Thursday 1 December 2016

ನಾದ ನಾದ ಪ್ರೇಮದ ನಾದ

ಚಿತ್ರ: ಅಂಡಮಾನ್ (1998)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ನಾದ ನಾದ ಪ್ರೇಮದ ನಾದ
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ ಯೌವ್ವನದ ಸಂಭ್ರಮದ
ತನನನ ತನುವಲಿ
ನಾದ ನಾದ ಪ್ರೇಮದ ನಾದ

ಕಡಲ ಸೇರೋ ನದಿಗೆ ದಾರಿ ತೋರಿದವರು ಯಾರು
ಪುಷ್ಪರಾಗ ರತಿಗೆ ಹಾಡು ಕಲಿಸಿದವರು ಯಾರು
ಪ್ರಣಯ ಭಾಷೆಯ ಅರಿತುಕೊಳ್ಳುವ ಕಣ್ಣಿಗ್ಯಾರು ಗುರು.. ಪ್ರೀತಿ ಅರಿತವರು
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ ಯೌವ್ವನದ ಸಂಭ್ರಮದ
ತನನನ ತನುವಲಿ
ನಾದ ನಾದ ಪ್ರೇಮದ ನಾದ

ಪ್ರಣಯ ಗಾಳಿಬೀಸಿ ಆಸೆಗಣ್ಣು ತೆರೆದು
ನಿದಿರೆ ಭಂಗವಾಗಿ ಬಯಕೆ ಲಜ್ಜೆತೊರೆದು
ತನ್ನನ್ನರಿಯದೇ ಕುಸುಮಸೇರುವ ದುಂಬಿಗಳ ಪಾಡು.. ನಮ್ಮ ಈ ಹಾಡು
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ ಯೌವ್ವನದ ಸಂಭ್ರಮದ
ತನನನ ತನುವಲಿ
ನಾದ ನಾದ ಪ್ರೇಮದ ನಾದ

ಕೋಟಿ ರಾತ್ರಿ ಬರಲಿ ಮೊದಲ ರಾತ್ರಿ ಮಧುರ
ನೆನಪಿನಾಳದಲ್ಲಿ ಮಧುರ ಮೈತ್ರಿ ಅಮರ
ಪ್ರಥಮ ಚುಂಬನ ಪ್ರಣಯ ಕಂಪನ ಬಂದ ಈ ಇರುಳು.. ಬಾಳ ಜೇನಿರುಳು
ನಾದ ನಾದ ಪ್ರೇಮದ ನಾದ
ಜೀವದ ವೀಣಾ ತಂತಿಯಲಿ
ಸಾಗರದ ಸಂಗಮದ ಯೌವ್ವನದ ಸಂಭ್ರಮದ
ತನನನ ತನುವಲಿ
ನಾದ ನಾದ ಪ್ರೇಮದ ನಾದ

No comments:

Post a Comment