Thursday 1 December 2016

ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೆ

ಚಿತ್ರ: ಯುಗಪುರುಷ (1989)
ಸಾಹಿತ್ಯ- ಸಂಗೀತ: ಹಂಸಲೇಖ
ಗಾಯಕರು: ಎಸ್.ಪಿ.ಬಿ

ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೆ
ಆಸೆಯ ಮೂಟೆಯನ್ನು ಹೊತ್ತು ಹೊತ್ತು ಹೊತ್ತು ತಂದೆ

ಅಜ್ಜಿಗೆ ಅರಿವೆ ಆಸೆ ಅಪ್ಪನಿಗೆ ಅಮ್ಮನ ಆಸೆ
ಅಮ್ಮನಿಗೆ ಮಕ್ಕಳ ಆಸೆ ಮಕ್ಕಳಿಗೆ ತಾತನ ಆಸೆ
ತಾತನಿಗೆ ಅಜ್ಜಿ ಆಸೆ ಅಜ್ಜಿಗೆ ತಾತನ ಆಸೆ
ಆಸೆಯು ಇಲ್ಲದೆ ಜಗವೇಇಲ್ಲ ಆಸೆಯೇ ದುಃಖದ ಮೂಲ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ

ಸೂಜಿಕಣ್ಣಿನಲ್ಲಿ ದೊಡ್ಡ ಒಂಟೆ ಹೋದರೂನು ಹೋಗಬಹುದು
ಅಯ್ಯಯ್ಯೋ ಜನರಿಗೆ ದುಡ್ಡಿನಾಸೆ ಹೋಗದು
ಚಟ್ಟಹತ್ತಿ ಉರಿಯೋ ಹೆಣ ಮೇಲೆ ಎದ್ದರೂನು ಏಳಬಹುದು
ಅಮ್ಮಮ್ಮೋ ಗಂಡಿಗೆ ಹೆಣ್ಣಿನಾಸೆ ಸಾಯದು
ಭೂಮಿಯೇ ಮುಗ್ದುಬಂದರು ಆಕಾಶ ಬಿದ್ದುಹೋದರು
ಮರುಭೂಮಿ ನೀರೆ ಆದರೂ ಸಾಗರವೆ ಬತ್ತಿಹೋದರು
ಅತ್ತ ಹೋಗದು ಇತ್ತ ಹೋಗದು ಬತ್ತಿ ಹೋಗದು ಸತ್ತು ಹೋಗದ
ಆಸೆಯ ಮೂಟೆಯನ್ನು ಹೊತ್ತು ಹೊತ್ತು ಹೊತ್ತು ತಂದೆ
ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೆ

ಆಸೆ ದುಃಖ.. ದುಃಖ ಆಸೆ..

ಕಾರ್ಪೋರೇಶನ್ ಕೊಳಾಯಿಯಲ್ಲಿ ಹಾಲು ಬಂದು ನಿಂತು ಹೋಗಬಹುದು
ಆಸೆಯ ಹಿಂದಿನ ಕಣ್ಣನೀರು ನಿಲ್ಲದು
ರೇಷನ್ ಕಾರ್ಡಿನಲ್ಲಿ ಒಳ್ಳೆ ಅಕ್ಕಿ ಸಿಕ್ಕರೂನು ಸಿಕ್ಕಬಹುದು
ಆಸೆಯ ಕ್ಯೂವಿಗೆ ಎಂದೂ ಕೊನೆಯೇ ಸಿಕ್ಕದು
ಬರಗಾಲ ನಿಂತುಹೋದರು ಯುದ್ಧಗಳೇ ಇಲ್ಲವಾದರು
ಜನಸಂಖ್ಯೆ ಕಡಿಮೆಯಾದರು ಬೆಲೆಎಲ್ಲಾ ಇಳಿದುಹೋದರು
ಆಸೆ ಎನ್ನುವ ಸರಕುಧಾರಣೆ ಕೆಳಗೆ ಇಳಿಯುವ ಆಸೆ ಕಾನನೆ
ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೆ
ಆಸೆಯ ಮೂಟೆಯನ್ನು ಹೊತ್ತು ಹೊತ್ತು ಹೊತ್ತು ತಂದೆ
ಅಜ್ಜಿಗೆ ಅರಿವೆ ಆಸೆ ಅಪ್ಪನಿಗೆ ಅಮ್ಮನ ಆಸೆ
ಅಮ್ಮನಿಗೆ ಮಕ್ಕಳ ಆಸೆ ಮಕ್ಕಳಿಗೆ ತಾತನ ಆಸೆ
ತಾತನಿಗೆ ಅಜ್ಜಿ ಆಸೆ ಅಜ್ಜಿಗೆ ತಾತನ ಆಸೆ
ಆಸೆಯು ಇಲ್ಲದೆ ಜಗವೇಇಲ್ಲ ಆಸೆಯೇ ದುಃಖದ ಮೂಲ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ

No comments:

Post a Comment