Tuesday 29 November 2016

ಕಾಲ ಕೆಟ್ಟೋಯ್ತಲ್ಲಾ

ಚಿತ್ರ :ಬೇವು ಬೆಲ್ಲ
ಸ,,,ಸಾ :ನಾದಬ್ರಹ್ಮ
ಹಾ :ಎಸ್ ಪಿ ಬಿ.ರಾಜೇಶ್ ಕೃಷ್ಣನ್

ಕಾಲ ಕೆಟ್ಹೋಯ್ತಲ್ಲಾ ನ್ಯಾಯಕಟ್ಟೆಲಿಲ್ಲ
ಕಾಲ ಕೆಟ್ಹೋಗ್ಲಿಲ್ಲಾ ಮನ್ಷ ಕಟ್ಟೆಲಿಲ್ಲ

ಕಾಲ ಕೆಟ್ಹೋಯ್ತಲ್ಲಾ ನ್ಯಾಯಕಟ್ಟೆಲಿಲ್ಲ
ಕಾಲ ಕೆಟ್ಹೋಗ್ಲಿಲ್ಲ ಮನ್ಷ ಕಟ್ಟೆಲಿಲ್ಲ
ನೀನ್ ಸರಿ ನಾನ್ ಸರಿನಾ
ಅಳಿಯ ಅಳಿಯ ಬಾ ಕಟ್ಟು ಈ ಬಾಜೀನ

ಕಾಲ ಕೆಟ್ಹೋಗ್ಲಿಲ್ಲ ಮನ್ಷ ಕಟ್ಟೆಲಿಲ್ಲ
ಕಾಲ ಕೆಟ್ಹೋಯ್ತಲ್ಲಾ ನ್ಯಾಯಕಟ್ಟೆಲಿಲ್ಲ
ನೀನ್ ಸರಿ ಊರ್ ಸರಿನಾ
ಮಾವ ಮಾವ ಸೋತ್ ಬಿಟ್ರೆ ನೀನ್ ರಾಜಿನಾ

ದೇವರ ರೂಪವಯ್ಯಾ ನ್ಯಾಯ
ನ್ಯಾಯಕ್ಕೆ ಎದುರು ಯಾರು ಅಳಿಯ
ಕಾಲಕ್ಕೆ ತಕ್ಕ ಹಾಗೆ ನ್ಯಾಯ
ಪಾತ್ರಕ್ಕೆ ಹೊಂದೋ ಹಾಗೆ ವೇಷ
ದೇಶ ಕೋಷ ಬಿಟ್ಟರೂ ನ್ಯಾಯಕ್ಕಾಗಿ ಆಗ
ಒಬ್ಬ ಸತಿಗೆ ಐವರು ಸಾಧ್ಯವೇನು ಈಗ
ತಾಯಿಗೆ ಎದುರಾಡ್ತೀಯಾ
ಊರಿಗೆ ಬಾಯ್ ನೀಡ್ತೀಯಾ

ಕಾಲ ಕೆಟ್ಹೋಯ್ತಲ್ಲಾ ನ್ಯಾಯಕಟ್ಟೆಲಿಲ್ಲ
ಕಾಲ ಕೆಟ್ಹೋಗ್ಲಿಲ್ಲ ಮನ್ಷ ಕಟ್ಟೆಲಿಲ್ಲ
ಅಯ್ಯೋ ನೀನ್ ಸರಿ ನಾನ್ ಸರಿನಾ
ಅಳಿಯ ಅಳಿಯ ಬಾ ಕಟ್ಟು ಈ ಬಾಜೀನ

ಊರಿಗೆ ಬೆಲೆಯ ಕೊಟ್ಟ ರಾಮ
ಸೀತೆಯ ಕಾಡಲಿಟ್ಟ ರಾಮ
ಸತ್ಯವ ಎದೆಯಲ್ಲಿಟ್ಟ ರಾಮ
ಸುಳ್ಳಿನ ತೀರ್ಪು ಕೊಟ್ಟ ರಾಮ
ಶೀಲವಂತೆಯಾದರೂ ಸೀತೆ ಬಿಟ್ಟ ರಾಮ
ಸತ್ಯವಾಗಿ ನಡೆಯಲು ಸತ್ಯ ಕೊಂದ ರಾಮ
ಏನಿದೆ ತಪ್ಪೇನಿದೆ ಸೀತೆಯ ತಪ್ಪೇನಿದೆ

ಕಾಲ ಕೆಟ್ಹೋಗ್ಲಿಲ್ಲ ಮನ್ಷ ಕಟ್ಟೆಲಿಲ್ಲ
ಕಾಲ ಕೆಟ್ಹೋಯ್ತಲ್ಲ ಮಾವ ಸೋತೋದ್ನಲ್ಲಾ
ನೀನಿಲ್ದೆ ನಾನ್ ಇರ್ತೀನಾ
ಮಾವ ಮಾವ ನಿನ್ನಂದ್ರೆ ನಾನ್ ಬಿಡ್ತೀನಾ
ಮುದ್ದೆ ನುಂಗೋ ಮಾವ ನೀನೇ ನನ್ನ ಜೀವಾ
ಕೋಪ ನುಂಗೋ ಅಳಿಯ ನಿನ್ನ ಪಾಪ ತೊಳಿಯ
ನೀಲ್ದೆ ನಾನ್ ಇರ್ತೀನಾ ಅಳಿಯ ಅಳಿಯ
ನಿನ್ನಂದ್ರೆ ನಾನ್ ಬಿಡ್ತೀನಾ.

ಕೊಡುಗೆ: ಆಂಜನೇಯ ತುಮ್ಮಿನಕಟ್ಟಿ

No comments:

Post a Comment