Tuesday 29 November 2016

ಅದೇನದು ಅದೇನದು ಐಸಾ.. ಐಸಾ

ಚಿತ್ರ: ಸಂಗ್ರಾಮ (1987)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು: ಎಸ್. ಜಾನಕಿ & ಹಂಸಲೇಖ

ಅದೇನದು ಅದೇನದು ಐಸಾ.. ಐಸಾ

ಅದೇನದು ಅದೇನದು ಐಸಾ.. ಐಸಾ
ಅದೇನದು ಹುಡ್ಗೀಗಿಂತ ನೈಸಾ.. ನೈಸಾ
ಕರಗೋದದು.. ನಿನ್ನ ಕರಗಿಸೋದಿದು
ಹರಿಯೋದದು.. ನಿನ್ನ ತೇಲಿಸೋದಿದು

ಅದೇನದು ಅದೇನದು ಐಸಾ.. ಐಸಾ
ಅದೇನದು ಹುಡ್ಗೀಗಿಂತ ನೈಸಾ.. ನೈಸಾ

ಬೆಂಕಿಇಲ್ಲದ ಊರಿಗ್ಹೋದರೆ
ನನ್ನ ಮುಟ್ಟಿದವರು ಎಲ್ಲಾ ತಣ್ಣಗಾದರು
ಮಳೆಯು ಸುರಿಯದ ಹಳ್ಳಿಗ್ಹೋದರೆ
ಐಸುಗಡ್ಡೆ ಎಂದು ನನ್ನ ಅರೆದು ಕುಡಿದರು
ಅಯ್ಯೋ ಅಯ್ಯೋ ನಿನ್ನ ಕಥೆ ಏನು ಮಹಾರಾಯ
ಯಾವ ಊರು ನಿಂದು ಬೇಗ ಹೇಳೋ ಮಹಾನೀಯ
ಮಳೆಯೇ ಸುರಿಯದೂರು ನಂದು.. ಅಯ್ಯಃ.. ಇಲ್ಲಾ
ಬೆಂಕಿಇಲ್ಲದೂರು ನಂದು.. ಅಯ್ಯಃ.. ಇಲ್ಲ.. ಇಲ್ಲಾ
ಎರಡೂ ಇಲ್ಲದ ಬರಗಾಲದೂರಿದು
ಅದ್ಯಾಕ್ಹಿಂಗೆ ಆಡ್ತೀಯಯ್ಯಾ ಮನ್ಸಾ.. ನರಮನ್ಸಾ
ಐಸಿನ್ ಜೊತೆ ಆಟ ಆಡೋ ವೈಸಾ.. ನಡುವೈಸಾ

ಈಜುಬಾರದೇ ನೀರಿಗಿಳಿದರೇ
ಕೈಯಿ ಕಾಲು ಬೀಸಬೇಕು ಮೇಲೆ ತೇಲಲು
ನೀರಿಗಿಳಿದರೂ ಈಜದಿದ್ದರೇ
ಮೂರೇ ನಿಮಿಷ ಸಾಕು ಐಸುಗಡ್ಡೆಯಾಗಲು
ಅಯ್ಯೋ ಅಯ್ಯೋ ನಿನ್ನ ಕಥೆ ಏನು ಮಹಾರಾಯ
ಮುಳುಗುತೀಯೋ ತೇಲುತ್ತೀಯೋ ಹೇಳೋ ಮಹಾನೀಯ
ತೇಲುತೀನಿ ಮೇಲೆ ನಾನು.. ಅಯ್ಯಃ.. ಇಲ್ಲಾ
ಮುಳುಗುತೀನಿ ಒಳಗೆ.. ಅಯ್ಯಃ.. ಇಲ್ಲ..ಇಲ್ಲಾ
ಎರಡೂ ಆಗದ ಬರೀ ರೀಲಿನೂರಿದು.. ಅಯ್ಯೋ..

ಅದೇನದು ಅದೇನದು ಐಸಾ.. ಐಸಾ
ಅದೇನದು ಹುಡ್ಗೀಗಿಂತ ನೈಸಾ.. ನೈಸಾ

@ಗಿರಿ ಸುಖೇಶ್

No comments:

Post a Comment