Tuesday 29 November 2016

ಕೆಂಪು ತೋಟದಲ್ಲಿ ಒಮ್ಮೆ ಹಾರಬಾರದೇನೆ ಪಾರಿವಾಳವೇ

ಚಿತ್ರ: ಯುದ್ಧಕಾಂಡ (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಹಾಡಿದವರು :ಎಸ್ ಪಿ ಬಿ, ವಾಣಿ ಜಯರಾಮ್ & ಬಿ ಆರ್ ಛಾಯಾ

ಕೆಂಪು ತೋಟದಲ್ಲಿ ಒಮ್ಮೆ ಹಾರಬಾರದೇನೆ ಪಾರಿವಾಳವೇ
ನೀ ಹೀಗೇಕೆ ಹೆದರುತಿರುವೆ ಮರುಳೆ
ಹಾರುವಾಗ ನಾನು ದಾರಿ ತಪ್ಪಿಹೋದರೇನು ಗತಿ ಹಂಸವೇ
ನೀ ಹೀಗೇಕೆ ಕಾಡುತಿರುವೆ ಮರುಳೆ
ಗುಡುಗಿನ ಸುಳಿವಿದೆ, ಗಿಡುಗನ ಭಯವಿದೆ
ಗೆಳೆಯನ ನೋಡಲು ನಡುವೆ ಈ ತೆರೆಯಿದೆ

ಕೆಂಪು ತೋಟದಲ್ಲಿ ಒಮ್ಮೆ
ಹಾರಬಾರದೇನೆ ಪಾರಿವಾಳವೇ
ನೀ ಹೀಗೇಕೆ ಹೆದರುತಿರುವೆ ಮರುಳೆ

ಕೆಂಪು ತೋಟದಲ್ಲಿ ಪಾರಿವಾಳ ನೋಡಲಿಕ್ಕೆ ರಾಯಭಾರವೇ
ನೀ ಹೀಗೇಕೆ ನಾಚುತಿರುವೇ ಮರುಳೆ
ನೋಡುವಾಗ ನನ್ನ ಜೀವ ಹಾರಿಹೋದರೇನು ಗತಿ ಹಂಸವೇ
ನೀ ಹೀಗೇಕೆ ಕಾಡುತಿರುವೆ ಮರುಳೆ
ಹೃದಯವೋ ತೆರೆದಿದೆ, ಮನಸಿನ ಕರೆ ಇದೆ
ಗೆಳತಿಯ ನೋಡಲು ವಯಸಿನ ಭಯವಿದೆ
                 
ಕೆಂಪು ತೋಟದಲ್ಲಿ ಪಾರಿವಾಳ ನೋಡಲಿಕ್ಕೆ ರಾಯಭಾರವೇ
ನೀ ಹೀಗೇಕೆ ನಾಚುತಿರುವೇ ಮರುಳೆ

ಹಲೋ,,,, ಹಲೋ,,,, ಹಲೋ,,,, ಹಲೋ,,,,
ಚೊಲೋ,,,,
ಬಳೆಗಾರ ತೊಡಿಸಿದ ಬಳೆಗೆ
ಕೈ ಕೊಟ್ಟೆ ವರುಷದ ಕೆಳಗೆ
ಬೇರ್ಯಾರು ಕೋಮಲ ಕೈಯ್ಯಾ ಸೊಕಿಲ್ಲ ಗೆಳೆಯ
ಗಡಿಯಾರದಲ್ಲಿನ ಘಳಿಗೆ
ಮುಳ್ಳಂತೆ ಬಂದೆನು ಬಳಿಗೆ
ನಾ ಕಾಣೆ ಕಾರಣ ಗೆಳತಿ ಇದೇ ಮೊದಲ ಸರತಿ
ಸುಮ್ಮಗೆ ಸುತ್ತಿ ಬಳಸದೆ
ಆಡಿರಿ ತಲೆಯ ನೋವು ತರದೆ
ಬೇಗನೇ ಪ್ರೀತಿ ಮುಗಿಸಿರಿ
ಲಗ್ನದ ಪತ್ರಿಕೆಯನು ಕೊಡಿರಿ
ಗುಡುಗಿನ ಸುಳಿವಿದೆ, ಗಿಡುಗನ ಭಯವಿದೆ
ಗೆಳತಿಯ ಬೆರೆಯಲು, ವಯಸ್ಸಿನ ಭಯವಿದೆ

ಕೆಂಪು ತೋಟದಲ್ಲಿ ಪಾರಿವಾಳ ನೋಡಲಿಕ್ಕೆ ರಾಯಭಾರವೇ
ನೀ ಹೀಗೇಕೆ ನಾಚುತಿರುವೇ ಮರುಳೆ

ನನ್ನೆದೆಯ ತೋಟದ ಹೂವೂ
ಕಳುವಾಗಿ ಹೋಯಿತು ನೆನ್ನೆ
ಅದಕಾಗಿ ಹುಡುಕುತ ಬಂದೆ, ಅದು ನಿನ್ನ ಕೆನ್ನೆ
ಬಾನಲ್ಲಿ ಬಿದಿಗೆಯ ಚಂದ್ರ
ಕಂಡಾಗ ಹೆದರಿದೆ ಚಿನ್ನ
ಒಳಿದರ್ಧ ಹುಡುಕುತ ಬಂದೇ, ಅದು ನೀನೇ ಚಿನ್ನ
ಉಸಿರಲಿ ನಿನ್ನ ಹೆಸರಿದೆ
ನುಡಿಯುತ ಇರುವೆ ಹೊರಗೆ ಬರದೇ
ಬೆರೆತೆಯೋ ನನಗೆ ತಿಳಿಯದೇ
ಮಿಡಿಯುತ ಇರುವೆ ಕೈಗೆ ಸಿಗದೇ
ಹೃದಯವೋ ತೆರೆದಿದೆ, ಮನಸಿನ ಕರೆ ಇದೆ
ಗೆಳೆಯನ ನೋಡಲು ನಡುವೆ ಈ ತೆರೆ ಇದೆ

ಕೆಂಪು ತೋಟದಲ್ಲಿ ಒಮ್ಮೆ ಹಾರಬಾರದೇನೆ ಪಾರಿವಾಳವೇ
ನೀ ಹೀಗೇಕೆ ಹೆದರುತಿರುವೆ ಮರುಳೆ
ಹಾರುವಾಗ  ದಾರಿ ತಪ್ಪಿಹೋದರೇನು ಗತಿ ಪಾರಿವಾಳವೇ
ನೀ ಹೀಗೇಕೆ ಕಾಡುತಿರುವೆ ಮರುಳೆ

No comments:

Post a Comment