Tuesday 29 November 2016

ಅಂದುಗೆ ಕಾಲಲಿ ಬಿಂದಿಗೆ ಕೈಯಲಿ

ಚಿತ್ರ: ಅನಂತ ಪ್ರೇಮ (1990)
ಸಂಗೀತ-ಸಾಹಿತ್ಯ: ನಾದಬ್ರಹ್ಮ
ಹಾಡಿದವರು: ಕೆ .ಜೆ .ಏಸುದಾಸ್

ಅಂದುಗೆ ಕಾಲಲಿ ಬಿಂದಿಗೆ ಕೈಯಲಿ
ಬಂದಳು ಚೆಲ್ಲುತ ಕಿರಣವಾ ಉಷೆರಾಣಿ

ಅಂದುಗೆ ಕಾಲಲಿ ಬಿಂದಿಗೆ ಕೈಯಲಿ
ಬಂದಳು ಚೆಲ್ಲುತ ಕಿರಣವಾ ಉಷೆರಾಣಿ

ಭೂಮಿಗೆ ಮಿಂಚಿನ ಬೆಳಕಿನ ಸಿಂಚನ
ಎಚ್ಚರಾಗಿ ಹೋಯ್ತೋ ಈ.....ಲೋಕ
ಎಚ್ಚರಾಗಿ ಹೋಯ್ತೋ ಈ.......ಲೋಕ

ಅಂದುಗೆ ಕಾಲಲಿ ಬಿಂದಿಗೆ ಕೈಯಲಿ
ಬಂದಳು ಚೆಲ್ಲುತ ಕಿರಣವಾ ಉಷೆರಾಣಿ

ಆ,,ಮಂದ ಮಾರುತ ತಾ ಬಂತು ಹಾರುತಾ,,
ಭೂರಮೆ ಸೀರೆಯೋ,,ನೀರಾಯ್ತು ಜಾರುತ
ಹಸಿರಿದ್ದ ಅಡಿಎಲ್ಲಾ ಕೆಂಪಾದ ಮೇಲೆ
ಉಸಿರಿದ್ದ ಕಡೆಎಲ್ಲಾ ಬಿಸಿಯಾದ ಮೇಲೆ
ಎಚ್ಚರಾಗಿ ಹೋಯ್ತೋ ಈ.......ಲೋಕ
ಎಚ್ಚರಾಗಿ ಹೋಯ್ತೋ ಈ.......ಲೋಕ

ಅಂದುಗೆ ಕಾಲಲಿ ಬಿಂದಿಗೆ ಕೈಯಲಿ
ಬಂದಳು ಚೆಲ್ಲುತ ಕಿರಣವಾ ಉಷೆರಾಣಿ

ಆ ಉಷೆ ಬಂದಳು ಪ್ರಕೃತಿ ಎದ್ದಳು
ಹೊನ್ನಿನ ನೀರಲಿ,,,ಬೆತ್ತಲೆ ನಿಂದಳು
ನೆರಳಿದ್ದ ಕಡೆಎಲ್ಲಾ ಬೆಳಕಾದ ಮೇಲೆ
ಹೊರಳಿದ್ದ ನಡುವೆಲ್ಲಾ ಶುಚಿಯಾದ ಮೇಲೆ

ಎಚ್ಚರಾಗಿ ಹೋಯ್ತೋ ಈ.......ಲೋಕ
ಎಚ್ಚರಾಗಿ ಹೋಯ್ತೋ ಈ.......ಲೋಕ

ಅಂದುಗೆ ಕಾಲಲಿ ಬಿಂದಿಗೆ ಕೈಯಲಿ
ಬಂದಳು ಚೆಲ್ಲುತ ಕಿರಣವಾ ಉಷೆರಾಣಿ

ಅಂದುಗೆ ಕಾಲಲಿ ಬಿಂದಿಗೆ ಕೈಯಲಿ
ಬಂದಳು ಚೆಲ್ಲುತ ಕಿರಣವಾ ಉಷೆರಾಣಿ

ಭೂಮಿಗೆ ಮಿಂಚಿನ ಬೆಳಕಿನ ಸಿಂಚನ
ಎಚ್ಚರಾಗಿ ಹೋಯ್ತೋ ಈ.....ಲೋಕ
ಎಚ್ಚರಾಗಿ ಹೋಯ್ತೋ ಈ.......ಲೋಕ

No comments:

Post a Comment