Thursday 1 December 2016

ಮುದ್ದಾಡೆಂದಿದೆ ಮಲ್ಲಿಗೆ ಹೂ

ಚಿತ್ರ: ಗಡಿಬಿಡಿ ಗಂಡ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಕೆ.ಎಸ್.ಚಿತ್ರ

ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ ಮೊದಲು ಸಂಪಿಗೆಯಾ
ಸಂಪಿಗೆಯಾ ಮೊದಲು ಮಲ್ಲಿಗೆಯಾ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ

ಮುಡಿಯಲಿ ಮಲ್ಲಿಗೆಯ ಮುಡಿದವಳ
ಮೊದಲು ಮುಡಿಯಬೇಕು
ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು
ಮನಸಿನ ಮಧುವಿನ ಮಹಲೊಳಗೆ
ಮದನ ಮಣಿಯಬೇಕು
ಸುರತಿಯ ಪರಮಾನ ಇತಮಿತವಿರಬೇಕು
ವಿರಹಬಾಧೆ ದಹಿಸುವಾಗ ಬಾಲಬೋಧೆ ಏಕೆ
ಪ್ರಣಯ ನದಿಯೆ ತುಳುಕುವಾಗ ಮದನ ಮಳೆಯು ಬೇಕೇ
ಹಿಡಿದುಕೊ ಮೆಲ್ಲಗೆ ತಡೆದುಕೋ ಮಲ್ಲಿಗೆ
ಹರೆಯ ನೆರೆಯ ತಡೆಯೊ ಇನಿಯ

ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ ಮೊದಲು ಸಂಪಿಗೆಯಾ
ಸಂಪಿಗೆಯಾ ಮೊದಲು ಮಲ್ಲಿಗೆಯಾ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ

ಘಮ ಘಮ ಸಂಪಿಗೆಯ ಸುಮತಿಯನು ಕೆಣಕಿ ಕಾಯಿಸದಿರು
ಕುಸುಮದ ಎದೆಯೊಳಗೆ ಪ್ರಳಯವ ತಾರದಿರು
ಹಿಡಿಯಲಿ ಹಿಡಿಯುವ ನಡುವಿನಲಿ ಬಳುಕಿ ಬೇಯಿಸದಿರು
ತುಂಬಿದ ನಿಷೆಯೊಳಗೆ ಚಂದ್ರನ ಕೂಗದಿರು
ಎದೆಯ ಸೆರಗ ಮೋಡದಲ್ಲಿ ನೀನೆ ಚಂದ್ರನೀಗ
ಹೃದಯ ಮೇರುಗಿರಿಗಳಲ್ಲಿ ಕರಗಬೇಕೇ ಈಗ
ಬಳಸಿಕೊ ಕಂಪಿಗೆ ಸಹಿಸಿಕೋ ಸಂಪಿಗೆ
ಹರೆಯ ಹೊರೆಯ ಇಳಿಸೋ ಇನಿಯ

ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ ಮೊದಲು ಸಂಪಿಗೆಯಾ
ಸಂಪಿಗೆಯಾ ಮೊದಲು ಮಲ್ಲಿಗೆಯಾ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸೀ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ

No comments:

Post a Comment