Tuesday 29 November 2016

ಸ್ವತಂತ್ರ ಬಂತು ನೋಡು

ಚಿತ್ರ :ಜೈಲರ್ ಜಗನ್ನಾಥ್ (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಹಾಡಿದವರು : ಎಸ್.ಪಿ.ಬಿ

ಸ್ವತಂತ್ರ ಬಂತು ನೋಡು,,,,,,
ಈ ನಾಡಿಗೆ ತಾಯ್ನಾಡಿಗೆ ಓ ಓ ಓ ಓ ಹೋ
                !!ಪ!!
ಇಲ್ಲಿ ಬಡಮಾನವ ಸತ್ತು ಹೆಣವಾಗುವ
ತನ್ನ ದಿನಗೂಲಿಗೆ ಕೂಗಿ
ಇಲ್ಲಿ ಸ್ತ್ರೀ ಗೌರವ ಕಾಲ ಕಸಮಾಡುವ
ಜನ ಇದೆ ನೋಡು ನೀ ಹೋಗಿ
                !!ಪ!!
ಜಲಿಯನ್ ವಾಲಾ ಭಾಗ್ ನರಮೇಧ
ನೆನಪಿನ ಮೇಲೊಂದು ಒಳ ಸೌಧ
ಉಪ್ಪಿನ ಚಳುವಳಿಯ ಸಮವಸ್ತ್ರ
ಓಟಿನ ಬೇಟೆಗೆ ಭ್ರಹ್ಮಾಸ್ತ್ರ
ಶ್ರೀರಾಮ ಜನ್ಮಭೂಮಿಯಲಿ
ಗಾಂಧೀಜಿಯ ಕನಸು ನಿದ್ದೆಯಲಿ
ಅಸಮಾನತೆ ಇಲ್ಲಿ ಮಹಿಷಾಸುರ
ಜಾತೀಯತೆ ರಕ್ತಬೀಜಾಸುರ
ಕಾಳಸಂತೆಯ ಚೋರರಿಗೆ ರಸದೌತಣ
                    !!ಪ!!
ದಾಸ್ಯದ ಸರಪಳಿಯ ಬಿಡಿಸಿದರು
ಬಡತನದ ಬೇಡಿ ತೊಡಿಸಿದರು
ಮೇಲಿನ ನೋಟಕ್ಕೆ ಸ್ವಾತಂತ್ರ
ಒಳಗಿನ ಬಾಳೆಲ್ಲಾ ಪರತಂತ್ರ
ಈ ನಾಡಿಗೀಗ ಏನಾದರೇ
ನನಗೇನು ಎನ್ನೋರೆ ಆಳೋರಿಲ್ಲಿ
ಸ್ವಾತಂತ್ರ್ಯದ ಹಾರೋ ಹಕ್ಕಗೆ
ಅಧಿಕಾರದ ಗುರಿಗೆ ಸಿಕ್ಕಯೇ
ನಿನ್ನ ಕೊಲೆಯಾದರೇ ನಮಗೆ ನೆಲೆ ಎಲ್ಲಿದೆ

ಸ್ವತಂತ್ರ ಬಂತು ನೋಡು,,,,,,
ಈ ಪಾಡಿಗೆ ತಾಯ್ನಾಡಿಗೆ ಓ ಓ ಓ ಓ ಹೋ
ಇಲ್ಲಿ ಬಡಮಾನವ ಸತ್ತು ಹೆಣವಾಗುವ
ತನ್ನ ದಿನಗೂಲಿಗೆ ಕೂಗಿ
                !!ಪ!!

No comments:

Post a Comment