Tuesday 29 November 2016

ಬಾಳು ನೀಡಲಾಗದವನು ಬ್ರಹ್ಮನಾದರೇನು

ಚಿತ್ರ: *ಮಾಂಗಲ್ಯ* *ಬಂಧನ* (1993)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು: ಎಸ್. ಪಿ. ಬಿ & ಕೆ. ಎಸ್. ಚಿತ್ರ

ಬಾಳು ನೀಡಲಾಗದವನು ಬ್ರಹ್ಮನಾದರೇನು
ಒಲ್ಲೆ ಎಂದು ಹೋಗುವವನು ನಲ್ಲನಾದರೇನು

ಪ್ರೀತಿ ನೀಡಲಾರದವಳು ನಲ್ಲೆಯಾದರೇನು
ಮರ್ಮ ಅರಿಯಲಾರದವಳು ಮಡಡಿಯಾದರೇನು

ಬಾಳು ನೀಡಲಾಗದವನು ಬ್ರಹ್ಮನಾದರೇನು
ಒಲ್ಲೆ ಎಂದು ಹೋಗುವವನು ನಲ್ಲನಾದರೇನು
ವಿವಾಹವೋ ವಿನೋದವೋ ವಿಚಿತ್ರವೋ ಕಾಣೆ

ಪ್ರೀತಿ ನೀಡಲಾರದವಳು ನಲ್ಲೆಯಾದರೇನು
ಮರ್ಮ ಅರಿಯಲಾರದವಳು ಮಡಡಿಯಾದರೇನು
ವಿವಾಹವೋ ವಿನೋದವೋ ವಿಚಿತ್ರವೋ ಕಾಣೆ

ಅಗ್ನಿಸಾಕ್ಷಿ ಎನ್ನುವುದೆಲ್ಲಿ, ಬೆರೆತ ಜೀವವೆಲ್ಲಿ
ತಾಳಿಗಿರುವ ಮೌಲ್ಯವೆಲ್ಲಿ, ಎಲ್ಲಾ ಸುಳ್ಳಲಿ
ಪ್ರೀತಿ ಪ್ರೇಮ ಎನ್ನೋದೆಲ್ಲಿ, ಸ್ನೇಹ ಮೊಹ ಎಲ್ಲಿ
ಹಾಲು ಜೇನು ಹೋಲಿಕೆ ಎಲ್ಲಿ, ಬರೀ ಮಾತಲಿ
ಏನೋ ನೋವು, ಬಾಳು ಬೇವು
ದೂರಾಗುತಿದೆ ಶಾಂತಿ.. ಇನ್ನೆಲ್ಲಿದೆ ಪ್ರೀತಿ
ಏಕೋ ಹೀಗೇ ಕಾಣೆ ನಾನು
ಎಲ್ಲೆಲ್ಲೂ ಬರೀ ಬ್ರಾಂತಿ.. ಇನ್ನೆಲ್ಲಿದೆ ನೀತಿ

ಬಾಳು ನೀಡಲಾಗದವನು ಬ್ರಹ್ಮನಾದರೇನು
ಮರ್ಮ ಅರಿಯಲಾರದವಳು ಮಡಡಿಯಾದರೇನು
ವಿವಾಹವೋ ವಿನೋದವೋ ವಿಚಿತ್ರವೋ ಕಾಣೆ

ಹೂವು ಎಂದು ಕೈಯ್ಯಲ್ಲಿಡೆ ಮುಳ್ಳು ಆಯಿತೇಕೋ
ಮಂಜಿನಂತೆ ಬಾಳು ಕರಗಿ ಕನಸಾಯಿತೋ
ಬ್ರಹ್ಮ ಮಾಡುವಾಗ ಒಮ್ಮೆ ಕೈಯ್ಯಜಾರಿ ನೀನು
ಕಣ್ಣ ಕಡಲ ನೀರಿನಲ್ಲಿ ಬಾಳು ಮುಳುಗಿತೋ
ನೊಂದೆ ಬೆಂದೆ ಸೋತು ನಿಂದೆ
ಸಾಕಾಗುತಿದೆಯಲ್ಲ.. ಈ ಜೀವನ ಬೇಕಿಲ್ಲ
ಏಕೋ ಕಾಣೆ ಕರುಣೆ ನಿಂದು
ಆ ಹೃದಯದಲಿ ಇಲ್ಲ.. ಸುಖವೆಂಬುದು ನನಗಿಲ್ಲ

ಬಾಳು ನೀಡಲಾಗದವನು ಬ್ರಹ್ಮನಾದರೇನು
ಒಲ್ಲೆ ಎಂದು ಹೋಗುವವನು ನಲ್ಲನಾದರೇನು
ವಿವಾಹವೋ ವಿನೋದವೋ ವಿಚಿತ್ರವೋ ಕಾಣೆ

ಪ್ರೀತಿ ನೀಡಲಾರದವಳು ನಲ್ಲೆಯಾದರೇನು
ಮರ್ಮ ಅರಿಯಲಾರದವಳು ಮಡಡಿಯಾದರೇನು
ವಿವಾಹವೋ ವಿನೋದವೋ ವಿಚಿತ್ರವೋ ಕಾಣೆ

@ ಗಿರಿ ಸುಖೇಶ್

No comments:

Post a Comment