡು,
ಹಿಂದೆ ಓಡು, ಗಿಂಚ್ಕೊಂಡ್ ನೋಡು, ಜಂಗ್ಲಿ ಸ್ಟೈಲ್‌ನಲ್ಲಿ ಗಾನ ಹಾಡು
ಲೇಡಿ ಮೇಲೆ, ಗಡಚಿಚಿಗ, ಗಾಡಿ ಮೇಲೆ ಲೇಡಿ ಮುಂದೆ ಹೋಗಲು ಬಿಡಬೇಡ
ಹಿಂದೆ ಬಂದರು ಬಿಡಬೇಡ, ನಿನ್ನ ಬೈದರು ಬಿಡಬೇಡ, ನಿನ್ನ ಉಗಿದರು ಬಿಡಬೇಡ
ಯಾಹೂ....

ಲೂನಾ ಮೇಲೆ ನನ್ನ ಮೈನಾ
ಕುಲುಕೀಸ ಬೇಡ ನಿನ್ನ ಮೈ ನಾ
ಲೂನಾ ಮೇಲೆ ನನ್ನ ಮೈನಾ
ಕುಲುಕೀಸ ಬೇಡ ನಿನ್ನ ಮೈ ನಾ
ಈ ನೀಲಿ ಕಣ್ಣುಗಳು
ಮಿನುಗುವ ತಾರೆಗಳು
ಈ ಕಣ್ಣು ಹುಬ್ಬು ರೆಪ್ಪೆ ಮೂಗು ಕೆನ್ನೆ ಗಲ್ಲ ಎಲ್ಲಾ
ಅಂಗಾಗ ಪೂರ ನೀನು ನನ್ನವಳು
ನನ್ನಾಣೆ ಚಿನ್ನ ನೀನು ನನ್ನವಳು
ಲೂನಾ ಮೇಲೆ ನನ್ನ ಮೈನಾ
ಕುಲುಕೀಸ ಬೇಡ ನಿನ್ನ ಮೈ ನಾ

ನಿನ್ನ ಮುಂಗುರುಳು, ಮುಸ್ಸಂಜೆ ಮೋಡಗಳು
ಹಾರಿದಾಗ ಹಾರುತಿದೆ ಪಂಚಪ್ರಾಣಗಳು
ನಿನ್ನ ತೋಳುಗಳು, ಎಳೆ ಬಾಳೆ ದಿಂಡುಗಳು
ಬಾರೊ ಬಾರೊ ಎನ್ನುತಿದೆ ಅಪ್ಪಿಕೊಂಡಿರಲು
ಇಂದ್ರಲೋಕದಿಂದ, ಲೂನ ಮೇಲೆ ಬಂದ
ಸುಂದರಾಂಗಿ ನನ್ನೊಮ್ಮೆ ನೋಡೆ, ಹುಡುಗಿ ಹುಡುಗಿ
ನಿನ್ನ ದಾರಿಗಾಗಿ, ಕಾಯೋ ಪ್ರೇಮ ಯೋಗಿ
ನನ್ನನ್ನೀಗ ನೀ ಪ್ರೀತಿ ಮಾಡೆ
ಈ ನೀಲಿ ಕಣ್ಣುಗಳು, ಮಿನುಗುವ ತಾರೆಗಳು
ಈ ಕಣ್ಣು ಹುಬ್ಬು ರೆಪ್ಪೆ ಮೂಗು ಕೆನ್ನೆ ಗಲ್ಲ ಎಲ್ಲಾ
ಅಂಗಾಗ ಪೂರ ನೀನು ನನ್ನವಳು
ನನ್ನಾಣೆ ಚಿನ್ನ ನೀನು ನನ್ನವಳು

ಲೂನಾ ಮೇಲೆ ನನ್ನ ಮೈನಾ
ಕುಲುಕೀಸ ಬೇಡ ನಿನ್ನ ಮೈ ನಾ

ಸೂರ್ಯ ಬಂದಾಗ, ಆ ತಾವರೆ ನಗದೇನೆ
ನನ್ನ ನೀನು ಕಂಡಾಗ, ಪ್ರೀತಿ ಬರದೇನೆ
ಚಂದ್ರ ಬಂದಾಗ, ಆ ನೈದಿಲೆ ನಗದೇನೆ
ನಾನು ನೀನು ಸೇರೋದೆ, ದೇವರ ನಿಯಮಾನೆ
ಭೂಮಿ ತಾಯಿ ಆಣೆ, ಬೇರೆ ಹೆಣ್ಣ ಕಾಣೆ
ಒಂಟಿ ಬಾಳು ಸಾಕಾಯ್ತು ಕೇಳೆ,
ಬಿಲೀವ್ ಮಿ ಡಾರ್ಲಿಂಗ್
ಕರುಣೆ ತೋರಿ ನೋಡು, ನನ್ನ ಪ್ರೀತಿ ಮಾಡು
ಈ ಕಣ್ಣಿಗಾಗಿ ನಾ ಸೋತೆ ಕೇಳೆ
ಈ ನೀಲಿ ಕಣ್ಣುಗಳು, ಮಿನುಗುವ ತಾರೆಗಳು
ಈ ಕಣ್ಣು ಹುಬ್ಬು ರೆಪ್ಪೆ ಮೂಗು ಕೆನ್ನೆ ಗಲ್ಲ ಎಲ್ಲಾ
ಅಂಗಾಗ ಪೂರ ನೀನು ನನ್ನವಳು
ನನ್ನಾಣೆ ಚಿನ್ನ ನೀನು ನನ್ನವಳು

ಲೂನಾ ಮೇಲೆ ನನ್ನ ಮೈನಾ
ಕುಲುಕೀಸ ಬೇಡ ನಿನ್ನ ಮೈ ನಾ
ಲೂನಾ ಮೇಲೆ ನನ್ನ ಮೈನಾ
ಕುಲುಕೀಸ ಬೇಡ ನಿನ್ನ ಮೈ ನಾ

ಸೂಪರೋ ಸೂಪರೋ ಸೂಪರೋ

ಚಿತ್ರ: ಪುರುಷೋತ್ತಮ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಸೂಪರೋ ಸೂಪರೋ ಸೂಪರೋ
ಹುಡುಗಿ ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ
ಹುಡುಗ ಸೂಪರೋ ಸೂಪರೋ ಸೂಪರೋ

ಚಂದುಳ್ಳಿ ಹೆಣ್ಣೆ ಮಿಂಚುಳ್ಳಿ ಕಣ್ಣೆ
ಈ ನಿನ್ನ ನೋಟ ಬಾಣದಂತೆ, ಹೂವ ಬಾಣದಂತೆ

ಬೆಣ್ಣೆಯಂತೆ ನಾ ಕರಗಿ ಹೋಗುವೆ
ನಿನ್ನ ಬೆಚ್ಚನೆ ಮಾತಿಗೆ
ಬಳ್ಳಿಯಂತೆ ನಾ ಸುತ್ತಿಕೊಳ್ಳುವೆ
ನನ್ನ ಮೆಚ್ಚಿನ ಗಂಡಿಗೆ
ಬಣ್ಣದಲ್ಲಿ ಬೆಳ್ಳಿ ನೀನು
ಹೂಗಳಲ್ಲಿ ಮಲ್ಲೆ ನೀನು
ಹಬ್ಬದಲ್ಲಿ ಸುಗ್ಗಿ ನೀನು
ಅಂದಗಾತಿ ಚಂದಗಾತಿ

ಚಂದುಳ್ಳಿ ಹೆಣ್ಣೆ ಮಿಂಚುಳ್ಳಿ ಕಣ್ಣೆ
ಈ ನಿನ್ನ ನೋಟ ಬಾಣದಂತೆ, ಹೂವ ಬಾಣದಂತೆ

ಸೂಪರೋ ಸೂಪರೋ ಸೂಪರೋ
ಹುಡುಗಿ ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ
ಹುಡುಗ ಸೂಪರೋ ಸೂಪರೋ ಸೂಪರೋ

ಚಕೋರಿ.. ನಿನ್ನ ತಿಳಿ ನಗು ನೋಡಿ
ದಾಳಿಂಬೆ ತನ್ನ ಬಾಯಿ ಮುಚ್ಚಾಯ್ತು
ಮಯೂರಿ.. ನಿನ್ನ ನಡು ನಡೆ ನೋಡಿ
ಮಯೂರ ತನ್ನ ಗರಿ ಮಚ್ಚಾಯ್ತು
ಗಾಳಿಯಲ್ಲಿ ನಾ ತೇಲಿ ಹೋಗುವೆ
ನಿನ್ನ ಪದ್ಯದ ಮೋಡಿಗೆ
ಗಂಧದಂತೆ ನಾ ಸವೆದು ಹೋಗುವೆ
ನಿನ್ನ ಮುತ್ತಿನ ದಾಳಿಗೆ
ಸಂಜೆಗೆಂಪು ಕೆನ್ನೆಮೇಲೆ
ಹವಳನಿಂಬು ತುಟಿಯ ಮೇಲೆ
ತೊಡಿಸು ಬಾರೆ ತೋಳಮಾಲೆ
ಮಾಯಗಾತಿ ಮಾಟಗಾತಿ

ಚಂದುಳ್ಳಿ ಹೆಣ್ಣೆ ಮಿಂಚುಳ್ಳಿ ಕಣ್ಣೆ
ಈ ನಿನ್ನ ನೋಟ ಬಾಣದಂತೆ, ಹೂವ ಬಾಣದಂತೆ

ಸೂಪರೋ ಸೂಪರೋ ಸೂಪರೋ
ಹುಡುಗಿ ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ
ಹುಡುಗ ಸೂಪರೋ ಸೂಪರೋ ಸೂಪರೋ

ಮಂದಾರ.. ನಿನ್ನ ಹೊನ್ನ ಬಣ್ಣ ನೋಡಿ
ಬಂಗಾರ ತಾನು ಮಿಂಚಿ ಮಂಕಾಯ್ತು
ವೈಯ್ಯಾರಿ.. ನಿನ್ನ ಬಳೆ ಧನಿ ಕೇಳಿ
ಕಾವೇರಿ ನೀರ ಅಲೆ ಮೂಕಾಯ್ತು
ಉಟ್ಟಬಟ್ಟೆಯ ಬಿಗಿಯ ಮಾಡಿದೆ
ಸುಮ್ಮಸುಮ್ಮನೇ ಹೊಗಳುತಾ
ನನ್ನ ಅಂದವೇ ನಾಚಿ ಕೊಂಡಿದೆ
ದುಂಬಿ ಹಾಡನು ಕೇಳುತಾ
ಕಲೆಗಳಲ್ಲಿ ಚಿತ್ರ ನೀನು
ತಿಂಗಳಲ್ಲಿ ಚೈತ್ರ ನೀನು
ನನ್ನ ಕುಣಿಸೋ ಪಾತ್ರನೀನು
ಮೋಹನಾಂಗಿ ಕಾಮನಾಂಗಿ

ಚಂದುಳ್ಳಿ ಹೆಣ್ಣೆ ಮಿಂಚುಳ್ಳಿ ಕಣ್ಣೆ
ಈ ನಿನ್ನ ನೋಟ ಬಾಣದಂತೆ, ಹೂವ ಬಾಣದಂತೆ

ಸೂಪರೋ ಸೂಪರೋ ಸೂಪರೋ
ಹುಡುಗ ಸೂಪರೋ ಸೂಪರೋ ಸೂಪರೋ
ಸೂಪರೋ ಸೂಪರೋ ಸೂಪರೋ
ಹುಡುಗಿ ಸೂಪರೋ ಸೂಪರೋ ಸೂಪರೋ

BA, MA ಡಿಗ್ರಿ ಇದ್ರೂ ಇಲ್ಲಾ ವರಮಾನ

ಚಿತ್ರ: ನರಸಿಂಹ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ

ಅಣ್ಣಾ... ಚಾಕರಿ ಕೊಡಣ್ಣ
ಯಪ್ಪೋ... ನೌಕರಿ ಕೊಡಪ್ಪೋ

BA, MA ಡಿಗ್ರಿ ಇದ್ರೂ ಇಲ್ಲಾ ವರಮಾನ.. ಇಲ್ಲಾ ವರಮಾನ
ಬೀದಿಲ್ಕುಂತು ಪಾಲಿಶ್ ಹೊಡೆದ್ರು ಇಲ್ಲಾ ಅವಮಾನ.. ಇಲ್ಲಾ ಅವಮಾನ
ಮುಂಡಕ್ಕಿಂತ ಭಾರ ಈ ರುಂಡ, ದಂಡ ನಮಗೆ ಇಲ್ಲಿ
ಕಲಿಸೋಕ್ಕಿಂತ ಹೆಚ್ಚು ಡೊನೇಷನ್, ಫೀಸು ಕಾಲೇಜಲ್ಲಿ
ಗೋಳಿಟ್ವೋ ಅರ್ಜಿಗೆ
ಹೂಳಿಟ್ಟೋ ಸೀಟಿಗೆ
ಪಾಸಾಗೋ ಕೋಪಕ್ಕೆ
ನೀರಿಟ್ವೋ ಹೊಟ್ಟೆಗೆ

BA, MA ಡಿಗ್ರಿ ಇದ್ರೂ ಇಲ್ಲಾ ವರಮಾನ.. ಇಲ್ಲಾ ವರಮಾನ
ಬೀದಿಲ್ಕುಂತು ಪಾಲಿಶ್ ಹೊಡೆದ್ರು ಇಲ್ಲಾ ಅವಮಾನ.. ಇಲ್ಲಾ ಅವಮಾನ

ಅಣ್ಣಾ ಚಾಕರಿ ಕೊಡಣ್ಣ...
ಅಂತ ಕೇಳಾಯ್ತು, ಕೇಳಿ ಸಾಕಾಯ್ತು
ಯಪ್ಪೋ ನೌಕರಿ ಕೊಡಪ್ಪೋ..
ಅಂತ ಬೇಡಾಯ್ತು, ಕಾದು ಸಾಕಾಯ್ತು
ಇಂಟೆರ್ವ್ಯೋ.. ಬಾ ಅಂತಾರೆ
ಇನ್ ಫ್ಲೂಎನ್ಸ್.. ತಾ ಅಂತಾರೆ
ಎಲ್ಲಾ ಬ್ಯೂರೋಕ್ರೆಸಿ
ನೀತಿಲ್ಲಿದ್ದರೂ, ಜಾತಿಲಿ ಇಲ್ಲದಿದ್ದರೆ
ಕೆಲಸಕ್ಕೆ ಕಟಾವ್.. ಅವ್ರ್  ಗೇಟಿಂದ ಹಠಾವ್
ಬೇಸಾಯ ಮರ್ತೋಯ್ತು
ಸಂತಾನ ಹೆಚ್ಚೋಯ್ತು
ಉದ್ಯೋಗ ತುಂಬೋಯ್ತು
ಅದಾಯ ನಿಂತೋಯ್ತು

BA, MA ಡಿಗ್ರಿ ಇದ್ರೂ ಇಲ್ಲಾ ವರಮಾನ.. ಇಲ್ಲಾ ವರಮಾನ
ಬೀದಿಲ್ಕುಂತು ಪಾಲಿಶ್ ಹೊಡೆದ್ರು ಇಲ್ಲಾ ಅವಮಾನ.. ಇಲ್ಲಾ ಅವಮಾನ

ದೇಶ ಹಾಳುಬೀಳುವಾಗ..
ಕಾಸುಮಾಡೋ ಆಳು, ನಾಯಿಗಿಂತ ಕೀಳು
ಮನಷ್ಯ ಗೋಳು ಹೇಳುವಾಗ..
ಕೀವುಡು ನರಿಯ ವೇಷ, ತೆಗೆಯಬೇಕು ದೇಶ..
ನಮ್ ದುಡ್ಡು ಮಿಸ್ ಆಗಿಲ್ಲಿ,
ಕೊಳಿಯೋದು ಸ್ವಿಸ್ ಬ್ಯಾಂಕ್ ಅಲ್ಲಿ
ಎಲ್ಲಾ ಫಿಟೋಕ್ರೆಸಿ
ಗ್ಲೋಬಲ್ಲಿದ್ದರೂ ಜಾಬಲ್ಲಿ ಹಿಂದೆಬಿದ್ದರೆ
ಆಟಂಬಾಂಬ್ ಬೇಕೇ ನಾವ್ ಹಾಳಾಗ್ಹೋಗೋಕ್ಕೆ
ಯುಎಸ್ಎ ಫಸ್ಟ್ ಅಂತೆ
ಜಪಾನ್ ಫಾಸ್ಟ್  ಅಂತೆ
ಯೂರೋಪ್ ಬೆಸ್ಟ್ ಅಂತೆ
ನಮ್ ರೋಪ್ ಇಷ್ಟ್ ಅಂತೆ

BA, MA ಡಿಗ್ರಿ ಇದ್ರೂ ಇಲ್ಲಾ ವರಮಾನ.. ಇಲ್ಲಾ ವರಮಾನ
ಬೀದಿಲ್ಕುಂತು ಪಾಲಿಶ್ ಹೊಡೆದ್ರು ಇಲ್ಲಾ ಅವಮಾನ.. ಇಲ್ಲಾ ಅವಮಾನ
ಮುಂಡಕ್ಕಿಂತ ಭಾರ ಈ ರುಂಡ, ದಂಡ ನಮಗೆ ಇಲ್ಲಿ
ಕಲಿಸೋಕ್ಕಿಂತ ಹೆಚ್ಚು ಡೊನೇಷನ್, ಫೀಸು ಕಾಲೇಜಲ್ಲಿ
ಗೋಳಿಟ್ವೋ ಅರ್ಜಿಗೆ
ಹೂಳಿಟ್ಟೋ ಸೀಟಿಗೆ
ಪಾಸಾಗೋ ಕೋಪಕ್ಕೆ
ನೀರಿಟ್ವೋ ಹೊಟ್ಟೆಗೆ

BA, MA ಡಿಗ್ರಿ ಇದ್ರೂ ಇಲ್ಲಾ ವರಮಾನ.. ಇಲ್ಲಾ ವರಮಾನ
ಬೀದಿಲ್ಕುಂತು ಪಾಲಿಶ್ ಹೊಡೆದ್ರು ಇಲ್ಲಾ ಅವಮಾನ.. ಇಲ್ಲಾ ಅವಮಾನ

ಆರಂಭ ಪ್ರೇಮದಾರಂಭ

ಚಿತ್ರ: ಮನೆದೇವ್ರು (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್. ಪಿ. ಬಿ & ಕೆ. ಎಸ್. ಚಿತ್ರ

ದೊಂಗ ದೊಂಗ ದೊಂಗ...

ಆರಂಭ ಪ್ರೇಮದಾರಂಭ
ಶುಭವೇಳೇಲಿ ಪ್ರೇಮದಾರಂಭ
ಕುಶಲ ಕೇಳಿತು ಕಣ್ಣು
ವಿಷಯ ಹೇಳಿತು ಮನಸು
ಉದಯವಾಯಿತು ಸ್ನೇಹ
ಹೃದಯ ತುಂಬಿತು ಪ್ರೇಮ

ಆರಂಭ ಪ್ರೇಮದಾರಂಭ

ಆರಂಭ ಪ್ರೇಮದಾರಂಭ
ಶುಭವೇಳೇಲಿ ಪ್ರೇಮದಾರಂಭ

ಮೊದಲನೇ ಚುಂಬನ, ನೆನೆದರೇ ಕಂಪನ
ಮೊದಲನೇ ಅಪ್ಪುಗೆ, ನೆನೆದರೇ ಮೆಚ್ಚುಗೆ
ನೆನೆಯದೇ ನಡೆದವು ಬಿಸಿಬಿಸಿ ಸಲಿಗೆಯ ಸರಸಗಳು
ತಿಳಿದು ಬಂತು ಹೊಸ ವರಸೆಗಳು

ಸೈಕಲು ಪೋತೆ ಪೋನಿಲೆ ನೀ ಮುಂದಗ
ಬದುಕೇ ಪಂಡಗ
ತೀಸುಕೋ ದೊಂಗರಾಮುಡ ಈ ಮುತ್ಯಮ
ನೀಕೇ ನಿತ್ಯಮ
ಆರಂಭ ಪ್ರಣಯದಾರಂಭ..
ಆರಂಭ ಪ್ರಣಯದಾರಂಭ

ಆರಂಭ ಪ್ರಣಯದಾರಂಭ
ಶುಭವೇಳೇಲಿ ಆರಂಭ ಪ್ರಣಯದಾರಂಭ

ದೊಂಗ ದೊಂಗ ದೊಂಗ...
ದೊಂಗ ದೊಂಗ ದೊಂಗ...

ಪ್ರೇಮಕೇ ಒಡವೆಯೇ
ಪ್ರೇಮಕೇ ಮದುವೆಯೇ
ಪ್ರೇಮಕೇ ಶಾಸ್ತೃವೇ
ಪ್ರೇಮಕೇ ಮಂತ್ರವೇ
ಪ್ರೇಮವೇ ದೇವರು ಸರಿಸಮ ಇಬ್ಬರು ಅದರೆದುರು
ಮನದ ಮದುವೆಇದು ಮರೆಯದಿರು

ಪ್ರೇಮಕೀ ನೀ ಮಾಟಕಿ ನಾ ವಂದನಂ
ನಾನೇ ಅಂಕಿತಂ
ಮಾಟಕೀ ನಾನು ತಪ್ಪಿದರೆ ಪ್ರಾಣಾರ್ಪಿತಂ
ಇದುಮೇ ಜೀವಿತಂ

ಆರಂಭ ಜೀವನಾರಂಭ
ಆರಂಭ ಜೀವನಾರಂಭ

ಕಲ್ಯಾಣ ಪ್ರೇಮ ಕಲ್ಯಾಣ
ಕುಶಲ ಕೇಳಿತು ಕಣ್ಣು
ವಿಷಯ ಹೇಳಿತು ಮನಸು
ಸಿಹಿಯ ಹಂಚಿತು ರೂಪ
ಸಹಿಯ ಹಾಕಿತು ಹೃದಯ
ಕಲ್ಯಾಣ ಪ್ರೇಮ ಕಲ್ಯಾಣ

ಕಚ್ಚಿಕೊಂಡಾಡೋಣ ಬಾರೋ

ಚಿತ್ರ: ಲಾಕಪ್ ಡೆತ್ (1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಕೆ.ಎಸ್.ಚಿತ್ರ

ಕಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಬಾಯಿಗೆ ಬಾಯಿಯ ಬೀಗವ ಏರಿಸಿ..

ಕಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....

ಸಿಹಿಎಲ್ಲಾ ಇಟ್ಟುಕೊಂಡು ಹುಳಿಎಲ್ಲಾ ಬಿಟ್ಟುಕೊಂಡು
ಮಾವಿನತೋಪಿನ ತುಂಬಾ ಉರುಳುರುಳಾಡೋಣ
ಎದುರು ಬದುರು ಗಲ್ಲ ನಡುವೆ ಗಾಳಿ ಇಲ್ಲ
ಆಲೆ ಮನೆಯ ಬೆಲ್ಲ ತುಟಿಯ ಮೇಲೆ ನಲ್ಲ
ಘಮ ಘಮ ಗಂಧ ಚಿಲಿಪಿಲಿ ರಾಗ ಕಚ್ಚಿಕೊಂಡಿರುವಾಗ
ತಕ ತಕ ಆಸೆ ಮಿಕ ಮಿಕ ಕಣ್ಣು ಬಿಚ್ಚಿಕೊಂಡಿರುವಾಗ

ಕಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....

ತಂಗಾಳಿನ್ ತಬ್ಕೊಂಡು ಬೆಳದಿಂಗ್ಳನ್ ಬಳ್ಕೊಂಡು
ಅರೆಬಟ್ಟೆ ಉಟ್ಟುಬಿಟ್ಟು ಹಳಗುಡಿ ಆಡೋಣ
ನಾನು ಸೋತ್ರೆ ನೀನು ನೀನು ಸೋತ್ರೆ ನಾನು
ಆಟ ನಡೆಯಬೇಕು ಯಾರು ಗೆದ್ದರೇನು
ಮನಸಿಗೆ ಮನಸು ಮಾತಿಗೆ ಮಾತು ನೆಚ್ಚಿಕೊಂಡಿರುವಾಗ
ಉಸಿರಿಗೆ ಉಸಿರು ಹೆಸರಿಗೆ ಹೆಸರು ಹಚ್ಚಿಕೊಂಡಿರುವಾಗ

ಕಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಬಾಯಿಗೆ ಬಾಯಿಯ ಬೀಗವ ಏರಿಸಿ..

ಕಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ....

ಜನುಮ ನಮಗಿರುವುದು ಒಂದೇ ಜನುಮ

ಚಿತ್ರ: ಲಾಕಪ್ ಡೆತ್(1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು: ಎಸ್. ಪಿ. ಬಿ

ಜನುಮ ನಮಗಿರುವುದು ಒಂದೇ ಜನುಮ
ಈ ಜನುಮದಲಿರಲಿ ಧರ್ಮ
ಉಳಿಸು ಧರ್ಮ...
ಅಳಿಸು ಅಧರ್ಮ...
ಗೆಲುವು ಸೋಲು ನಿನದೇ ಕೊನೆ ತೀರ್ಮಾನ
ಪ್ರಭು ನೀನೆ.. ಪ್ರಜೆ ನೀನೆ..

ಬೂಟು ತೊಟ್ಟ ಭೂತಗಳ ಆಚೆ ಅಟ್ಟಬೇಕು
ಹಾಳು ಬಿದ್ದ ಬೇಲಿಗಳನು ಕೀಳಬೇಕು
ಧೀನರನ್ನು ಮುಟ್ಟದಂತ ಕೋಟೆ ಕಟ್ಟಬೇಕು
ಕೋಟಿಯಡಿ ಭಕ್ಷಕರನು ಮುಚ್ಚಬೇಕು
ನಾವು ಕೇಳದೇ ನ್ಯಾಯ ದಕ್ಕದು
ನಾವು ಕಾಯದೇ ನ್ಯಾಯ ಬಾಳದು
ಪಡೆಯೋ ಪಡೆಯ ಪಾತ್ರ ನಿನ್ನದು
ಪ್ರಭು ನೀನೆ.. ಪ್ರಜೆ ನೀನೆ..

ಜನುಮ ನಮಗಿರುವುದು ಒಂದೇ ಜನುಮ
ಈ ಜನುಮದಲಿರಲಿ ಧರ್ಮ
ಉಳಿಸು ಧರ್ಮ...
ಅಳಿಸು ಅಧರ್ಮ...
ಗೆಲುವು ಸೋಲು ನಿನದೆ ಕೊನೆ ತೀರ್ಮಾನ
ಪ್ರಭು ನೀನೆ.. ಪ್ರಜೆ ನೀನೆ..

ಭೂಜು ಹಿಡಿದ ಕಟ್ಟಳೆಯ ಧೂಳು ಕೊಡವಬೇಕು
ತಾತನಿಟ್ಟ ತಪ್ಪುಗಳನ್ನು ತಿದ್ದಬೇಕು
ಮಾರಿಕೊಳ್ಳೊ ಮಂತ್ರಗಳ ಮಾನಬಿಚ್ಚಬೇಕು
ಜಾರಿಕೊಳ್ಳೊ ದಾರಿಗಳನು ಮುಚ್ಚಬೇಕು
ನಾವು ಏಳದೆ ಊರು ಏಳದು
ನಾವು ಸಾಯದೆ ಸ್ವರ್ಗ ಕಾಣದು
ಅಳಿಸಿ ಉಳಿಸೊ ಕಾರ್ಯ ನಿನದು
ಪ್ರಭು ನೀನೆ.. ಪ್ರಜೆ ನೀನೆ..

ಜನುಮ ನಮಗಿರುವುದು ಒಂದೇ ಜನುಮ
ಈ ಜನುಮದಲಿರಲಿ ಧರ್ಮ
ಉಳಿಸು ಧರ್ಮ...
ಅಳಿಸು ಅಧರ್ಮ...
ಗೆಲುವು ಸೋಲು ನಿನದೇ ಕೊನೆ ತೀರ್ಮಾನ
ಪ್ರಭು ನೀನೆ.. ಪ್ರಜೆ ನೀನೆ..

ನಯನದ ಮೇಲಿಂಬಿಂಬದೊಳೀಗ ಪ್ರೇಮದ ಅಂಕುರಂ

ಚಿತ್ರ: ಕಾದಂಬರಿ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು: ಮನು & ಚಂದ್ರಿಕಾ ಗುರುರಾಜ್

ನಯನದ ಮೇಲಿಂಬಿಂಬದೊಳೀಗ ಪ್ರೇಮದ ಅಂಕುರಂ ಆಗಿಹುದೇ
ಅಧರದ ಮೇಲಿಂ ಮಧುವಣಕೀಗ ನವರಸ ಸಿಂಚನಂ ಆಗಿಹುದೇ
ಕುಂತೆಡೆ ನಿಂತೆಡೆ ಹೃದಯದ ಸೇರ್ಪಡೆ ಪ್ರೇಮದ ಪಾಠಕೆ ಮೂಲವಿದೇ
ಚುಂಬನ ಚುಂಬನ ಪ್ರಥಮದ ಚುಂಬನ ಪ್ರೇಮದ ರಾಜ್ಯಕೆ ದಾರಿಯಿದೇ

ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ
ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ
ಪ್ರಿಯಕರಂ ಮಧುಕರಂ..
ಪ್ರಿಯಕರಂ ಮಧುಕರಂ..
ಕಂಪನಂ ಚುಂಬನಂ..
ಕಂಪನಂ ಚುಂಬನಂ.. ಓಹೋ..

ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ
ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ

ಗಾಳಿ..ನೀರು..ನೀರು..ಗಾಳಿ
ಭೂಮಿ..ಕಾಲ..ಕಾಲ..ಭೂಮಿ
ಸೃಷ್ಠಿಯ ಚರಿತಂ.. ಹಾ.. ಚುಂಬನ ಭರಿತಂ
ಬಿಂದು ಬಿಂದುಗೆ..
ಸಂಗ ಮುತ್ತಿಗೆ..
ಅಂದು ಇಂದಿಗೆ..
ಮಿಂದ ಹೊತ್ತಿಗೆ..
ನಾದದಂಕುರ ನಾದದಿಂದಿಲೇ ಪ್ರೇಮದಂಕುರ

ಪ್ರೇಮ..ಪ್ರಾಣ..ಪ್ರಾಣ..ಪ್ರೇಮ
ನಾನು..ನೀನು..ನೀನು..ನಾನು
ಮಿಥುನಕೆ ಶರಣಂ.. ಹಾ.. ಸ್ನೇಹಕೆ ಕವಚಂ
ಅಶ್ಲೀಲವಲ್ಲ.. ಆನಂದ ಎಲ್ಲಾ
ಪ್ರಶ್ನೆಯೇ ಇಲ್ಲಾ.. ಉತ್ತರ ಎಲ್ಲಾ
ಮುತ್ತು ಸುಳ್ಳಲ್ಲ ಮುತ್ತಿನಿಂದಲೇ ಪ್ರೇಮ ಇಲ್ಲೆಲ್ಲಾ
ನಿರ್ಮಲಂ ನಿರ್ಗುಣಂ..
ಬಂಧುರಂ ಸುಂದರಂ..
ಸತ್ಯವೇ ಚುಂಬನಂ..
ಚುಂಬನಂ ಸ್ವೀಕರಂ.. ಓಹೋ..

ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ
ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ

ಅಲ್ಲೋ..ಇಲ್ಲೋ..ಬೇರೆ..ಎಲ್ಲೋ
ಆಗೋ..ಈಗೋ.. ಇಂದೋ.. ಎಂದೋ
ಮಿಲನದ ಸಮಯಂ.. ಹಾ.. ಪೂರ್ವದ ಲಿಖಿತಂ
ಕಣ್ಣುಕಣ್ಣಿಗೆ.. ಕೊಟ್ಟ ಮುತ್ತಿಗೆ
ಮಾತು ಮೌನಕೆ.. ಇಟ್ಟ ಮುತ್ತಿಗೆ
ಮುತ್ತು ರೂಪದ ಪ್ರೇಮ ವೇದದ ಅರ್ಥ ಗೋಚರಂ

ಪ್ರೇಮಿ..ನಾನು..ಕೇಳು..ಏನು
ನೀನು..ನಾನು..ಕೊಟ್ಟ..ಮುತ್ತು
ಪುನರಪಿ ಜನನಂ.. ಓ.. ನವರಸ ಜನಕಂ
ಹೆಣ್ಣು ಗಂಡಿಗೆ.. ಪ್ರೀತಿಯಾದರೇ
ಮುತ್ತು ಎಂಬುದೇ.. ನೆನಪಿನುಡುಗೊರೆ
ಜನ್ಮ ಜನ್ಮಕೂ ಮುತ್ತು ಅಕ್ಷಯಂ ನಿನಗೆ ಅರ್ಪಣಂ
ವಂದನಂ ಚುಂಬನಂ..
ಶಾಶ್ವತಂ ಬಂಧನಂ..
ಅರ್ಪಿತಂ ಜೀವನಂ..
ಧನ್ಯವೀ ಚುಂಬನಂ.. ಓ..ಹೋ

ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ
ಪ್ರಥಮ ಚುಂಬನಂ ಚುಂಬನಂ ಅಮೃತಂ ಅಮೃತಂ
ಪ್ರಿಯಕರಂ ಮಧುಕರಂ..
ಪ್ರಿಯಕರಂ ಮಧುಕರಂ..
ಕಂಪನಂ ಚುಂಬನಂ..
ಕಂಪನಂ ಚುಂಬನಂ.. ಓ.. ಹೋ

ಬಾಗೂರಪ್ಪನ ಮಗನೂರಳ್ಳಿಯ

ಕಿರಾತಕ (1988)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ

ಬಾಗೂರಪ್ಪನ ಮಗನೂರಳ್ಳಿಯ ತಳವಾರಯ್ಯನ
ಮಗನ ಅಕ್ಕನಯ್ಯನವ್ವ ತಾತ ನಿಲ್ಲದವನ
ಮಾವನ ಭಾವಮೈದ.. ಈ ಹಳ್ಳಿ ಹೈದ

ಕೆಟ್ಟು ಪಟ್ಟಣ ಸೇರಬೇಡ.. ಸೇರಿದರೂ
ಕೆಟ್ಟ ದಳ್ಳಾಳಿಗಳ ಕೂಡಬೇಡ.. ಕೂಡಿದರೂ
ಕೆಟ್ಟ ಬ್ರಾಂಧಿ ವಿಸ್ಕಿ ಇಗ್ಗಬೇಡ.. ಇಗ್ಗಿದರೂ
ಕೆಟ್ಟ ಜೂಜು ಗೀಜು ಆಡಬೇಡ.. ಆಡಿದರೂ..ಆಡಿದರೂ..ಆಡಿದರೂ..
ಬಿಳಿಯ ಸೊಂಟದ ಮೈಯ್ಯ..
ಹಾಯ್..ಹಾಯ್..ಹಾಯ್..ಹಾಯ್
ಬಳೆಯ ತುಂಬಿದ ಕೈಯ ಹಿಡಿಯ ಬಾರದು
ಹಿಡಿದರೇ ಗೋವಿಂದನ ಮರೆಯಬಾರದು
ಗೋವಿಂದ.. ಗೋವಿಂದ

420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗೂಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ
ತಂದಿದ್ದ ಕಾಸು ಎಲ್ಲಾನು ಲಾಸು
ಇರೋದಿಷ್ಟೇ ಹಾಸು..
ಬಾರೆ ನನ್ನ ಜುಮಕಿ ಜುಮಕಿ ಜಮುನಾ
ನಾಚ್ ಮೇರೆ ನೂರುಜ್ಹಾನ್ ಯಮುನಾ
ವಾಡಿ ಎನ್ನ ತಂಜಾವೂರು ಪೊಣ್ಣೆ
ರಾವೆ ನಾ ಚಲಿಯ ಚಿನ್ನದಾನ

420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗೂಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ

ರಂಗಿನ ಪಟ್ಟಣ ಬೆಂಕಿ ಪೊಟ್ಟಣವೂ
ಒಳ್ಳೆಯತನಕೆ ಯಾರಿಗೂ ಬಗ್ಗದು
ಹಳ್ಳಿಯ ಜನಕೆ ಈ ಊರು ಒಗ್ಗದು
ನಮ್ಮೂರು ಚಿಕ್ಕದು ನಿಮ್ಮೂರು ದೊಡ್ಡದವ್ವ
ಊರಿನ ಜೊತೆಗೆ ಸಂತೆಯು ದೊಡ್ಡದಿಲ್ಲಿ
ಎಮ್ಮೆಯ ಕಟ್ಟುವ ಗೂಟವು ದೊಡ್ಡದು
ಗದ್ದೆ ಹೂಳುವ ಕೈಯಿ.. ಅಯ್ಯೋ
ಮುಟ್ಟಿ ಒದ್ದೆಯಾಯ್ತು ಮೈಯಿ
ನಿನ್ನ ಕೈಯಿ ಚಿಕ್ಕದು
ಮುಟ್ಟಿದರೇ ಕೈಯಿ ರೇಟು ಕೂಡ ದೊಡ್ಡದು
ಗೋವಿಂದ.. ಗೋವಿಂದ

420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗೂಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ

ಕಲಿಯುಗಕಿನ್ನು ಬಂತು ಕೊನೆಗಾಲ
ಕಲ್ಲಿನ ಕೋಳಿ ಕೂಗುವ ಕಾಲ
ಕಲ್ಲಿನ ಬಸವ ಮೇಯುವ ಕಾಲ
ನಮ್ಮನು ನಾವೇ ತಿನ್ನುವ ಶನಿಗಾಲ
ಇನ್ನೇನು ಬಂತು ಕಾಯಿರಿ ಎಲ್ಲಾ
ಸಾಯುವ ಮುಂಚೆ ಮೆರೆಯಿರಿ ಎಲ್ಲಾ
ಶಿವನು ದಡ್ಡನಲ್ಲ.. ಶಿವ ಶಿವ
ನಮ್ಮ ಕಥೆಯನೆಲ್ಲಾ ಬಲ್ಲ
ನಮ್ಮ ಪಾಪದ ಬುಟ್ಟಿ ದೊಡ್ಡದು
ಚಿತ್ರಗುಪ್ತನ ಶಿಕ್ಷೆಯ ಲೀಷ್ಟು ಕೂಡ ದೊಡ್ಡದು
ಗೋವಿಂದ.. ಗೋವಿಂದ

ಅರೆ..ಅರೆ..ಅಹಾ..
420 ಮಾಯಾಪುರದಲ್ಲಿ
220 ಜರದಾ ಬಾಯಲ್ಲಿ
ಬ್ರಾಂಧಿ ಸಾರಾಯಿ ಗೂಂಗಿನಲ್ಲಿ
ಬಾಡಿಯ ಲೇಡಿ ಸಂಗದಲ್ಲಿ
ತಂದಿದ್ದ ಕಾಸು ಎಲ್ಲಾನು ಲಾಸು
ಇರೋದಿಷ್ಟೇ ಹಾಸು..
ಬಾರೆ ನನ್ನ ಜುಮಕಿ ಜುಮಕಿ ಜಮುನಾ
ನಾಚ್ ಮೇರೆ ನೂರುಜ್ಹಾನ್ ಯಮುನಾ
ವಾಡಿ ಎನ್ನ ತಂಜಾವೂರು ಪೊಣ್ಣೆ
ರಾವೆ ನಾ ಚಲಿಯ ಚಿನ್ನದಾನ..

ನಾನು ನೀನು ಬೇರೆಯಾದರೆ ಏನು ಮಾಡುವೆ

ಚಿತ್ರ: ಝೇಂಕಾರ (1992)
ಸಂಗೀತ: ನಾದಬ್ರಹ್ಮ
ಗಾಯನ: ಎಸ್. ಪಿ. ಬಿ & ಕೆ. ಎಸ್. ಚಿತ್ರ

ನಾನು ನೀನು ಬೇರೆಯಾದರೆ ಏನು ಮಾಡುವೆ
ನನ್ನ ಮರೆಯುವೆಯಾ, ನನ್ನನ್ನೇ ನೆನೆಯುವೆಯಾ

ಒ.. ಓ.....

ನಾನು ನೀನು ಬೇರೆಯಾದರೆ ಏನು ಮಾಡುವೆ
ನನ್ನ ಮರೆಯುವೆಯಾ, ನನ್ನನ್ನೇ ನೆನೆಯುವೆಯಾ
ಆಸೆ ಅಳಿಸುವೆಯಾ, ನನ್ನಾಣೆ ಉಳಿಸುವೆಯಾ
ನಾನು ನೀನು ಬೇರೆಯಾದರೆ ಏನು ಮಾಡುವೆ
ನನ್ನ ಮರೆಯುವೆಯಾ, ನನ್ನನ್ನೇ ನೆನೆಯುವೆಯಾ
ಆಸೆ ಅಳಿಸುವೆಯಾ, ನನ್ನಾಣೆ ಉಳಿಸುವೆಯಾ

ಭೂಮಿಯಿದು ಎರಡಾಗಿ ಹೋಗಿ
ನಾನ್ ಆಕಡೆ ನೀನ್ ಈಕಡೆ, ಆಗ ಗತಿ ಏನು
ಗಾಳಿಯಿದು ವಿಷವಾಗಿ ಹೋಗಿ
ನಾನಳಿದರೆ ನೀನುಳಿದರೆ, ಆಗ ಗತಿ ಏನು
ನಿಜವಾಗಿಯೇ ಪ್ರೀತಿಸೋ ಜೋಡಿಯಲಿ
ಬರೀ ಒಬ್ಬರು ಸಾಯುವರೇ
ನಿಜವಾಗಿಯು ಭೂಮಿಯು ಸೀಳಿದರೆ
ಜನ ಪ್ರೀತಿಯ ನಂಬುವರೇ

ನಾನು ನೀನು ಬೇರೆಯಾದರೆ ಏನು ಮಾಡುವೆ
ನನ್ನ ಮರೆಯುವೆಯಾ, ನನ್ನನ್ನೇ ನೆನೆಯುವೆಯಾ
ಆಸೆ ಅಳಿಸುವೆಯಾ, ನನ್ನಾಣೆ ಉಳಿಸುವೆಯಾ

ದಿನಕರನೇ ಬರದಂತೆ ಆಗಿ
ಹಗಲಿಲ್ಲದೇ ನಾ ದೊರಕದೇ ಹೇಗಿರುವೆ ನೀನು
ನಿದಿರೆಯು ತಾ ಬರದಂತೆ ಆಗಿ
ಕನಸಿಲ್ಲದೇ ನನ್ನ ನೋಡದೇ ಹೇಗಿರುವೆ ನೀನು
ಮನಸಲ್ಲಿರೋ ನಿನ್ನಯ ಮೊಗವನ್ನೇ ನನ್ನ ಕಣ್ಣಿಗೆ ಎಳೆತರುವೆ
ಇರುಳೆಲ್ಲವೂ ನಿನ್ನಯ ಮೊಗದೆದುರು ನನ್ನ ಕಣ್ಗಳ ಬೆಳಗಿಸುವೆ

ನಾನು ನೀನು ಬೇರೆ.....

