Tuesday 29 November 2016

ನಮ್ಮ ಊರ ಚೆಲುವೆ

ಚಿತ್ರ :ಬೇವು ಬೆಲ್ಲ
ಸಂಗೀತ -ಸಾಹಿತ್ಯ ನಾದಬ್ರಹ್ಮ
ಹಾಡಿದವರು :ರಾಜೇಶಕೃಷ್ಣನ್

ಓ,,,,,,ಓ,,,,,,,ಓ,,,,,,,ಓ,,,,,,ಓ
ನಮ್ಮ ಊರ ಚೆಲುವೆ ಚಲುವಿಗಿಂತ ಚೆಲುವೆ
ನಮ್ಮ ಊರ ಚೆಲುವೆ ಚಲುವಿಗಿಂತ ಚಲುವೆ
ದೃಷ್ಟಿ ಚುಕ್ಕಿ ನಾನು ಅವಳಿಗೆ,,,,
ಮಿನುಗೋ ಚುಕ್ಕಿ ಅವಳು ಬಾಳಿಗೆ,,,,

ನಮ್ಮ ಊರ ಚೆಲುವೆ ಚಲುವಿಗಿಂತ ಚೆಲುವೆ
ನಮ್ಮ ಊರ ಚೆಲುವೆ ಚಲುವಿಗಿಂತ ಚೆಲುವೆ
ದೃಷ್ಟಿ ಚುಕ್ಕಿ ನಾನು ಅವಳಿಗೆ,,,,
ಮಿನುಗೋ ಚುಕ್ಕಿ ಅವಳು ಬಾಳಿಗೆ,,,,,

ಕದ್ದುನೋಡು ಅವಳಿಗವಳ ಕುರುಳೆ ಸೆರಗಿನಂತೆ
ಕದ್ದುನೋಡು ಅವಳಿಗವಳ ಕುರುಳೆ ಸೆರಗಿನಂತೆ
ಸೂರ್ಯ ಅರಳೋ ನೋಟ ಅವಳದು
ನೋಡಿದವರ ಹೃದಯ ನಡೆಯದು
ಉದಯವಾಯಿತು ರೆಪ್ಪೆ ಬಿಚ್ಚಿದಾಗ
ಸಂಜೆಯಾಯಿತು ಮತ್ತೆ ಮುಚ್ಚಿದಾಗ
ಹಗಲು ರಾತ್ರಿ ಇವಳ ಕಣ್ಣಲೇ,,,,

ನಮ್ಮ ಊರ ಚೆಲುವೆ ನವಿಲಿಗಿಂತ ಚೆಲುವೆ
ನಮ್ಮ ಊರ ಚೆಲುವೆ ನವಿಲಿಗಿಂತ ಚೆಲುವೆ
ನನ್ನ ಹಾಡು ಹಾಡೋ ಕೋಗಿಲೆ,,,,
ನಾನು ಹಾಡು ಕೇಳೋ ಹಸಿರೆಲೆ,,,,,

ಕೂಡಿ ಹಾಡೋ ಅವಳಿಗವಳ ವಯಸೆ ಗೆಳತಿಯಂತೆ
ಕೂಡಿ ಹಾಡೋ ಅವಳಿಗವಳ ವಯಸೇ ಗೆಳತಿಯಂತೆ
ಗೆಳತಿಗಿಂತ ಅವಳೇರೂಪಸಿ,,,,
ಅವಳೇ ನಾನು ಮೆಚ್ಚೊ ಪ್ರೇಯಸಿ,,,
ಲೋಕ ಭಾರವ ಹೊರಲು ಒಂದು ಭೂಮಿ
ಅವಳ ಪ್ರೇಮವ ಹೊರಲು ಒಬ್ಬ ಪ್ರೇಮಿ
ಎಂದು ನಮಗೆ ಬ್ರಹ್ಮ ಕಳಿಸಿದ,,,,,

ನಮ್ಮ ಊರ ಚೆಲುವೆ ಹೂವಿಗಿಂತ ಚೆಲುವೆ
ನಮ್ಮ ಊರ ಚೆಲುವೆ ಹೂವಿಗಿಂತ ಚೆಲುವೆ
ಜೇನು ಅವಳು ನನ್ನ ಬಾಯಿಗೆ,,,,
ಮೇಣ ನಾನು ಅವಳ ಮೈಯಿಗೆ,,,,,

ಬೆರಗುಮಾಡೊ ಅವಳಿಗವಳ ಮಾತೆ ಸವತಿಯಂತೆ
ಬೆರಗುಮಾಡೊ ಅವಳಿಗವಳ ಮಾತೆ ಸವತಿಯಂತೆ
ಅವಳಿ-ಜವಳಿಯಂತೆ ಇರುವರು
ನನಗೆ ಬೇಕು ಅವರು ಇಬ್ಬರೂ
ಅವಳ ಮಾತುಗಳಲ್ಲಿ ಬಾಯಿ ಹಾಕಿ
ಸರಸ ಸಂಸಾರದಲಿ ಕಾಲ ನೂಕಿ
ಓದಲವಳೇ ನನಗೆ ಸಾರಥಿ,,,,,,

ಹಳ್ಳಿ ಹುಡುಗಿ ಅವಳು ಮಳ್ಳಿ ಮಾತಿನವಳು
ಸಾಟಿ ಇಲ್ಲದವಳು ತುಂಬಾ ಓದಿದವಳು
ಹಲಗೆ ನಾನು ಅವಳ ಬಳಪಕೆ,,,
ಹಸ್ತ ಅವಳು ಬಾಳ ಪಯಣಕೆ

ಕೊಡುಗೆ: ಆಂಜನೇಯ ತುಮ್ಮಿನಕಟ್ಟಿ

No comments:

Post a Comment