Thursday 1 December 2016

ಯಾರು ಪೋಲಿ

ಚಿತ್ರ: ಪೋಲಿಹುಡುಗ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ & ಮಂಜುಳಾ ಗುರುರಾಜ್

ಯಾರು ಪೋಲಿ..  ಪೋಲಿ ಊರಲ್ಲಿ ನಾನೇನಾ
ಬೇರೆ ಎಲ್ಲಾ.. ಎಲ್ಲಾ ತುಂಬಾನೆ ಸಾಚಾನಾ
ಭೂತಗಾಜು.. ಗಾಜು  ತನ್ನಿರಿ ಹಾಕೋಣ
ಸಾಚಾ ಯಾರು.. ಯಾರು ಪತ್ತೆಯ ಮಾಡೋಣ
ಹುಡುಕಾಡಿ ಅವನನ್ನೇ ಕೇಳೋಣ
ಯಾರು ಪೋಲಿ..  ಪೋಲಿ ಊರಲ್ಲಿ ನಾನೇನಾ
ಬೇರೆ ಎಲ್ಲಾ.. ಎಲ್ಲಾ ತುಂಬಾನೆ ಸಾಚಾನಾ

ಊರೆಲ್ಲಾ ಪೋಲಿ ಬಿದ್ದಿದೆ ನೀಲಿಯ ಚಿತ್ರಕ್ಕೆ ಕಳ್ಳ ಸಾಲು ನಿಂತಿದೆ
ಬೀದೀಲಿ ಬೆತ್ತಲೆ ಗ್ರಂಥ ಒರಗಿ ನಿಂತಿದೆ
ನಾಡೆಲ್ಲಾ ಕೆಟ್ಟು ಹೋಗಿದೆ ಕ್ಯಾಬರೆ ನೃತ್ಯಕ್ಕೆ ಇಲ್ಲಿ ಲೈಸೆನ್ಸ್ ಸಿಕ್ಕಿದೆ
ಪತ್ರಿಕೆ ಮಧ್ಯದ ಪೇಜೆ ಬೆತ್ತಲಾಗಿದೆ
ಅಯ್ಯಯ್ಯೋ ಇವರಿಗೆ ಇಲ್ಲಯ್ಯ ಸೆನ್ಸಾರು
ಆಳೋರೆ ಕೆಟ್ಟರೆ ಕೇಳೋರು ಇನ್ಯಾರು
ಹುಡುಕಾಡಿ ಅವರನ್ನೇ ಕೇಳೋಣ
ಯಾರು ಪೋಲಿ..  ಪೋಲಿ ಊರಲ್ಲಿ ನಾನೇನಾ
ಬೇರೆ ಎಲ್ಲಾ.. ಎಲ್ಲಾ ತುಂಬಾನೆ ಸಾಚಾನಾ

ಧಿಕ್ಕಾರ ಧಿಕ್ಕಾರ B.P. ಕ್ಲಾಸಿಗೆ ಧಿಕ್ಕಾರ
ಧಿಕ್ಕಾರ ಧಿಕ್ಕಾರ B.P. ಕ್ಲಾಸಿಗೆ ಧಿಕ್ಕಾರ

ಹೋರಾಟ ನಿಲ್ಲಬಾರದು ಕಾರಣ ನ್ಯಾಯವು ನಮಗೆ ಬೇಗ ಬೇಕಿದೆ
ಮುಂದಕ್ಕೆ ನಾವಿನ್ನು ತುಂಬಾ ಓದಬೇಕಿದೆ
ಕಾಲೇಜು ಮುಚ್ಚಬಾರದು ಕಾರಣ ಪಾಯದ ಕೆಳಗೆ ನಮ್ಮ ದುಡ್ಡಿದೆ
ಅದರಲ್ಲಿ ನನ್ನದು ತುಂಬಾ ದೊಡ್ಡ ಷೇರಿದೆ
ಕೇಳಲಿ ಕೇಳಲಿ ನಮ್ಮ ಕ್ಷಮೆಯ ಕೇಳಲಿ
ಏಳಲಿ ಕೇಳಲಿ ನಮ್ಮ ಕ್ಷಮೆಯ ಕೇಳಲಿ
ಸೋಲೆಂಬ ಮಾತಂತು ಗೊತ್ತಿಲ್ಲ

ನೀನೇ ಪೋಲಿ ಇನ್ನೂ ಅನುಮಾನನಾ
ನೀನೇ ಪೋಲಿ ಇನ್ನೂ ಅನುಮಾನನಾ

ಯಾವುದೋ ಯಾವುದೋ ಈ ರಾಗಮಾಲಿಕೆ
ಯಾವುದೋ ಯಾವುದೋ ಬೇಲೂರ ಬಾಲಿಕೆ
ಯಾವುದೋ ಯಾವುದೋ ಈ ರಾಗಮಾಲಿಕೆ
ಯಾವುದೋ ಯಾವುದೋ ಬೇಲೂರ ಬಾಲಿಕೆ

ಆಚಾರ್ಯ ದೇವರೆಂಬುವ ಸತ್ಯಕ್ಕೆ ಗೌರವನೀಡಿ ಮೂಢರಾಗದೆ
ಗುರುವಿನ ಪೂಜೆಯ ಮಾಡಿ ಅಂಧರಾಗದೆ
ಓಂಕಾರ ಹೇಳಿಕೊಡುವ ಗುರುವೆತಾನೆ ನಮ್ಮ ಕಣ್ಣುಗಳು
ಅವು ಕಂಬನಿ ಸುರಿಸಿದರೆ ಶಾಪಗಳು

ಧಿಕ್ಕಾರ ಧಿಕ್ಕಾರ B.P. ಕ್ಲಾಸಿಗೆ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಧಿಕ್ಕಾರಕ್ಕೆ ಧಿಕ್ಕಾರ
ದುಡುಕದಿರಿ ಎಡವದಿರಿ ಕ್ಷಮೆಕೇಳಿ

ಯಾರು ಪೋಲಿ..  ಪೋಲಿ ಊರಲ್ಲಿ ನಾನೇನಾ
ಬೇರೆ ಎಲ್ಲಾ.. ಎಲ್ಲಾ ತುಂಬಾನೆ ಸಾಚಾನಾ
ಭೂತಗಾಜು.. ಗಾಜು  ತನ್ನಿರಿ ಹಾಕೋಣ
ಸಾಚಾ ಯಾರು.. ಯಾರು ಪತ್ತೆಯ ಮಾಡೋಣ
ಹುಡುಕಾಡಿ ಅವನನ್ನೇ ಕೇಳೋಣ

No comments:

Post a Comment