ನಿರ್ಮಲತೆ ಈ ಪ್ರೇಮಸಾಗರ
ಬಿಡು ಅಂಜಿಕೆ ಇಡು ನಂಬಿಕೆ, ಪ್ರೀತಿಸುವ ಬಾರಾ

ನಾನು ನೀನು ಬೇರೆಯಾದರೆ ಏನು ಮಾಡುವೆ...

ಧ್ವನಿ ಧ್ವನಿ ಪ್ರತಿಧ್ವನಿ

ಚಿತ್ರ: ಆವೇಶ (1990)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು: ಕೆ. ಜೆ. ವೈ & ಎಸ್. ಜಾನಕಿ

ಧ್ವನಿ ಧ್ವನಿ ಪ್ರತಿಧ್ವನಿ
ಧ್ವನಿ ಧ್ವನಿ ಪ್ರತಿಧ್ವನಿ
ಧ್ವನಿ ಧ್ವನಿ ಪ್ರತಿಧ್ವನಿ ಹಂಸಧ್ವನಿ
ಹಂಸಧ್ವನಿಯಲಿ ಲವ್, ಪ್ರೇಮಧ್ವನಿಯಲಿ ಲವ್
ಹಂಸಧ್ವನಿಯಲಿ ಲವ್, ಪ್ರೇಮಧ್ವನಿಯಲಿ ಲವ್

ಧ್ವನಿ ಧ್ವನಿ ಪ್ರತಿಧ್ವನಿ
ಧ್ವನಿ ಧ್ವನಿ ಪ್ರತಿಧ್ವನಿ

ಮುರಳಿಯ ಮೇಲೆ ರಾಧೆಗೆ ಲವ್
ರಾಧೆಯ ವಿರಹದ ಬಾಧೆಯು ಲವ್
ರೋಮಿಯೋ ಮೇಲೆ ಜೂಲಿಯ ಲವ್
ರೋಮಗಳೇಳಿಸೋ ಭಾವವೇ ಲವ್
ಇಂಪಾದ ಸ್ವರಸಂಗೀತದ ಸಮ್ಮೋಹ ಲವ್
ಕೈಲಾಸದಲಿ ಗೌರೀಶನ ತಾಂಡವವು ಲವ್
ಆನಂದದ ನಯನ ಹೃದಯಗಳ ಹೃದಯ ನಯನಗಳ
ಮಧುರ ಕನಸುಗಳೇ ಲವ್ ಲವ್ ಲವ್ ಲವ್

ಹಂಸಧ್ವನಿಯಲಿ ಲವ್, ಪ್ರೇಮಧ್ವನಿಯಲಿ ಲವ್
ಹಂಸಧ್ವನಿಯಲಿ ಲವ್, ಪ್ರೇಮಧ್ವನಿಯಲಿ ಲವ್

ಧ್ವನಿ ಧ್ವನಿ ಧ್ವನಿ ಧ್ವನಿ ಪ್ರತಿಧ್ವನಿ ಪ್ರತಿಧ್ವನಿ
ಧ್ವನಿ ಧ್ವನಿ ಧ್ವನಿ ಧ್ವನಿ ಪ್ರತಿಧ್ವನಿ ಪ್ರತಿಧ್ವನಿ

ಸಾವಿರ ಸುಳ್ಳನು ಹೇಳಿಸೋ ಲವ್
ಯಾರಿಗೆ ಯಾರನೋ ಸೇರಿಸೋ ಲವ್
ಸೋಲಿಗು ಗೆಲುವಿಗೆ ಕಾರಣ ಲವ್
ಗೆಲುವಿನ ಹಿಂದಿದೆ ಹೆಣ್ಣಿನ ಲವ್
ತಂಗಾಳಿಯಲಿ ಶ್ರೀಗಂಧದ ತಂಪಾದ ಲವ್
ಹೂ ದುಂಬಿಗಳ ಸಂಯೋಗದ ಸಂತೋಷ ಲವ್
ಆನಂದವೇ ಚಿಗುರು ಚಿಗುರಿನಲಿ ಹಸಿರು ಹಸಿರಿನಲಿ
ಹೊಮ್ಮಿ ಚಿಮ್ಮುತಿದೆ ಲವ್ ಲವ್ ಲವ್ ಲವ್

ಹಂಸಧ್ವನಿಯಲಿ ಲವ್, ಪ್ರೇಮಧ್ವನಿಯಲಿ ಲವ್
ಹಂಸಧ್ವನಿಯಲಿ ಲವ್, ಪ್ರೇಮಧ್ವನಿಯಲಿ ಲವ್

ಧ್ವನಿ ಧ್ವನಿ ಪ್ರತಿಧ್ವನಿ
ಧ್ವನಿ ಧ್ವನಿ ಪ್ರತಿಧ್ವನಿ
ಧ್ವನಿ ಧ್ವನಿ ಪ್ರತಿಧ್ವನಿ ಹಂಸಧ್ವನಿ
ಹಂಸಧ್ವನಿಯಲಿ ಲವ್, ಪ್ರೇಮಧ್ವನಿಯಲಿ ಲವ್
ಹಂಸಧ್ವನಿಯಲಿ ಲವ್, ಪ್ರೇಮಧ್ವನಿಯಲಿ ಲವ್

ಧ್ವನಿ ಧ್ವನಿ ಧ್ವನಿ ಧ್ವನಿ ಪ್ರತಿಧ್ವನಿ ಪ್ರತಿಧ್ವನಿ
ಧ್ವನಿ ಧ್ವನಿ ಧ್ವನಿ ಧ್ವನಿ ಪ್ರತಿಧ್ವನಿ ಪ್ರತಿಧ್ವನಿ

. ದೂರದಲ್ಲಿ ಕಾಣೋ ಬೆಟ್ಟವು

ಚಿತ್ರ: ಅಜಗಜಾಂತರ (1991)
ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು: ಎಸ್. ಪಿ. ಬಿ

ಓ.. ದೂರದಲ್ಲಿ ಕಾಣೋ ಬೆಟ್ಟವು
ಬಲು ನುಣ್ಣಗೆ
ನೀ.. ಆಸೆಯಿಂದ ಬಳಿಗೆ ಹೋದರೇ
ಬರೀ ಮುಳ್ಳಿದೆ
ಜಗಜಗಿಸುವ ಥಳಥಳಿಸುವ ಥಳುಕಿಗೆ ಸೋತೆ
ಒಲವಿನ ಸಿರಿ ಕಡೆಗಣಿಸುತ ಇನಿಯನ ಮರೆತೆ

ಓ.. ದೂರದಲ್ಲಿ ಕಾಣೋ ಬೆಟ್ಟವು
ಬಲು ನುಣ್ಣಗೆ
ನೀ.. ಆಸೆಯಿಂದ ಬಳಿಗೆ ಹೋದರೇ
ಬರೀ ಮುಳ್ಳಿದೆ

ಮುಟ್ಟಿದ್ದೆಲ್ಲಾ ಚಿನ್ನವೇ..
ಆಗಲಿ ಎಂದು ರಾಜ ಆಸೆಯ ಪಟ್ಟ
ಅನ್ನವೇ ಚಿನ್ನ ಆಗಲು ತಿನ್ನದೇ ಕೆಟ್ಟ
ಬೇಗ ಧನಿಕನಾಗಲು..
ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ
ಸಿಗಿದವನೂಬ್ಬ ಮುಂದೆ ಕಣ್ಣೀರಿಟ್ಟ

ಓ.. ಆಸೆ ಹೊನ್ನ ಶೂಲವೋ
ಓ.. ಆಸೆ ದುಃಖ ಮೂಲವೋ
ಓ.. ಮಿಂಚಿಹೋದ ಕಾಲವು
ಓ.. ನೀನೆ ಹೆಣೆದ ಜಾಲವು

ಓ.. ದೂರದಲ್ಲಿ ಕಾಣೋ ಬೆಟ್ಟವು
ಬಲು ನುಣ್ಣಗೆ
ನೀ.. ಆಸೆಯಿಂದ ಬಳಿಗೆ ಹೋದರೇ
ಬರೀ ಮುಳ್ಳಿದೆ

ಪುಟ್ಟದಾದ ಮನೆಯಲೂ..
ಪ್ರೀತಿಯ ಬೆಳಕು ಇದ್ದರೂ ಕಾಣದೇ ಹೋದೆ
ಆಸೆಯ ಸರಕು ನೀನು ಹೇರುತ ಹೋದೆ
ಬಣ್ಣ ಬಣ್ಣದಾಸೆಯ..
ಕಾಮನಬಿಲ್ಲು ಕಂಡರೂ ಎಲ್ಲವೂ ಸುಳ್ಳು
ಗಂಡನ ಒಲವೇ ಹೆಣ್ಣಿಗೆ ಶಾಶ್ವತ ಒಡವೆ

ಓ.. ಏಕೆ ಬೇಕು ವೈಭವ
ಓ.. ದೇವರಿಲ್ಲದುತ್ಸವ
ಓ.. ಗುಣವೇ ಹಣೆಯ ಕುಂಕುಮ
ಓ.. ಹಣವು ಕರಗೋ ಚಂದ್ರಮ

ಓ.. ದೂರದಲ್ಲಿ ಕಾಣೋ ಬೆಟ್ಟವು
ಬಲು ನುಣ್ಣಗೆ
ನೀ.. ಆಸೆಯಿಂದ ಬಳಿಗೆ ಹೋದರೇ
ಬರೀ ಮುಳ್ಳಿದೆ
ಜಗಜಗಿಸುವ ಥಳಥಳಿಸುವ ಥಳುಕಿಗೆ ಸೋತೆ
ಒಲವಿನ ಸಿರಿ ಕಡೆಗಣಿಸುತ ಇನಿಯನ ಮರೆತೆ

ಓ.. ದೂರದಲ್ಲಿ ಕಾಣೋ ಬೆಟ್ಟವು
ಬಲು ನುಣ್ಣಗೆ
ನೀ.. ಆಸೆಯಿಂದ ಬಳಿಗೆ ಹೋದರೇ
ಬರೀ ಮುಳ್ಳಿದೆ

ಓಹೋ ಹಿಮಾಲಯ

ಚಿತ್ರ: ಬಾ ನಲ್ಲೆ ಮಧುಚಂದ್ರಕೆ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು:-ಎಸ್.ಪಿ.ಬಿ & ಮಂಜುಳ ಗುರುರಾಜ್

ಓಹೋ ಹಿಮಾಲಯ..
ಓಹೋ ಹಿಮಾಲಯ..
ಓಹೋ ಹಿಮಾಲಯ..
ಓಹೋ ಹಿಮಾಲಯ..
ಶಿವನಿಗೂ ಗಿರಿಜೆಗೂ ದೇವಾಲಯ
ನವ ವಧುವರರಿಗೆ ಪ್ರೇಮಾಲಯ

ಓಹೋ ಹಿಮಾಲಯ..
ಓಹೋ ಹಿಮಾಲಯ..
ಓಹೋ ಹಿಮಾಲಯ..
ಓಹೋ ಹಿಮಾಲಯ..
ಶಿವನಿಗೂ ಗಿರಿಜೆಗೂ ದೇವಾಲಯ
ನವ ವಧುವರರಿಗೆ ಪ್ರೇಮಾಲಯ

ಅಂಬರವೋ ಇಲ್ಲಾ ಬೆಳ್ಳಿ ಚಪ್ಪರವೋ
ಗುಡ್ಡಗಳೋ ಇಲ್ಲಾ ಬೆಣ್ಣೆ ಮುದ್ದೆಗಳೋ
ಚಿಲಿಪಿಲಿಯೋ ಇಲ್ಲಾ ಕಾವ್ಯ ವಾಚನವೋ
ಕಲಕಲವೋ ಇಲ್ಲಾ ಗಂಗೆ ಗಾಯನವೋ

ಅಪ್ಪುಗೆಯೋ ಇಲ್ಲಾ ಇದು ಒಪ್ಪಿಗೆಯೋ
ಚುಂಬನವೋ ಇಲ್ಲಾ ಇದು ಬಂಧನವೋ
ಆತುರವೋ ಇಲ್ಲಾ ಇದು ಕಾತುರವೋ
ಆಸೆಗಳೋ ನಲ್ಲ ನಲ್ಲೆ ಲೀಲೆಗಳೋ

ಜಿಗಿಜಿಗಿವಾ ಜೋಡಿಪ್ರೇಮ ಹೃದಯಗಳು
ಚುಕುಚುಕುಚು ರೈಲನ್ನೇರಿದವು
ಗರಿಗರಿಯ ಹಿಮಗಿರಿಯ ಬೆನ್ನಿನಲಿ
ಚಳಿ ಚಳಿಯೋ ಎನ್ನುತಾ ಜಾರಿದವು
ಮೈಸೂರ ಚೆಲುವೆ ನೀನು
ಮೈಸೂರ ಚೆಲುವ ನೀನು
ಎನ್ನುತ ಕನ್ನಡ ಕಂಪನು ಬೀರಿದವು ಹಿಮದಲಿ

ಓಹೋ ಹಿಮಾಲಯ..
ಓಹೋ ಹಿಮಾಲಯ..
ಓಹೋ ಹಿಮಾಲಯ..
ಓಹೋ ಹಿಮಾಲಯ..
ಶಿವನಿಗೂ ಗಿರಿಜೆಗೂ ದೇವಾಲಯ
ನವ ವಧುವರರಿಗೆ ಪ್ರೇಮಾಲಯ

ನನ್ನವಳೇ ನನ್ನವಳೇ ನನ್ನವಳೇ
ತಂಬೆಲರಾ ತಂಬೆಲರಾ ತಂದವಳೇ
ತಂಬೆಲರೇ ಮುಂಗುರುಳಾ ಘಾಮಿಸಿದೆ
ಮುಂಗುರುಳೇ ಮೊಗವನ್ನು ಮೋಹಿಸಿದೆ

ನನ್ನವನೇ ನನ್ನವನೇ ನನ್ನವನೇ
ನನ್ನೆದೆಗೆ ಹುಣ್ಣಿಮೆಯ ತಂದವನೇ
ಹುಣ್ಣಿಮೆಯ ಹಿರಿಯೂರ ತೋರಿಸಿದೆ
ಕಿನ್ನರರಾ ತವರೂರ ಸೇರಿಸಿದೆ

ಮಾತಿನಲಿ ಮಾಯ ಮಾಡೋ ಮೋಹಿನಿಯು
ಮಾರನಿಗೆ ಸೋತು ಬಿದ್ದಳು
ಹೂಗಳಾ ಬಾಣವನೆಸೆವಾ ಮನ್ಮಥನು
ಹೂವಿನಲಿ ಜಾರಿ ಬಿದ್ದನು
ಮೈಸೂರ ಚೆಲುವೆ ನೀನು
ಮೈಸೂರ ಚೆಲುವ ನೀನು
ಎನ್ನುತ ಕನ್ನಡ ಕಂಪನು ಬೀರಿದವು ಹಿಮದಲಿ

ಓಹೋ ಹಿಮಾಲಯ..
ಓಹೋ ಹಿಮಾಲಯ..
ಓಹೋ ಹಿಮಾಲಯ..
ಓಹೋ ಹಿಮಾಲಯ..
ಶಿವನಿಗೂ ಗಿರಿಜೆಗೂ ದೇವಾಲಯ
ನವ ವಧುವರರಿಗೆ ಪ್ರೇಮಾಲಯ

ಓಹೋ ಹಿಮಾಲಯ..
ಓಹೋ ಹಿಮಾಲಯ..
ಓಹೋ ಹಿಮಾಲಯ..
ಓಹೋ ಹಿಮಾಲಯ..
ಶಿವನಿಗೂ ಗಿರಿಜೆಗೂ ದೇವಾಲಯ
ನವ ವಧುವರರಿಗೆ ಪ್ರೇಮಾಲಯ

ಅನುರಾಗ ಚೆಲ್ಲಿದಳು ಹೃದಯಾನ ಗೆಲ್ಲಿದಳು

ಚಿತ್ರ: ಪೂಜಾ (1996)
ಸಾಹಿತ್ಯ- ಸಂಗೀತ: ಹಂಸಲೇಖ
ಗಾಯಕರು: ಎಸ್.ಪಿ.ಬಿ  & ಕೆ.ಎಸ್. ಚಿತ್ರಾ

ಅನುರಾಗ ಚೆಲ್ಲಿದಳು ಹೃದಯಾನ ಗೆಲ್ಲಿದಳು
ಅನುರಾಗ ಚೆಲ್ಲಿದಳು ಹೃದಯಾನ ಗೆಲ್ಲಿದಳು
ಹರೆಯದ ಅರಮನೆ ಬಾಗಿಲ ತೆರೆಸಿದಳು
ಪ್ರೇಮದ ರಾಜ್ಯದ ಓಲಗ ನಡೆಸಿದಳು

ಅನುರಾಗ ಚೆಲ್ಲಿದನು  ಹೃದಯಾನ ಗೆಲ್ಲಿದನು
ಅನುರಾಗ ಚೆಲ್ಲಿದನು  ಹೃದಯಾನ ಗೆಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದನು
ಪ್ರೇಮದ ರಾಜ್ಯದ ಓಲಗ ನಡೆಸಿದನು

ದೇವಲೋಕದ ಮುಗಿಲಿಂದ ಕಾಲು ಜಾರಿದ ರತಿ ಇವಳು
ನನ್ನವಳು.. ಕಾರಂಜಿ
ಪ್ರೇಮಲೋಕದ ಬನದಲ್ಲಿ ಗಿಣಿಯು ಸೋಕದ ಹಣ್ಣಿವಳು
ನನ್ನವಳು.. ಅಪರಂಜಿ
ಕೋಟಿ ಕಣ್ಣನ್ನುದಾಟಿ, ನನ್ನ ಕಣ್ಣನ್ನೇ ಮೀಟಿ,
ನಿಂತ ರಥಾನ ಎಳೆದು, ನನ್ನ ವ್ರತಾನ ಮುರಿದು,
ಒಲವಿನ ಹಾಲಲಿ...  ಚೆಲುವಿನ ಜೇನಲಿ... ಬದುಕಿನ ಬಾಯಿಗೆ ಚುಂಬಿಸುತ

ಅನುರಾಗ ಚೆಲ್ಲಿದಳು ಹೃದಯಾನ ಗೆಲ್ಲಿದಳು
ಅನುರಾಗ ಚೆಲ್ಲಿದನು  ಹೃದಯಾನ ಗೆಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದಳು
ಪ್ರೇಮದ ರಾಜ್ಯದ ಓಲಗ ನಡೆಸಿದನು  

ಮಾಯಮಾಡಿ ಮನದಲ್ಲಿ ಪ್ರೆಮಶಾಸನವ ಕಡೆದವನು
ನನ್ನವನು.. ಕಲೆಗಾರ
ನಾನು ನೀನು ಒಂದೆಂದು ಭಾವಲಿಪಿಯಲಿ ಬರೆದವನು
ನನ್ನವನು.. ಮನಚೋರ
ನಾನು ಹೂಬಿಟ್ಟ ಮಳ್ಳಿ, ಇವನ ಮೈಯ್ಯಲ್ಲಿ ಬಳ್ಳಿ,
ಸುಗ್ಗಿಸುವ್ವಾಲೆಯಂತೆ, ನಾವು ಒಂದಾದೆವಿಲ್ಲಿ,
ಪದಗಳ ಪೋಣಿಸಿ.. ಸ್ವರಗಳ ಸೇರಿಸಿ.. ಪ್ರೆಮದರೂಪವ ತೊರಿಸುವ

ಅನುರಾಗ ಚೆಲ್ಲಿದನು  ಹೃದಯಾನ ಗೆಲ್ಲಿದನು
ಅನುರಾಗ ಚೆಲ್ಲಿದನು  ಹೃದಯಾನ ಗೆಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದನು
ಪ್ರೇಮದ ರಾಜ್ಯದ ಓಲಗ ನಡೆಸಿದನು

ಬೆನ್ನ ಹಿಂದೆ ಬಂದೆ..

