Thursday 1 December 2016

ಮಾಮ ಮಾಮ ಚಂದಮಾಮ

ಚಿತ್ರ: ಬೆಳ್ಳಿಕಾಲುಂಗುರ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ  & ಕೆ. ಎಸ್. ಚಿತ್ರ

ಮಾಮ ಮಾಮ ಚಂದಮಾಮ
ಚಂದವಳ್ಳಿ ಹೆಣ್ಣುನಾನು ಚಂದವೇನು ನಿನಗೆ ನಾನು
ರಾಮ ರಾಮ ಗೊಂಬೆ ರಾಮ
ಕೋಡಿಬೀಳೋ ಕೆರೆಯಹಾಗೆ ಬಂದುಸೇರೋ ಕಣಿವೆಯಾಗೆ

ಮೋಟುದ್ದ ಜೆಡೆಯನು ನಾ ಈಟುದ್ದ ಹೆಣೆದೆನು
ಸ್ಯಾವಂತಿ ಮುಡಿದೆನು ಚಿನ್ನ
ಹಾಲ್ಗೆನ್ನೆಗರಿಷಿಣ ಕೈಗೋರಂಟಿ ಬರೆಸಿ ನಾ
ಹಾಲ್ಕಾಸಿಕಾದೆ ನಾ ನಿನ್ನ
ರಾತ್ರಿ ಪೂರಾ ಕಾದು ಕಾದು ಯವ್ವಿ ಯವ್ವಿಯೊ
ಕಾಣ್ತವಲ್ಲೋ ನಾಲ್ಕುಐದು ಯವ್ವಿ ಯವ್ವಿಯೊ
ಯಾಕೆ ಕುಂತೆ ಏನು ಚಿಂತೆ ಪ್ರೀತಿಸೊ ನನ್ನ

ಮಾಮ ಮಾಮ ಚಂದಮಾಮ
ಬಂದನೋಡು ಗೊಂಬೆರಾಮ ತಂದನೋಡು ಪ್ರೀತಿಪ್ರೇಮ
ಮಾಮ ಮಾಮ ಚಂದಮಾಮ
ಬಂದನೋಡು ಗೊಂಬೆರಾಮ ತಂದನೋಡು ಪ್ರೀತಿಪ್ರೇಮ

ಮೈಯ್ಯಾಗೆ ಕಚಗುಳಿ ಇದೇನಪ್ಪೊ ಚಳವಳಿ
ನಿಂದೇನ ಬಳುವಳಿ ಗೆಳೆಯ
ಕಾಲಿಂದ ಬಿರ ಬಿರ ತಲೆಗೇರೈತಿ ಹರ ಹರ
ಈ ಮತ್ತು ನರ ನರ ಗೆಳತಿ
ಮಿಂಚು ಮಿಂಚು ಕಣ್ಣಿನಂಚು ಯವ್ವಿ ಯವ್ವಿಯೊ
ಮೈಯ್ಯಸೋಕಿ ಕಾದ ಹೆಂಚು ಯವ್ವಿ ಯವ್ವಿಯೊ
ಸೂತ್ರವಲ್ಲ ತಂತ್ರವಲ್ಲ ಪ್ರೇಮದ ಮಂತ್ರ

ಮಾಮ ಮಾಮ ಚಂದಮಾಮ
ಚಂದವಳ್ಳಿ ಹೆಣ್ಣುನಾನು ಚಂದವೇನು ನಿನಗೆ ನಾನು

ಕಾಡೆಲ್ಲಾ ಝಗ ಮಗ ಸಿಂಗಾರ ನಮ್ಮದುಗೆಗ
ಮೈಯೆಲ್ಲಾ ವಾಲಗ ಊದು
ಇದೇನಯ್ಯ ಗಗಮಗ ಇವೆಲ್ಲಾನೂ ಹೊಸಗಿಗ
ಏನೇನೊ ಸೋಜಿಗ ಜಾದೂ
ಈಟು ಹೊತ್ತು ಎಲ್ಲಿ ಇತ್ತು ಯವ್ವಿ ಯವ್ವಿಯೊ
ಹೊತ್ತು ಗೊತ್ತು ಜೋಡಿಮುತ್ತು ಯವ್ವಿ ಯವ್ವಿಯೊ
ಹಾಲಿನಂತ ಹುಣ್ಣಿಮೇಲಿ ನಿಯುವ ಬಾರಾ

ಮಾಮ ಮಾಮ ಚಂದಮಾಮ
ಬಂದನೋಡು ಗೊಂಬೆರಾಮ ತಂದನೋಡು ಪ್ರೀತಿಪ್ರೇಮ
ಮಾಮ ಮಾಮ ಚಂದಮಾಮ
ಚಂದವಳ್ಳಿ ಹೆಣ್ಣುನಾನು ಚಂದವೇನು ನಿನಗೆ ನಾನು
...

No comments:

Post a Comment