Tuesday 29 November 2016

ಪ್ರೀತಿ ಮೌನವಾಗಿದೆ

ಚಿತ್ರ :ಒಂದಾಗೋಣ ಬಾ
ಸಾಹಿತ್ಯ -ಸಂಗೀತ :ನಾದಬ್ರಹ್ಮ ಹಂಸಲೇಖ
ಹಾಡಿದವರು :ಮಧು ಬಾಲಕೃಷ್ಣ

ಪ್ರೀತಿ ಮೌನವಾಗಿದೆ,,ಹೋ
ಹೃದಯ ಗಾಯವಾಗಿದೆ,,ಹೋ
                  !!ಪ!!
ಮನಸ್ಸು ಮಾತಾಡಿಯೂ ಕೇಳದಂತಾಗಿದೆ
ನೀನು ನೀರಲ ಅತ್ತರು ಕಾಣದಂತಾಗಿದೆ
                   !!ಪ!!
ಹೂಗಳಂತೆ ಪ್ರೀತಿ ಅರಳಿದಾಗ
ಬಾಡಬಹುದೆಂಬ ಸುಳಿವೇ ಸುಳಿಯದಂತೆ
ಪ್ರೀತಯೊಳಗು ತನ್ನ ತಾನೇ ಸುಡುವ
ಬೆಂಕಿ ಇದೆ ಎಂಬ ಸತ್ಯ ಕಾಣದಂತೆ
ಈ ಕಣ್ಣಿನ ಮಾತುಗಳೆಲ್ಲ ಮೂಕಾಯ್ತು
ಈ ಹೃದಯಕೆ ತಿಳಿದಿರೋ ಸತ್ಯ ಕಲ್ಲಾಯ್ತು
                      !!ಪ!!
*ಬೆಳ್ಳಿ* *ಐ* *ಲವ್* *ಯು*
ನೋಡಿದೋರ ನಂಜು ತಾಕಿತೇನು
ನಮ್ಮ ಆಸೆ ನಮಗೆ ವೈರಿ ಆಗಿತೇನು
ದುಡುಕಲಿಲ್ಲ ಕೈ ಜಾರಲಿಲ್ಲ
ಚಿನ್ನದಂತ ಕನ್ನಡಿ ಬಿಸಿಲಿಗೆ ಒಡೆಯಿತಲ್ಲ
ಆ ಪ್ರೀತಿಯ ಹರಕೆಗಳೆಲ್ಲ ಏನಾಯ್ತು
ಈ ಪ್ರೀತಿಸಲಾಗದ ಪ್ರೀತಿ ಏಕಾಯ್ತು
                  !!ಪ!!

No comments:

Post a Comment