ಚಿತ್ರ: ಬಾವ ಬಾಮೈದ (2001)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯನ: ಬಿ. ಜಯಶ್ರೀ

ಬೆನ್ನ ಹಿಂದೆ ಬಂದೆ.. ನೀ
ಆಡೋ ಕಣ್ಣಮುಂದೆ, ಅರಳೋ ಕಣ್ಣಮುಂದೆ
ತಾಯಿಯಾಗಲೆಂದೇ.. ನಾ
ಅಕ್ಕನಾಗಿ ಬಂದೆ, ಅಕ್ಕರೆಯ ತಂದೆ
ಬಳಿಯಳಿಟ್ಟು ಕೇಳೋ, ಬದುಕ ಹಾಡುತೀನಿ
ನನ್ನ ಬಾಳ ಚಿಗುರ ನಿನಗೆ ನೀಡುತೀನಿ
ಒಂದೇ ಬಳ್ಳಿಯ ಹೂಗಳು ನಾವು
ಕುಡಿಸವಿಯುವ ಬೇವು ಮಾವು

ಬೆನ್ನ ಹಿಂದೆ ಬಂದೆ.. ನೀ
ಆಡೋ ಕಣ್ಣಮುಂದೆ, ಅರಳೋ ಕಣ್ಣಮುಂದೆ
ತಾಯಿಯಾಗಲೆಂದೇ.. ನಾ
ಅಕ್ಕನಾಗಿ ಬಂದೆ, ಅಕ್ಕರೆಯ ತಂದೆ

ಅಕ್ಕ ಬೆಳ್ಳಿ ತಟ್ಟೆಯಲಿ
ತಮ್ಮ ಮಣ್ಣಿನ ತನಿಗೆಯಲಿ
ಉಣ್ಣುವ ಎಷ್ಟೋ ಬಾಯಿಗಳು
ಮೂಕವಾಗಿವೆ ಲೋಕದಲಿ
ಮನೆಯ ದೇವರ ಹೆಗಲಲ್ಲಿ
ತವರ ಗಿಣಿಯೇ ನಲಿದಾಡು
ಅಮ್ಮ ಅನ್ನುವ ಬಾಯಿಂದ
ಅಕ್ಕ ಎಂದು ಸುಖನೀಡು
ಒಂದೇ ಬಳ್ಳಿಯ ಹೂಗಳು ನಾವು
ಕುಡಿಸವಿಯುವ ಬೇವು ಮಾವು

ಬೆನ್ನ ಹಿಂದೆ ಬಂದೆ.. ನೀ
ಆಡೋ ಕಣ್ಣಮುಂದೆ, ಅರಳೋ ಕಣ್ಣಮುಂದೆ

ಕಾಗದ ಕಾಯೋ ಚಿಂತಿಲ್ಲ
ಚಿಂತೆ ಕಳಿಸೋ ಗೋಜಿಲ್ಲ
ಭಾವಗೆ ತಮ್ಮ ಉಸಿರಾಗೆ
ತವರ ಕಣ್ಣ ಹನಿಯನ್ನ
ತಾಯಿ ಮಗಳಿಗೆ ಕಟಿಕಳು
ಆ ದೇವರ ದಾರ ನೀನಂತೆ
ತನ್ನ ಸುಖವ ದಿನ ಬಯಸೋ
ತವರ ಬೆಂಬಲ ನೀನಂತೆ
ಬಳಿಯಳಿಟ್ಟು ಕೇಳೋ, ಬದುಕ ಹಾಡುತೀನಿ
ನನ್ನ ಬಾಳ ಚಿಗುರ ನಿನಗೆ ನೀಡುತೀನಿ
ಒಂದೇ ಬಳ್ಳಿಯ ಹೂಗಳು ನಾವು
ಕುಡಿಸವಿಯುವ ಬೇವು ಮಾವು

ಬೆನ್ನ ಹಿಂದೆ ಬಂದೆ.. ನೀ
ಆಡೋ ಕಣ್ಣಮುಂದೆ, ಅರಳೋ ಕಣ್ಣಮುಂದೆ

ಯಾರೆಲೇ ನಿನ್ನ ಮೆಚ್ಚಿದವನು

ಚಿತ್ರ: ಸಿಪಾಯಿ (1996)
ಸಾಹಿತ್ಯ-ಸಂಗೀತ: ಹಂಸಲೇಖ ನಾದಬ್ರಹ್ಮ
ಗಾಯನ: ಮನು, ಎಸ್. ಜಾನಕಿ & ಕೋರಸ್

ಯಾರೆಲೇ ನಿನ್ನ ಮೆಚ್ಚಿದವನು.. ಒ ಹೋಹೊ
ಯಾರೆಲೇ ಕೆನ್ನೆ ಕಚ್ಚುವವನು.. ಒ ಹೋಹೊ
ಯಾರೆಲೇ ಮಲ್ಲೆ ಮುಡಿಸುವವನು.. ಒ ಹೋಹೊ
ಯಾರೆಲೇ ಸೆರಗ ಎಳೆಯುವವನು.. ಒ ಹೋಹೊ

ಹೇಳೇ ಹುಡುಗಿ.. ಹೇಳೇ ಬೆಡಗಿ..
ನಿನ್ನ ಸೆರಗ ಎಳೆಯೋ ಹುಡುಗ ನಾನು ತಾನೇ
ನಿನ್ನ ಗಂಡ ನಾನೇ

ಇಲ್ಲಾ ಇಲ್ಲಾ.. ಆಗೋದಿಲ್ಲ..
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

ಜೀವದ ಗೊಂಬೆ ನಾನಮ್ಮ..
ಭೀಮನೆಂಬ ಮಣ್ಣು ಗೊಂಬೆ ಯಾಕಮ್ಮ..

ಗೊಂಬೆ ಬೇಕು ಪೂಜೆಗೆ
ಪೂಜೆ ಬೇಕು ಮನಸಿಗೆ
ಮನಸು ಬೇಕು ಪ್ರೀತಿಗೆ
ಪ್ರೀತಿ ಬೇಕು ಹೆಣ್ಣಿಗೆ

ಯಾರೆಲೇ ನೀನು ಮೆಚ್ಚಿದವನು.. ಒ ಹೋಹೊ
ಯಾರೆಲೇ ತಾಳಿ ಕಟ್ಟುವವನು.. ಒ ಹೋಹೊ
ಯಾರೆಲೇ ನಿನ್ನ ಕಾಡುವವನು.. ಒ ಹೋಹೊ
ಯಾರೆಲೇ ನಿನ್ನ ಕೂಡುವವನು.. ಒ ಹೋಹೊ

ಹೇಳೇ ಹುಡುಗಿ.. ಹೇಳೇ ಬೆಡಗಿ..
ನಿನ್ನ ಉಸಿರು ಹೇಳೋ ಹೆಸರು ನಂದು ತಾನೇ
ನಿನ್ನ ಗಂಡ ನಾನೇ

ಇಲ್ಲಾ ಇಲ್ಲಾ.. ಆಗೋದಿಲ್ಲ..
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

ಸಾವಿರ ಜನ್ಮ ಬರಲಮ್ಮ
ನನ್ನ ಪ್ರೀತಿ, ನನ್ನ ಪ್ರಾಣ ನಿನಗಮ್ಮ

ಚಂದಮಾಮ ಅಲ್ಲಿದೆ
ನೈದಿಲೆ ಹೂ ಇಲ್ಲಿದೆ
ಚಂದ್ರನೇ ಇಲ್ಲಿ ಬಂದರೆ
ಹೂವಿಗೇ ಭಯವಾಗದೆ

ಯಾರೆಲೇ ನಿನ್ನ ಮುದ್ದು ಗಂಡ.. ಒ ಹೋಹೊ
ಯಾರೆಲೇ ನಿನ್ನ ತುಂಟ ಗಂಡ.. ಒ ಹೋಹೊ
ಯಾರೆಲೇ ನಿನ್ನ ವೀರ ಗಂಡ.. ಓ ಹೋಹೊ
ಯಾರೆಲೇ ನಿನ್ನ ಧೀರ ಗಂಡ.. ಒ ಹೋಹೊ

ಹೇಳೇ ಹುಡುಗಿ.. ಹೇಳೇ ಬೆಡಗಿ..
ವೀರ ಧೀರ ಜೋಕುಮಾರ ನಾನು ತಾನೇ
ನಿನ್ನ ಗಂಡ ನಾನೇ

ಇಲ್ಲಾ ಇಲ್ಲಾ.. ಆಗೋದಿಲ್ಲ..
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

ಕನ್ನಡದ ಕಂದ.. ಈಯಾ ಈಯಾ ಓ

ಚಿತ್ರ: ಅನುರಾಗದ ಅಲೆಗಳು (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ರಾಘವೇಂದ್ರ ರಾಜ್ ಕುಮಾರ್

ಕನ್ನಡದ ಕಂದ.. ಈಯಾ ಈಯಾ ಓ
ಎಲ್ಲಾರಿಗೂ ಚಂದ.. ಈಯಾ ಈಯಾ ಓ
ಮಾತು ಕೊಟ್ಟರೇ, ಮಣ್ಣಿನಾಣೆ ಇಟ್ಟರೇ
ಜೀವಕೊಡೋ ಕಂದ
ಕಸ್ತೂರಿಯ ಗಂಧ.. ಈಯಾ ಈಯಾ ಓ
ಲೋಕಕ್ಕೆಲ್ಲಾ ಚಂದ.. ಈಯಾ ಈಯಾ ಓ
ಪ್ರೀತಿ ಇಟ್ಟರೇ, ಬೆನ್ನುತಟ್ಟಿ ಕೊಟ್ಟರೇ
ಹಾಡುಹೇಳೋ ಕಂದ

ಕನ್ನಡದ ಕಂದ.. ಈಯಾ ಈಯಾ ಓ
ಎಲ್ಲಾರಿಗೂ ಚಂದ.. ಆ..ಈಯಾ ಈಯಾ ಓ

ಕನ್ನಡದ ಅಂದ ಚಂದ ಹಾಡುತಿದ್ದರೇ
ನಿತ್ಯ ಮೂರು ಹೊತ್ತು ಸಾಲದು
ಕನ್ನಡದ ಕಾವ್ಯಗಳ ಕೇಳುತಿದ್ದರೇ
ಸತ್ಯ ಬಿಟ್ಟು ಏನೂ ತೋಚದು
ಚಲುವೆ ಚಲುವೆ ಕನ್ನಡತಿ, ಅವಳೇ ದಿನ ಸ್ಪೂರ್ತಿ
ನಮಗೆ ಅವಳ ವರದಿಂದ ಅಜರಾಮರ ಕೀರ್ತಿ
ಕನ್ನಡ ನೆಲಕೆ, ಕಾವೇರಿಯ ಜಲಕೆ ಋಣಪಟ ಕಂದ

ಕನ್ನಡದ ಕಂದ.. ಈಯಾ ಈಯಾ ಓ
ಎಲ್ಲಾರಿಗೂ ಚಂದ.. ಆ..ಈಯಾ ಈಯಾ ಓ
ಮಾತು ಕೊಟ್ಟರೇ, ಮಣ್ಣಿನಾಣೆ ಇಟ್ಟರೇ
ಜೀವಕೊಡೋ ಕಂದ

ಕನ್ನಡದ ಕಂದ.. ಈಯಾ ಈಯಾ ಓ
ಎಲ್ಲಾರಿಗೂ ಚಂದ.. ಈಯಾ ಈಯಾ ಓ

*ಅನುರಾಗದಲೆಗಳ* *ಮೇಲೆ*
*ಸಂಗೀತ* *ಸ್ವರಗಳ* *ಲೀಲೆ*
*ನಡೆದಾಗ* *ಜೀವನಗಾನ*.. *ರಸಪೂರ್ಣವೋ*
*ಓ*.. *ಮನಸೇ* *ಕಡಲಾಗಿರು*.. *ಮುಗಿಲಾಗುವೆ*

ಮಲ್ಲಿಗೆಯ ಸಂಪಿಗೆಯ ಕಂಪು ಬೀರುವ
ಚಂದನದ ಹಾಡು ಕಟ್ಟುವೆ
ಉತ್ತರದ ದಕ್ಷಿಣದ ಇಂಪು ಸೂಸುವ
ಪಶ್ಚಿಮದ ರಾಗ ಹಾಕುವೆ
ಪೂರ್ವಾಪರರ ಹಿತನೋಡಿ
ಹಾಡಿ ನಾ ನಲಿವೆ
ನಡುವೆ ನಡುವೆ ನಗು ಬೆರೆಸಿ
ನಿಮ್ಮ ಮನ ಗೆಲುವೆ
ನೀವೇ ಇಲ್ಲದೇ ಜೀವನ ಎಲ್ಲಿದೇ
ನಾನು ನಿಮ್ಮ ಕಂದ

ಕನ್ನಡದ ಕಂದ.. ಈಯಾ ಈಯಾ ಓ
ಎಲ್ಲಾರಿಗೂ ಚಂದ.. ಈಯಾ ಈಯಾ ಓ
ಮಾತು ಕೊಟ್ಟರೇ, ಮಣ್ಣಿನಾಣೆ ಇಟ್ಟರೇ
ಜೀವಕೊಡೋ ಕಂದ

ಕನ್ನಡದ ಕಂದ.. ಈಯಾ ಈಯಾ ಓ
ಎಲ್ಲಾರಿಗೂ ಚಂದ.. ಈಯಾ ಈಯಾ ಓ

ನಾನು ಕನ್ನಡದ ಕಂದ

ಚಿತ್ರ: ಎ.ಕೆ. 47 (1999)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಡಾII ಕೆ. ಜೆ. ಯೇಸುದಾಸ್

ನಾನು ಕನ್ನಡದ ಕಂದ
ಬಂದೇ ಶಾಂತಿಯ ಮಣ್ಣಿಂದ

ನಾನು ಕನ್ನಡದ ಕಂದ
ಬಂದೇ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು

ಎದೆ ಹಾಲುಂಟು ಎದೆ ಇರಿದವರ
ಕ್ಷಮಿಸುವುದುಂಟೇ, ಬೆಳೆಸುವುದುಂಟೇ
ಬೇರಿಗೆ ಮದ್ದು ಹಾಕದೇ ಇದ್ರೆ
ನೆರಳಿನ ಮರವು ಉಳಿಯುವುದುಂಟೇ.. ಅಮ್ಮ..

ನಾನು ಕನ್ನಡದ ಕಂದ
ಬಂದೇ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು

ಜಾತಿಗಳಿಲ್ಲ, ವರ್ಣಗಳಿಲ್ಲ
ಪ್ರೀತಿ ಪತಾಕೆ ಜಯ ಹೇ ನಿನಗೆ
ಶಾಂತಿಯ ಧ್ವಜವೇ ಕೀರ್ತಿಯ ಭುಜವೇ
ಧರ್ಮದ ಚಕ್ರ ವಂದನೆ ನಿನಗೆ.. ಅಮ್ಮ..

ನಾನು ಕನ್ನಡದ ಕಂದ
ಬಂದೇ ಶಾಂತಿಯ ಮಣ್ಣಿಂದ
ನಮ್ಮಮ್ಮ ಕನ್ನಡತಿ
ಅವಳಮ್ಮ ಜಯಭಾರತಿ
ಏಕತೆಯೇ ನಮ್ಮುಸಿರು
ಸಹಬಾಳ್ವೆ ನಮ್ಮ ಒಡಲು
ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು
ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು

ದೀಪದಿಂದ ದೀಪಹಚ್ಚೇ ದೀಪಾವಳಿ..

ಚಿತ್ರ: ಯಾರಿಗೆ ಸಾಲುತ್ತೆ ಸಂಬಳ (2000)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು: ಜಿ. ವಿ. ಅತ್ರಿ, ರಾಜೇಶ್, ಹೇಮಂತ್, ಮಂಜುಳಾ ಗುರುರಾಜ್, ನಂದಿತಾ, ಅರ್ಚನ ಉಡುಪ

ದೀಪದಿಂದ ದೀಪಹಚ್ಚೇ ದೀಪಾವಳಿ..
ಶಬ್ಧದಿಂದ ಭೀತಿ ಬಿಡಿಸೇ ದೀಪಾವಳಿ..
ತೃಪ್ತಿಯಿಂದ ಅತೃಪ್ತಿ ಕೊಲ್ಲೇ ದೀಪಾವಳಿ..
ಧರೆ ಎಲ್ಲಾ ಬಾನಾಗಿ
ಬಾನೆಲ್ಲಾ ಸೊಡರಾಗಿ
ಚಂದಿರರೇ ನಾವಾಗಿ..
ಇಳೆಗೆ ಸ್ವರ್ಗ ಎಳೆತಂದೆವೆಂದು.. ಹಾಡು
ದೀಪಾವಳಿ.. ದೀಪಾವಳಿ.. ದೀಪಾವಳಿ..
ದೀಪಾವಳಿ.. ದೀಪಾವಳಿ.. ದೀಪಾವಳಿ..

ದೀಪದಿಂದ ದೀಪಹಚ್ಚೇ ದೀಪಾವಳಿ

ಬಡವರ ಮನೆಮುಂದೆ, ಬಲ್ಲಿದರೂ ಮನೆಮುಂದೆ
ಪ್ರತೀಮನೆ ಮನೆಮುಂದೆ, ಬೆಳಕಿಗೆ ಕುಲವೋಂದೇ
ಮೇಲೆಂಬುವರಿಗೆ ಮೇಲೆ ಮೋಕ್ಷವಿಲ್ಲ
ಕೀಳೆಂಬುವರಿಗೆ ಬಾಳ ಬೆಳಕು ಇಲ್ಲಾ
ಮೇಲೂ ಕೀಳು ಜಗಕೆ ಜರೂರಿಲ್ಲಾ
ಮನದ ಮಲ್ಲಿಗೆಯ ಕಂಪು ಕಸ್ತೂರಿ ಚಲ್ಲೋಣ ಕಡೆಗೆಲ್ಲಾ
ಧರೆ ಎಲ್ಲಾ ಬಾನಾಗಿ
ಬಾನೆಲ್ಲಾ ಸೊಡರಾಗಿ
ಚಂದಿರನೇ ನಾವಾಗಿ..
ಇಳೆಗೆ ಸ್ವರ್ಗ ಎಳೆತಂದೆವೆಂದು.. ಹಾಡು
ದೀಪಾವಳಿ.. ದೀಪಾವಳಿ.. ದೀಪಾವಳಿ..
ದೀಪಾವಳಿ.. ದೀಪಾವಳಿ.. ದೀಪಾವಳಿ..

ದೀಪದಿಂದ ದೀಪಹಚ್ಚೇ ದೀಪಾವಳಿ

ರಾಗಾನುರಾಗದಿ ರಾಗ ದ್ವೇಷವು ಸಲ್ಲ
ಸ್ನೇಹಾಲಾಪದಿ ನಿನ್ನ ಭಾವವು ಸಲ್ಲ
ಕುಳಿತುಂಡುವನಿಗೆ ಕುಡಿಕೆ ಹಣವು ಸಲ್ಲ
ನಿಂತುಂಡವನಿಗೆ ಊರು ಸೂರು ಸಲ್ಲ
ಮಲಗಿ ಉಂಡವಗೆ ರಾಜ್ಯ ಭಾರ ಸಲ್ಲ
ಬಾಳು ಬರಡಲ್ಲ ಮುರಿದ ಮರದ ಬೇರಾಡಿ ಸಿಬಿರಲ್ಲ
ಧರೆ ಎಲ್ಲಾ ಬಾನಾಗಿ
ಬಾನೆಲ್ಲಾ ಸೊಡರಾಗಿ
ಚಂದಿರನೇ ನಾವಾಗಿ..
ಇಳೆಗೆ ಸ್ವರ್ಗ ಎಳೆತಂದೆವೆಂದು.. ಹಾಡು
ದೀಪಾವಳಿ.. ದೀಪಾವಳಿ.. ದೀಪಾವಳಿ..
ದೀಪಾವಳಿ.. ದೀಪಾವಳಿ.. ದೀಪಾವಳಿ..

ದೀಪದಿಂದ ದೀಪಹಚ್ಚೇ ದೀಪಾವಳಿ..
ಶಬ್ಧದಿಂದ ಭೀತಿ ಬಿಡಿಸೇ ದೀಪಾವಳಿ..
ತೃಪ್ತಿಯಿಂದ ಅತೃಪ್ತಿ ಕೊಲ್ಲೇ ದೀಪಾವಳಿ..
ಧರೆ ಎಲ್ಲಾ ಬಾನಾಗಿ
ಬಾನೆಲ್ಲಾ ಸೊಡರಾಗಿ
ಚಂದಿರರೇ ನಾವಾಗಿ..
ಇಳೆಗೆ ಸ್ವರ್ಗ ಎಳೆತಂದೆವೆಂದು.. ಹಾಡು
ದೀಪಾವಳಿ.. ದೀಪಾವಳಿ.. ದೀಪಾವಳಿ..
ದೀಪಾವಳಿ.. ದೀಪಾವಳಿ.. ದೀಪಾವಳಿ..

