Tuesday 29 November 2016

ನಾನು ನಿಮ್ಮವನು, ನಿಮ್ಮ ಮನೆಯವನು

ಚಿತ್ರ: *ಪುರುಷೋತ್ತಮ* (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಡಾII ರಾಜ್ ಕುಮಾರ್

ನಾನು ನಿಮ್ಮವನು ನಿಮ್ಮ ಮನೆಯವನು
ನಾನು ನಿಮ್ಮವನು ನಿಮ್ಮ ಮನೆಯವನು
ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು
ನಾನು ನಿಮ್ಮವನು ನಿಮ್ಮ ಮನೆಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು

ನಾನು ನಿಮ್ಮವನು ನಿಮ್ಮ ಮನೆಯವನು

ತಬ್ಬಲಿ ಕರುವಾಗಿ, ನಡುಬೀದಿಯ ಮಗುವಾಗಿ
ಜನಿಸಿದ ನನಗೆ ಸತ್ಯದ ಜೊತೆಗೆ ಬೆಸುಗೆ ಹಾಕಿದಿರಿ
ಕಣ್ಣನು ತೆರೆಸಿದಿರಿ, ಮನದೀಪವ ಬೆಳಗಿದಿರಿ
ಬದುಕಿಗೆ ಒಂದು ಗುರಿಯನು ತಂದು ದಾರಿ ತೋರಿದಿರಿ
ನಾನು ನಿಮ್ಮವನು ನಿಮ್ಮ ಋಣದವನು
ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು
ನಾನು ನಿಮ್ಮವನು ನಿಮ್ಮ ಮನೆಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು

ನಾನು ನಿಮ್ಮವನು ನಿಮ್ಮ ನೆರೆಯವನು

ಬಡತನ ತೊಲಗಿಸುವೆ, ದಬ್ಬಾಳಿಕೆ ಅಡಗಿಸುವೆ
ಮಡಿಯುವವರೆಗೆ ದುಡಿಯುವೆ ನಿಮಗೆ
ಬೇರೇ ಗುರಿಯಿಲ್ಲ
ನ್ಯಾಯಕೆ ಜಯ ತರುವೆ, ಅನ್ಯಾಯವ ಬಡಿದಿಡುವೆ
ಹಸಿವಿನ ಕೂಗು ಅಳಿಯುವವರೆಗೂ
ದಣಿವೇ ನನಗಿಲ್ಲ
ನಾನು ನಿಮ್ಮವನು ನಿಮ್ಮ ಸ್ನೇಹಿತನು
ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು
ನಾನು ನಿಮ್ಮವನು ನಿಮ್ಮ ಮನೆಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು

ನಾನು ನಿಮ್ಮವನು...
ನಿಮ್ಮ ಮನೆಯವನು...
ನಾನು ನಿಮ್ಮವನು...
ನಿಮ್ಮ ಮನೆಮಗನು...

@ಗಿರಿ ಸುಖೇಶ್

No comments:

Post a Comment