Wednesday 30 November 2016

ಮಾವಿನಮರವೇ ಮಾವಿನಮರವೇ ನನ್ನ ಮರೆತೆಯಾ

ಚಿತ್ರ: ಬಾಳೊಂದು ಭಾವಗೀತೆ (1988)
ಸಾಹಿತ್ಯ: ಎಮ್. ಎನ್. ವ್ಯಾಸರಾವ್
ಸಂಗೀತ: ನಾದಬ್ರಹ್ಮ
ಗಾಯನ: ಲತಾ ಹಂಸಲೇಖ & ಬಿ. ಆರ್. ಛಾಯಾ

ಮಾವಿನಮರವೇ ಮಾವಿನಮರವೇ ನನ್ನ ಮರೆತೆಯಾ
ನಿನ್ನ ಮಡಿಲಿನ ಗೂಡಿನಲಿ ನೆಲೆ ನೀಡೆಯಾ
ಕೋಗಿಲೆಮರಿಯೇ ಕೋಗಿಲೆಮರಿಯೇ ಹೇಗೆ ಮರೆಯಲಿ
ನಿನ್ನ ತಬ್ಬಲಿ ಮಾಡಿನೊಂದೆ ಈ ಬಾಳಿನಲಿ

ಅಮ್ಮ ಮುದ್ದು ಅಮ್ಮ ಬಲಿಸು ಬಗಲ ರೆಕ್ಕೆ ಅಮ್ಮ ನನ್ನ ಅಮ್ಮ ತೊಡಿಸು ಪ್ರೀತಿ ರಕ್ಷೆ
ತಾಯಿಯಾಗಿ ಪ್ರೀತಿ ಮಮತೆ ನಿನಗೆ ನೀಡಲಿಲ್ಲ
ಯಾವ ಗೂಡಿನಲ್ಲೋ ನಿನ್ನ ಬಿಟ್ಟು ಬಂದೆನಲ್ಲಾ
ಮರವಾಗಿ ನೆರಳಾಗಿ ಇರುವಾಸೆ ಇದೆ
ಒಲವಿಂದು ಕವಲಾಗಿ ಹಾಯ್ದಾಡುತಿದೆ
ಇದೆ.. ಇದೆ..

ಮಾವಿನಮರವೇ ಮಾವಿನಮರವೇ ನನ್ನ ಮರೆತೆಯಾ
ನಿನ್ನ ಮಡಿಲಿನ ಗೂಡಿನಲಿ ನೆಲೆ ನೀಡೆಯಾ

ಗುಮ್ಮ ಬಂದನಮ್ಮ ಇರುಳ ಭಯವ ನೀಗೆ ಅಮ್ಮ ನನ್ನ ಅಮ್ಮ ನನಗೂ ಕಥೆಯ ಹೇಳೇ
ಎದೆಗೆ ಗಾಯಮಾಡಿದಂಥ ಕಥೆಯ ಹೇಳಲೇನು
ಎರಡು ದೋಣಿಯಲ್ಲಿ ನಿಂತ ಬದುಕ ತಿಳಿಸಲೇನು
ನೀನಿಂದು ನೆನಪಾಗಿ ನಾ ಬೆಂದೆ ಮಗು
ಬಾಳೆಲ್ಲಾ ಉರಿವಾಗ ಇನ್ನೆಲ್ಲಿ ನಗು
ನಗು.. ಮಗು

ಮಾವಿನಮರವೇ ಮಾವಿನಮರವೇ ನನ್ನ ಮರೆತೆಯಾ
ನಿನ್ನ ಮಡಿಲಿನ ಗೂಡಿನಲಿ ನೆಲೆ ನೀಡೆಯಾ
ಕೋಗಿಲೆಮರಿಯೇ ಕೋಗಿಲೆಮರಿಯೇ ಹೇಗೆ ಮರೆಯಲಿ
ನಿನ್ನ ತಬ್ಬಲಿ ಮಾಡಿನೊಂದೆ ಈ ಬಾಳಿನಲಿ

No comments:

Post a Comment