ದೀಪದಿಂದ ದೀಪಹಚ್ಚೇ ದೀಪಾವಳಿ

ದೀಪಾವಳಿ ಜ್ಯೋತಿ ಎಲ್ಲೆಲ್ಲೂ ನೋಡ

ಚಿತ್ರ: ಭಗವಾನ್ ಶ್ರೀ ಸಾಯಿಬಾಬಾ (1993)
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಉಪೇಂದ್ರ ಕುಮಾರ್/ಹಂಸಲೇಖ
ಗಾಯಕರು: ಎಸ್.ಪಿ.ಬಿ, ಪಿ. ಸುಶೀಲಾ, ಬಿ. ಆರ್. ಛಾಯಾ, ಸಂಗೀತಾಕಟ್ಟಿ

ದೀಪಾವಳಿ..
ದೀಪಾವಳಿ ಜ್ಯೋತಿ ಎಲ್ಲೆಲ್ಲೂ ನೋಡ.. ಓ..
ಇದು ಸಾಯಿ ಪವಾಡ
ದೀಪಾವಳಿ ಜ್ಯೋತಿ ಎಲ್ಲೆಲ್ಲೂ ನೋಡ.. ಓ..
ಇದು ಸಾಯಿ ಪವಾಡ
ಎಲ್ಲೂ ಸಂತೋಷ, ಹೊಸ ಸಂಗೀತ
ಇಂದು ಬಾಬಾನ ಕೃಪೆಯಿಂದ ಆನಂದ

ದೀಪಾವಳಿ ಜ್ಯೋತಿ ಎಲ್ಲೆಲ್ಲೂ ನೋಡ.. ಓ..
ಇದು ಸಾಯಿ ಪವಾಡ

ನಾವು ಹಚ್ಚೋ ದೀಪಕ್ಕೆಂದೂ ಶ್ರದ್ಧೆಯದೇ ಎಣ್ಣೆ
ನಿಜ ಭಕ್ತಿಯದೇ ಬತ್ತಿ, ಈ ಸೇವೆಯದೇ ಜ್ಯೋತಿ
ನಾವು ಹಚ್ಚೋ ದೀಪಕ್ಕೆಂದೂ ಶ್ರದ್ಧೆಯದೇ ಎಣ್ಣೆ
ನಿಜ ಭಕ್ತಿಯದೇ ಬತ್ತಿ, ಈ ಸೇವೆಯದೇ ಜ್ಯೋತಿ
ಜಾತಿ ಮತ ಭೇದವಿಲ್ಲ, ಕುಲವು ಮುಖ್ಯವಲ್ಲ
ಗುಣ ಮುಖ್ಯ ಬಾಳಿಗೆಲ್ಲಾ, ಇದ ತಿಳಿಯೇ ಸುಖವು ಎಲ್ಲಾ
ಕಳೆಯಿತು ಕತ್ತಲೆಯು ನೀ ನೋಡ.. ಇದು ಸಾಯಿ ಪವಾಡ
ಕಳೆಯಿತು ಕತ್ತಲೆಯು ನೀ ನೋಡ.. ಇದು ಸಾಯಿ ಪವಾಡ
ಎಲ್ಲೂ ಸಂತೋಷ, ಹೊಸ ಸಂಗೀತ
ಇಂದು ಬಾಬಾನ ಕೃಪೆಯಿಂದ ಆನಂದ

ದೀಪಾವಳಿ ಜ್ಯೋತಿ ಎಲ್ಲೆಲ್ಲೂ ನೋಡ.. ಓ..
ಇದು ಸಾಯಿ ಪವಾಡ

ಹೇಳಿ ಕೇಳಿ ಸಾಯಿಬಾಬಾ ಅಮೃತದವಾಣಿ
ತಿಳಿ ಸ್ವರ್ಗಕ್ಕದೇ ಏಣಿ, ಭವದಾಟಿಸುವ ದೋಣಿ
ಹೇಳಿ ಕೇಳಿ ಸಾಯಿಬಾಬಾ ಅಮೃತದವಾಣಿ
ತಿಳಿ ಸ್ವರ್ಗಕ್ಕದೇ ಏಣಿ, ಭವದಾಟಿಸುವ ದೋಣಿ
ಶಾಂತಿ ಪ್ರೇಮ ಸತ್ಯ ಧರ್ಮ ಸಾರುತಿಹರು ಸಾಯಿ
ಪರಮಾತ್ಮ ರೂಪ ಸಾಯಿ, ನಮ್ಮ ಬಾಳ ದೀಪ ಸಾಯಿ
ನಂಬಿದರೆ ಅಂಜಿಕೆಯು ಇನ್ನಿಲ್ಲ.. ಇದು ಸಾಯಿ ಪವಾಡ
ನಂಬಿದರೆ ಅಂಜಿಕೆಯು ಇನ್ನಿಲ್ಲ.. ಇದು ಸಾಯಿ ಪವಾಡ
ಎಲ್ಲೂ ಸಂತೋಷ, ಹೊಸ ಸಂಗೀತ
ಇಂದು ಬಾಬಾನ ಕೃಪೆಯಿಂದ ಆನಂದ

ದೀಪಾವಳಿ ಜ್ಯೋತಿ ಎಲ್ಲೆಲ್ಲೂ ನೋಡ.. ಓ..
ಇದು ಸಾಯಿ ಪವಾಡ
ಇದು ಬಾಬಾ ಪವಾಡ
ಇದು ಸಾಯಿ ಪವಾಡ

ಹೆಣ್ಣು ಹೊನ್ನು ಮಣ್ಣು ಎಂಬ ಮಾಯೆಯುಂಟು ಊರತುಂಬ

*ನೀಲಿಮಲೆಯ* *ಜೀವದೊಡಯ*
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಡಾII ರಾಜ್ ಕುಮಾರ್

ಧೀಮ್ತಗತ್ತೊಂ ಧೀಮ್ತಗತ್ತೊಂ ಧೀಮ್ತಗತ್ತೊಂ
ಧೀಮ್ತಗತ್ತೊಂ ಧೀಮ್ತಗತ್ತೊಂ ಧೀಮ್ತಗತ್ತೊಂ ಸ್ವಾಮಿ ಅಯ್ಯಪ್ಪ
ಶರಣಂ ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ

ಹೆಣ್ಣು ಹೊನ್ನು ಮಣ್ಣು ಎಂಬ ಮಾಯೆಯುಂಟು ಊರತುಂಬ
ಎಂಬ ಗುಟ್ಟು ಹೇಳಿ ಹೊರಟ ಸ್ವಾಮಿ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ
ತಾಯಿಗಾಗಿ ರಾಜ್ಯಬಿಟ್ಟ ಬಾಲಯೋಗಿಯೋ
ಕಾಮ ಕ್ರೋಧ ಲೋಭ ಕಳೆವ ಜ್ಞಾನಜ್ಯೋತಿಯೋ
ಮಾಯಾದೂರ ಅಯ್ಯಪ್ಪ ಮಾಯಾಮೋಹ ಬಿಡಿಸಪ್ಪ
ಹೆಣ್ಣು ಹೊನ್ನು ಮಣ್ಣು ಎಂಬ ಮಾಯೆಯುಂಟು ಊರತುಂಬ
ಎಂಬ ಗುಟ್ಟು ಹೇಳಿ ಹೊರಟ ಸ್ವಾಮಿ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ

ಕಾಡಿನಾಳದಲ್ಲಿ ಘಾಢಾoಧಕಾರದಲ್ಲಿ
ಸ್ವಾಮಿ ಪ್ರೇಮ ಕೋರಿ ಶಬರಿ ದಾರಿಕಾದಳಿಲ್ಲಿ ...
ತನ್ನಿ ಸ್ವಾಮಿ ಗಣವು ಗಿರಿ ಏರದಂತ ದಿನವು
ನೀಲಮಲೆಯಲಿ ನಮ್ಮ ಮದುವೆ ಅಂದ ಜಾಣ ಪ್ರಭುವು
ನಾವು ಗಿರಿಯ ಏರದಿರುವ ಕಾಲ ಬರದಯ್ಯ
ಘೋರ ಭ್ರಹ್ಮಚಾರಿ ನಿನ್ನ ಲೀಲೆ ಇದುವಯ್ಯ
ಮಾಯಾದೂರ ಅಯ್ಯಪ್ಪ ಮಾಯಾಮೋಹ ಬಿಡಿಸಪ್ಪ

ಧೀಮ್ತಗತ್ತೊಂ ಧೀಮ್ತಗತ್ತೊಂ ಧೀಮ್ತಗತ್ತೊಂ
ಧೀಮ್ತಗತ್ತೊಂ ಧೀಮ್ತಗತ್ತೊಂ ಧೀಮ್ತಗತ್ತೊಂ ಸ್ವಾಮಿ ಅಯ್ಯಪ್ಪ
ಶರಣಂ ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ
ಹೆಣ್ಣು ಹೊನ್ನು ಮಣ್ಣು ಎಂಬ ಮಾಯೆಯುಂಟು ಊರತುಂಬ
ಎಂಬ ಗುಟ್ಟು ಹೇಳಿ ಹೊರಟ ಸ್ವಾಮಿ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ...
ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ...

ತಾಯನೋವಿಗಾಗಿ ಹುಲಿಹಾಲ ಬೇಟೆಗಾಗಿ
ಬೇಡಎಂದ ತಂದೆಯ ಮೀರಿ ಕಾಡಿಗೋಡಿಬಂದ...
ದೇವಲೋಕ ಗೆದ್ದ ಆ ಖ್ರೂರ ಮಹಿಷಿಯ ಕೊಂದ
ಮುರಿದ ಕೋಡಿನಿಂದ ಅಣದ ನದಿಗೆ ಜನ್ಮತಂದ
ತಾಯಿಗಾಗಿ ರಾಜ್ಯಬಿಟ್ಟ ಬಾಲಯೋಗಿಯೋ
ಕಾಮ ಕ್ರೋಧ ಲೋಭ ಕಳೆವ ಜ್ಞಾನಜ್ಯೋತಿಯೋ
ಮಾಯಾದೂರ ಅಯ್ಯಪ್ಪ ಮಾಯಾಮೋಹ ಬಿಡಿಸಪ್ಪ

ಧೀಮ್ತಗತ್ತೊಂ ಧೀಮ್ತಗತ್ತೊಂ ಧೀಮ್ತಗತ್ತೊಂ
ಧೀಮ್ತಗತ್ತೊಂ ಧೀಮ್ತಗತ್ತೊಂ ಧೀಮ್ತಗತ್ತೊಂ ಸ್ವಾಮಿ ಅಯ್ಯಪ್ಪ
ಶರಣಂ ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ
ಹೆಣ್ಣು ಹೊನ್ನು ಮಣ್ಣು ಎಂಬ ಮಾಯೆಯುಂಟು ಊರತುಂಬ
ಎಂಬ ಗುಟ್ಟು ಹೇಳಿ ಹೊರಟ ಸ್ವಾಮಿ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ
ಸ್ವಾಮಿ ಅಯ್ಯಪ್ಪ ಶರಣಂ ಸ್ವಾಮಿ ಅಯ್ಯಪ್ಪ

ಆಡದೇ ಮಾಡುವವನು ರೂಢಿಯೊಳಗುತ್ತಮನು

*ನೀಲಿಮಲೆಯ* *ಜೀವದೊಡಯ*
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಡಾII ರಾಜ್ ಕುಮಾರ್

ಆಡದೇ ಮಾಡುವವನು ರೂಢಿಯೊಳಗುತ್ತಮನು
ಆಡಿ ಮಾಡುವವನು ಮಧ್ಯಮನು
ಆಡಿಯೂ ಮಾಡದವನು ಅಧಮನು.. ಅಧಮನು
ಆ ಆ ಆ ಆ...

ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ, ಮಾಡುವವನು ಹೇಳಲಾರ
ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ, ಮಾಡುವವನು ಹೇಳಲಾರ
ಹೇಳಿ ಮಾಡುವ ನರನೊಬ್ಬ ನಡು ಮಧ್ಯಮನು
ಹೇಳದೇ ಮಾಡೋ ಪ್ರಭು ನೀನು ಪುರುಷೋತ್ತಮನು

ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ, ಮಾಡುವವನು ಹೇಳಲಾರ

ಹಗಲು ಇರುಳು ನಿನ್ನ ಸ್ಮರಣೆ ಮಾಡಿ ದಿನ ಕಳೆವ ಆಸೆ ಇದೆ
ಅಯ್ಯಪ್ಪ ಈ ಮಾಯಾ ಮೋಹ ತ್ಯಜಿಸಿಲ್ಲ
ಇಂದು ತೊರೆದು ಬಿಡು, ನಾಳೆ ತೊರೆದು ಬಿಡು ಎಂದು ತೂಗುತಿದೆ
ಅಯ್ಯಪ್ಪ ಈ ಮನಸೇ ಮಾತು ಕೇಳಿಲ್ಲ
ಆಡಿ ನಾನು ನಡೆದಿಲ್ಲ..
ನಡೆದು ನನ್ನ ಜಯಸಿಲ್ಲ..
ಸ್ವಾಮಿ ನೀನು ನುಡಿದಿಲ್ಲ..
ನಿನ್ನೇ ಜಯಸಿ ನಡೆದಿಲ್ಲ..
ಹೇಳಿ ಮಾಡದ ನರನೊಬ್ಬ ಕಡು ಅಧಮನು
ಹೇಳದೇ ಮಾಡಿದ ಪ್ರಭು ನೀನು ದೈವೋತ್ತಮನು

ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ, ಮಾಡುವವನು ಹೇಳಲಾರ

ಸಕಲ ವೇದಗಳ ಅಖಿಲ ಶಾಸ್ತ್ರಗಳ ನಿಖಿಲ ಭೋಧೆಗಳ
ಅಯ್ಯಪ್ಪ ನಾ ಕಲಿತು ಹಾಡೋ ಆಸೆ ಇದೆ
ನಾಳೆ ಮಾಡಲಿದೆ, ವೇಳೆ ಸಾಲದಿದೆ ಎಂದು ಸಾಗುತಿದೆ
ಅಯ್ಯಪ್ಪ ಈ ಬಾಳು ಹಾಳು ಎನಿಸುತಿದೆ.
ಆಡಿ ನಾನು ನಡೆದಿಲ್ಲ..
ನಡೆದು ನಿನ್ನ ತಿಳಿದಿಲ್ಲ..
ಸ್ವಾಮಿ ನೀನು ನುಡಿದಿಲ್ಲ..
ಪಂಚಮ ವೇದ ಆಗಲ್ಲ..
ಆಡಿ ಮಾಡದ ನರನೊಬ್ಬ ಕಡು ಅಧಮನು
ಆಡದೆ ಮಾಡಿದ ಪ್ರಭು ನೀನು ಸರ್ವೊತ್ತಮನು

ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ, ಮಾಡುವವನು ಹೇಳಲಾರ

ಬೆಳಕು ನೆರಳುಗಳ ನರಕ ನಾಕಗಳ ಬ್ರಹ್ಮ ಗಂಟುಗಳ
ಅಯ್ಯಪ್ಪ ಆ ಮೂಲ ಕೇಳೋ ಆಸೆ ಇದೆ
ಅಣುವು ಗಾತ್ರದಲಿ, ತೃಣವು ಪಾತ್ರದಲಿ ಬದುಕು ನಡುಗುತಿದೆ
ಅಯ್ಯಪ್ಪ ಆ ಎಲ್ಲಾ ನೀನೇ ಅನಿಸುತಿದೆ
ನನ್ನ ನಾಡಿ ನನದಲ್ಲ..
ಆಡಿ ಹಾಡು ನಿನ್ನದಲ್ಲ..
ಸ್ವಾಮಿ ನೀನು ನುಡಿದಿಲ್ಲ..
ನಿನ್ನ ಬಿಟ್ಟು ಏನಿಲ್ಲ..
ಆಡಿ ಅರಿಯದ ನರನೊಬ್ಬ ಕಡು ಬಡವನು
ಆಡಿ ಹಾಡಿಸೋ ಪ್ರಭು ನೀನು ಜಗೊದೊತ್ತಮನು

ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ, ಮಾಡುವವನು ಹೇಳಲಾರ
ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ, ಮಾಡುವವನು ಹೇಳಲಾರ
ಹೇಳಿ ಮಾಡುವ ನರನೊಬ್ಬ ನಡು ಮಧ್ಯಮನು
ಹೇಳದೇ ಮಾಡುವ ಪ್ರಭು ನೀನು ಪುರುಷೋತ್ತಮನು

ದಿಟವಾಗಿ ಹೋಯಿತಯ್ಯ ಹಿರಿಯೋರ ಗಾದೆ ಮಾತು
ಹೇಳೋನು ಮಾಡಲಾರ, ಮಾಡುವವನು ಹೇಳಲಾರ

ಅಮೆರಿಕಾ ನೆನೆದೊಡನೆ ಅಮೆರಿಕಾ

ಚಿತ್ರ: *ಮಿಡಿದ* *ಶೃತಿ* (1992)
ಸಾಹಿತ್ಯ: ನಾದಬ್ರಹ್ಮ ಹಂಸಲೇಖ
ಸಂಗೀತ: ಉಪೇಂದ್ರಕುಮಾರ್
ಗಾಯನ: ಎಸ್. ಪಿ. ಬಿ

ಅಮೆರಿಕಾ ನೆನೆದೊಡನೆ ಅಮೆರಿಕಾ
ಮದನಿಕಾ ಕರೆದೊಡನೆ ಮದನಿಕಾ
ಬೇಕು ಅಂದ್ರೆ ಬೇಕು ಅನ್ನೋ
ಬೇಡ ಅಂದ್ರೆ ಬೇಡ ಅನ್ನೋ ಮನಸಿದು
ಮೈಯ್ಯಮೇಲೆ ಗುಂಡುಮಳೆ
ಬಿದ್ದ ಮೇಲೂ ಗಂಡುಕಳೆ ವಯಸಿದು
ಕನಸ ಮರಿ.. ಕಥೆಯ ಮರಿ.. ಕುಣಿದು ಜಗವ ಮರಿ

ಪ್ರೀತಿ ಮಾಡೋ ಮೊದಲು ಕಣ್ಣ ನೀರ ಉಳಿಸಿಕೋ
ಹೃದಯ ಒಳಗೆ ಪ್ರಳಯ ಆಗಬಹುದು ತಡೆದುಕೋ
ಮೀನ ಹೆಜ್ಜೆ ಗುರುತ ಹಿಡಿವ ಕಲೆಯಾ ಕಲಿತುಕೋ
ಹೆಣ್ಣ ಕಣ್ಣ ಒಳಗೆ ಕುಳಿತು ಜಗವಾ ತಿಳಿದುಕೋ
ಜಾರಿ ಬೀಳದಿರು ಚಲುವಿನ ಸಿರಿಗೆ
ಮೋಸ ಹೋಗದಿರು ಒಲವಿನ ಕರೆಗೆ
ಜಾರಿ ಬೀಳದಿರು ಚಲುವಿನ ಸಿರಿಗೆ
ಮೋಸ ಹೋಗದಿರು ಒಲವಿನ ಕರೆಗೆ
ಜೋಕೇ.. ಒಲವ ಮರಿ.. ಚಲುವ ಮರಿ.. ವಿಷದ ವಿಷಯ ಮರಿ

ಕನಸು ಎಂಬ ಭ್ರಮೆಗೆ ಪ್ರೇಮ ಕಥೆಯಾ ಬಯಕೆಯೋ
ಮನಸು ಎಂಬ ರಮೆಗೆ ಪ್ರೇಮ ಜತೆಯಾ ಬಯಕೆಯೋ
ಬಯಕೆ ಕುದುರೆ ಏರಿ ಮುಂದೆ ಹೊರಟ ಬದುಕಿಗೆ
ಜಗವೆ ಬಯಲು ಹಗಲೇ ಇರುಳು ತೆರೆದ ಕಣ್ಣಿಗೆ
ಜಾರಿ ಬೀಳದಿರು ಚಲುವಿನ ಸಿರಿಗೆ
ಮೋಸ ಹೋಗದಿರು ಒಲವಿನ ಕರೆಗೆ
ಜಾರಿ ಬೀಳದಿರು ಚಲುವಿನ ಸಿರಿಗೆ
ಮೋಸ ಹೋಗದಿರು ಒಲವಿನ ಕರೆಗೆ
ಜೋಕೇ.. ಗತವ ಮರಿ.. ಪಥವ ಮರಿ.. ಪರರ ಹಿತವ ಮರಿ

ಅಮೆರಿಕಾ ನೆನೆದೊಡನೆ ಅಮೆರಿಕಾ
ಮದನಿಕಾ ಕರೆದೊಡನೆ ಮದನಿಕಾ
ಬೇಕು ಅಂದ್ರೆ ಬೇಕು ಅನ್ನೋ
ಬೇಡ ಅಂದ್ರೆ ಬೇಡ ಅನ್ನೋ ಮನಸಿದು
ಮೈಯ್ಯಮೇಲೆ ಗುಂಡುಮಳೆ
ಬಿದ್ದ ಮೇಲೂ ಗಂಡುಕಳೆ ವಯಸಿದು
ಕನಸ ಮರಿ.. ಕಥೆಯ ಮರಿ.. ಕುಣಿದು ಜಗವ ಮರಿ

ನಲಿಯೋ ಕಾಲದಲ್ಲಿ ನಾಚೋದ್ಯಾಕೆ ಮಲ್ಲಿ

ಚಿತ್ರ: *ಅನಾಥ* *ರಕ್ಷಕ* (1991)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ

ನಲಿಯೋ ಕಾಲದಲ್ಲಿ ನಾಚೋದ್ಯಾಕೆ ಮಲ್ಲಿ
ಸವಿಯೋ ಕಾಲದಲ್ಲಿ ಸರಿಯೋದ್ಯಾಕೆ ಮಳ್ಳಿ
ಅಲ್ಲಿರುವ ಜೇನುಗೂಡಲ್ಲೇನು ಯಾರೂ ಕಾವಲಿಲ್ಲ
ಬಂದಿರುವೆ ನಾನು ತರದೇ ನೀನು ಮೂಕಳಾದೆಯಲ್ಲ

ಬಯಸೋ ಕಾಲದಲ್ಲಿ ಬಿಂಕ ಯಾಕೆ ಮಲ್ಲಿ
ಬಳಸೋ ಕಾಲದಲ್ಲಿ ದಣಿಯೋದ್ಯಾಕೆ ಮಳ್ಳಿ
ಇಲಿರುವ ಮಾತ ಹುಣ್ಣಿಮೆ ಊಟ ಬಡಿಸೋದಿಲ್ಲ ಯಾಕೆ
ಹಣ್ಣಿರುವ ತೋಟ ನೀನಿರುವಾಗ ಮರ ಸುತ್ತಾಟ ಯಾಕೆ

ನಲಿಯೋ ಕಾಲದಲ್ಲಿ ನಾಚೋದ್ಯಾಕೆ ಮಲ್ಲಿ
ಸವಿಯೋ ಕಾಲದಲ್ಲಿ ಸರಿಯೋದ್ಯಾಕೆ ಮಳ್ಳಿ

ನಾನು ನಿನ್ನ ಗೆಳೆಕಾರ, ಪೂರ್ವದಿಂದ ಜೊತೆಗಾರ
ನಾನು ತಪ್ಪು ಹೇಳಲ್ಲ, ಪ್ರೀತಿ ಮಾಡು ತಪ್ಪಿಲ್ಲ
ಅಡಿಗೆ ಮಾಡಿದಮೇಲೆ ಬಡಿಸಲು ಭಯವೇನೇ
ಅಂದ ಅರಳಿದ ಮೇಲೆ ದುಂಬಿ ತಿಂದರೆ ಏನೇ

ನಲಿಯೋ ಕಾಲದಲ್ಲಿ ನಾಚೋದ್ಯಾಕೆ ಮಲ್ಲಿ
ಸವಿಯೋ ಕಾಲದಲ್ಲಿ ಸರಿಯೋದ್ಯಾಕೆ ಮಳ್ಳಿ
ಅಲ್ಲಿರುವ ಜೇನುಗೂಡಲ್ಲೇನು ಯಾರೂ ಕಾವಲಿಲ್ಲ
ಬಂದಿರುವೆ ನಾನು ತರದೇ ನೀನು ಮೂಕಳಾದೆಯಲ್ಲ

ನಲಿಯೋ ಕಾಲದಲ್ಲಿ ನಾಚೋದ್ಯಾಕೆ ಮಲ್ಲಿ
ಸವಿಯೋ ಕಾಲದಲ್ಲಿ ಸರಿಯೋದ್ಯಾಕೆ ಮಳ್ಳಿ

ಮಂಜು ಕರಗಿ ನೀರಂತೆ, ನೀರು ಹಾರಿ ಮುಗಿಲಂತೆ
ಹಗಲು ಕಳೆದು ಇರುಳಂತೆ, ವಯಸು ಸರಿದು ಮಪ್ಪಂತೆ
ಎಲ್ಲಾ ಹೋಗುವ ಮುನ್ನ ನಲ್ಲೆ ಸವಿಯುವ ಬಾರೇ
ಕನಸು ಕರಗುವ ಮುನ್ನ ನನಸು ಮಾಡುವ ಬಾರೇ

ನಲಿಯೋ ಕಾಲದಲ್ಲಿ ನಾಚೋದ್ಯಾಕೆ ಮಲ್ಲಿ
ಸವಿಯೋ ಕಾಲದಲ್ಲಿ ಸರಿಯೋದ್ಯಾಕೆ ಮಳ್ಳಿ
ಅಲ್ಲಿರುವ ಜೇನುಗೂಡಲ್ಲೇನು ಯಾರೂ ಕಾವಲಿಲ್ಲ
ಬಂದಿರುವೆ ನಾನು ತರದೇ ನೀನು ಮೂಕಳಾದೆಯಲ್ಲ

ಬಯಸೋ ಕಾಲದಲ್ಲಿ ಬಿಂಕ ಯಾಕೆ ಮಲ್ಲಿ
ಬಳಸೋ ಕಾಲದಲ್ಲಿ ದಣಿಯೋದ್ಯಾಕೆ ಮಳ್ಳಿ

ಓ ಪ್ರೇಮದ ಗಂಗೆಯೇ ಇಳಿದು ಬಾ.. ಇಳಿದು ಬಾ.. ಇಳಿದು ಬಾ..

