Tuesday 29 November 2016

ನಾ.. ನೀ.. ನೀ.. ನಾದವು

ಚಿತ್ರ: *ಪ್ರೇಮಾಗ್ನಿ* (1989)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಎಸ್. ಪಿ. ಬಿ & ಎಸ್. ಜಾನಕಿ

ನಾ.. ನೀ.. ನೀ.. ನಾದವು
ನಾ.. ನೀ.. ನೀ.. ನಾದವು
ಓ ರನ್ನನೆ, ಓಹೋ ರನ್ನನೆ
ನೀನಾದಿನ ನಾನಾದಿನ ಕೂಡಾಡಿದೆವು
ಆ ದಿನದ ನೆನಪೇ ಅಮರ ಮಧುರ

ನಾ.. ನೀ.. ನೀ.. ನಾದವು
ನಾ.. ನೀ.. ನೀ.. ನಾದವು

ರಾತ್ರಿ ನಾನು ಕೂಗಿದೆ ನೀನು ಬಂದೆ ಕೇಳದೆ
ಹಾಡು ಸೇರಿ ಹಾಡುವ ನನ್ನ ಆಸೆ ಹೇಳಿದೆ
ಬೇರೆ ಯಾರು ಕಾಣದೆ ಕಾಡೆ ಮೌನವಾಗಿದೆ
ನಾಲ್ಕು ತೋಳು ಸೇರಿದೆ ಮೌನ ಮಾತನಾಡಿದೆ
ತೆರೆದರೆ ಕಣ್ಣನು ಅಮ್ಮ ಎದುರಿಗೆ ಹುಲಿ ನರಿ ಸಿಂಹ
ಪ್ರೀತಿ ಮಾಡುವಾಗ ಭಯದ ಚಿಂತೆ ಯಾಕಂತೆ

ನಾ.. ನೀ.. ನೀ.. ನಾದವು
ನಾ.. ನೀ.. ನೀ.. ನಾದವು

ನೀನು ಹಾಳೆ ನೀಡಿದೆ ನಾನು ದೋಣಿ ಮಾಡಿದೆ
ನೀನು ದೋಣಿ ಏರಿದೆ ನಾನು ಕೂಡ ಸೇರಿದೆ
ದೂರ ತೀರ ಕಾಣದೇ ನಾಲ್ಕು ದಿಕ್ಕು ಮೀರಿದೆ
ಹಿಂದು ಮುಂದು ನೋಡದೆ ನೀನು ನಿನ್ನೇ ನೀಡಿದೆ
ಮರೆತೆವು ಮುಳುಗುವ ಚಿಂತೆ
ದೋಣಿಯು ಕಾಗದವಂತೆ
ಪ್ರೀತಿ ಮಾಡುವಾಗ ಭಯದ ಚಿಂತೆ ಯಾಕಂತೆ

ನಾ.. ನೀ.. ನೀ.. ನಾದವು
ನಾ.. ನೀ.. ನೀ.. ನಾದವು

ಓ ರನ್ನನೆ, ಓಹೋ ರನ್ನನೆ
ನೀನಾದಿನ ನಾನಾದಿನ ಕೂಡಾಡಿದೆವು
ಆ ದಿನದ ನೆನಪೇ ಅಮರ ಮಧುರ

No comments:

Post a Comment