ಚಿತ್ರ: ಹೃದಯ ಹೃದಯ (1999)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು: ಡಾII ರಾಜ್ ಕುಮಾರ್ & ಕೆ. ಎಸ್. ಚಿತ್ರ

ಓ ಪ್ರೇಮದ ಗಂಗೆಯೇ ಇಳಿದು ಬಾ.. ಇಳಿದು ಬಾ..
ಇಳಿದು ಬಾ..
ಈ ಹೃದಯದ ಧರಣಿಯ ತಣಿಸು ಬಾ.. ತಣಿಸು ಬಾ..
ತಣಿಸು ಬಾ..

ಈ ಕಂಗಳ..
ಈ ಕಂಗಳ..
ಕಾವೇರಿಯ..
ಕಾವೇರಿಯ..
ಕನಸುಗಳ ಅಲೆಗಳ ಮೇಲೆ ಕುಲುಕುತ ಬಳುಕುತ ಸರಿಗಮ ಗುನುಗುತ ಬಾ..
ಒಲಿದು ಬಾ.. ಒಲಿದು ಬಾ..

ಓ ಪ್ರೇಮದ ಗಂಗೆಯೇ ಇಳಿದು ಬಾ.. ಇಳಿದು ಬಾ..
ಇಳಿದು ಬಾ..
ಈ ಹೃದಯದ ಧರಣಿಯ ತಣಿಸು ಬಾ.. ತಣಿಸು ಬಾ..
ತಣಿಸು ಬಾ..

ಬೆಳಕು ಹರಿದಂತೆ, ಹೂವು ಬಿರಿದಂತೆ
ಮುಗಿಲು ತೆರೆದಂತೆ, ಮಿಂಚು ನಗುವಂತೆ
ಚಂದ್ರ ಬೆಳೆದಂತೆ, ಕಡಲು ಜಿಗಿದಂತೆ ಬಾ ಒಲವೆ ಬಾ..
ಆ ಚಲುವ ತಾ..
ನೋಡೆ ಮೊಗವಿಲ್ಲ, ಸೋಕೆ ತನುವಿಲ್ಲ
ಆದರೇನದರ ಚಿಂತೆ ಜಗಕಿಲ್ಲ..
ನೀನು ಇರದಿರುವ ಕಣವೆ ಇಲ್ಲಿಲ್ಲಾ ಓ ಒಲವೆ ಬಾ
ಆ ಸುಖವ ತಾ..

ಮಾತಾಗಿ ಬಾ..
ಜೇನಾಗಿ ಬಾ..
ಗುರುವಾಗಿ ಬಾ..
ನೆರಳಾಗಿ ಬಾ..
ಈ ಬಾಳಿನ ಹಾಡಾಗಿ ಬಾ..

ಈ ಅಧರದ..
ಈ ಅಧರದ..
ತುಂಗಾ ತೀರದ..
ತುಂಗಾ ತೀರದ..
ಕನಸುಗಳ ಅಲೆಗಳ ಮೇಲೆ ತುಳುಕುತ ಬಳುಕುತ ಸರಿಗಮ ಗುನುಗುತ ಬಾ..
ಒಲಿದು ಬಾ.. ಒಲಿದು ಬಾ..

ಓ ಪ್ರೇಮದ ಗಂಗೆಯೇ ಇಳಿದು ಬಾ.. ಇಳಿದು ಬಾ..
ಇಳಿದು ಬಾ..
ಈ ಹೃದಯದ ಧರಣಿಯ ತಣಿಸು ಬಾ.. ತಣಿಸು ಬಾ..
ತಣಿಸು ಬಾ..

ಹಗಲು ನಿನ್ನಿಂದ, ಇರುಳು ನಿನ್ನಿಂದ
ಸಕಲ ಲೋಕಗಳೇ ನಿನ್ನ ಒಳಗಿಂದ
ಸುಖದ ಮಂದಾರ, ಜಗದ ಶೃಂಗಾರ ಓ ಒಲವೆ ಬಾ..
ಆ ಜೇನ ತಾ..
ನಿನ್ನ ಚೆಲುವೇನು, ನಿನ್ನ ಸೊಗಸೇನು
ಜೀನು ಗೂಡಂತೆ ತೂಗೋ ಧರೆ ನೀನು
ನನಗೆ ನೀ..
ಜೀವ..
ನಿನಗೆ ನಾ..
ಜೀವ..
ಓ..
ದಿವ್ಯವೇ..
ಒ ಓ..
ದೈವವೇ..

ಹಸಿರಾಗಿ ಬಾ..
ಉಸಿರಾಗಿ ಬಾ..
ಈ ಹೃದಯದ..
ಕಥೆಯಾಗಿ ಬಾ..
ಈ ಜನುಮದ..
ಜೊತೆಯಾಗಿ ಬಾ..

ಈ ಪ್ರೇಮದ..
ಈ ಪ್ರೇಮದ..
ಮಹಾ ಜೋಗದ..
ಮಹಾ ಜೋಗದಾ..
ಭಾವಗಳ ಭೋರ್ಗರೆತದಲಿ
ತುಳುಕುತ ಧುಮುಕುತ ಬೆರೆಯುತ ಹರಿಯುತ ಬಾ
ಬೆಳೆದು ಬಾ.. ಕುಣಿದು ಬಾ..

ಓ ಪ್ರೇಮದ ಗಂಗೆಯೇ ಇಳಿದು ಬಾ.. ಇಳಿದು ಬಾ.. ಇಳಿದು ಬಾ..
ಇಳಿದು ಬಾ..
ಈ ಹೃದಯದ ಧರಣಿಯ ತಣಿಸು ಬಾ.. ತಣಿಸು ಬಾ..
ತಣಿಸು ಬಾ..

ಚಿಟಪಟ ಚಿಟಪಟ ಚಿಟಪಟ ಅಂತ ಹಿಡುಕೊಂತ..

ಚಿತ್ರ: ರಸಿಕ (1994)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ. ಬಿ & ಎಸ್. ಜಾನಕಿ

ಸ ಸನಿನಿ ಸನಿನಿ ಸನಿ ಸನಿನಿ ಸನಿನಿ ಸನಿಸ
ಸನಿನಿ ಸನಿನಿ ಸನಿ ಸನಿನಿ ಸನಿನಿ ಸನಿ..
ನಿಸನಿದಪಮ ಸನಿದಪಮಗ ನಿದಪಮ ಪದಪ
ಗರಿಸನಿದ ಗರಿನಿಸ, ಗರಿಸನಿದ ದ ದ ಗರಿನಿಸ ..

ಚಿಟಪಟ ಚಿಟಪಟ ಚಿಟಪಟ ಅಂತ ಹಿಡುಕೊಂತ..
ಮಳೆಯು ಹಿಡುಕೊಂತ
ಚಿಟಪಟ ಚಿಟಪಟ ಚಿಟಪಟ ಅಂತ ಹಿಡುಕೊಂತ..
ಮಳೆಯು ಹಿಡುಕೊಂತ
ಅತ್ತ ಜೋರಾಗೂ ಬರದು, ಇತ್ತ ಸುಮ್ಮನೂ ಇರದು
ಸ್ನಾನ ಆದಂಗೂ ಇರದು, ಧ್ಯಾನಮಾಡೋಕು ಬಿಡದು

ಚಿಟಪಟ ಚಿಟಪಟ ಚಿಟಪಟ ಅಂತ ಹಿಡುಕೊಂತ..
ಮಳೆಯು ಹಿಡುಕೊಂತ
ಮಳೆಯು ಹಿಡುಕೊಂತ

ನೆನೆಯುವ ಜೀವಾನ, ನೆನೆಸುವ ಈ ಸೋನೆ
ಬಯಸಿದ ಆಸೆನ, ಬರಿಸುವ ಈ ಸೋನೆ
ಬೇಡ ಅನ್ನೋಕೂ ಬಿಡದು, ಬೇಕು ಅನ್ನೋಕೂ ಬಿಡದು
ಮಳೆಯಲಿ ಮಗುವಾಗಿ, ಜಿಗಿಯುವ ಈ ಜಾಣೆ
ನೆನೆದರೆ ಶೃತಿಯಲ್ಲಿ, ನುಡಿಯುವ ನರವೀಣೆ
ಮುದ್ದು ಮಾಡೋಕೂ ಬಿಡದು, ಬಿಟ್ಟು ಹೋಗೋಕೂ ಬಿಡದು
ಗುಡುಗುಡು ತಾಣ ಮುಗಿಲೊಳಗೆ, ಧಿರನನ  ಧಿರನನ ಧಿರನನ
ಢವಢವ ಗಾನ ಎದೆಯೊಳಗೆ, ಧಿರನನ  ಧಿರನನ ಧಿರನನ

ಚಿಟಪಟ ಚಿಟಪಟ ಚಿಟಪಟ ಅಂತ ಹಿಡುಕೊಂತ..
ಮಳೆಯು ಹಿಡುಕೊಂತ
ಚಿಟಪಟ ಚಿಟಪಟ ಚಿಟಪಟ ಅಂತ ಹಿಡುಕೊಂತ..
ಮಳೆಯು ಹಿಡುಕೊಂತ
ಅತ್ತ ಜೋರಾಗೂ ಬರದು, ಇತ್ತ ಸುಮ್ಮನೂ ಇರದು
ಸ್ನಾನ ಆದಂಗೂ ಇರದು, ಧ್ಯಾನಮಾಡೋಕು ಬಿಡದು

ಚಿಟಪಟ ಚಿಟಪಟ ಚಿಟಪಟ ಅಂತ ಹಿಡುಕೊಂತ..
ಮಳೆಯು ಹಿಡುಕೊಂತ
ಮಳೆಯು ಹಿಡುಕೊಂತ

ಗರಿಸನಿದ ಗರಿನಿಸ
ಗರಿಸನಿದ ದ ದ ಗರಿನಿಸ

ಸ್ವರಗಳ ಮಳೆಯಲ್ಲಿ, ರಾಗಕೆ ಸನ್ಮಾನ
ಒಲವಿನ ಮಳೆಯಲ್ಲಿ, ಹೃದಯಕೆ ಸನ್ಮಾನ
ಅತ್ತ ಸಂಗೀತ ಶರಣು, ಇತ್ತ ಪ್ರಾಯಾದ ಶರಣು
ಕಡಲಿಗೆ ಕಾಲಿಲ್ಲ, ನವಿಲಿಗೆ ನಾಡಿಲ್ಲ
ಮನಸಿಗೆ ಮಾತಿಲ್ಲ, ಪ್ರೀತಿಗೆ ಬರವಿಲ್ಲ
ಮಳೆಯು ನಮ್ಮನ್ನು ಬಿಡದು, ನಾವು ಪ್ರೀತೀನ ಬಿಡೆವು
ತಕತಕ ಮಿಂಚು ಮಳೆಯೊಳಗೆ, ಧಿರನನ ಧಿರನನ ಧಿರನನ
ಮಿಕಮಿಕ ಸಂಚು ಕಣ್ಣೊಳಗೆ, ಧಿರನನ ಧಿರನನ ಧಿರನನ

ಚಿಟಪಟ ಚಿಟಪಟ ಚಿಟಪಟ ಅಂತ ಹಿಡುಕೊಂತ..
ಮಳೆಯು ಹಿಡುಕೊಂತ
ಚಿಟಪಟ ಚಿಟಪಟ ಚಿಟಪಟ ಅಂತ ಹಿಡುಕೊಂತ..
ಮಳೆಯು ಹಿಡುಕೊಂತ
ಅತ್ತ ಜೋರಾಗೂ ಬರದು, ಇತ್ತ ಸುಮ್ಮನೂ ಇರದು
ಸ್ನಾನ ಆದಂಗೂ ಇರದು, ಧ್ಯಾನಮಾಡೋಕು ಬಿಡದು

ಚಿಟಪಟ ಚಿಟಪಟ ಚಿಟಪಟ ಅಂತ ಹಿಡುಕೊಂತ..
ಮಳೆಯು ಹಿಡುಕೊಂತ
ಮಳೆಯು ಹಿಡುಕೊಂತ

ಕಲೇಗಾರ ಆ ದೇವರು ಒಬ್ಬನೇ ಕಲೆಗಾರ

ಚಿತ್ರ :ರಸಿಕ
ಸಂಗೀತ :ನಾದಬ್ರಹ್ಮ
ಸಾಹಿತ್ಯ :ಅಕ್ಷರಬ್ರಹ್ಮ
ಹಾಡಿದವರು :

ಕಲೇಗಾರ ಆ ದೇವರು ಒಬ್ಬನೇ ಕಲೆಗಾರ
ಹೂ ಮನಗಳ ಮಾಡಿದ, ಪ್ರೀತಿಯ ಮಧು ತುಂಬಿದ
ಚಂದದ ಹೊಸ ದುಂಬಿಯ ಬಾಳಲು ಕಲೆ ಹಾಕಿದ

ಹಾಡೊಂದು ಹಾಡಬೇಕು ಅದು ಚಿರ ಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರ ಕಾಲ ಕೇಳಬೇಕು
      ನಮ್ಮ ಬಾಳು ನಮ್ಮ ಬದುಕು
      ಕಲಾ ದೇವನಿಗೆ ಸಿಂಗರಿಸೋ ಹೂಗಳು

ಹಾಡೊಂದು ಹಾಡಬೇಕು ಅದು ಚಿರ ಕಾಲ ಕೇಳಬೇಕು
ಸಾವಿರ ಮುಳ್ಳಿದ್ದರು
ಮಿಂಚುವುದು ಗುಲಾಬಿ ಹೂ
ಸಾವಿರ ಸುಳ್ಳಿದ್ದರು
ಮೆರಿಯುವುದೇ ಸತ್ಯವು
ನೆನ್ನೆಯ ನೆನಪಿನ ಆ ಅನುಭವಾ ಆ
ನೆನೆದರೆ ಕಣ್ಗಳು ಉಸಿ ಕೇಳದು
ಕಲಕುವ  ರಾಗದ ಆ ಕಲರವಾ
ನೆನೆದರೆ ಹೃದಯದ  ಅಲೆ ನಿಲ್ಲದು
ಈ ಜೀವನ ಇನ್ನೂ ಸಂಜೀವನ
ಈ ಗಾಯನ ಪ್ರೇಮ ರಸಾಯನ
ನಮ್ಮ ಬಾಳು ನಮ್ಮ ಬದುಕು
ಕಲಾ ದೇವನಿಗೆ ಸಿಂಗರಿಸೋ ಹೂಗಳೂ

ಹಾಡೊಂದು ಹಾಡಬೇಕು ಅದು ಚಿರ ಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರ ಕಾಲ ಕೇಳಬೇಕು
ಅನುರಾಗದ ಮಂಟಪ
ಶುಭ ಮಂಗಳ ಹಾಡಿದೇ
ಅಮ್ಮನ ಎದೆ ಹುಂಬಲ
ಬೆಳದಿಂಗಳಹಾಗೀದೆ
ಬೀಡಿಸಿ ಹರಸುವ ಈ ಕ್ಷಣಗಳೂ
ಸಾವಿರ ಪೂಜೆಯ ಶುಭ ಫಲಗಳೂ
ನಾಳಿನ  ಬಾಳಿನ ಈ ಸಂಗಮಾ ಆ ಆಆ
ತಾಳಿದ ಬಾಳಿಗೆ ಸಿಹಿ ಸಂಭ್ರಮ
ಇ ಹಾಡಲಿ ಅಪಸ್ವರವೆಲ್ಲಿದೇ
ಇ ಬಾಳಲಿ ಅಪಜಯವೆಲ್ಲಿದೆ
ನಮ್ಮ ಬಾಳು ನಮ್ಮ ಬದುಕು
ಕಲಾ ದೇವನಿಗೆ ಸಿಂಗರಿಸೋ ಹೂಗಳೂ

ಹಾಡೊಂದು ಹಾಡಬೇಕು ಅದು ಚಿರ ಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರ ಕಾಲ ಕೇಳಬೇಕು

ಹಾಡೊಂದು ಹಾಡಬೇಕು ಅದು ಚಿರ ಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರ ಕಾಲ ಕೇಳಬೇಕು

ಕೇಳಿಸದೆ ಕಲ್ಲು ಕಲ್ಲಿನಲಿ

ಚಿತ್ರ: ಬೆಳ್ಳಿಕಾಲುಂಗುರ
ಸಂಗೀತ : ಹಂಸಲೇಖ
ಗಾಯಕರು : ಎಸ್.ಪಿ.ಬಿ
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ, ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು….
ಭೂರಮೆಯೇ ಆಧಾರ
ಈ ಕಲೆಯೇ ಸಿಂಗಾರ
ಬಂಗಾರ ತೇರೇರಿ
ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ
ಇಂದಿಗೂ ಜೀವಂತ
ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ
ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕರೆ ನೀಡಿದೆ
ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು |
ಗಾಳಿಯೇ ಆವೇಶ
ಮೇಘವೇ ಸಂದೇಶ
ಪ್ರೇಮಕೆ ಸಂಕೇತ
ಹೊಂಬಣ್ಣದಾಕಾಶ
ಋತು ಋತುಗಳು ನಿನ್ನ ಕಾದಿವೆ
ನೀನಿರೆ ರಂಗೋಲಿ
ಸಂಗಾತಿ ಸುವ್ವಾಲಿ
ನವರಸವು ಮೈತಾಳಿ
ಜೀವನದ ಜೋಕಾಲಿ
ಯುಗ ಯುಗಗಳು ನಿನ್ನ ಕಾಯುವೆ
ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು |
ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು….

ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೊಳ ಮರಿಬೇಡ

ಚಿತ್ರ:-ತುತ್ತಾಮುತ್ತಾ(1996)
ಸಾಹಿತ್ಯ-ಸಂಗೀತ:-ಹಂಸಲೇಖ
ಗಾಯಕರು:-ಉನ್ನಿ ಕೃಷ್ಣನ್
ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೊಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದೊನೆ ತತ್ವಜ್ಞಾನಿ ಅಂತಾ ತಿಳಿಬೇಡ
ತಾಯಿ ಇಲ್ಲದೆ ಜಗವಿಲ್ಲ ಮಡದಿ ಇಲ್ಲದೆ ಬಾಳಿಲ್ಲ
ತುತ್ತಾ ಮುತ್ತಾ ಗೊತ್ತಾ ....ಅತ್ತ ಇತ್ತ ಎತ್ತ
ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೊಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದೊನೆ ತತ್ವಜ್ಞಾನಿ ಅಂತಾ ತಿಳಿಬೇಡ
ಮಗುವು ಅತ್ತರೆ ತಾನತ್ತು ಹಾಲನೆರೆದವಳು ತಾಯಲ್ಲವೇ
ನಮಗಾಗಿ ಜೀವವೇ ತೇದಿಲ್ಲವೇ
ತಾಳಿ ಪಾಶಕೆ ತಲೆಕೊಟ್ಟು ಗಂಡಿನರ್ದವೇ ತಾನಾಗಿ
ಸತಿ ನಮಗೆ ಮೀಸಲೆ ಆಗಿಲ್ಲವೇ
ಇಬ್ಬರೂ ಕಂಡಿಹರು ಗಂಡಿನ ಬೆತ್ತಲೆಯ
ಇಬ್ಬರೂ ಬೆಳಗುವರು ಹೃದಯದ ಕತ್ತಲೆಯ
ತಾಯಿ ಇಲ್ಲದೆ ಬಲವಿಲ್ಲ ಮಡದಿ ಇಲ್ಲದೆ ಛಲವಿಲ್ಲ
ತುತ್ತಾ ಮುತ್ತಾ ಗೊತ್ತಾ ....ಅತ್ತ ಇತ್ತ ಎತ್ತ
ಕುಂತಿ ಇಲ್ಲದೆ ಪಾಂಡವರೇ ದ್ರೌಪದಿ ಇಲ್ಲದೆ ಭಾರತವೇ
ಗಂಡು ಇಬ್ಬರ ಸ್ವತ್ತಲ್ಲವೇ
ನಮ್ಮ ಜನ್ಮಕೆ ಈ ಹೆಣ್ಣು ನಮ್ಮ ಮರಿಯ ಜನ್ಮಕೆ ಆ ಹೆಣ್ಣು
ನಮಗೆರಡು ಕಣ್ಣು ಎರಡು ಹೆಣ್ಣು
ಮೂಡಣದ ಸೂರ್ಯ ತಾಯಿಯ ಮಡಿಲಂತೆ
ಪಡುವಣ ಸೂರ್ಯ ಮಡದಿಯ ಮಡಿಲಂತೆ
ತಾಯಿ ಇಲ್ಲದೆ ತವರಿಲ್ಲ ಮಡದಿ ಇಲ್ಲದೆ ಮನೆಯಿಲ್ಲ
ತುತ್ತಾ ಮುತ್ತಾ ಗೊತ್ತಾ ....ಅತ್ತ ಇತ್ತ ಎತ್ತ
ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೊಳ ಮರಿಬೇಡ
ಆಟೋ ಲಾರಿ ಹಿಂದೆ ಬರೆದೊನೆ ತತ್ವಜ್ಞಾನಿ ಅಂತಾ ತಿಳಿಬೇಡ
ತುತ್ತಾ ಮುತ್ತಾ ಗೊತ್ತಾ ....ಅತ್ತ ಇತ್ತ ಎತ್ತ

Tuesday 29 November 2016

ದೀಪದಿಂದ ದೀಪವ

ಚಿತ್ರ: ನಂಜುಂಡಿ
ಸಂಗೀತ : ಹಂಸಲೇಖ

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಿರೋ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...
ಮನಸ್ಸಿನಿಂದ ಮನಸನು ಬೆಳಗಬೇಕು ಮಾನವ...
ಮೇಲು ಕೀಳು ಭೇದ ನಿಲ್ಲಲೂ...
ಭೇದವಿಲ್ಲ ಬೆಂಕಿಗೆ.. ದ್ವೇಷವಿಲ್ಲ ಬೆಳಕಿಗೆ..
ನೀ.. ತಿಳಿಯೋ...  ನೀ.. ತಿಳಿಯೋ..

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ..
ಓ..ಹೋ... ಹೋ... ಹೊ.. ಒಒಓ... ಓ...ಹೋ... ಹೋ... ಹೊ... ಒಒಓ...
ಓ..ಹೋ... ಹೋ... ಹೊ.. ಒಒಓ... ಓ...ಹೋ... ಹೋ... ಹೊ... ಒಒಓ...

ಆಸೆ ಹಿಂದೆ  ದುಖಃ ಎಂದರೂ...
ರಾತ್ರಿ ಹಿಂದೆ ಹಗಲು ಎಂದರೂ...
ವೇಷವೆಂದೂ ಹೊರೆ ಎಂದರೂ...
ಹಬ್ಬ ಅದಕೆ ಹೆಗಲು ಎಂದರೂ....
ಎರಡು ಮುಖದ ನಮ್ಮ ಜನುಮದ.. ವೇಷಾವಳಿ...
ಕಳೆದು ಹಾಲ್ ಬೆಳಕ ಕುಡಿವುದೇ.. ದೀಪಾವಳಿ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...
ಭೇದವಿಲ್ಲ ಬೆಂಕಿಗೆ.. ದ್ವೇಷವಿಲ್ಲ ಬೆಳಕಿಗೆ...
ನೀ.. ತಿಳಿಯೋ... ನೀ.. ತಿಳಿಯೋ...
ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...

ಮಣ್ಣಿನಿಂದ ಹಣತೆಯಾದರೇ...
ಬೀಜದಿಂದ ಎಣ್ಣೆಯಾಯಿತು....
ಅರಳೆಯಿಂದ ಬತ್ತಿಯಾದರೇ....
ಸುಡುವ ಬೆಂಕಿ ಜ್ಯೋತಿಯಾಯಿತು...
ನಂದಿಸುವುದು ತುಂಬಾ ಸುಲಭವೋ....
ಹೇ... ಮಾನವ...
ಆನಂದಿಸುವುದು ತುಂಬಾ ಕಠಿಣವೊ...
ಹೇ.. ದಾನವ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...
ಭೇದವಿಲ್ಲ ಬೆಂಕಿಗೆ.. ದ್ವೇಷವಿಲ್ಲ ಬೆಳಕಿಗೆ...
ನೀ.. ತಿಳಿಯೋ...  ನೀ.. ತಿಳಿಯೋ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ....

ತಂಗಿ ನಿನ್ನ ನಗುವಲೊಂದು

ಚಿತ್ರ : ತವರಿಗೆ ಬಾ ತಂಗಿ
ಸಾಹಿತ್ಯ : "ನಾದಬ್ರಹ್ಮ" ಹಂಸಲೇಖ
ಗಾಯಕರು : ಮಧು ಬಾಲಕೃಷ್ಣ

ಬಾರಾ ಬಳೆಗಾರ, ತಾರಾ ಮಂಧಾರ, ಹೊಂಬಾಳೆ ತುಂಬ್ಯಾಳೆ...
ಹೊಂಬಾಳೆ ತುಂಬ್ಯಾಳೆ, ಹಸಿರು ಗಾಜು ಬಳೆಯ,
ತೊಡಿಸಿ ಹಾಡಿ ಹಸೆಯ....

ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ....
ತಂಗಿ ನಿನ್ನ ಕಣ್ಣಲೊಂದು ಪುಟ್ಟ ಕನಸಿದೆ....
ಆ ಕನಸಿಗಾಗಿ ತವರು ಕಾದಿದೆ....
ನೀನು ಆಡಿ ಬೆಳೆದಂಥ ತೊಟ್ಟಿಲಿಲ್ಲಿದೆ, ತೊಟ್ಟಿಲಿಲ್ಲಿದೆ...
ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ, ನೋಡೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....

ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ....

ಅಕ್ಕ-ತಂಗಿಯ ಫಲ, ಮುದ್ದು ಗಂಗೆ ನಾರಿಯ ಫಲ,
ಹೆತ್ತು ತಾರೆ ಚೆದ್ದುಳ್ಳ ಚೆಲುವ ರಾಣಿಯ... ರಾಣಿಯ...

ಸಾವಿರ ನೋವಿರಲಿ, ಚೀರುವ ಚಿಂತಿರಲಿ...
ತವರೆ ಬೆಚ್ಚಗೆ, ಅವರೆ ಮೆಚ್ಚುಗೆ | ಮೊದಲ ಹೆರಿಗೆಗೆ...
ಈ ಸೀತಾಫಲ, ಈ ನಾರಿಫಲ....
ಸೋಕು ಮೆಲ್ಲಗೆ, ಇಂಥ ಕಂದನ | ತಾರೆ ಮಡಿಲಿಗೆ...
ನೀನು ಅತ್ತು ಕುಡಿದ ಬೆಳ್ಳಿ ಲೊಳ್ಳೆ ಇಲ್ಲಿದೆ, ಲೊಳ್ಳೆ ಇಲ್ಲಿದೆ...
ನಿನ್ನ ಮಗುವ ಹಸಿವಿನಳುವ ಕೇಳೆ ಕಾದಿದೆ, ಕೇಳೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....

ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ
ಸೊಂಟಕ್ಕೆ ಬೆಳ್ಳಿ, ದಾರದ ಬೆಳ್ಳಿ ಮಾವ ನೀಡುವ....
ಹಾಲಿನ್ ಕಡಗ, ಹಾಲಿನ್ ಗೆಜ್ಜೇ ಮುಯ್ಯೀ ಮಾಡುವ...
ಶಿರದ ಮ್ಯಾಲೆ ನಿನ್ನ ತೊಟ್ಟಿಲ ಹೊತ್ತು ತಂದು ಕೊಡುವಾ
ಈ ಮಗುವಿಗೆ ನೆರಳಾಗುವ ಆ ತಂದೆಗೆ ಮನವು ಕರಗದೆ...
ಕಣ್ಣ ಕವಿದಿರೋ, ಗ್ರಹಣ ಕಳೆಯದೆ...
ಈ ಮಕ್ಕಳು ಸಂಧಾನದ ದೇವತೆಗಳು...
ಅಪ್ಪ ಎನ್ನುತ, ಅಮ್ಮ ಎನ್ನುತ, ತಂದು ಬೆಸೆವರು....
ಇನ್ನು ನಿನ್ನ ಬಾಳಿಗೆಂದು ದೃಷ್ಟಿಯಾಗದು, ವಿಘ್ನ ಬಾರದು...
ನಿನ್ನ ಮಗುವ ಪುಣ್ಯ ನಿನ್ನ ನೆತ್ತಿ ಕಾವುದು,
ಕುಂಕುಮಾ ನಗುವುದು...
ತಂಗಿ ನಿನ್ನ ಹೆಸರಲಿ, ನಿನ್ನ ಅಣ್ಣನುಸಿರಿದೇ...ಏ...
ಈ ತವರು ಬೆಳಗಲು....

ತಂಗಿ ನಿನ್ನ ಮಗುವಿನಲ್ಲೂ ಒಂದು ನಗುವಿದೆ...
ಆ ನಗುವು ನಮ್ಮ ಅಮ್ಮನಂತಿದೆ...
ತಂಗಿ ನಿನ್ನ ಮಗುವೇ ನಮ್ಮ ತಾಯಿ ಆಗಿದೆ...
ಈ ತವರ ಬಳ್ಳಿ ಕಲ್ಪವಾಗಿದೆ...
ನೀನು ಆಡಿ ಬೆಳೆದಂಥ ತೊಟ್ಟಿಲಿಲ್ಲಿದೆ, ತೊಟ್ಟಿಲಿಲ್ಲಿದೆ...
ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ, ನೋಡೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....

ರೈತ ರೈತ ರೈತ

ಚಿತ್ರ : ದೊರೆ..... (1995)
ಸಾಹಿತ್ಯ : "ನಾದಬ್ರಹ್ಮ" ಹಂಸಲೇಖ.....♫♪♫
ಗಾಯಕರು : ಡಾ|| ರಾಜಕುಮಾರ್.....
-----------------------------------------------
ರೈತ ರೈತ ರೈತ, ಅನ್ನ ಕೋಡುವ ದಾತಾ..
ಜೀತ ಜೀತ ಜೀತ, ದೊರೆಗಳು ಬೇಳಸಿದ ಭೂತ..
ಬೇಲಿಯ, ಹೊರಗಡೆ, ಬಂದಾ ಹೂವ.....
ರೈತನ, ತೋಳಿಗೆ, ಕೋಡೋ ಜೀವ.....


ರೈತ ರೈತ ರೈತ, ಅನ್ನ ಕೋಡುವ ದಾತಾ..
ಜೀತ ಜೀತ ಜೀತ, ದೊರೆಗಳು ಬೇಳಸಿದ ಭೂತ..
ಬೇಲಿಯ, ಹೊರಗಡೆ, ಬಂದಾ ಹೂವ.....
ರೈತನ, ತೋಳಿಗೆ, ಕೋಡೋ ಜೀವ.....


ಜಗದಾ ದೃಷ್ಟಿಯಲ್ಲಿ, ಎಲ್ಲೋ ಲೋಪ ಉಂಟು....
ಸುಖವಾ ಹಂಚುವಲ್ಲಿ, ಏನೋ ದೋಷ ಉಂಟು....
ದಣಿಯೋನು ಧಣಿಯೇ ಆಗಿಲ್ಲ, ಆಳೋನು ಆಳು ಆಗಿಲ್ಲ...
ಪ್ರಜೆಗೆ ರಾಜಯೋಗ, ಅವನೇ ದೊರೆಯು ಈಗಾ..
ಲೋಪ ದೋಷವನ್ನು, ತಿದ್ದಲೇ ಬೇಕು ಬೇಗಾ..
ದುಡಿಯೋನ ಬೆನ್ನಿನಾ ಬೇವರು ||
ಲೋಕಾನಾ ಕಾಯುವಾ ಉಸಿರು..
ರೈತ ನೀನೇ ಸಿಂಹ.....
ರೈತ ನೀನೇ ಸಿಂಹ.....
ರೈತ ನೀನೇ ಸಿಂಹ.....
ಎಂಬ ಬರಹ ಬದಲಿಸಿ ಬ್ರಹ್ಮ.....


ರೈತ ರೈತ ರೈತ, ಅನ್ನ ಕೋಡುವ ದಾತಾ..
ಜೀತ ಜೀತ ಜೀತ, ದೊರೆಗಳು ಬೇಳಸಿದ ಭೂತ..
ಬೇಲಿಯ, ಹೊರಗಡೆ, ಬಂದಾ ಹೂವ.....
ರೈತನ, ತೋಳಿಗೆ, ಕೋಡೋ ಜೀವ.....


ಏಳೋ ಮೇಲೆ ಇನ್ನೂ, ಬಾಗೋ ವರೆಗೆ ಬೆನ್ನೂ...
ಕೇಳೋ ನ್ಯಾಯವಿನ್ನೂ, ನೆಲವೆ ನಮಗೆ ಹೊನ್ನು...
ಆಳೋನು ನಾವು ಕೆಲಕಾಲ, ಹಿಡಿ ಬೇಡ ಧಣಿಯ ಕೈ ಕಾಲ..
ಸುಖದಾ ಹಳೆಯ ಕನಸು, ಮಾಡೋ ಇಂದು ನನಸು..
ವಿಜಯ, ವೀರ್ರ್ಯ, ಸೂರ್ರ್ಯ |
ಜಗದ ಹಿಂದೆ ಇರಿಸು..
ಕೈಗೆತ್ತಿ ಕೊಳ್ಳು ನೊಗ ಬಿಲ್ಲು...
ಹೂಳೆತ್ತಿ ನುಗ್ಗಿ ನೀ ನಿಲ್ಲು.....
ರೈತ ನೀನೇ ದೇಶ.....
ರೈತ ನೀನೇ ದೇಶ.....
ರೈತ ನೀನೇ ದೇಶ.....
ನಿನ್ನ ಕಾಯಕ ಮೆಚ್ಚುವ ಈಶ......


ರೈತ ರೈತ ರೈತ, ಅನ್ನ ಕೋಡುವ ದಾತಾ..
ಜೀತ ಜೀತ ಜೀತ, ದೊರೆಗಳು ಬೇಳಸಿದ ಭೂತ..
ಬೇಲಿಯ, ಹೊರಗಡೆ, ಬಂದಾ ಹೂವ.....
ರೈತನ, ತೋಳಿಗೆ, ಕೋಡೋ ಜೀವ.....

ಒಂದೆ ಉಸಿರಂತೆ

ಚಿತ್ರ : ಸ್ನೇಹಲೋಕ (೧೯೯೯)
ಸಾಹಿತ್ಯ : ಹಂಸಲೇಖ...
ಗಾಯಕರು : ರಾಜೇಶ್ ಕೃಷ್ಣನ್... ಮತ್ತು ಚಿತ್ರಾ...

ಹಾಡು ಹಾಡು ಒಂದು ಹಾಡು ಹಾಡು....ಹೂಂ,,,ಹೂಂ....
ಹಾಡದಿದ್ದರೇ ನನ್ನ ಹಾಡು ಕೇಳು....ಹೂಂ,,,ಹೂಂ....
ಉಸಿರು ಕಟ್ಟಿ ಹಾಡುವೆ ಈ ಹಾಡು...ಹೂಂ,,,ಹೂಂ....
ಈ ಉಸಿರು ನಿಂತರೇ ನಿನಗೆ ನಷ್ಟ ನೋಡು....ಹೂಂ,,,ಹೂಂ....

ಒಂದೇ ಉಸಿರಂತೆ ಇನ್ನು ನಾನು ನೀನು...
ನಾನು ನೀನು ಬೇರೇ ಏನು, ನೀನೇ ನಾನು ನಾನೇ ನೀನು...
ಒಂದೇ ಕಡಲಂತೆ ಇನ್ನು ನಾನು ನೀನು...
ತೀರ ಸಾಗರ ಬೇರೇ ಏನು, ಬೇರೇ ಅಂದರೆ ಅರ್ಥ ಏನು...
ಹಾಡೆ ಕೋಗಿಲೇ ಒಂದೇ ಉಸಿರಿನಲಿ,
ಚಂದಿರನನ್ನು ಚಂದಿರನೆನ್ನಲು ಅಂಜಿಕೆ ಏನು, ಅಳುಕಿನ್ನೆನು....
ಕೇಳೆ ಕೋಗಿಲೆ ನನ್ನ ಕೊರಳಿನಲಿ,
ನಿನ್ನ ಹೆಸರೇ ಕೊನೆಯಮಾತು, ಕೊನೆಯನಾದ, ಕೊನೆಯವೇದ...
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ, ಕೊಡುವೆ ನನ್ನ ಪ್ರಾಣ ಪ್ರೀತಿ....

ಹೂಂ....ಓ....ಒಂದೇ ಉಸಿರಂತೆ ಇನ್ನು ನಾನು ನೀನು...
ನಾನು ನೀನು ಅಲ್ಲ ಇನ್ನು, ನೀನೇ ನಾನು ನಾನೇ ನೀನು...
ಎತ್ತ ಇತ್ತೋ ಎತ್ತ ಬಂತೋ ಕಾಣೇ ನಾನು...
ಒಂದೇ ಧೈರ್ಯ ಒಂದೇ ಹುರುಪು, ಹಾಡೋ ಹಂಬಲ ತಂದೇ ನೀನು...
ಕೋಟಿ ಕೋಗಿಲೇ ಒಂದೇ ಉಸಿರಿನಲಿ,
ಪ್ರೀತಿ ಮಾಡು ಪ್ರೀತಿಯ ಬೇಡು ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ...
ಅಂತರಂಗದಾ ಸಹ್ಯಾದ್ರಿ ಮಡಿಲಲ್ಲಿ,
ನೂರು ನವಿಲಾಗಿ ಹೃದಯ ಆಡಿದೆ ಆಡಿದೆ ಕುಣಿದಿದೆ ಕುಣಿದಿದೆ...
ಕಾದಿದೆ ಕಾದಿದೆ ಪ್ರೀತಿಯ ನೀಡಲು ಒಂದೇ ಉಸಿರಲಿ ನಿಂತಿದೆ ನಿಂತಿದೆ....

ಓ ಓ ಓ ಓ ಓ ಹೋ.....
ಇಂದು ಪ್ರೀತಿಯು ಹಾಡಿದ ಪರ್ವದಿನ, ಆ....
ಇಂದು ಪ್ರೀತಿಯು ಹಾಡಿದ ಪರ್ವದಿನ, ಅದ ಕೇಳಲು ದಕ್ಕಿದ ಪುಣ್ಯದಿನ...
ಅದು ಬೆಳಕಂತೆ ಮುಟ್ಟಲಾಗದಂತೆ, ಬೆಳದಿಂಗಳಂತೆ ಅಪ್ಪಲಾಗದಂತೆ...
ಗೆಳತಿ ಗೆಳತಿ ಪ್ರೀತಿಯ ಗೆಳತಿ, ನೀನೇ ನನ್ನ ಈ ಪ್ರೀತಿಯ ಓಡತಿ...
ಬ್ರಹ್ಮ್ ಬಾರಿ ಜಾಣ ಜಾಣ, ನಾರಿಲಿಟ್ಟ ಪ್ರೀತಿ ಪ್ರಾಣ...
ನಾರಿ ನೀನೇ ಪ್ರೀತಿಯ ರೂಪ, ನೀನೇ ತಾನೇ ಹೃದಯದ ದೀಪ...
ಹೊತ್ತಿಕೊಂಡಿತ್ತಮ್ಮ ನಮ್ಮ ಪ್ರೀತಿ ಜೋತಿ,
ಗಾಳಿ ಅಲ್ಲ, ಮಳೆಯು ಅಲ್ಲ, ಭೂಮಿ ಬಿರಿದರು ಆರೋದಿಲ್ಲ...
ಒಂದೇ ದೀಪದಂತೆ ಇನ್ನು ನಾನು ನೀನು...
ಎಣ್ಣೆ ದಾರ ಬೇರೇ ಏನು, ಬೇರೇ ಅಂದರೆ ಅರ್ಥ ಏನು...
ಚಂದಾಮಾಮನೇ ನೋಡೋ ನಮ್ಮೀಬ್ಬರ,
ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗು ಹೋಲಿಸು...
ಚಂದಾಮಾಮನೇ ಕೇಳೋ ನಮ್ಮ ಆಣೆಯಾ,
ನಮ್ಮಿಂದಂತು ಪ್ರೀತಿಗೆ ದ್ರೋಹ ಆಗದು ಆಗದು ಎಂದಿಗೂ ಆಗದು,
ಆಗುವುದಾದರೇ ಇಂದೇ ಆಗಲಿ, ಆಗುವ ಮೊದಲೇ ಪ್ರಾಣ ಹೋಗಲಿ...

ಆ ಆ ಆ ಆ ಆ ಆ ಆ......ಹಾ ಆ....
ಚಂದನ ಚಂದನ ಕಂಪಿನ ಚಂದನ, ನಿನ್ನ ಈ ಉಸಿರಿನ ಕಸ್ತೂರಿ ಸಿಂಚನ...
ಕಂಪನ ಕಂಪನ ಇಂಪಿನ ಕಂಪನ, ನಿನ್ನ ಈ ಮಾತಿನ ಅಮೃತ ಸಿಂಚನ...
ಗಾಯನ ಗಾಯನ ನಿನ್ನ ಈ ಪ್ರೀತಿಯ ಜೀವನ ಚೇತನ ಗಾಯನ ಗಾಯನ...
ಅಯನಾ ಅಯನಾ ನಿನ್ನ ನೆರಳಲಿ ನನ್ನೀ ಜನುಮದ ಪ್ರೇಮಾಯಾಣ...
ನಡೆ ಕಲ್ಲಿರಲಿ, ಕಲ್ಲು ಮುಳ್ಳಿರಲೀ....
ಕಲ್ಲಿರಲಿ, ಕಲ್ಲು ಮುಳ್ಳಿರಲ, ನಡೆ ಮಳೆ ಇರಲಿ, ಮಳೆ ಬಿಸಿಲಿರಲಿ....
ಪ್ರೇಮಾಯಣಕೆ ನಿನ್ನ ನೆರಳಿರಲಿ, ಜನುಮಾಯಣಕೆ ನಿನ್ನ ತೋಡರಿರಲಿ...
ಭಯವಿಲ್ಲ ಇನ್ನು ಭಯವಿಲ್ಲ, ನನ್ನ ನಿರ್ಧಾರ ಇನ್ನು ನನದಲ್ಲ...
ನನ್ನ ಎದೆಯಲೊಬ್ಬ ಚಂದ್ರಾ, ಬೆಳ್ಳಿ ಬೆಳಕ ತಂದಾ ತಂದಾ...
ಪ್ರೀತಿ ಅಂದರೇನು ಅಂದ, ಕೇಳಿ ತಾನೇ ಉತ್ತರ ತಂದಾ...
ಸ್ವಚ್ಛ ಬಿಳುಪಿನಂತೆ ಇನ್ನು ನಾನು ನೀನು,
ಏಳು ಬಣ್ಣ ಸೇರಿ ಬೀಳೊ ಪಾದ ಹಾಗೇ ನೀನು ನಾನು...
ಒಂದೇ ಹಾಡಿನಂತೆ ಇನ್ನು ನಾನು ನೀನು...
ಎಲ್ಲ ಭಾವ ಕೂಡಿ ಕೊಂಡ ಬಾಳಿನಂತೆ ನಾನು ನೀನು...
ಚಂದಾಮಾಮನೇ ನೋಡೋ ನಮ್ಮೀಬ್ಬರ,
ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗು ಹೋಲಿಸು...
ಚಂದಾಮಾಮನೇ ಕೇಳೋ ನಮ್ಮ ಆಣೆಯಾ,
ನಮ್ಮಿಂದಂತು ಪ್ರೀತಿಗೆ ದ್ರೋಹ ಆಗದು ಆಗದು ಎಂದಿಗೂ ಆಗದು,
ಆಗುವುದಾದರೇ ಇಂದೇ ಆಗಲಿ, ಆಗುವ ಮೊದಲೇ ಪ್ರಾಣ ಹೋಗಲಿ...

ಹೂಂ....ಒಂದೇ ಉಸಿರಂತೆ ಇನ್ನು ನಾನು ನೀನು...
ನಾನು ನೀನು ಬೇರೇ ಏನು, ನೀನೇ ನಾನು ನಾನೇ ನೀನು...
ಒಂದೇ ಕಡಲಂತೆ ಇನ್ನು ನಾನು ನೀನು...
ತೀರ ಸಾಗರ ಬೇರೇ ಏನು, ಬೇರೇ ಅಂದರೆ ಅರ್ಥ ಏನು...
ಹಾಡೆ ಕೋಗಿಲೇ ಒಂದೇ ಉಸಿರಿನಲಿ,
ಚಂದಿರನನ್ನು ಚಂದಿರನೆನ್ನಲು ಅಂಜಿಕೆ ಏನು, ಅಳುಕಿನ್ನೆನು....
ಕೇಳೆ ಕೋಗಿಲೆ ನನ್ನ ಕೊರಳಿನಲಿ,
ನಿನ್ನ ಹೆಸರೇ ಕೊನೆಯಮಾತು, ಕೊನೆಯನಾದ, ಕೊನೆಯವೇದ...
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ, ಕೊಡುವೆ ನನ್ನ ಪ್ರಾಣ ಪ್ರೀತಿ....

ಅಂದವೋ ಅಂದವು ಕನ್ನಡ ನಾಡು

ಚಿತ್ರ : ಮಲ್ಲಿಗೆ ಹೂವೇ
ಸಾಹಿತ್ಯ :  ಹಂಸಲೇಖ
ಗಾಯಕರು : ಕೆ.ಜೆ.ಯೇಸುದಾಸ್ & ಚಿತ್ರ

ಅಂದವೋ ಅಂದವು ಕನ್ನಡ ನಾಡು...ಹೇಹೇ...
ನನ್ನ ಗೂಡು ಅಲ್ಲಿದೆ ನೋಡು...
ಚೆಂದವೋ ಚೆಂದವು ಈ ನನ್ನಯ ಗೂಡು...ಹೇಹೇ...
ನನ್ನ ಹಾಡು ಅಲ್ಲಿದೆ ನೋಡು...
ಕಾವೇರಿ ಹರಿವಳೂ, ನನ್ನ ಮನೆಯ ಅಂಗಳದಲ್ಲಿ...
ಕಸ್ತೂರಿ ಮೆರೆವಳೂ, ನನ್ನ ಮಡದಿ ಮಲ್ಲಿಗೆಯಲ್ಲಿ...

ಅಂದವೋ ಅಂದವು ಕನ್ನಡ ನಾಡು...ಹೇಹೇ...
ನನ್ನ ಗೂಡು ಅಲ್ಲಿದೆ ನೋಡು...

ನನ್ನ ಮನೆಯ ಮುಂದೆ, ಸಹ್ಯಾದ್ರಿ ಗಿರಿಯ ಹಿಂದೆ,
ದಿನವೂ ನೂರು ಶಶಿಯು ಹುಟ್ಟಿ ಬಂದರೂ...
ನನ್ನ ರತಿಯ ಮೊಗವ, ಮರೆಮಾಚದಂಥ ನಗುವ,
ಅವನೆಂದು ತಾರಲಿಲ್ಲವೇ... ಪ್ರಿಯೇ... ಓಹೋ...
ನನ್ನ ಕಣ್ಣ ಮುಂದೆ, ಮರಗಿಡದ ಮಧ್ಯ ಮಧ್ಯ,
ಕೋಟಿ ಪಕ್ಷಿ ಕೂಗು ಕೇಳಿ ಬಂದರೂ...
ನನ್ನ ಚೆಲುವೆ ಹಾಡು, ಅನುರಾಗದಿಂದ ನೋಡು,
ಆ ರಾಗ ನೋಟ ಕಾಣದೆ... ಪ್ರಿಯೇ...ಹೇಹೇ...
ಸಹ್ಯಾದ್ರಿ ಕಾಯ್ವಳೂ, ನನ್ನ ಮನೆಯ ಕರುಣೆಯ ಮೇಲೆ...
ಆಗುಂಬೆ ನಗುವಳೂ, ನನ್ನ ಮಡದಿ ನೊಸಲಿನ ಮೇಲೆ...

ಅಂದವೋ ಅಂದವು ಕನ್ನಡ ನಾಡು...ಹೇಹೇ...
ನನ್ನ ಗೂಡು ಅಲ್ಲಿದೆ ನೋಡು...

ಹೂಯ್ಯಾ ಹೂಯ್ಯಾ, ಹೂಯ್ಯಾ ಹೂಯ್ಯಾ...
ಲಾಲಲಾಲಲಲಾ... ಲಾಲಲಾಲಲಲಾ...ಲಾಲಲಾ...

ನಾಳೆಗಿಂತ ಇಂದೆ ಸಿಹಿಯಾದ ದಿವಸವಂತೆ,
ಇಂದು ನಾಳೆ ಸಿಹಿಯ ಸ್ನೇಹವೆಂಬುದು...
ಅಂತರಾಳವೆಂಬ, ನೇತ್ರಾವತಿಯ ತುಂಬ,
ಈ ಸ್ನೇಹ ಜಲದ ಸೆಲೆಯು ನಿಲ್ಲದೋ...ಹೇಹೇ...
ಉಸಿರು ಎಂಬ ಹಕ್ಕಿ, ಎದೆ ಗೂಡಿನಲ್ಲಿ ಸಿಕ್ಕಿ,
ಕುಹು ಕುಹು ಎಂದರೇನೆ ಜೀವನ...
ಬೆಚ್ಚಗಿರುವ ಮನೆಯ, ತನ್ನ ಇಚ್ಚೆಯರಿವ ಸತಿಯ,
ಸವಿ ಪ್ರೇಮದೊರೆತ ಬಾಳು ಧನ್ಯವೋ...ಹೇಹೇ...
ಈ ನಾಡು ನುಡಿಯಿದು, ನನಗೆ ಎಂದೂ ಕೋಟಿ ರುಪಾಯಿ...
ಈ ಬಾಳ ಗುಡಿಯಲಿ, ನಿಜದ ಮುಂದೆ ನಾನು ಸಿಪಾಯಿ...

ಅಂದವೋ ಅಂದವು ಕನ್ನಡ ನಾಡು... ಓಹೋ...
ನನ್ನ ಗೂಡು ಅಲ್ಲಿದೆ ನೋಡು...
ಚೆಂದವೋ ಚೆಂದವು ಈ ನನ್ನಯ ಗೂಡು... ಓಹೋ...
ನನ್ನ ಹಾಡು ಅಲ್ಲಿದೆ ನೋಡು...
ಕಾವೇರಿ ಹರಿವಳೂ, ನನ್ನ ಮನೆಯ ಅಂಗಳದಲ್ಲಿ...
ಕಸ್ತೂರಿ ಮೆರೆವಳೂ, ನನ್ನ ಮಡದಿ ಮಲ್ಲಿಗೆಯಲ್ಲಿ...

ಜಗ್ಗದು ಜಗ್ಗದು ಯಾರಿಗು ಜಗ್ಗದು ಇಂಡಿಯಾ

ಚಿತ್ರ : ಹಗಲುವೇಷ....(2000)
ಸಾಹಿತ್ಯ : ಬರಗೂರು ರಾಮಚಂದ್ರಪ್ಪ
ಗಾಯಕರು : ಡಾ|| ರಾಜಕುಮಾರ್.&.ಸಂಗಡಿಗರು

ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ..
ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ...
ಬೆವರಿನ ಬೆಳಕಿನ ಬೆಟ್ಟ ಇಂಡಿಯಾ,
ದುಡಿಮೆಯ ಹಿರಿಮೆಯ ಗೆದ್ದ ಇಂಡಿಯಾ...

ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...
ಅಗ್ಗದ ಅರಸರಿಗೆಂದಿಗೂ ಕುಗ್ಗದೂ ಇಂಡಿಯಾ...
ನಮ್ಮ ಇಂಡಿಯಾ, ಬೆವರಿನ ಇಂಡಿಯಾ...
ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ...||

ಬಂಡೆ ಬಂಡೆಯ ಮೇಲೆ, ಗಂಡು ಅರಳಿದ ಲೀಲೆ...
ಗುಂಡು ಹೊಡೆಯೋ ಗಂಡು, ಪಳಗಿ ನಿಂತ ಬೆಂಡು...
ಬಿಡುಗಡೆಯ ಬೆಳಕನ್ನು ಚೆಲ್ಲೋ...ಓಓಓಓಓ..ಓಓಓ..
ಬಿಡುಗಡೆಯ ಬೆಳಕನ್ನು ಚೆಲ್ಲೋ, ಬಂಡಾಯದ ಗುಂಡಿಗೆ... ||ಜಗ್ಗದು ಜಗ್ಗದು||

ಕೋಟೆ ಕೊತ್ತಳಕಾದ, ಕೋಡ ಹಿಡಿ ಪದ ಹಣತೆ...
ನಾಡಿಗೆ ದಿನವು ದುಡಿದ, ಕೂಲಿ ಕಂಬಳಿ ಜನತೆ...
ಸ್ವಾತಂತ್ರ್ಯದ ಹಕ್ಕನ್ನು ಕೇಳಿ...ಓಓಓಓಓ...ಓಓಓ...
ಸ್ವಾತಂತ್ರ್ಯದ ಹಕ್ಕನ್ನು ಕೇಳಿ, ಎದ್ದೂ ನಿಂತ ಜನತೆ... ||ಜಗ್ಗದು ಜಗ್ಗದು||

ಹಾಳೆ ಹಾಳೇಯ ಮೇಲೆ, ಮಿಂಚು ಮಾತಿನ ನಾಳೆ...
ಜನಪರರ ಕೊರಳಲ್ಲಿ, ಬಿಡುಗಡೆಯ ರಣ ಕಹಳೆ...
ಮೂರು ಬಣ್ಣದ ಬಾವುಟ ಹಿಡಿದ..
ಆಆಆಆಆ...ಆಆಆ.. ಓಓಓಓಓ...ಓಓಓ...
ಮೂರು ಬಣ್ಣದ ಬಾವುಟ ಹಿಡಿದ, ಸಿಡಿಲ ಮುತ್ತಿನ ಮಾಲೆ...   ||ಜಗ್ಗದು ಜಗ್ಗದು||

ಅನಾಥ ಮಗುವಾದೆ ನಾನು

ಚಿತ್ರ: ಹೊಸಜೀವನ
ಸಂಗೀತ : ಹಂಸಲೇಖ
ಗಾಯಕರು : ಎಸ್.ಪಿ.ಬಿ

ಅನಾಥ ಮಗುವಾದೆ ನಾನು,
ಅಪ್ಪನು ಅಮ್ಮನು ಇಲ್ಲ,
ಅಣ್ಣನು ತಮ್ಮನು ಇಲ್ಲ.

ಬಿಕಾರಿ ದೊರೆಯಾದೆ ನಾನು,
ಅತ್ತರೆ ಮುದ್ದಿಸೋರಿಲ್ಲ,
ಸತ್ತರೆ ಹೊದ್ದಿಸೋರಿಲ್ಲ.

ಎಂಜಲೇ ಮ್ರುಷ್ಟಾನ್ನವಯ್ತು,
ಬೈಗಳೇ ಮೈಗೂಡಿ ಹೋಯ್ತು,
ಈ ಮನಸೇ ಕಲ್ಲಾಗಿ ಹೋಯ್ತು.      |ಅನಾಥ|

ಬೀದಿಗೆ ಒಂದು, ನಾಯಿ ಕಾವಲಂತೆ,
ನಾಯಿಗೂ ಒಂದು ರೊಟ್ಟಿ ಮೀಸಲಂತೆ,
ನಾಯಿಗೂ ಹೀನವಾದೆನ?

ಮಾಳಿಗೆಗೆ ಒಂದು, ಬೆಕ್ಕು ಕಾವಲಂತೆ,
ಬೆಕ್ಕಿಗೂ ನಿತ್ಯ, ಹಾಲು ತುಪ್ಪವಂತೆ,
ಬೆಕ್ಕಿಗಿಂತ ಕೆಟ್ಟ ಶಕುನಾನ?

ತಿಂದೊರು ಎಲೆಯ ಬಿಸಾಡೋ ಹಾಗೆ, ಹೆತ್ತೋಳು ನನ್ನ ಎಸೆದಾಯ್ತು.
ಸತ್ತೋರ ಎಡೆಯ ಕಾಗೆಗೆ ಇರಿಸಿ, ಹೆತ್ತೋರ ಕೂಗಿ ಕರೆದಾಯ್ತು,
ಉತ್ತರ ಇಲ್ಲ, ಪ್ರಶ್ನೆಯೇ ಎಲ್ಲ, ಕೇಳೋ ದೇವನೇ.      |ಅನಾಥ|

ಹುಟ್ಟೋ ಮಕ್ಕಳೆಲ್ಲ ತುಗೋ ತೊಟ್ಟಿಲಲ್ಲಿ,
ನನ್ನನಿಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ,
ನಾನು ಏನು ಪಾಪ ಮಾಡಿದೆ?

ಅರ್ಧ ರಾತ್ರಿಯಲ್ಲಿ, ಅರ್ಧ ನಿದ್ದೆಯಲ್ಲಿ,
ತಾಯಿ ಹಾಲು ಎಲ್ಲಿ? ಲಾಲಿ ಹಾಡು ಎಲ್ಲಿ?
ನಾನು ಯಾವ ದ್ರೋಹ ಮಾಡಿದೆ?

ಭೂಮಿಯ ತುಂಬ ಅನಾತರೆಂಬ ಕೊಟ್ಯನು ಕೋಟಿ ಕೂಗು ಇದೆ,
ಗ್ರಹಚಾರ ಬರಿಯೋ ಆ ಬ್ರಹ್ಮ ನಿನಗೆ, ಎಂದೆಂದೂ ಅವರ ಶಾಪವಿದೆ.
ಉತ್ತರ ಇಲ್ಲ, ಪ್ರಶ್ನೆಯೇ ಎಲ್ಲ, ಕೇಳೋ ದೇವನೇ.   |ಅನಾಥ|

ಬಿಕಾರಿ ದೊರೆಯಾದೆ ನಾನು,
ಅತ್ತರೆ ಮುದ್ದಿಸೋರಿಲ್ಲ,
ಸತ್ತರೆ ಹೊದ್ದಿಸೋರಿಲ್ಲ.
ಎಂಜಲೇ ಮ್ರುಷ್ಟಾನ್ನವಯ್ತು,
ಬೈಗಳೇ ಮೈಗೂಡಿ ಹೋಯ್ತು,
ಈ ಮನಸೇ ಕಲ್ಲಾಗಿ ಹೋಯ್ತು.

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ಚಿತ್ರ : ಬೆಳ್ಳಿಕಾಲುಂಗುರ
ಸಂಗೀತ : ಹಂಸಲೇಖ
ಗಾಯಕಿ : ಎಸ್ ಜಾನಕಿ

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೊತೆ ಎಂದು ನಾನಿರುವೆ ನಿನ್ನಾಣೆ
ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು
ಚಿಂತೆಯ ಹಿಂದೆಯೆ ಸಂತಸ ಇರಲು

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ಚಿಂತೆಯಲ್ಲಿ ನಿನ್ನ ಮನ ದೂಡಿದರೆ ನನ್ನಾಣೆ
ನೋವಿನ ಬಾಳಿಗೆ ಧೈರ್ಯವೆ ಗೆಳೆಯ
ಪ್ರೇಮದ ಜೋಡಿಗೆ ತಾಕದು ಪ್ರಳಯ

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೊತೆ ಎಂದು ನಾನಿರುವೆ ನಿನ್ನಾಣೆ

ದಾಹ ನೀಗೊ ಗಂಗೆಯೆ ದಾಹ ಎಂದು ಕುಂತರೆ
ಸುಟ್ಟು ಹಾಕೊ ಬೆಂಕಿಯೆ ತನ್ನ ತಾನೆ ಸುಟ್ಟರೆ
ದಾರಿ ತೊರೊ ನಾಯಕ ಒಂಟಿ ಎಂದುಕೊಂಡರೆ
ಧೈರ್ಯ ಹೇಳೊ ಗುಂಡಿಗೆ ಮೂಕವಾಗಿ ಹೋದರೆ
ಸೂರ್ಯನಿಲ್ಲ ಪೂರ್ವದಲಿ ಚಂದ್ರನಿಲ್ಲ ರಾತ್ರಿಯಲಿ
ದಾರಿ ಇಲ್ಲ ಕಾಡಿನಲ್ಲಿ ಆಸೆ ಇಲ್ಲ ಬಾಳಿನಲಿ
ನಂಬಿಕೆ ತಾಳುವ ಅಂಜಿಕೆ ನೀಗುವ
ಶೋಧನೆ ಸಮಯ ಚಿಂತಿಸಿ ಗೆಲ್ಲುವ

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೊತೆ ಎಂದು ನಾನಿರುವೆ ನಿನ್ನಾಣೆ

ಮೂಡಣದಿ ಮೂಡಿ ಬಾ ಸಿಂಧೂರವೆ ಆಗಿ ಬಾ
ಜೀವಧಾರೆ ಆಗಿ ಬಾ ಪ್ರೇಮಪುಷ್ಪ ಸೇರು ಬಾ
ಬಾನಗಲ ತುಂಬಿ ಬಾ ಆಸೆಗಳ ತುಂಬು ಬಾ
ಸಿಂಗಾರವೆ ತೇಲಿ ಬಾ ಸಂತೋಷವ ನೀಡು ಬಾ
ಪ್ರೇಮದಾಸೆ ನನ್ನ ನಿನ್ನ ಬಂಧಿಸಿದೆ ನನ್ನಾಣೆ
ಸಂತಸದ ಕಣ್ಣ ರೆಪ್ಪೆ ಸಂಧಿಸಿದೆ ನನ್ನಾಣೆ

ದೇವರ ಗುಡಿಗು ಬಿನ್ನಗಳಿರಲು
ಬಾಳಿನ ನಡೆಗು ಅಡ್ಡಿಗಳಿರಲು
ಭೂಮಿಯಾಗಿ ನಾನಿರುವೆ ಚಿಂತೆ ಬೇಡ ನನ್ನಾಣೆ
ನಿನ್ನ ನೋವ ಮೆರುಗಿರಿಯ ನಾ ಹೊರುವೆ ನಿನ್ನಾಣೆ